Priyanka Chopra: ಟ್ರೋಲ್ ಆದ ಪಿಗ್ಗಿ; ಪಟಾಕಿ ಸಿಡಿಸಿದ್ರೆ ಅಸ್ತಮಾ ಹೆಚ್ಚುತ್ತೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಹೀಗೆ ಮಾಡಬಹುದಾ?!

Priyanka Chopra: ಮಗಳಿಗೆ ಅಮ್ಮ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗೇ ಹೇಳಿಕೊಟ್ಟಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಥ್ಯಾಂಕ್ಸ್​. ನಿಮ್ಮ ಆರೋಗ್ಯದ ಬಗ್ಗೆ ಜೋಪಾನ ಎಂದು ವ್ಯಂಗ್ಯವಾಗಿ ಹಲವರು ಟ್ವೀಟ್​ ಮಾಡಿದ್ದಾರೆ.

Sushma Chakre | news18
Updated:July 21, 2019, 1:45 PM IST
Priyanka Chopra: ಟ್ರೋಲ್ ಆದ ಪಿಗ್ಗಿ; ಪಟಾಕಿ ಸಿಡಿಸಿದ್ರೆ ಅಸ್ತಮಾ ಹೆಚ್ಚುತ್ತೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಹೀಗೆ ಮಾಡಬಹುದಾ?!
Priyanka Chopra: ಮಗಳಿಗೆ ಅಮ್ಮ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗೇ ಹೇಳಿಕೊಟ್ಟಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಥ್ಯಾಂಕ್ಸ್​. ನಿಮ್ಮ ಆರೋಗ್ಯದ ಬಗ್ಗೆ ಜೋಪಾನ ಎಂದು ವ್ಯಂಗ್ಯವಾಗಿ ಹಲವರು ಟ್ವೀಟ್​ ಮಾಡಿದ್ದಾರೆ.
  • News18
  • Last Updated: July 21, 2019, 1:45 PM IST
  • Share this:
ನಿನ್ನೆಯಷ್ಟೇ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ಹುಟ್ಟುಹಬ್ಬವನ್ನು ಗ್ರ್ಯಾಂಡ್​ ಆಗಿಯೇ ಆಚರಿಸಿಕೊಂಡಿದ್ದರು. ಫ್ಲೋರಿಡಾದಲ್ಲಿ ಪತಿ ನಿಕ್ ಜೋನಸ್ ಆಯೋಜಿಸಿದ್ದ ಪಾರ್ಟಿಯಲ್ಲಿ 4 ಸ್ಟೆಪ್​ ಇದ್ದ ಬೃಹತ್ ಕೇಕ್ ಕತ್ತರಿಸುವ ಮೂಲಕ ಪಿಗ್ಗಿ ತಮ್ಮ ಸಂಭ್ರಮವನ್ನು ಗೆಳೆಯರೊಂದಿಗೆ ಹಂಚಿಕೊಂಡಿದ್ದರು. ಆದರೆ, ಇದೀಗ ಪ್ರಿಯಾಂಕಾ ಸುದ್ದಿಯಾಗುತ್ತಿರುವುದೇ ಬೇರೆ ವಿಷಯಕ್ಕೆ.

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದಂತೆ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದ್ದ ಪ್ರಿಯಾಂಕಾ, ನನಗೆ ಬಾಲ್ಯದಿಂದಲೂ ಅಸ್ತಮಾ ಇದೆ. ನನ್ನಂತಹ ಸಾವಿರಾರು ಅಸ್ತಮಾ ರೋಗಿಗಳಿಗೆ ಪಟಾಕಿಯ ಹೊಗೆಯಿಂದ ತೊಂದರೆಯಾಗುತ್ತದೆ. ಹಾಗಾಗಿ, ಪಟಾಕಿ ಸಿಡಿಸದೆ ದೀಪ ಹಚ್ಚುವ ಮೂಲಕ ದೀಪಾವಳಿಯನ್ನು ಪರಿಸರಸ್ನೇಹಿಯಾಗಿ ಆಚರಿಸಿ ಎಂದು ಅಭಿಮಾನಿಗಳಿಗೆ ಕರೆಕೊಟ್ಟಿದ್ದರು.

priyanka chopra

ಇದಾದ ನಂತರ ಗಾಯಕ ನಿಕ್ ಜೋನಸ್​ ಜೊತೆಗೆ ಮದುವೆಯಾಗಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಮದುವೆಯ ನಂತರ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದರು. ಇದು ಅವರ ಅಭಿಮಾನಿಗಳಿಗೆ ಕೋಪ ತರಿಸಿತ್ತು. ಅದೆಲ್ಲ ಹಳೇ ಕತೆ. ಹೊಸ ವಿಷಯವೇನಪ್ಪ ಎಂದರೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಿಯಾಂಕಾ ಚೋಪ್ರಾ ಇದೀಗ ಟ್ರೋಲಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸದ್ಯಕ್ಕೆ ಟ್ವಿಟ್ಟರ್​ನಲ್ಲಿ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಮತ್ತು ತಾಯಿಯ ಜೊತೆಗೆ ಕುಳಿತುಕೊಂಡು ಸಿಗರೇಟ್ ಸೇದುತ್ತಿರುವ ಫೋಟೋವೊಂದು ಹರಿದಾಡುತ್ತಿದೆ.

priyanka chopra

ಪಿಗ್ಗಿ ಸಿಗರೇಟ್ ಸೇದುತ್ತ ಕುಳಿತಿರುವ ಫೋಟೋವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡುತ್ತಿರುವ ಟ್ವಿಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಪ್ರಿಯಾಂಕಾ ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ.ನಿಮಗೆ ನಿಮ್ಮ ಮದುವೆ ವೇಳೆ ಪಟಾಕಿ ಹೊಡೆದರೆ ಸಮಸ್ಯೆಯಿಲ್ಲ, ಹುಟ್ಟುಹಬ್ಬದ ವೇಳೆ ಪಟಾಕಿ ಸಿಡಿಸಿದರೂ ಸಮಸ್ಯೆಯಿಲ್ಲ. ದೀಪಾವಳಿ ಸಮಯದಲ್ಲಿ ಪಟಾಕಿ ಹೊಡೆದರೆ ಮಾತ್ರ ತೊಂದರೆಯಾಗುತ್ತದೆ. ಹಿಂದು ದ್ರೋಹಿ ಪ್ರಿಯಾಂಕಾ ಎಂದು ಹಲವರು ಟ್ರೋಲ್​ ಮಾಡಿದ್ದಾರೆ.ದಯವಿಟ್ಟು ಯಾರೂ ಪ್ರಿಯಾಂಕಾ ಚೋಪ್ರಾಳನ್ನು ಟ್ರೋಲ್ ಮಾಡಬೇಡಿ. ಆಕೆ ಸೇದುತ್ತಿರುವುದು ಹೊಸತಾಗಿ ಬಿಡುಗಡೆಯಾಗಿರುವ ಪತಂಜಲಿ ಹರ್ಬಲ್ ಸಿಗರೇಟ್. ಇದನ್ನು ಕಂಡುಹಿಡಿದವರಿಗೆ ದೊಡ್ಡ ಸಲಾಂ. ಸದ್ಯದಲ್ಲೇ ಇದು ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.ಅಮ್ಮ ಮತ್ತು ಗಂಡನ ಜೊತೆ ಕುಳಿತು ಪ್ರಿಯಾಂಕಾ ಸಿಗರೇಟ್ ಸೇದಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಮಗಳಿಗೆ ಅಮ್ಮ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗೇ ಹೇಳಿಕೊಟ್ಟಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಥ್ಯಾಂಕ್ಸ್​. ನಿಮ್ಮ ಆರೋಗ್ಯದ ಬಗ್ಗೆ ಜೋಪಾನ ಎಂದು ವ್ಯಂಗ್ಯವಾಗಿ ಹಲವರು ಟ್ವೀಟ್​ ಮಾಡಿದ್ದಾರೆ.

First published:July 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading