ಪ್ರಿಯಾಂಕಾ ದೇಶದ ಪ್ರಧಾನಿಯಾದರೆ, ಗಂಡ ನಿಕ್​ ಅಮೆರಿಕದ ಅಧ್ಯಕ್ಷರಾಗ್ತಾರಾ..?

ಹಾಲಿವುಡ್​ ಗಾಯಕನನ್ನು ವರಿಸಿದರೂ ಪಿಗ್ಗಿ ಇಂದಿಗೂ ಭಾರತದ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಅವರಿಗೆ ದೇಶದ ಪ್ರಧಾನ ಮಂತ್ರಿಯಾಗಿ, ಸಾಕಷ್ಟು ಬದಲಾವಣೆ ತರಬೇಕಂತೆ. ತನಗೂ ದೇಶವನ್ನು ಮುನ್ನಡೆಸುವ ಆಸೆ ಇದೆ ಅಂತ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

Anitha E | news18
Updated:June 4, 2019, 4:03 PM IST
ಪ್ರಿಯಾಂಕಾ ದೇಶದ ಪ್ರಧಾನಿಯಾದರೆ, ಗಂಡ ನಿಕ್​ ಅಮೆರಿಕದ ಅಧ್ಯಕ್ಷರಾಗ್ತಾರಾ..?
ನಟಿ ಪ್ರಿಯಾಂಕಾ ಗಂಡ ನಿಕ್​ ಜೋನಸ್​ ಜತೆ
Anitha E | news18
Updated: June 4, 2019, 4:03 PM IST
ನಟಿ ಪ್ರಿಯಾಂಕಾ ಚೋಪ್ರಾ ಭಾರತದ ಪ್ರಧಾನಿಯಾಗೋಕೆ ಹೊರಟಿದ್ದಾರೆ. ಅಷ್ಟೇ ಅಲ್ಲ ಅವರ ಗಂಡ ನಿಕ್​ ಅಮೆರಿಕದ ಅಧ್ಯಕ್ಷ ಆಗ್ತಾರಂತೆ. ಹೀಗೆಂದ ಕೂಡಲೇ ಗಂಡ-ಹೆಂಡತಿ ಯಾವುದೋ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ತಿಳಿಯ ಬೇಡಿ. ಇದು ನಿಜಕ್ಕೂ ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿ. ಏಕೆ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಹಾಲಿವುಡ್​ ಗಾಯಕನನ್ನು ವರಿಸಿದರೂ ಪಿಗ್ಗಿ ಇಂದಿಗೂ ಭಾರತದ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಅವರಿಗೆ ದೇಶದ ಪ್ರಧಾನ ಮಂತ್ರಿಯಾಗಿ, ಸಾಕಷ್ಟು ಬದಲಾವಣೆ ತರಬೇಕಂತೆ. ತನಗೂ ದೇಶವನ್ನು ಮುನ್ನಡೆಸುವ ಆಸೆ ಇದೆ ಅಂತ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 9 ವರ್ಷ ಹಿಂದೆಯೇ ಶಾರುಖ್​ರ ಸಿನಿಮಾದಲ್ಲಿ ಅಭಿನಯಿಸಿದ್ದ ಮಗಳು ಸುಹಾನಾ ಖಾನ್​..!

ಪ್ರಿಯಾಂಕಾ ಸಂದರ್ಶನವೊಂದರಲ್ಲಿ ದೇಶದಲ್ಲಿ ಬದಲಾವಣೆ ತರಬೇಕು ಅದಕ್ಕಾಗಿ ನಾನು ಭಾರತದ ಪ್ರಧಾನಿಯಾಗಬೇಕು ಅನ್ನೋ ಆಸೆಯನ್ನು ಬಹಿರಂಗಪಡಿಸಿದ್ದಾರೆ. ಬನ್ಸಾಲಿ ನಿರ್ದೇಶನದ ಪ್ರಕಾಶ್ ಝಾ ನಿರ್ದೇಶನದ 'ಜೈ ಗಂಗಾಜಲ್' ನಂತರ ಪ್ರಿಯಾಂಕಾ ಬಾಲಿವುಡ್‍ಗಿಂತ ಹಾಲಿವುಡ್‍ನಲ್ಲೇ ಬ್ಯುಸಿಯಾಗಿದ್ದಾರೆ.

ಆದರೆ ಭಾರತದ ಬಗ್ಗೆ ಪ್ರಿಯಾಂಕಾಗೆ ವಿಶೇಷ ಪ್ರೀತಿಯಿದೆ. ಯಾಕಂದರೆ ಅಮೆರಿಕನ್ ಗಾಯಕ ನಿಕ್ ಜೋನಸ್‍ರನ್ನು ಮದುವೆಯಾದರೂ, ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಮದುವೆಯಾಗಬೇಕು ಅಂತ ನಿರ್ಧರಿಸಿದ್ದರು. ರಾಜಸ್ಥಾನದ ಜೋಧಪುರದ ಅರಮನೆಯಲ್ಲೇ ಭಾರತೀಯ ಶೈಲಿಯಲ್ಲೇ ಮದುವೆಯಾದರು.

ಪ್ರಧಾನಿಯಾಗಿ ಭಾರತವನ್ನು ಬಲಾಯಿಸಬೇಕೆಂದಿರುವ ಪ್ರಿಯಾಂಕಾಗೆ ಮತ್ತೊಂದು ದೊಡ್ಡ ಆಸೆ ಇದೆ. ಅದು ತಾವು ಭಾರತದ ಪ್ರಧಾನಿಯಾದ್ರೆ, ತಮ್ಮ ಗಂಡ ನಿಕ್ ಜೋನಸ್ ಅಮೆರಿಕದ ಅಧ್ಯಕ್ಷ ರಾಗಬೇಕು ಅನ್ನೋದು.

ಇದನ್ನೂ ಓದಿ: Saaho Movie: ಆಗಸ್ಟ್ 15ಕ್ಕೆ ಶುರು `ಸಾಹೋ' ಸವಾರಿ: ಈ ದಿನ ಬಂದ್ರೆ ಗೆಲುವು ಸಿಗಲ್ವಾರೀ ?
Loading...

ಬಿ-ಟೌನ್‍ನಲ್ಲಿ ಯಾವ ಗಾಡ್‍ಫಾದರ್​ ಇಲ್ಲದೇ ಸ್ಟಾರ್ ನಟಿಯಾಗಿ ಬೆಳೆದ ಚೆಲುವೆ.  ಮಾಡೆಲ್ ಆಗಿದ್ದ ಪಿಗ್ಗಿ ಬಾಲಿವುಡ್​ ಹಾಗೂ ಹಾಲಿವುಡ್‍ನಲ್ಲಿ ಬೇಡಿಕೆ ಇರೋ ಕಲಾವಿದೆಯಾಗಿ ಬೆಳೆದ ಪರಿ ನಿಜಕ್ಕೂ ಆಶ್ಚರ್ಯ. ಇನ್ನೂ ಅವರ ಆಸೆಯಂತೆ ರಾಜಕೀಯಕ್ಕಿಳಿದು ಒಂದು ದಿನ ಪ್ರಧಾನಿಯಾದರೂ ಆಗಬಹುದು.

Photos: ಹಾಟ್​ ಲುಕ್​ನಲ್ಲಿ 'ಮಹರ್ಷಿ' ಯಶಸ್ಸಿನ ಅಲೆಯಲ್ಲಿರುವ ಪೂಜಾ ಹೆಗ್ಡೆ
First published:June 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...