• Home
 • »
 • News
 • »
 • entertainment
 • »
 • Galwan Taunt: ಭಾರತೀಯ ಸೇನೆ ಬಗ್ಗೆ ಲೇವಡಿ ಮಾಡಿ ಟ್ವೀಟ್ ಮಾಡಿದ ಬಾಲಿವುಡ್ ನಟಿ

Galwan Taunt: ಭಾರತೀಯ ಸೇನೆ ಬಗ್ಗೆ ಲೇವಡಿ ಮಾಡಿ ಟ್ವೀಟ್ ಮಾಡಿದ ಬಾಲಿವುಡ್ ನಟಿ

ಬಾಲಿವುಡ್ ನಟಿ ರಿಚಾ ಚಡ್ಡಾ

ಬಾಲಿವುಡ್ ನಟಿ ರಿಚಾ ಚಡ್ಡಾ

ಮಂಗಳವಾರ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಭಾರತೀಯ ಸೇನೆಯು ಪಿಒಕೆ ಹಿಂಪಡೆಯಲು ಸಿದ್ಧವಾಗಿದೆ. ಇದಕ್ಕಾಗಿ ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ, ಶೀಘ್ರದಲ್ಲೇ ಕಾರ್ಯಾಚರಣೆ ಪೂರ್ಣಗೊಳಿಸಲಾಗುವುದು ಅಂತ ಹೇಳಿದ್ರು. ನಟಿ ರಿಚಾ ಚಡ್ಡಾ ಇದೇ ಹೇಳಿಕೆಯನ್ನು ಟ್ವೀಟ್ ಮಾಡಿದ್ರು.

ಮುಂದೆ ಓದಿ ...
 • Share this:

  ಬಾಲಿವುಡ್ ನಟಿ ರಿಚಾ ಚಡ್ಡಾ (Bollywood Actress Richa Chadda) ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ನಟಿ ರಿಚಾ ಚಡ್ಡಾ ಭಾರತೀಯ ಸೇನೆಯ ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯನ್ನು ಟ್ವೀಟ್ (Tweet) ಮಾಡಿ ಪೇಚಿಗೆ ಸಿಲುಕಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಸೇನೆಯ ಬಗ್ಗೆ ಲೇವಡಿ ಮಾಡಿ, ನಂತರ ಟ್ವೀಟ್ ನ್ನು ಅಳಿಸಿ ಹಾಕಿದ್ದಾರೆ. ಆದ್ರೆ ಈಗಲೂ ರಿಚಾ ವಿರುದ್ಧ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೇ, ಭಾರತೀಯ ಜನತಾ ಪಕ್ಷದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ರಿಚಾ ಚಡ್ಡಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ.


  ನಟಿ ರಿಚಾ ಚಡ್ಡಾ ಟ್ವೀಟ್ ಗೆ ನೆಟ್ಟಿಗರು ಗರಂ


  ಈ ಮಂಗಳವಾರ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಭಾರತೀಯ ಸೇನೆಯು ಪಿಒಕೆ ಹಿಂಪಡೆಯಲು ಸಿದ್ಧವಾಗಿದೆ. ಹಾಗೂ ಇದಕ್ಕಾಗಿ ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ,


  ಶೀಘ್ರದಲ್ಲೇ ಕಾರ್ಯಾಚರಣೆ ಪೂರ್ಣಗೊಳಿಸಲಾಗುವುದು ಅಂತ ಹೇಳಿದ್ರು. ನಟಿ ರಿಚಾ ಚಡ್ಡಾ ಇದೇ ಹೇಳಿಕೆಯನ್ನು ಟ್ವೀಟ್ ಮಾಡಿ ಮಾಡಿ, 'ಗಲ್ವಾನ್ ಹೈ ಕೆಹ್ ರಹಾ ಹೈ'  (ಗಲ್ವಾನ್ ಈಗ ಹೀಗೆ ಹೇಳುತ್ತಿದೆ) ಅಂತಾ ಬರೆದಿದ್ದರು.


  ನಟಿ ರಿಚಾ ಚಡ್ಡಾ, ಬಾಬಾ ಬನಾರಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಈಗ ರಿಚಾ ಚಡ್ಡಾರ ಇದೇ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಿಚಾ ವಿರುದ್ಧ ಮಾತುಗಳು ಕೇಳಿ ಬರುತ್ತಿವೆ.


  ರಿಚಾ ಚಡ್ಡಾ ಬೇಕಂತಲೇ ಈ ಟ್ವೀಟ್ ಮಾಡಿರಬಹುದು ಇಲ್ಲವೇ ಜನರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ ಅನ್ಕೊಂಡು ಈ ಟ್ವೀಟ್ ಮಾಡಿರಬಹುದು ಅಂತಾ ನೆಟ್ಟಿಗರ ಚರ್ಚಿಸುತ್ತಿದ್ದಾರೆ.


  ಆದರೆ ಸಾಮಾಜಿಕ ಜಾಲತಾಣದಲ್ಲಿ ರಿಚಾ ಚಡ್ಡಾ ಅವರ ಈ ಪೋಸ್ಟ್ ಗೆ ಜನರು ಕಿಡಿಕಾರಿದ್ದಾರೆ. ಹಲವರು ಇದೊಂದು ನಾಚಿಕೆಗೇಡಿನ ಮತ್ತು ಅವಹೇಳನಕಾರಿ ಪೋಸ್ಟ್ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಈ ಪೋಸ್ಟ್ ನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.


  ಬಾಲಿವುಡ್ ನಟಿ ರಿಚಾ ಚಡ್ಡಾ ತಮ್ಮ ವಿವಾದಾತ್ಮಕ ಟ್ವೀಟ್ ನ್ನು ಅಳಿಸುವ ಮೂಲಕ ಕ್ಷಮೆಯಾಚಿಸಬೇಕು ಅಂತಾ ಬಿಜೆಪಿ ಒತ್ತಾಯಿಸಿದೆ. ಆದರೆ ವಿಷಯವು ಇತ್ಯರ್ಥವಾಗುತ್ತಿಲ್ಲ. ರಿಚಾ ಚಡ್ಡಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ರಿಚಾ ತಾಯಿಯ ತಂದೆ ಕೂಡ ಸೇನೆಯಲ್ಲಿದ್ದರು ಎಂದು ಕೆಲವರು ಆಕೆ ಪರವಾಗಿ ಟ್ವೀಟ್ ಮಾಡಿದ್ದಾರೆ.


  ರಿಚಾ ಚಡ್ಡಾ ವಿರುದ್ಧ 100 ಪ್ರತಿಶತ ಕ್ರಮ ಕೈಗೊಳ್ಳಲಾಗುವುದು


  ಬಿಜೆಪಿ ನಾಯಕ ರಾಮ್ ಕದಂ ಮಾತನಾಡಿ, ರಿಚಾ ಚಡ್ಡಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಉದ್ಧವ್ ಸರ್ಕಾರ್ ಅಲ್ಲ. ರಿಚಾ ಚಡ್ಡಾ ವಿರುದ್ಧ 100 ಪ್ರತಿಶತ ಕ್ರಮ ಕೈಗೊಳ್ಳಲಾಗುವುದು. ಶಾಂತಿಯುತವಾಗಿ ಬದುಕುತ್ತಿರುವ ದೇಶದ ಜನರ ಹಿಂದೆ ಸೇನೆ ಇದೆ. ಯಾರ ಬಗ್ಗೆ ಏನ್ ಮಾತಾಡ್ತಿದ್ದೀವಿ ಎಂಬುದರ ಬಗ್ಗೆ ಅರಿವಿರಬೇಕು. ಇಂತವರ ಚಿತ್ರಗಳನ್ನು ನೋಡಬಾರದು ಎಂದು ಕಿಡಿಕಾರಿದ್ದಾರೆ.


  ಇದನ್ನೂ ಓದಿ: ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!


  ಕ್ಷಮೆಯಾಚಿಸಿ ಟ್ವೀಟ್ ಅಳಿಸಿದ ನಟಿ ರಿಚಾ


  ಇತ್ತ ನಟಿ ರಿಚಾ ಚಡ್ಡಾ ಟ್ವೀಟ್ ಡಿಲೀಟ್ ಮಾಡುವ ಮೂಲಕ ಕ್ಷಮೆಯಾಚಿಸಿದ್ದಾರೆ.  ಇತ್ತ ನಟಿ ಮಾನ್ವಿ ತನೇಜಾ, ರಿಚಾ ಚಡ್ಡಾ ಅವರ ಪರವಾಗಿ ಮಾತನಾಡಿ, ಸಮರ್ಥಿಸಿಕೊಂಡಿದ್ದಾರೆ. ರಿಚಾ ಚಡ್ಡಾ  ಕ್ಷಮೆಯಾಚಿಸಿದ್ದಾರೆ. ಸೇನೆಯನ್ನು ಗುರಿಯಾಗಿಸಿಕೊಂಡು ಏನೂ ಹೇಳಿಲ್ಲ ಎಂದಿದ್ದಾರೆ. ಎಷ್ಟೋ ಜನ ಟ್ವೀಟ್ ಮಾಡಿದ್ದಾರೆ. ಆದ್ರೆ ಅವರನ್ನೇ ಗುರಿಯಾಗಿಸಲಾಗ್ತಿದೆ ಎಂದಿದ್ದಾರೆ.

  Published by:renukadariyannavar
  First published: