HOME » NEWS » Entertainment » BOLLYWOOD ACTRESS PREKSHA MEHTA COMMITS SUICIDE IN MUMBAI DUE TO DEPRESSION RMD

ಲಾಕ್​ಡೌನ್​ನಿಂದ ಅವಕಾಶಗಳೇ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟಿ

ಭಾರತದಾದ್ಯಂತ ಲಾಕ್​ಡೌನ್ ಘೋಷಣೆಯಾದ ಬೆನ್ನಲ್ಲೇ ಪ್ರೇಕ್ಷಾ ಇಂದೋರ್​ಗೆ ಮರಳಿದ್ದರು. ಎರಡು ತಿಂಗಳಿನಿಂದ ಮನೆಯಲ್ಲೇ ನೆಲೆಸಿದ್ದರು. ಈಗಷ್ಟೇ ಮುಂಬೈನಲ್ಲಿ ಕೊಂಚ ನೆಲೆ ಕಂಡುಕೊಂಡಿದ್ದ ಪ್ರೇಕ್ಷಾಗೆ ಲಾಕ್​ಡೌನ್ ಎರಡು ತಿಂಗಳ ಕಾಲ ಮುಂದುವರಿದಿದ್ದು ದೊಡ್ಡ ಆಘಾತವನ್ನೇ ನೀಡಿತ್ತು.

news18-kannada
Updated:May 27, 2020, 7:45 AM IST
ಲಾಕ್​ಡೌನ್​ನಿಂದ ಅವಕಾಶಗಳೇ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟಿ
ಪ್ರೇಕ್ಷಾ ಮೆಹ್ತಾ
  • Share this:
ಪ್ರೇಕ್ಷಾ ಮೆಹ್ತಾ. ಮೂಲತಃ ಮಧ್ಯಪ್ರದೇಶದ ಇಂದೋರ್ ನಿವಾಸಿ. ಬಾಲ್ಯದಿಂದಲೂ ರಂಗಭೂಮಿ ಹಾಗೂ ನಟನೆಯತ್ತ ಆಸಕ್ತಿಹೊಂದಿದ್ದ ಹುಡುಗಿ. ರಾಷ್ಟ್ರಮಟ್ಟದ ರಂಗಭೂಮಿ ಉತ್ಸವಗಳಲ್ಲಿ ಮೂರು ಬಾರಿ ಪ್ರಶಸ್ತಿ ಬಾಚಿಕೊಂಡಿದ್ದ ಪ್ರತಿಭಾನ್ವಿತೆ. ಕನಸಿನ ಬೆನ್ನು ಹತ್ತಿ, ಕಳೆದ ಎರಡು ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದರು ಪ್ರೇಕ್ಷಾ. ಈಗ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

ಕ್ರೈಮ್ ಪ್ಯಾಟ್ರೋಲ್, ಮೇರಿ ದುರ್ಗಾ, ನಾಲ್ ಇಷ್ಕ್ ಸೇರಿದಂತೆ ಹಲವು ಧಾರಾವಾಹಿಗಳು ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲೂ ನಟಿಸಿದ್ದರು. ಮಾತ್ರವಲ್ಲ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅವರ ಪ್ಯಾಡ್​ಮ್ಯಾನ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಹೀಗೆ ಹಂತ ಹಂತವಾಗಿ ರಂಗಭೂಮಿಯಿಂದ ಹಿಂದಿ ಕಿರುತೆರೆ, ಹಾಗೂ ಕಿರುತೆರೆಯಿಂದ ಬಾಲಿವುಡ್​​ನತ್ತ ಹೆಜ್ಜೆ ಹಾಕಿದ್ದರು 25 ವರ್ಷದ ಪ್ರೇಕ್ಷಾ ಮೆಹ್ತಾ.

ಭಾರತದಾದ್ಯಂತ ಲಾಕ್​ಡೌನ್ ಘೋಷಣೆಯಾದ ಬೆನ್ನಲ್ಲೇ ಪ್ರೇಕ್ಷಾ ಇಂದೋರ್​ಗೆ ಮರಳಿದ್ದರು. ಎರಡು ತಿಂಗಳಿನಿಂದ ಮನೆಯಲ್ಲೇ ನೆಲೆಸಿದ್ದರು. ಈಗಷ್ಟೇ ಮುಂಬೈನಲ್ಲಿ ಕೊಂಚ ನೆಲೆ ಕಂಡುಕೊಂಡಿದ್ದ ಪ್ರೇಕ್ಷಾಗೆ ಲಾಕ್​ಡೌನ್ ಎರಡು ತಿಂಗಳ ಕಾಲ ಮುಂದುವರಿದಿದ್ದು ದೊಡ್ಡ ಆಘಾತವನ್ನೇ ನೀಡಿತ್ತು. ಜತೆಗೆ ಲಾಕ್​​ಡೌನ್ ಅಂತ್ಯವಾದರೂ ಶೂಟಿಂಗ್ ಮತ್ತೆ ಶುರುವಾಗುವ ಬಗ್ಗೆ ಅನಿಶ್ಚಿತತೆ ಕಾಡುತ್ತಲೇ ಇತ್ತು. ಇದರಿಂದ ಸಾಕಷ್ಟು ನೊಂದಿದ್ದ ಪ್ರೇಕ್ಷಾ, ಮುಂದೆ ಮುಂಬೈಗೆ ಮರಳಿದ ಬಳಿಕ ಅವಕಾಶಗಳೇ ಸಿಗದಿದ್ದರೆ ಹೇಗೆ ಎಂದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಾಡು ಪ್ರಾಣಿಗಳ ಕುರಿತು ವಿಭಿನ್ನ ಕಥೆ ಹೇಳಲು ಹೊರಟಿದ್ದಾರೆ ರಿಷಬ್​​ ಶೆಟ್ಟಿ!

ಹೀಗಾಗಿಯೇ ಮೊನ್ನೆ ಸೋಮವಾರ (ಮೇ.25) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕನಸುಗಳೇ ಸತ್ತರೆ ಅದಕ್ಕಿಂತ ಬೇರೆ ನೋವಿಲ್ಲ ಎಂದು ಪೋಸ್ಟ್ ಶೇರ್ ಮಾಡಿದ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದರು.ಆ ಮೂಲಕ ಒಂದೇ ವಾರದ ಅಂತರದಲ್ಲಿ ಇಬ್ಬರು ಕಲಾವಿದರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಕೆಲ ದಿನಗಳ ಹಿಂದಷ್ಟೇ ಮತ್ತೊಬ್ಬ ಬಾಲಿವುಡ್ ನಟ ಮನ್ಮೀತ್ ಗ್ರೇವಾಲ್ ಕೂಡ ಲಾಕ್​ಡೌನ್ನಿಂದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಆತ್ಮಹತ್ಯೆಗೆ ಶರಣಾಗಿದ್ದರು.
First published: May 27, 2020, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories