ಬಾಲಿವುಡ್‌ನ ಒಂದು ಕಾಲದ ನಾಯಕಿ (Raveena Tandan Updates) ನಟಿ ರವೀನಾ ಟಂಡನ್ ಇದೀಗ ಎಲ್ಲರಿಗೂ ಪರಿಚಯವಾಗಿದ್ದಾರೆ. ಕನ್ನಡದ ಕೆಜಿಎಫ್- 2 ಚಿತ್ರದ ಮೂಲಕ ಇಲ್ಲಿಯ ಇಂದಿನ ಯುವಕರಿಗೂ ರವೀನಾ ಟಂಡನ್ (Bollywood Actress Raveena) ಚಿರಪರಿಚಿತರಾಗಿದ್ದಾರೆ. ಇವರ ಬಾಲಿವುಡ್ ಸಿನಿಮಾಗಳು ಬಂದು ಬಹು ದಿನಗಳೇ ಆಗಿವೆ. ಅಷ್ಟರಲ್ಲಿಯೇ ಕೆಜಿಎಫ್-2 ಚಿತ್ರದ ಸ್ಪೆಷಲ್ ರೋಲ್ ಒಪ್ಪಿ ಪ್ಯಾನ್ ಇಂಡಿಯಾ (KGF-2 Movie New Updates) ಮಟ್ಟದಲ್ಲಿ ಎಲ್ಲರಿಗೂ ಗೊತ್ತಾಗಿದ್ದಾರೆ. ಆದರೆ ಅದಾಗಿ ಈಗಾಗಲೇ ಒಂದು ವರ್ಷವೇ ಕಳೆದು ಹೋಗಿದೆ. ಮೊನ್ನೆ ಏಪ್ರಿಲ್-14 ರಂದು ಕೆಜಿಎಫ್-2 ಒಂದು ವರ್ಷ (Rocking Star Yash KGF Movie) ಪೂರೈಸಿದೆ. ಈ ಹಿನ್ನೆಲೆಯಲ್ಲಿ ಆ ದಿನಗಳನ್ನ ರವೀನಾ ಟಂಡನ್ ನೆನಪಿಸಿಕೊಂಡಿದ್ದಾರೆ.
ರವೀನಾ ಟಂಡನ್ ಮತ್ತೊಮ್ಮೆ ಫಾಮ್‌ಗೆ ಬಂದಿದ್ದಾರೆ. ಕೆಜಿಎಫ್-2 ಸಿನಿಮಾದ ರಮೀಕಾ ಸೇನ್ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಆಗಿನ ಕ್ರೇಜ್ ಇಲ್ಲದೇ ಇದ್ದರೂ ಒಂದು ಹಂತಕ್ಕೆ ಇದ್ದ ರವೀನಾ ಟಂಡನ್ ಇದೀಗ ಎಲ್ಲರಿಗೂ ಪರಿಚಯ ಆಗಿ ಬಿಟ್ಟಿದ್ದಾರೆ.
ಕೆಜಿಎಫ್-2 ರವೀನಾ ಜೀವನ ಬದಲಿಸಿದ ಸೂಪರ್ ಸಿನಿಮಾ
ರವೀನಾ ಟಂಡನ್ ಸಿನಿಮಾ ಜೀವನದಲ್ಲಿ ಕೆಜಿಎಫ್-2 ಚಿತ್ರ ಸ್ಪೆಷಲ್ ಆಗಿದೆ. ಈ ಸಿನಿಮಾ ಬಗ್ಗೆ ತುಂಬಾನೇ ಗೌರವ ಮತ್ತು ಪ್ರೀತಿ ಇಟ್ಟುಕೊಂಡಿರೋ ರವೀನಾ ಟಂಡನ್, ಸದಾ ಸಿನಿಮಾ ಟೀಮ್ ಕುರಿತು ಮಾತನಾಡುತ್ತಾರೆ. ತಮ್ಮ ಪಾತ್ರದ ಕುರಿತು ಈ ಹಿಂದೆನೂ ಮಾತನಾಡಿದ್ದಾರೆ. ಈಗಲೂ ಕೆಜಿಎಫ್-2 ಸಿನಿಮಾ ಬಗ್ಗೆ ಹೇಳುತ್ತಾರೆ.
ಕೆಜಿಎಫ್-2 ಸಿನಿಮಾದ ಡೈರೆಕ್ಟರ್ ಪ್ರಶಾಂತ್ ನೀಲ್ ಬಗ್ಗೇನೂ ರವೀನಾ ಟಂಡನ್ ಮನದುಂಬಿ ಮಾತನಾಡುತ್ತಾರೆ. ಸಿನಿಮಾದ ಡೈರೆಕ್ಟರ್ ಅನ್ನೋರು ಒಬ್ಬ ಬಾಸ್, ಇಡೀ ಚಿತ್ರವನ್ನ ಡೈರೆಕ್ಟರ್ ನೋಡಿರುತ್ತಾರೆ. ಅದೇ ರೀತಿ ಪ್ರಶಾಂತ್ ನೀಲ್ ಹೇಳಿದಂತೆ ನಾನು ಮಾಡಿದ್ದೇನೆ. ಓವರ್ ಆ್ಯಕ್ಟಿಂಗ್ ಮಾಡ್ತಿದ್ದೀನಾ ಅಂತಲೇ ಪ್ರಶಾಂತ್‌ಗೆ ಕೇಳುತ್ತಿದ್ದೆ.
ಪ್ರಶಾಂತ್ ನೀಲ್ ಹೇಳಿದಂತೆ ಅಭಿನಯಿಸಿದೆ-ರವೀನಾ ಟಂಡನ್!
ಆದರೆ ಅದಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಪ್ರಶಾಂತ್ ನೀಲ್ ನನ್ನಿಂದ ಒಳ್ಳೆ ಪಾತ್ರ ಮಾಡಿಸಿದ್ದಾರೆ. ಹಾಗೇನೆ ಇತ್ತೀಚಿಗೆ ನಾವು ಕೆಜಿಎಫ್-2 ಚಿತ್ರದ ಮೊದಲ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದೇವೆ. ಆ ದಿನ ಮೊದಲು ಯಶ್ ಪತ್ನಿರಾಧಿಕಾ ನನಗೆ ಮೆಸೇಜ್ ಮಾಡಿದ್ದರು.
ನಿಮ್ಮ ಪಾತ್ರ ನಿಜಕ್ಕೂ ಗ್ರೇಟ್ ಅಂತಲೇ ಹೇಳಿದ್ದರು. ಸಂಜೆ ಹೊತ್ತಿಗೆ ಯಶ್ ಫೋನ್ ಮಾಡಿದ್ದರು. ಹ್ಯಾಪಿ ಎನಿವರ್ಸರಿ ಮ್ಯಾಡಮ್, ಕೆಜಿಎಫ್-3 ಚಿತ್ರಕ್ಕಾಗಿ ರೆಡಿ ಆಗಿ ಮ್ಯಾಡಂ ಅಂತ ಯಶ್ ಹೇಳಿದರು ಎಂದು ರವೀನಾ ಟೆಂಡನ್ ಹೇಳಿಕೊಂಡಿದ್ದಾರೆ.
ರಾಕಿ ಭಾಯ್ ಯಶ್ ನೀವು ನನ್ನ ಕೊಂದು ಬಿಡಬೇಡಿ!
ಹಾಗೇನೆ, ಕೆಜಿಎಫ್-3 ಸಿನಿಮಾ ಮಾಡುತ್ತೇನೆ. ಆದರೆ ಮೊದಲ ದೃಶ್ಯದಲ್ಲಿ ನನ್ನ ಕೊಂದು ಬಿಡಿಬೇಡಿ ಅಂತಲೇ ಜೋಕ್ ಮಾಡಿದ್ದಾರೆ. ಹೀಗೆ ಕೆಜಿಎಫ್-3 ಚಿತ್ರದ ಮೊದಲ ಆನಿವರ್ಸರಿ ಸೆಲೆಬ್ರೇಟ್ ಆಗಿದೆ. ಜೊತೆಗೆ ಪರಸ್ಪರ ಕೆಜಿಎಫ್-3 ಸಿನಿಮಾ ಚರ್ಚೆ ಕೂಡ ಆಗಿದೆ.
ಕೆಜಿಎಫ್-3 ಸಿನಿಮಾದಲ್ಲಿ ನಟಿ ರವೀನಾ ಟಂಡನ್ ಮುಂದುವರೆಯುತ್ತಿದ್ದಾರೆ. ಆದರೆ ಅಧಿಕೃತ ಮಾಹಿತಿ ಹೊರ ಬೀಳಬೇಕು ಅಷ್ಟೆ. ಇನ್ನುಳಿದಂತೆ ಕೆಜಿಎಫ್-3 ಚಿತ್ರದ ತಯಾರಿ ನಿಧಾನಕ್ಕೆ ಈಗಲೇ ಶುರು ಆದಂತೆನೂ ಕಾಣುತ್ತಿದೆ.
ಇದನ್ನೂ ಓದಿ: Sandhya Raga: ಅಣ್ಣಾವ್ರ ಸಂಧ್ಯಾರಾಗ ಚಿತ್ರದ ಒಂದೇ ಹಾಡನ್ನು ಮೂವರು ಹಾಡಿದ್ರು!
ಕೆಜಿಎಫ್-3 ಚಿತ್ರ ಶುರು ಆಗಲಿ ಇನ್ನೂ ಟೈಮ್ ಇದೆ. ಪ್ರಶಾಂತ್ ನೀಲ್ ತಮ್ಮ ಪ್ರೋಜೆಕ್ಟ್ ಪೂರ್ಣಗೊಳಿಸಬೇಕಿದೆ. ಇದಾದ್ಮೆಲೆ ಕೆಜಿಎಫ್-3 ಸಿನಿಮಾ ಆರಂಭವಾಗುತ್ತದೆ. ಹಾಗೆ ಎಲ್ಲವೂ ಮುಗಿಯಲು ಹೆಚ್ಚು ಕಡಿಮೆ ಎರಡು ವರ್ಷವೇ ಉರಳಬಹುದು. ಹಾಗಾಗಿಯೇ ಕೆಜಿಎಫ್-3 ಸಿನಿಮಾ 2025ಕ್ಕೆ ಶುರು ಆಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ