ಒಂದು ಕಾಲದ ಸೂಪರ್ ಹಿಟ್ ಸಿನಿಮಾ ಕೊಟ್ಟ (Raveena Tondon Latest Reels) ಬಾಲಿವುಡ್ ನಟಿ ರವೀನಾ ಟಂಡನ್ ಇದೀಗ ಕೆಜಿಎಫ್ ಮೂಲಕ ಅತಿ ಹೆಚ್ಚು ಜನರಿಗೆ ಮತ್ತೊಮ್ಮೆ ಪರಿಚಯ ಆಗಿದ್ದಾರೆ. ಅಂದಿನ ಫ್ಯಾನ್ಸ್ (Bollywood Actress Raveena) ಇಂದು ಮತ್ತೊಮ್ಮೆ ರವೀನಾ ಟಂಡನ್ ಜಲ್ವಾಗಳನ್ನ ಸೋಷಿಯಲ್ ಮೀಡಿಯಾದಲ್ಲೂ ನೋಡುವಂತೆ ಆಗಿದೆ. ಕಾರಣ, ರವೀನಾ ಟಂಡನ್ ಸೋಷಿಯಲ್ (Raveena Reels News) ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟೀವ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಕೆಜಿಎಫ್ ಸಿನಿಮಾ ಆದ್ಮೇಲೆ ರವೀನಾ ಟಂಡನ್ ಕ್ರೇಜ್ ಕೂಡ ಮತ್ತೊಮ್ಮೆ ರೀಕ್ರಿಯೆಟ್ ಆಗಿದೆ. ಇದರ ಮಧ್ಯೆ ರವೀನಾ ಟಂಡನ್ ಸದ್ಯದ ಟ್ರೆಂಡ್ ಆಗಿರೋ ರೀಲ್ಸ್‌ಗಳನ್ನೂ ಮಾಡೋ ಮೂಲಕ ಅಪ್‌ಡೇಟ್ ಆಗುತ್ತಿದ್ದಾರೆ. ಹಾಗೆ ರವೀನಾ ಟಂಡನ್ ಮಾಡಿರೋ ಒಂದು ರೀಲ್ಸ್ ಗಮನ ಸೆಳೆಯುತ್ತದೆ.
ರವೀನಾ ಟಂಡನ್ ಸಿನಿಮಾ ಜೀವನ ಆಲ್‌ಮೋಸ್ಟ್ ಎಂಡ್ ಆಗಿತ್ತು. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಮಾಡೋ ಮೂಲಕವೇ ಒಂದು ಹಂತಕ್ಕೆ ಹೆಸರು ಮಾಡಿದ್ರು. ಪತ್ತರ್ ಕೇ ಫೂಲ್, ದಿಲ್‌ವಾಲೆ, ಮೊಹರಾ ಸಿನಿಮಾದಲ್ಲಿ ರವೀನಾ ಹೊಸ ಕಿಚ್ಚನ್ನೆ ಹೆಚ್ಚಿದ್ದರು.
ರವೀನಾ ಟಂಡನ್ ಹಿಟ್ ಸಿನಿಮಾ ಯಾವವು?
ಏಕ್ ಹೀ ರಾಸ್ತಾ, ಪರಂಪರಾ ಹಾಗೂ ಲಾಡ್ಲಾ ಚಿತ್ರಗಳ ಅಭಿನಯ ಹೆಸರು ತಂದು ಕೊಟ್ಟಿತ್ತು. ಹಾಗೆ ರವೀನಾ ಟಂಡನ್ ಅಭಿನಯದ ಕಾಮಿಡಿ ಸಿನಿಮಾ ಅಂದಾಜ್ ಅಪನಾ ಅಪನಾ ಹೇಳಿಕೊಳ್ಳುವ ಹೆಸರು ಏನೂ ತಂದು ಕೊಡಲಿಲ್ಲ.
ರವೀನಾ ಟಂಡನ್ ಒಂದು ಕಾಲದ ಸೂಪರ್ ಹೀರೋಯಿನ್
ಹಾಗೋ ಹೀಗೋ ಇಂಡಸ್ಟ್ರೀಯಲ್ಲಿ 2019 ರ ವರೆಗೂ ಆಕ್ಟೀವ್ ಆಗಿದ್ದ ರವೀನಾ ಟಂಡನ್, ಈ ವರ್ಷ ಖಾಂದಾನಿ ಶಫಾಖಾನಾ ಅನ್ನುವ ಸಿನಿಮಾ ಮಾಡಿದ್ದರು. ಇದಾದ್ಮೇಲೆ ಕೆಜಿಎಫ್ ಸಿನಿಮಾ ಬಂದು ಭಾರೀ ಹೆಸರು ತಂದಕೊಡ್ತು.
ಸೋಷಿಯಲ್ ಮೀಡಿಯಾದಲ್ಲಿ ರವೀನಾ ಟಂಡನ್ ಆಕ್ಟೀವ್
ಇನ್ನೂ ಅದೇ ಕ್ರೇಜ್ ಅಲ್ಲಿರೋ ರವೀನಾ ಟಂಡನ್ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನ ಹಾಕ್ತಾನೇ ಇರ್ತಾರೆ. ರೀಲ್ಸ್ ಅನ್ನೂ ರವೀನಾ ಟಂಡನ್ ಮಾಡ್ತಾನೇ ಇರ್ತಾರೆ.
View this post on Instagram
ಅದೇ ರೀತಿ ಈಗೊಂದು ರೀಲ್ಸ್ ಮಾಡಿದ್ದಾರೆ. ಇದು ನಿಜಕ್ಕೂ ಮಜವಾಗಿಯೇ ಇದೆ. ಅದನ್ನ ಹಿಂದಿಯಲ್ಲಿ ಮಾಡಿರೋ ರವೀನಾ ಟಂಡನ್ ರೀಲ್ಸ್ ಅರ್ಥ ಏನು ಅನ್ನೋದನ್ನ ಹೇಳಿದ್ದೇವೆ ಓದಿ.
ರವೀನಾ ಟಂಡನ್ ರೀಲ್ಸ್ ಅಲ್ಲಿ ಅಸಲಿಗೆ ಇರೋದೇನು ಗೊತ್ತೆ?
ಜೀವನದಲ್ಲಿ ಮದುವೆ ಆಗದೇ ಇರೋರು ದುಃಖದಲ್ಲಿದ್ದಾರೆ. ಲವ್ ಅಲ್ಲಿ ಬಿದ್ದವರೂ ಬೇಸರದಲ್ಲಿದ್ದಾರೆ. ಮದುವೆ ಆದವರ ಕಥೆಯಂತೂ ಹೇಳೋಕೆ ಆಗೋದಿಲ್ಲ. ಹಾಗಿದ್ದರೇ ಅಸಲಿಗೆ ಜೀವನದ ಆ ಖುಷಿಯನ್ನ ಯಾರು ಎಂಜಾಯ್ ಮಾಡ್ತಿದ್ದಾರೆ? ಅನ್ನೋದೇ ರವೀನಾ ಟಂಡನ್ ಮಾಡಿರೋ ರೀಲ್ಸ್‌ನ ಒಟ್ಟು ಮೀನಿಂಗ್ ಆಗಿದೆ.
ಬಾಲಿವುಡ್ ರವೀನಾ ರೀಲ್ಸ್ ಸೂಪರ್ ಕಿಕ್ ಕೊಡ್ತೈತೆ!
ಈ ಒಂದು ರೀಲ್ಸ್ ಅನ್ನ ರವೀನಾ ಟಂಡನ್ ತುಂಬಾ ಚೆನ್ನಾಗಿಯೇ ಮಾಡಿದ್ದಾರೆ. ಸಖತ್ ಡೈಲಾಗ್ ಅನ್ನ ಹೊಡೆದು ಕಾಮಿಕ್ ಟಚ್‌ಲ್ಲಿಯೇ ಎಕ್ಸಪ್ರೆಷನ್ ಕೂಡ ಕೊಟ್ಟಿದ್ದಾರೆ. ಹಾಗೆ ಅದ್ಭುತ ಅನಿಸೋ ರವೀನಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಲ್ಲೂ ಫುಲ್ ಸೌಂಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Salman Khan: 3 ವರ್ಷದಲ್ಲಿ 8 ಸಿನಿಮಾ ಫ್ಲಾಪ್! ಸಲ್ಮಾನ್ ಕೆರಿಯರ್ ಎಂಡ್?
ಇನ್ನುಳಿದಂತೆ ರವೀನಾ ಟಂಡನ್ ಮತ್ತೊಮ್ಮೆ ಕೆಜಿಎಫ್-3 ಚಿತ್ರದಲ್ಲಿ ಅಭಿನಯಿಸೋ ಸೂಚನೆ ಈಗಾಗಲೇ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ