ಭಾರತಕ್ಕೆ ಇನ್ನು ಬಂದಿಲ್ಲ, ಫೋನ್ ಕರೆಗೂ ಸಿಗುತ್ತಿಲ್ಲ! ಅಪ್ಘಾನಿಸ್ತಾನದಲ್ಲಿರುವ ಸಂಬಂಧಿಯ ಬಗ್ಗೆ ಬೇಸರ ತೋಡಿಕೊಂಡ ನಟಿ!

Nupur Alankar: ನೂಪುರ್​ ಅಲಂಕಾರ್​ ಅವರ ಸಹೋದರಿ ಪತಿ ಅಪ್ಘಾನಿಸ್ತಾನದಲ್ಲಿದ್ದರು. ತಾಲಿಬಾನ್​ ಅಟ್ಟಹಾಸದ ಸಮಯದಲ್ಲಿ ಹೆಂಡತಿಗೆ ಫೋನ್​ ಮಾಡಿದ್ದರು. ಆದರೀಗ ಕರೆ ಮಾಡದೆ ಹಲವು ದಿಗಳು ಕಳೆದಿದೆ. ಅವರನ್ನು ಸಂಪರ್ಕಿಸಲಾಗದೆ ನೂಪುರ್​ ಅಲಂಕಾರ್​ ಅವರ ತಂಗಿ ಅಸಹಾಯಕಾರಿದ್ದಾರೆ.

Nupur Alankar

Nupur Alankar

 • Share this:
  ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಅಟ್ಟಹಾಸದಿಂದ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಕೆಲವರು ಪ್ರಾಣ ಉಳಿಸಲು ಬೇರೆ ದೇಶಗಳಿಗೆ ಓಡಿದ್ದಾರೆ. ಸಿಕ್ಕ ಸಿಕ್ಕ ವಾಹನಗಳನ್ನು ಹಿಡಿದು ಯಾವುದೋ ಪ್ರದೇಶಕ್ಕೆ ಸಂಚರಿಸಿದ್ದಾರೆ. ತಾಲಿಬಾನ್​ನಿಂದಾಗಿ ಅಪ್ಘಾನ್​ನಲ್ಲಿ ಸಿಲುಕಿದ ಭಾರತೀಯರು ಕೂಡ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹರ ಸಾಹಸಪಟ್ಟ ಅನೇಕ ಘಟನೆಗಳು ಬೆಳಕಿಗೆ ಬಂದಿದೆ. ಇನ್ನು ಕೆಲವರು ಬರಲಾಗದೆ ಅಲ್ಲೇ ಉಳಿದುಕೊಂಡವರು ಇದ್ದಾರೆ. ಅದರಂತೆ ಬಾಲಿವುಡ್​ನ ನಟಿ ನೂಪುರ್​​ ಅಲಂಕಾರ್ (Nupur Alankar)​ ಅವರ ಸಹೋದರಿಯ ಪತಿ ಅಪ್ಘಾನಿಸ್ತಾನದಲ್ಲಿ ಸಿಲುಕಿದ್ದು, ಕೆಲವು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನಟಿಯ ಕುಟುಂಬ ತಿಳಿಸಿದೆ.

  ನೂಪುರ್​ ಅಲಂಕಾರ್​ ಅವರ ಸಹೋದರಿ ಪತಿ ಅಪ್ಘಾನಿಸ್ತಾನದಲ್ಲಿದ್ದರು(Afghanistan). ತಾಲಿಬಾನ್(Taliban)​ ಅಟ್ಟಹಾಸದ ಸಮಯದಲ್ಲಿ ಹೆಂಡತಿಗೆ ಫೋನ್​ ಮಾಡಿದ್ದರು. ಆದರೀಗ ಕರೆ ಮಾಡದೆ ಹಲವು ದಿಗಳು ಕಳೆದಿದೆ. ಅವರನ್ನು ಸಂಪರ್ಕಿಸಲಾಗದೆ ನೂಪುರ್​ ಅಲಂಕಾರ್​ ಅವರ ತಂಗಿ ಅಸಹಾಯಕಾರಿದ್ದಾರೆ.

  10 ದಿನಗಳಿಂದ ಸಂಪರ್ಕಿಸಲು ಆಗುತ್ತಿಲ್ಲ!

  ಸದ್ಯ ನೂಪುರ್​ ಅಲಂಕಾರ್​ ತನ್ನ ಸಹೋದರಿ ಜಿಗ್ಯಾಸ್ (Jigyas)​ ಜೊತೆ ವಾಸಿಸುತ್ತಿದ್ದಾರೆ. 10 ದಿನಗಳ ಹಿಂದೆ ನೂಪರ್​ಗೆ ಕರೆ ಮಾಡಿದ ಸಹೋದರಿ ಅಪ್ಘಾನಿಸ್ತಾನದಲ್ಲಿರುವ ಪತಿಯ ಸ್ಥಿತಿಗತಿ ಬಗ್ಗೆ ಹೇಳಿಕೊಂಡಿದ್ದರು. ಮೊಬೈಲ್​ ಬ್ಯಾಟರಿ ಚಾರ್ಜ್​ ಮಾಡಲು ಯಾವುದೇ ಸೌಲಭ್ಯವಿಲ್ಲ. ಮತ್ತು ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದರಂತೆ.

  ಅಪ್ಘಾನ್​ ಸ್ಥಿತಿಯ ಬಗ್ಗೆ  ಮತ್ತು ತಾನಿರುವ ಸ್ಥಳದ ಬಗ್ಗೆ ವಿವರಿಸುವಾಗ ಫೋನ್​ ಕರೆ ಕಟ್ಟಾಯಿತು. ಕರೆ ಕಸ್ಥಗಿತವಾಗುವ ಮುನ್ನ ತನ್ನ ಜೊತೆಗಿರುವ ಸ್ನೇಹಿತನ ನಂಬರ್​ ಕಳುಹಿಸುತ್ತೇನೆ ಎಂದು ಹೇಳಿದ್ದರಂತೆ. ಆದರೆ ಇದುವರೆಗೆ ಯಾರ ನಂಬರ್​ ನನಗೆ ಕಳುಹಿಸಲಿಲ್ಲ ಎಂದು ಸಹೋದರಿಯ ಬಳಿ ಆಕೆಯ ಪತಿ ವಿವರಿಸಿದ್ಧ ಘಟನೆಯನ್ನು ನೂಪುರ್​ ಸಂದರ್ಶನ ಕಾರ್ಯಕ್ರವೊಂದರಲ್ಲಿ ಹೇಳಿದ್ದಾರೆ.

  Iphone​ ಬಳಕೆದಾರರಿಗಾಗಿ ಆ್ಯಪಲ್​ ಕಡೆಯಿಂದ ಉಚಿತ ಸರ್ವಿಸ್​​! ಆದರೆ ಈ ಮಾಡೆಲ್​​ಗಳಿಗೆ ಮಾತ್ರ!

  ಅಪ್ಘಾನಿಸ್ತಾನನಿಂದ ಅನೇಕ ವಿಮಾನಗಳು ಭಾರತೀಯರನ್ನು ಕರೆದುಕೊಂಡು ಬಂದಿದೆ. ಆದರೆ ನನ್ನ ಸಹೋದರಿ ಗಂಡ ಮಾತ್ರ ಇನ್ನು ಬಂದಿಲ್ಲ ಎಂದು ನೂಪುರ್​​ ಆತಂಕ ವ್ಯಕ್ತಪಡಿಸಿದ್ದಾರೆ.

  ಆಗಸ್ಟ್​ 31ರೊಳಗೆ ಪತಿ ಹಿಂದಿರುಗಿ ಬರಲಬೇಕು ಎಂದು ನೂಪುರ್​ ಕುಟುಂಬ ಪ್ರಾರ್ಥಿಸಿದೆ. ಅಮೆರಿಕ (America) ಸೇವೆ ಆಗಸ್ಟ್​ 31ರವರೆಗೆ ಮಾತ್ರ ಅಪ್ಘಾನಿಸ್ತಾನದಲ್ಲಿರುತ್ತದೆ. ನಂತರ ಅಪ್ಘಾನಿಸ್ತಾನವನ್ನು ಸಂಪೂರ್ಣ ತಾಲಿಬಾನ್​ಗಳು ವಶಪಡಿಸಿಕೊಳಳುತ್ತಾರೆ. ಆದರೆ ಅಲ್ಲೇ ಉಳಿದ ನಾಗರಿಕರಿಗೆ ದೇಶದಿಂದ ಹೊರಬರುವುದು ತುಂಬಾ ಕಷ್ಟ ಎಂದಿದ್ದಾರೆ ನೂಪುರ್​.

  ಇನ್ನು ನನ್ನ ಸಹೋದರಿ ಪತಿ ಇನ್ನು ಬಂದಿಲ್ಲವೆಂದು ಕಳೆದ ದಿನಗಳಿಂದ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಈಗ ಬರುವರು ಮತ್ತೆ ಬರುವರೆಂದು ಕಾದಯು ಕುಳಿತಿದ್ದಾಳೆ ಎಂದು ನೂಪುರ್​ ಸಂದರ್ಶನದಲ್ಲಿ ಮಾತನಾಡಿದ್ದಾರೆ.
  Published by:Harshith AS
  First published: