Raveena Tandon: ಸ್ಟಾರ್​ ನಟರೊಬ್ಬರ ಗೆಳತಿಯಿಂದ ರವೀನಾಗೆ ಕೈ ತಪ್ಪುತ್ತಿತ್ತಂತೆ ಅವಕಾಶ, ಇಷ್ಟು ವರ್ಷದ ಬಳಿಕ ಸತ್ಯ ಬಾಯ್ಬಿಟ್ಟ ನಟಿ!

ರವೀನಾ ಟಂಡನ್​

ರವೀನಾ ಟಂಡನ್​

  • Share this:
ನೀವು 90ರ ದಶಕದಲ್ಲಿ ಬಿಡುಗಡೆಯಾದ ಚಿತ್ರಗಳ ‘ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಮತ್ತು ‘ಟಿಪ್ ಟಿಪ್ ಬರ್ಸಾ ಪಾನಿ’ ಅಂತಹ ಹಾಡುಗಳಲ್ಲಿ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ನಟಿ ರವೀನಾ ಟಂಡನ್ (Raveena Tandon) ಅನ್ನು ನಾವು ಹೇಗೆ ತಾನೇ ಮರೆಯಲು ಸಾಧ್ಯ ಹೇಳಿ? ಆ ಸಮಯದಲ್ಲಿ ಹೊಸದಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟ ಹೀರೋಗಳಿಗೆ ನಾಯಕಿಯಾಗಿ ನಟಿಸಿದ ಸುಂದರ ನಟಿ ರವೀನಾ ಟಂಡನ್ ಎಂದರೆ ತಪ್ಪಾಗುವುದಿಲ್ಲ. ನಟನೆ (Acting)ಯಲ್ಲೂ, ಡ್ಯಾನ್ಸ್‌ (Dance)ನಲ್ಲೂ, ಯಾವುದೇ ಪಾತ್ರಕ್ಕೂ ಸರಿಯಾಗಿ ಹೊಂದಿಕೆಯಾಗಿರುವಂತಹ ನಟಿಯರ ಸಾಲಿನಲ್ಲಿ ಇವರು ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ನಂತರದ ವರ್ಷಗಳಲ್ಲಿ, ಅವರು ಬಾಲಿವುಡ್‌ (Bollywood)ನಿಂದ ಸ್ವಲ್ಪ ಕಾಲದವರೆಗೆ ಬಿಡುವು ಪಡೆದರು ಮತ್ತು ಕೆಲವು ಯೋಜನೆಗಳಲ್ಲಿ ಮಾತ್ರ ಕಾಣಿಸಿಕೊಂಡರು. ಇತ್ತೀಚೆಗೆ, ಅವರು ಕ್ರೈಮ್ ಥ್ರಿಲ್ಲರ್ ‘ಆರಣ್ಯಕ್​’ (Aranyak) ಸೀರೀಸ್‌ನಲ್ಲಿ ನಟಿಸಿದರು, ಇದು ಮತ್ತೆ ಅವರ ಅಭಿಮಾನಿಗಳಿಗೆ ಹಳೆಯ ರವೀನಾ ಅನ್ನು ನೆನಪಿಸಿತು ಎಂದು ಹೇಳಬಹುದು. ಅಲ್ಲದೆ, ಕನ್ನಡದಲ್ಲೂ ಉಪೇಂದ್ರ ಚಿತ್ರದಲ್ಲಿ ಹಾಗೂ ಈಗ ಪ್ಯಾನ್‌ ಇಂಡಿಯಾ ಚಿತ್ರವಾದ ಕೆಜಿಎಫ್‌ 2ನಲ್ಲೂ ನಟಿಸಿದ್ದಾರೆ.

ಶಿಲ್ಫಾ ಶೆಟ್ಟಿ, ಕಾಜೋಲ್ ಬಗ್ಗೆ ರವೀನಾ ಮಾತು!

ಅವರು ಇತ್ತೀಚೆಗೆ ರೇಡಿಯೋ ಜಾಕಿಯೊಬ್ಬರ ಜೊತೆ ಮಾತನಾಡುತ್ತಾ, 90ರ ದಶಕದಲ್ಲಿ ಹೇಗೆ ಚಿತ್ರಗಳನ್ನು ತಮ್ಮ ಕೈಯಿಂದ ತಪ್ಪಿ ಹೋಗುತ್ತಿದ್ದವು ಎಂಬುದರ ಬಗ್ಗೆ ಮತ್ತು ಇನ್ನಿತರೆ ನಾಯಕ ನಟಿಯರ ಬಗ್ಗೆ ಮಾತನಾಡಿದರು. 90ರ ದಶಕದಲ್ಲಿ ಪ್ರಮುಖ ನಾಯಕ ನಟಿಯರಾದ ಕರೀಷ್ಮಾ ಕಪೂರ್, ಕಾಜೋಲ್ ಮತ್ತು ಶಿಲ್ಪಾ ಶೆಟ್ಟಿ ವಿರುದ್ಧ ಸ್ಪರ್ಧಿಸಿದ ದಿನಗಳ ಬಗ್ಗೆ ಕೇಳಿದಾಗ, ರವೀನಾ ಪೈಪೋಟಿಯ ವದಂತಿಗಳನ್ನು ತಳ್ಳಿಹಾಕಿದ್ದು, ನಮ್ಮ ಮಧ್ಯೆ ಯಾವುದೇ ಕೊಳಕು ರಾಜಕೀಯ ಇರಲಿಲ್ಲ ಎಂದು ಹೇಳಿದರು.

ನಮ್ಮ ಮಧ್ಯೆ ರಾಜಕೀಯ ವಿರಲಿಲ್ಲ ಎಂದ ನಟಿ!

ಶಿಲ್ಪಾ ಮತ್ತು ಅವರು ಮೊದಲ ದಿನದಿಂದ ಸ್ನೇಹಿತರಾಗಿದ್ದೆವು ಎಂದು ಅವರು ಹೇಳಿದರು. "ನಾವು ಒಟ್ಟಿಗೆ ಚಲನಚಿತ್ರಗಳನ್ನು ಮಾಡಿದ್ದೇವೆ. ಕಾಜೋಲ್ ಮತ್ತು ನಾನು ಸಹ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ. ಆದರೆ ಕೆಲವರು ಕೊಳಕು ರಾಜಕೀಯ ಮಾಡಿದರು ಮತ್ತು ಕೊಳಕು ಗಾಸಿಪ್ ಮಾಡಿದರು. ಆದರೆ ಅವರು ಎಲ್ಲದರಿಂದ ದೂರ ಉಳಿದಿದ್ದೆ'' ಎಂದು ಅವರು ಹೇಳಿದರು.

ಇದನ್ನು ಓದಿ: ಬಾಲಿವುಡ್​ ಭಾಯ್​ಜಾನ್​ ಸೀಕ್ರೆಟ್​ ಬಿಚ್ಚಿಟ್ಟ ಯೂಲಿಯಾ, ಸಲ್ಲು ಬಗ್ಗೆ ಹಿಂಗ್ಯಾಕ್​ ಅಂದ್ರೂ ಗಾಯಕಿ!

“ನಾಯಕ ನಟನ ಗೆಳತಿಯ ಒತ್ತಾಯದ ಮೇರೆಗೆ ತನ್ನ ಹಿಂದಿನ ಚಿತ್ರಗಳಲ್ಲಿ ನನ್ನನ್ನು ಆಗಾಗ್ಗೆ ಚಿತ್ರದಿಂದ ಚಿತ್ರಕ್ಕೆ ಬದಲಾಯಿಸಲಾಗುತ್ತಿತ್ತು. ಒಬ್ಬ ನಾಯಕ ನಟ ಅವನ ಇಬ್ಬರೂ ಗೆಳತಿಯರು ಅವರನ್ನು ಬಿಟ್ಟ ಮೇಲೆ ನನ್ನ ಬಳಿ ಚಿತ್ರದಲ್ಲಿ ನಟಿಸುವ ಪ್ರಸ್ತಾಪದೊಂದಿಗೆ ಬಂದಿದ್ದರು” ಎಂದು ನಟಿ ನಗುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಆ ನಟನ ಗೆಳತಿ ಬಗ್ಗೆ ರವೀನಾ ಹೇಳಿದ್ದೇನು? 

ಒಬ್ಬ ನಟನ ಗೆಳತಿಗೆ ನನ್ನ ನೋಡಿ ಸಹಿಸಿಕೊಳ್ಳಲು ಆಗದೆ ಉದ್ದೇಶಪೂರ್ವಕವಾಗಿ ನನ್ನನ್ನು ಚಿತ್ರದಿಂದ ಬದಲಾಯಿಸಲಾಗಿತ್ತು ಎಂದು ಹೇಳಿದರು. "ಆ ಸಮಯದಲ್ಲಿ ನಾಯಕ ಆ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದು, ನಾವು ಹಿಟ್ ಜೋಡಿಯಾಗಿದ್ದರಿಂದ ನನ್ನನ್ನು ಬದಲಾಯಿಸುವಂತೆ ಅವನನ್ನು ಒತ್ತಾಯಿಸಿದರು. ಆ ಕಾರಣದಿಂದಾಗಿ ನಾನು ಆ ಸಮಯದಲ್ಲಿ ಕೆಲವು ಚಲನಚಿತ್ರಗಳನ್ನು ಕಳೆದುಕೊಂಡೆ" ಎಂದು ಅವರು ಹೇಳಿದರು.

ಇದನ್ನು ಓದಿ: ಆ ಸ್ಟಾರ್ ​​ನಟನಂತೆ ಗಂಡ ಬೇಕಂತೆ ಅನನ್ಯಾ ಪಾಂಡೆಗೆ, ಹೆಸರು ಕೇಳಿದ್ರೆ ನಾಚಿ ನೀರಾದ ಡಿಂಪಲ್​ ಚೆಲುವೆ!

ರವೀನಾ ಬಳಿ ಬಂದು ಅಳಲು ತೋಡಿಕೊಂಡಿದ್ದರಂತೆ ನಟ!

ಅದೇ ನಾಯಕಿ ತನ್ನ ಇನ್ನೊಬ್ಬ ನೆಚ್ಚಿನ ನಾಯಕನನ್ನು ಚಿತ್ರದಲ್ಲಿ ತನ್ನ ಸ್ಥಾನಕ್ಕೆ ಒತ್ತಡ ಹೇರುತ್ತಾಳೆ ಎಂದು ನಟಿ ಹೇಳಿದರು. “ನಾಯಕ ನಟ ರವೀನಾ ಹತ್ತಿರ ಬಂದು ಆಕೆ ತುಂಬಾ ಅಳುತ್ತಾ ನನ್ನನ್ನು ಕೇಳಿಕೊಂಡಳು, ಆದ್ದರಿಂದ ನನ್ನ ಮನಸ್ಸನ್ನು ಬದಲಾಯಿಸಲು ನಿರ್ಧರಿಸಿದೆ” ಎಂದು ಹೇಳಿದರು.“ಕೆಲವು ವರ್ಷಗಳ ನಂತರ ಆ ನಟಿ ಆ ನಟನನ್ನು ಬಿಟ್ಟು ಬಿಟ್ಟಳು, ನಂತರ ಅವರು ನನಗೆ ಒಂದು ಚಿತ್ರವನ್ನು ಮಾಡಿಕೊಡುವಂತೆ ಕೇಳಿಕೊಂಡರು” ಎಂದು ರವೀನಾ ಹೇಳಿದರು. "ಅವರು ನನ್ನ ಬಳಿಗೆ ಬಂದು ಇದು ಅವಳ ಚಿತ್ರವಾಗಿತ್ತು. ಆದರೆ ದಯವಿಟ್ಟು ನೀವು ಅದನ್ನು ನನಗಾಗಿ ಮಾಡಿಕೊಡಿ, ಅವಳು ನಡುವೆಯೇ ಚಿತ್ರವನ್ನು ಬಿಟ್ಟು ಹೋಗಿದ್ದಾಳೆ” ಎಂದರು.
Published by:Vasudeva M
First published: