Mallika Sherawat: ಮಧ್ಯರಾತ್ರಿ ಫೋನ್ ಮಾಡಿ ಮನೆಗೆ ಕರೀತಾರೆ, ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

ಬಾಲಿವುಡ್​ನ ಕರಾಳ ಮುಖವನ್ನು ಮತ್ತೊಮ್ಮೆ ಮಲ್ಲಿಕಾ ಶೆರಾವತ್ ತೆರೆದಿಟ್ಟಿದ್ದಾರೆ. ಈಗಾಗಲೇ ಅನೇಕ ನಟಿಯರು ಕಾಸ್ಟಿಂಗ್​ ಕೌಚ್​ ಪಿಡುಗಿನ ಬಗ್ಗೆ ಹೇಳಿದ್ದು, ಇದೀಗ ಈ ಸಾಲಿಗೆ ಮಲ್ಲಿಕಾ ಸಹ ಸೇರಿಕೊಂಡಿದ್ದಾರೆ.

ಮಲ್ಲಿಕಾ ಶೆರಾವತ್​

ಮಲ್ಲಿಕಾ ಶೆರಾವತ್​

  • Share this:
ಬಾಲಿವುಡ್​ನ ಹಾಟ್​ ನಟಿಯರಲ್ಲಿ ಒಬ್ಬರಾದ ನಟಿ ಮಲ್ಲಿಕಾ ಶೆರಾವತ್ (Mallika Sherawat) ಸದ್ಯ ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇವರು ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ನಟನೆಯ 'ಮರ್ಡರ್' ಸಿನಿಮಾ ಅವರ ವೃತ್ತಿಜೀವನದಲ್ಲಿ ಸಖತ್ ಹಿಟ್​ ಆಗುವ ಮೂಲಕ ಸಾಲು ಸಾಲು ಚಿತ್ರಗಳ ಅವಕಾಶ ಸಿಗುವಂತಾಯಿತು. ಆದರೆ ಸದ್ಯ ಕೆಲ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಹೆಚ್ಚಾಗಿ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದಿಗ ಅವರು ತಾವು ಬಾಲಿವುಡ್​ ನಿಂದ (Bollywood) ಹೀಗೆ ಏಕೆ ದೂರವಾದೆ ಎಂದು ಹೇಳಿಕೊಂಡಿದ್ದು, ಬಾಲಿವುಡ್​ನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ಈಗಾಗಲೇ ಅನೇಕ ನಟಿಯರು ಕಾಸ್ಟಿಂಗ್​ ಕೌಚ್ (Casting Couch)​ ಪಿಡುಗಿನ ಬಗ್ಗೆ ಹೇಳಿದ್ದು, ಇದೀಗ ಈ ಸಾಲಿಗೆ ಮಲ್ಲಿಕಾ ಸಹ ಸೇರಿಕೊಂಡಿದ್ದಾರೆ.

ಮಧ್ಯರಾತ್ರಿ ಕರೆ ಮಾಡಿ ಮನೆಗೆ ಕರೆಯುತ್ತಾರೆ:

ಹೌದು, ಇಂತಹದೊಂದು ಕರಾಳ ಸತ್ಯವನ್ನು ಇದೀಗ ನಟಿ ಮಲ್ಲಿಕಾ ಶೆರಾವತ್ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಾಲಿವುಡ್‌ ನಟರ ವಿರುದ್ಧ ದೂರಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನೀವು ಒಂದು ಚಿತ್ರದಲ್ಲಿ ನಟಿಸುತ್ತಿದ್ದರೆ ಆ ಚಿತ್ರದ ನಟ ಕರೆದಲ್ಲಿ ಹೋಗಬೇಕು. ಜೊತೆಗೆ ಅವರು ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರುವಂತೆ ಹೇಳುತ್ತಾರೆ. ಒಂದು ವೇಳೆ ನೀವು ಆ ವೇಳೆ ಹೋಗದಿದ್ದಲ್ಲಿ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ‘ ಎಂದು ಹೇಳುವ ಮೂಲಕ ಮತ್ತೊಮ್ಮೆ ಬಾಳಿವುಡ್​ನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ಸದ್ಯ ಇವರ ಈ ಹೇಳಿಕೆ ಬಾಲಿವುಡ್​ನಲ್ಲಿ ಹೊಸ ಸಂಚಲನ ಮೂಡಿಸಿದೆ.

ನಾನು ಅಂಥವಳಲ್ಲ ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ:

ಇನ್ನು, ಮಾತು ಮುಂದುವರೆಸಿದ ಮಲ್ಲಿಕಾ ಅವರು, ‘ಯಾವ ನಟಿ ತಮ್ಮೊಂದಿಗೆ ಬೆರೆಯುತ್ತಾರೆ, ಯಾವ ನಟಿಯನ್ನು ತಾವು ಕಂಟ್ರೋಲ್​ ಮಾಡಬಹುದು ಎಂದು ನೋಡುವ ಮೂಲಕ ನಟರು ಆ ರೀತಿಯ ನಟಿಯರನ್ನು ಇಷ್ಟಪಡುತ್ತಾರೆ. ಆದರೆ ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ಹೀಗಾಗಿ ನನಗೆ ಟಾಪ್​ ನಟನರುಗಳ ಜೊತೆ ತೆರೆಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಅವರೊಂದಿಗೆ ಕಾಂಪ್ರಮೈಸ್ ಆಗಲಿಲ್ಲ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಥೈಲ್ಯಾಂಡ್​ಗೆ ಹಾರಿದ 777 Charlie ಚಿತ್ರತಂಡ, ಚಾರ್ಲಿ ಎಲ್ಲಿ ಎಂದು ಕೇಳಿದ ನೆಟ್ಟಿಗರು

ಇದರ ಜೊತೆ ನಾನು ಅನೇಕ ಒಳ್ಳೆಯ ಸಿನಿಮಾಗಳನ್ನು ಹಾಗೂ ಕೆಟ್ಟ ಸಿನಿಮಾಗಳನ್ನೂ ಮಾಡಿದ್ದೇನೆ. ಎಲ್ಲರಂತೆಯೇ ನಾನೂ ಸಹ ತಪ್ಪುಗಳನ್ನು ಮಾಡಿದ್ದೇನೆ. ಆದರೆ ನನ್ನ ವೈತ್ತಿ ಜೀವನದಲ್ಲಿನ ಸಿನಿ ಜರ್ನಿಯ ಕುರಿತು ನನಗೆ ತೃಪ್ತಿಯಿದೆ'' ಎಂದಿದ್ದಾರೆ. ಸದ್ಯ ಮಲ್ಲಿಕಾ ಶೆರಾವತ್ ಅವರ ‘RK RK‘ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನೂ ಓದಿ:  Pavitra Lokesh: ಧಿಡೀರ್​ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್​, ಇನ್ನು ಚಾನ್ಸ್​ ಸಿಗಲ್ಲ ಅಂದವ್ರಿಗೆ ಕೊಟ್ರಾ ಟಾಂಗ್?

ಅದೇ ರೀತಿಯ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ:

ತಮ್ಮ ಆಫರ್​ಗಳ ಕುರಿತು ಹೇಳುವಾಗ ‘ಬೋಲ್ಡ್ ಹುಡುಗಿಯಾಗಿ ನಟಿಸಿದ ಕಾರಣ ಅದೇ ಪಾತ್ರಗಳು ಹೆಚ್ಚು ಹುಡುಕಿಕೊಂಡು ಬರಲು ಆರಂಭಿಸಿತ್ತು. ಆ ಪಾತ್ರಕ್ಕೆ ಒಳ್ಳೆಯ ಆಫರ್ ಕೂಡ ನೀಡಲಾಗುತಿತ್ತು. ಹಣದ ವಿಚಾರವನ್ನು ನೋಡಿಕೊಂಡು ನಾನು ಅದೇ ಪಾತ್ರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನಗೆ ಅರ್ಥವಿಲ್ಲದ  ಪಾತ್ರಗಳನ್ನು ಮಾಡಲು ಆಸಕ್ತಿ ಇಲ್ಲ. ನಾನು ಅದೇ ಪಾತ್ರಗಳನ್ನು ಮಾಡುವುದನ್ನ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ನನಗೆ ಸವಾಲಿನ ಪಾತ್ರಗಳು ಲಭಿಸುವುದಿಲ್ಲ‘ ಎಂದು ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದರು.
Published by:shrikrishna bhat
First published: