Raveena Tandan: ಸ್ವಂತ ತಮ್ಮನ ಜೊತೆಗೇ ಇವ್ಳಿಗೆ ಅಫೇರ್​ ಇದೆ ಅಂದ್ರು.. ಕಷ್ಟದ ದಿನಗಳನ್ನು ನೆನೆದು ರವೀನಾ ಟಂಡನ್ ಕಣ್ಣೀರು

ಕೆಜಿಎಫ್​ 2 (KGF 2)ಸಿನಿಮಾದ ಮೂಲಕ ರವೀನಾ ಟಂಡನ್​ ಮತ್ತೆ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿಯಾಗುತ್ತಿದ್ದಾರೆ. ಆದರೆ, ಆಕೆ ಅಂದು ಅನುಭವಿಸಿದ ಕಷ್ಟ, ಅವಮಾನಗಳನ್ನು ನೆನದು ರವೀನಾ ನೋವಿನ ಮಾತುಗಳನ್ನು ಆಡಿದ್ದಾರೆ. ರವೀನಾ ಟಂಡನ್ ಈಗಿರುವ ಸ್ಥಾನಕ್ಕೆ ತಲುಪಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ತಮ್ಮ ವೃತ್ತಿ ಜೀವನದ ತುತ್ತ ತುದಿಯಲ್ಲಿದ್ದಾಗ ನಟಿ ಅನುಭವಿಸಿದ ನೋವುಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟಿ ರವೀನಾ ಟಂಡನ್​

ನಟಿ ರವೀನಾ ಟಂಡನ್​

  • Share this:
‘ಉಪೇಂದ್ರ’(Upendra ಸಿನಿಮಾದ ‘2000 ಎಡಿ ಲೇಡಿಯೇ ಅಲ್ಟ್ರಾ ಮಾಡೆಲ್​..’ ಸಾಂಗ್​ ಮರೆಯಲು ಸಾಧ್ಯವಿಲ್ಲ. ಇನ್ನೂ ಇದೇ ಸಿನಿಮಾದ ‘ಮಸ್ತು ಮಸ್ತು ಹುಡುಗಿ ಬಂದ್ಳು’ ಹಾಡಂತೂ ಎಲ್ಲರ ತಲೆಯಲ್ಲೂ ಹಾಗೆ ಇದೆ. ಅದಕ್ಕೆ ಕಾರಣ ಕೂಡ ಇದೆ. ಈ ಎರಡು ಹಾಡಿನಲ್ಲಿ ನಟಿಸಿದ್ದ ರವೀನಾ ಟಂಡನ್(Raveena Tandan)​. ಹೌದು, 47ನೇ ವಯಸ್ಸಲ್ಲೂ ಸಖತ್​ ಬ್ಯೂಟಿಫುಲ್​(Beautiful) ರವೀನಾ ಟಂಡನ್ ಇನ್ನೂ  ಉಪೇಂದ್ರ ಸಿನಿಮಾ ಮಾಡುವಾಗ ಹೇಗಿದ್ದರು ಎಂದು ಹೇಳಬೇಕಿಲ್ಲ. ಬಾಲಿವುಡ್​(Bollywood)ನಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದ ಈ ಚೆಲುವೆಯನ್ನು ರಿಯಲ್​ ಸ್ಟಾರ್​ ಉಪೇಂದ್ರ(Real Star Upendra) ಕನ್ನಡಕ್ಕೆ ಕರೆದುಕೊಂಡು ಬಂದಿದ್ದರು. ಜಂಭದ ಹುಡುಗಿಯ ಪಾತ್ರದಲ್ಲಿ ರವೀನಾ ಟಂಡನ್​ ಅವರ ಅಭಿನಯ ಕಂಡು ಸಿನಿರಸಿಕರು ಕ್ಲೀನ್​ ಬೋಲ್ಡ್​(Clean Bold) ಆಗಿದ್ದರು. ಇದಾದ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ. ಕೆಜಿಎಫ್​ 2 (KGF 2)ಸಿನಿಮಾದ ಮೂಲಕ ರವೀನಾ ಟಂಡನ್​ ಮತ್ತೆ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿಯಾಗುತ್ತಿದ್ದಾರೆ. ಆದರೆ, ಆಕೆ ಅಂದು ಅನುಭವಿಸಿದ ಕಷ್ಟ, ಅವಮಾನಗಳನ್ನು ನೆನದು ರವೀನಾ ನೋವಿನ ಮಾತುಗಳನ್ನು ಆಡಿದ್ದಾರೆ. ರವೀನಾ ಟಂಡನ್ ಈಗಿರುವ ಸ್ಥಾನಕ್ಕೆ ತಲುಪಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ತಮ್ಮ ವೃತ್ತಿ ಜೀವನದ ತುತ್ತ ತುದಿಯಲ್ಲಿದ್ದಾಗ ನಟಿ ಅನುಭವಿಸಿದ ನೋವುಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ತಮ್ಮನೊಂದಿ ಸಂಬಂಧ ಕಟ್ಟಿದ್ರು ಎಂದ ರವೀನಾ!

ಹಲವು ವರ್ಷಗಳ ಹಿಂದೆ ಕೆರಿಯರ್‌ನ ಪೀಕ್‌ನಲ್ಲಿದ್ದಾಗ ತಮ್ಮ ಕುರಿತು ಸುಳ್ಳು ಸುದ್ದಿಗಳು ಹೇಗೆ ಹರಿದಾಡಿದವು ಅದರಿಂದ ನಟಿ ಹೇಗೆ ಪ್ರಭಾವಿತರಾದರು ಎಂಬುದನ್ನು ಶೇರ್ ಮಾಡಿದ್ದಾರೆ. ಬಾಲಿವುಡ್​ನಲ್ಲಿ ರವೀನಾ ರೂಲ್​ ಮಾಡುವ ವೇಳೆ ಒಂದು ಆಘಾತಕಾರಿ ವಿಷಯ ಹರಿದಾಡಿತ್ತು. ರವೀನಾ ತನ್ನ ಸಹೋದರನೊಂದಿಗೆ ಸಂಬಂಧ ಹೊಂದಿರುವುದಾಗಿ ಸುಳ್ಳು ಸುದ್ದಿ ಸಖತ್​ ಸದ್ದು ಮಾಡಿತ್ತು. ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ, ರವೀನಾ ಟಂಡನ್ ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಸುಳ್ಳು ಸುದ್ದಿಯಿಂದ ನಾನು ಅದೆಷ್ಟೋ ದಿನಗಳನ್ನು ನಿದ್ರೆ ಇಲ್ಲದೇ ಕಳೆದಿದ್ದೆ ಎಂದು ನೋವಿನಿಂದ ಹೇಳಿದ್ದಾರೆ. ನನ್ನ ಇಮೇಜ್​ ಡ್ಯಾಮೇಜ್​ ಮಾಡಲು ಹಲವರು ಬೇರೆ ಬೇರೆ ರೀತಿಯಲ್ಲಿ ನನ್ನ ವಿರುದ್ಧ ಸುಳ್ಳು ಸುದ್ಧಿ ಹಬ್ಬಿಸಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!

‘ಇದರಿಂದ ಆಚೆ ಬರಲು ಸಾಕಷ್ಟು ಸಮಯ ತೆಗೆದುಕೊಂಡೆ’

ಅವರು ನನ್ನನ್ನು ನನ್ನ ಸ್ವಂತ ಸಹೋದರನೊಂದಿಗೆ ಲಿಂಕ್ ಮಾಡಿದ್ದರು. ಈ ವಿಚಾರ ಕೇಳಿ ನನಗೆ ಏನು ಮಾಡಬೇಕೆಂದು ತಿಳಿಯದ ಹಾಗೇ ಹಾಗಿತ್ತು. ಎಲ್ಲಾ ಕಡೆ ಇದೊಂದೆ ಸುದ್ದಿ ಹರಿದಾಡುತ್ತಿತ್ತು. ಇದರಿಂದ ನಾನು ಸಾಕಷ್ಟು ನೋವು ತಿಂದಿದ್ದೇನೆ. ಯಾರ ಬಳಿ ಹೋಗಿ ಇದನೆಲ್ಲ ಹೇಳಲು ಸಾಧ್ಯವಾಗಿರಲಿಲ್ಲ. ಈಗಲೂ ಆ ದಿನಗಳನ್ನು ನೆನೆಸಿಕೊಂಡರೆ ನನಗೆ ತಡೆಯಲು ಸಾಧ್ಯವಾಗುವುದಿಲ್ಲ. ಆ ಗಾಸಿಪ್​, ಆ ನೋವಿನಿಂದ ಹೊರಬರಲು ನನಗೆ ಸಾಕಷ್ಟು ಸಮಯ ಬೇಕಾಯಿತು ಎಂದು ರವೀನಾ ಟಂಡನ್​ ಹೇಳಿದ್ದಾರೆ.

ಇದನ್ನು ಓದಿ : ಅರೆರೆರೇ.. ಇದೇನಾಯ್ತು.. ಹಿಂಗ್​ ಹೊಡೆದಾಡ್ತಾವ್ರೆ ಗಂಡ-ಹೆಂಡತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!

ರಮಿಕಾ ಸೆನ್​ ಪಾತ್ರದಲ್ಲಿ ರವೀನಾ ಟಂಡನ್​!

ನಟಿ ರವೀನಾ ಟಂಡನ್ ಹುಟ್ಟಿದ ಹಬ್ಬದ ದಿನ ಕೆಜಿಎಫ್‌ 2 ಸಿನಿಮಾದಲ್ಲಿ ತಮ್ಮ ಫಸ್ಟ್ ಲುಕ್ ರಿವೀಲ್ ಮಾಡಿ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದರು. ಕೆಜಿಎಫ್‌2 ಮೂಲಕ ಬೆಳ್ಳಿ ತೆರೆಗೆ ಮರಳಲಿರುವ ನಟಿ ರವೀನಾ ರಮಿಕಾ ಸೆನ್ ಎನ್ನುವ ಪಾತ್ರದಲ್ಲಿ ಮಿಂಚಲಿದ್ದಾರೆ. ನನ್ನ ಪಾತ್ರ ಕುತೂಹಲಕಾರಿ ಜೊತೆಗೆ ವಿಭಿನ್ನ. ರಮಿಕಾ ಸೇನ್‌ ಒಬ್ಬ ಶಕ್ತಿಯುತ ಮಹಿಳೆ, ನನ್ನ ಪಾತ್ರದ ಮುಂದಿನ ಹೆಜ್ಜೆಯನ್ನು ಯಾರೂ ಊಹೆ  ಮಾಡಲು ಸಾಧ್ಯವಿಲ್ಲ. ನನ್ನ ಫಸ್ಟ್ ಲುಕ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಮಿಕಾ ಪಾತ್ರವೇ ಒಂದು ತಿರುವು ತಂದುಕೊಡಲಿದೆ ಎಂದು ಪಾತ್ರದ ಬಗ್ಗೆ ಅವರು ಹೇಳಿದ್ದಾರೆ.
Published by:Vasudeva M
First published: