• Home
  • »
  • News
  • »
  • entertainment
  • »
  • Kantara Pooja Hegde: ನನ್ನ ಬಾಲ್ಯ ನೆನಪಿಸಿದ ಕನ್ನಡದ ಕಾಂತಾರ! ಎಲ್ಲರೂ ಹೋಗಿ ಸಿನಿಮಾ ನೋಡಿ ಎಂದ ಪೂಜಾ ಹೆಗ್ಡೆ

Kantara Pooja Hegde: ನನ್ನ ಬಾಲ್ಯ ನೆನಪಿಸಿದ ಕನ್ನಡದ ಕಾಂತಾರ! ಎಲ್ಲರೂ ಹೋಗಿ ಸಿನಿಮಾ ನೋಡಿ ಎಂದ ಪೂಜಾ ಹೆಗ್ಡೆ

ಕನ್ನಡದ ಕಾಂತಾರ ಕಂಡು ಬಾಲಿವುಡ್ ನಟಿ ಪೂಜಾ ಏನಂದ್ರು ?

ಕನ್ನಡದ ಕಾಂತಾರ ಕಂಡು ಬಾಲಿವುಡ್ ನಟಿ ಪೂಜಾ ಏನಂದ್ರು ?

"ನಿಮಗೆ ಗೊತ್ತಿರೋದನ್ನೆ ಬರೆಯಿರಿ. ನಿಮ್ಮ ಹೃಯದಕ್ಕೆ ಹತ್ತಿರವಾದ ಕಥೆಯನ್ನೆ ಹೃದಯದಿಂದಲೇ ಹೇಳಿ" ಅಂತಲೇ ಪೂಜಾ ಹೆಗಡೆ ಇಲ್ಲೊಂದು ಸಲಹೆ ಕೊಟ್ಟಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Cinema) ಸಿನಿಮಾ ಅದ್ಭುತ ಕತೆ ಹೊಂದಿದೆ. ದಂತ ಕಥೆ ಇದಾಗಿದ್ದರೂ ಇಲ್ಲಿ ನೈಜತೆಯ ಸೆಳೆತ ಇದೆ. 1970 ರ ಆ ದಿನಗಳನ್ನ ಅಷ್ಟೇ ನೈಜವಾಗಿಯೇ ಇದು ತೋರಿಸುತ್ತದೆ. ತುಳು (Tulu) ನಾಡಿನಲ್ಲಿ ಅಂದು ಇದ್ದ ಜಾನಪದ (Folk) ಸ್ಪರ್ಶದ ಅಸಲಿ (Story) ಕಥೆಯನ್ನ ಇದು ಬೆಳ್ಳಿ ತೆರೆ ಮೇಲೆ ಕಟ್ಟಿಕೊಟ್ಟಿದೆ. ತುಳುನಾಡಿನ ಸಂಸ್ಕೃತಿಗೆ ಕನೆಕ್ಟ್ ಆಗಿರುವ ಅದೆಷ್ಟು ಜನ ಈ ಚಿತ್ರ ನೋಡಿ ತಮ್ಮ ಬಾಲ್ಯದ ದಿನಗಳಿಗೂ ಜಾರುತ್ತಿದ್ದಾರೆ. ಭೂತ ಕೋಲದಂತ ಆಚರಣೆಯನ್ನೂ ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ. ದೂರದ ಮುಂಬೈ ಅಲ್ಲಿರೋ ಅದೆಷ್ಟೋ ಜನಕ್ಕೆ ಈ ಸಿನಿಮಾ ಅವರವರ ಬಾಲ್ಯಗಳನ್ನ ನೆನಪಿಗೆ ತರುತ್ತಿದೆ. ಈ ವಿಷಯದಲ್ಲಿ ಸಿನಿಮಾ ನಟರು ಹೊರತಾಗಿಲ್ಲ.


ಬಾಲಿವುಡ್ ಹಾಗೂ ದಕ್ಷಿಣದ ಭಾರತದ ಸಿನಿಮಾಗಳಲ್ಲಿ ಅಭಿನಯಸಿ ಹೆಸರು ಮಾಡಿಕೊಂಡಿರೊ ನಟಿ ಪೂಜಾ ಹೆಗಡೆ ಕೂಡ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರದೊಂದಿಗಿನ ತಮ್ಮ ಆ ದಿನಗಳನ್ನೂ ಈಗ ನೆನಪಿಸಿಕೊಂಡಿದ್ದಾರೆ.




ಕನ್ನಡದ ಕಾಂತಾರ ಕಂಡು ಬಾಲಿವುಡ್ ನಟಿ ಪೂಜಾ ಏನಂದ್ರು ?


ಕಾಂತಾರ ಸಿನಿಮಾ ಒಂದು ಅದ್ಭುತ ಚಿತ್ರಕಥೆ ಹೊಂದಿದೆ. ಡೈರೆಕ್ಟರ್ ರಿಷಬ್ ಶೆಟ್ಟಿ ಈ ಚಿತ್ರವನ್ನ ರಚಿಸಿದ್ದಾರೆ. ನಿರ್ದೆಶನವನ್ನೂ ಇವರೇ ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಬಂದ ಈ ಚಿತ್ರದಲ್ಲಿ ಕಥೆ ಹೇಳಿದ ರೀತಿ ತುಂಬಾ ಚೆನ್ನಾಗಿಯೇ ಇದೆ.


ಸಿನಿಮಾ ಪ್ರೇಮಿಗಳು ಕಾಂತಾರ ಸಿನಿಮಾವನ್ನ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದ ಚಿತ್ರದ ಖ್ಯಾತಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಹೊರತಾಗಿ ಎಲ್ಲ ಭಾಷೆಯಲ್ಲೂ ಸಿನಿಮಾ ಬಂದಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲೂ ಕಾಂತಾರ ಮೋಡಿ ಮಾಡ್ತಾನೇ ಇದೆ.


Bollywood Actress Pooja Hegde Watch Kannada Kantara Film
ಕಾಂತಾರ ಚಿತ್ರದಿಂದ ಆ ದಿನಗಳ ಭೂತ ಕೋಲದ ನೆನಪು


ಬಾಲಿವುಡ್ ನಟಿ ಪೂಜಾ ಹೆಗಡೆ ಕೂಡ ಕಾಂತಾರ ಸಿನಿಮಾ ನೋಡಿದ್ದಾರೆ. ಚಿತ್ರ ವೀಕ್ಷಿಸಿ ಅತಿ ಹೆಚ್ಚು ಸಂತೋಷ ಪಟ್ಟಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನ ಇದು ನೆನಪಿಸುತ್ತಿದೆ ಅಂತಲೂ ಬರೆದುಕೊಂಡು ತಿಳಿಸಿದ್ದಾರೆ.


ಕಾಂತಾರ ಚಿತ್ರದಿಂದ ಆ ದಿನಗಳ ಭೂತ ಕೋಲದ ನೆನಪು
ಕಾಂತಾರ ಸಿನಿಮಾದಲ್ಲಿ ತುಳುನಾಡಿನ ಅಂದಿನ ಆಚರಣೆಯ ಚಿತ್ರಣ ಸಿಗುತ್ತದೆ. ತುಳುನಾಡು 90 ರ ದಶಕದಲ್ಲಿ ಹೇಗೆಲ್ಲ ಇತ್ತು ಅನ್ನೋದು ಕೂಡ ಈ ಚಿತ್ರದಿಂದ ತಿಳಿಯಬಹುದು. ಅಷ್ಟೊಂದು ಕರಾರುವಕ್ಕಾಗಿಯೇ ಚಿತ್ರದಲ್ಲಿ ಆ ದಿನಗಳನ್ನ ತೆರೆ ಮೇಲೆ ಕ್ರಿಯೇಟ್ ಮಾಡಲಾಗಿದೆ.


ಬೆಳ್ಳಿ ತೆರೆ ಮೇಲೆ ಇದನ್ನ ನೋಡಿರೋ, ನಟಿ ಪೂಜಾ ಹೆಗಡೆ ತುಂಬಾ ಖುಷಿಪಟ್ಟಿದ್ದಾರೆ. ಚಿತ್ರ ಜೀವನದಲ್ಲಿ ಇಲ್ಲಿವರೆಗೂ ನೋಡಿದ ಸಿನಿಮಾಗಳಲ್ಲಿ ಕಾಂತಾರ ಅತ್ಯಂತ ವಿಶೇಷ ಸಿನಿಮಾ ಅನ್ನೋ ಅರ್ಥದಲ್ಲೂ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Rocking Star Yash Next Movie: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ನರ್ತನ್ ಹೇಳಿದ್ದಿಷ್ಟು


ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿರೋ ಪೂಜಾ ಹೆಗಡೆ, ಕಾಂತಾರ ಸಿನಿಮಾದ ಭೂತ ಕೋಲ ನೋಡಿ ಖುಷಿ ಆಗಿದೆ. ನನ್ನ ಬಾಲ್ಯದ ಆ ದಿನಗಳನ್ನೂ ಇದು ನೆನಪಿಸಿದೆ ಅಂತಲೂ ಬರೆದುಕೊಂಡಿದ್ದಾರೆ.


ನಿಮ್ಮ ಹೃದಯಕ್ಕೆ ಹತ್ತಿರವಾದ ಕಥೆಯನ್ನೆ ಬರೆಯಿರಿ
ಹೌದು, ಕಾಂತಾರ ಸಿನಿಮಾ ನೋಡಿದ್ಮೇಲೆ ಈ ಒಂದು ಮಾತನ್ನೂ ಪೂಜಾ ಹೆಗಡೆ ಬರೆದುಕೊಂಡಿದ್ದಾರೆ. ರಿಷಬ್ ಅಭಿನಯದ ಮತ್ತು ನಿರ್ದೇಶನದ ನೋಡಿದ ಪೂಜಾ ಹೆಗಡೆ ಸಂತೋಷ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮಗನಿಸಿದ್ದನ್ನ ಹೀಗೆ ಬರೆದುಕೊಂಡಿದ್ದಾರೆ.


"ನಿಮಗೆ ಗೊತ್ತಿರೋದನ್ನೆ ಬರೆಯಿರಿ. ನಿಮ್ಮ ಹೃಯದಕ್ಕೆ ಹತ್ತಿರವಾದ
ಕಥೆಯನ್ನೆ ಹೃದಯದಿಂದಲೇ ಹೇಳಿ" ಅಂತಲೇ ಪೂಜಾ ಹೆಗಡೆ ಇಲ್ಲೊಂದು ಸಲಹೆ ಕೊಟ್ಟಿದ್ದಾರೆ.


ಕಾಂತಾರ ಸಿನಿಮಾದಲ್ಲಿ ತುಳುನಾಡ ಸಂಸ್ಕೃತಿಯನ್ನ ತುಂಬಾ ಸುಂದರವಾಗಿಯೇ ತೋರಿದ್ದಾರೆ. ಅಷ್ಟೇ ಗೌರವಯುತವಾಗಿಯೇ ಇಲ್ಲಿ ಚಿತ್ರಿಸಿದ್ದಾರೆ ಅಂತಲೂ ಪೂಜಾ ಹೇಳಿಕೊಂಡಿದ್ದಾರೆ.


Bollywood Actress Pooja Hegde Watch Kannada Kantara Film
ನಿಮ್ಮ ಹೃದಯಕ್ಕೆ ಹತ್ತಿರವಾದ ಕಥೆಯನ್ನೆ ಬರೆಯಿರಿ


ಪೂಜಾ ಹೆಗಡೆ ಮಾತಿಗೆ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತೇ?
ಪೂಜಾ ಹೆಗಡೆ ಕೂಡ ತುಳುನಾಡಿನ ಸಂಸ್ಕೃತಿಯ ಹಿನ್ನೆಲೆಯಿಂದಲೇ ಬಂದೋರು. ಹುಟ್ಟಿ ಬೆಳೆದದ್ದು ಮುಂಬೈಯಲ್ಲಿಯೇ ಆದರೂ ತಂದೆ-ತಾಯಿ ತುಳುನಾಡಿನವ್ರೇ ಆಗಿದ್ದಾರೆ.


ಈ ಕಾರಣದಿಂದಲೇ ಬಾಲ್ಯದಲ್ಲಿಯೇ ಪೂಜಾ ಹೆಗಡೆ ಭೂತ ಕೋಲವನ್ನ ನೋಡಿದ್ದಾರೆ. ದೈವದ ಕುರಿತು ಆಗಲೇ ಒಂಚೂರು ತಿಳಿದುಕೊಂಡಿದ್ದಾರೆ. ಅದನ್ನ ಕಾಂತಾರ ಮೂಲಕ ಬೆಳ್ಳಿ ತೆರೆ ಮೇಲೆ ನೋಡಿರೋ ಪೂಜಾ ಹೆಗಡೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಹೇಳಿದ್ದಾರೆ. ತಪ್ಪದೇ ಸಿನಿಮಾ ನೋಡಿ ಅಂತಲೂ ಹೇಳಿದ್ದಾರೆ.


ಇದನ್ನೂ ಓದಿ: Abhishek Bachchan: 'ನಿರುದ್ಯೋಗಿ' ಅಂತ ಹಿಯಾಳಿಸಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!


ಪೂಜಾ ಹೆಗಡೆ ಈ ಒಂದು ಮಾತಿನ ಪೋಸ್ಟ್​ ಅನ್ನ ಕಂಡಿರೋ ನಟ-ನಿರ್ದೇಶಕ ರಿಷ್ ಶೆಟ್ಟಿ ಥ್ಯಾಂಕ್ಸ್ ಅಂತಲೂ ರಿಯಾಕ್ಟ್ ಮಾಡಿದ್ದಾರೆ. ಒಟ್ಟಾರೆ, ಕಾಂತಾರ ಸಿನಿಮಾ ತುಳುನಾಡಿನ ಸಂಸ್ಕೃತಿಯನ್ನ ಹೇಳುವುದರ ಜೊತೆಗೆ ದೂರದಲ್ಲಿರೋ ಅನೇಕರಿಗೆ ಅವರವರ ಆ ದಿನಗಳನ್ನೂ ನೆನಪಿಗೆ ತರುತ್ತಿದೆ.

First published: