Kareena Kapoor: ಟಾಪ್​ ನಿರ್ದೇಶಕನ ಸಿನಿಮಾ ರಿಜೆಕ್ಟ್​ ಮಾಡಿ 1 ವರ್ಷ ಕೊರಗಿದ್ರಂತೆ ಕರೀನಾ!

ಬಾಲಿವುಡ್‌(Bollywood)ನ ಗ್ಲ್ಯಾಮರ್ (Glamor) ನಟಿ ಕರೀನಾ ಕಪೂರ್ (Kareena Kappor) ಖಾನ್ ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಯಾವಾಗಲೂ ಯಾವುದಾದರೊಂದು ಕಾರಣಕ್ಕೆ ಸುದ್ದಿಯಲ್ಲಿ ಮತ್ತು ಚರ್ಚೆಯಲ್ಲಿರುತ್ತಿತ್ತು ಎಂದು ಹೇಳಿದ್ದಾರೆ.

ನಟಿ ಕರೀನಾ ಕಪೂರ್​

ನಟಿ ಕರೀನಾ ಕಪೂರ್​

  • Share this:
ಈ ಚಿತ್ರೋದ್ಯಮ(Film Industry)ದಲ್ಲಿರುಬ ನಟ ಮತ್ತು ನಟಿಯರ ವೈಯುಕ್ತಿಕ ಬದುಕು (Personal Life) ತೀರಾ ಖಾಸಗಿಯಾಗಿ ಇರಿಸಿಕೊಳ್ಳಲು ಆಗುವುದೇ ಇಲ್ಲ. ಏಕೆಂದರೆ ಅವರಿಗಿದ್ದ ಅಭಿಮಾನಿಗಳು (Fans) ಸದಾ ಅವರ ನೆಚ್ಚಿನ ನಟ ನಟಿಯರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ (Curiosity) ಮತ್ತು ಅವರ ಬದುಕಿನ ಪ್ರತಿಯೊಂದು ಘಟನೆಯನ್ನು ಚಾಚು ತಪ್ಪದೆ ಜನರಿಗೆ ತೋರಿಸುವ ಈ ಸಾಮಾಜಿಕ ಮಾಧ್ಯಮ(Social Media)ಗಳ ನಡುವೆ ನಟ ಮತ್ತು ನಟಿಯರಿಗೆ ಅವರ ವೃತ್ತಿ ಬದುಕಿನ ಮತ್ತು ವೈಯುಕ್ತಿಕ ಬದುಕಿನ ಆಗು ಹೋಗುಗಳನ್ನು ಮರೆ ಮಾಚಿಕೊಂಡು ಇರಲು ಸಾಧ್ಯವೇ ಆಗುವುದಿಲ್ಲ. ಬನ್ನಿ ಇಲ್ಲೊಬ್ಬ ನಟಿ ಸಹ ಅದನ್ನೇ ಹೇಳಿದ್ದಾರೆ. ಬಾಲಿವುಡ್‌(Bollywood)ನ ಗ್ಲ್ಯಾಮರ್ (Glamor) ನಟಿ ಕರೀನಾ ಕಪೂರ್ (Kareena Kappor) ಖಾನ್ ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಯಾವಾಗಲೂ ಯಾವುದಾದರೊಂದು ಕಾರಣಕ್ಕೆ ಸುದ್ದಿಯಲ್ಲಿ ಮತ್ತು ಚರ್ಚೆಯಲ್ಲಿರುತ್ತಿತ್ತು ಎಂದು ಹೇಳಿದ್ದಾರೆ.

ಟಾಕ್​ ಆಫ್​ ದಿ ಟೌನ್​ ಕರೀನಾ ಕಪೂರ್​!​ 

ನಟಿ ಕರೀನಾ ಕಪೂರ್ ಖಾನ್ ಅವರ ಜೀವನವು ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಚರ್ಚೆಯಲ್ಲಿರುತ್ತಿತ್ತು ಎಂದು ಹೇಳಿದ್ದೇಕೆ ಗೊತ್ತೇ..? ನಟ ಶಾಹಿದ್ ಕಪೂರ್ ಅವರೊಂದಿಗಿನ ಸಂಬಂಧ, ಸೈಫ್ ಅಲಿ ಖಾನ್ ಅವರೊಂದಿಗೆ ಮದುವೆ ಮತ್ತು ನಂತರ ಮಕ್ಕಳು ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಅವರೊಂದಿಗಿನ ಒಡನಾಟ. ಹೀಗೆ ಅವರ ಪ್ರೀತಿಯ ವಿಷಯ, ವಿವಾಹದ ವಿಷಯದಿಂದ ಹಿಡಿದು ಅವರ ಚಲನಚಿತ್ರಗಳವರೆಗೆ, ನಟಿ ಯಾವಾಗಲೂ ಅವರ ಅಭಿಮಾನಿಗಳಲ್ಲಿ ಒಂದು ಚರ್ಚೆಯ ವಿಷಯವಾಗಿ ಸದಾ ಉಳಿದಿದ್ದಾರೆ.

ಇದನ್ನೂ ಓದಿ: 2 ಮಕ್ಕಳ ತಾಯಿಯಾಗಿದ್ರೂ ಸಖತ್​ ಫಿಟ್​ ಕರೀನಾ ಕಪೂರ್​! ಅವ್ರ ಡಯೆಟ್​ನಲ್ಲಿ ಏನೇನಿದೆ ಅಂತ ನೀವೇ ನೋಡಿ..

ಭನ್ಸಾಲಿ ಸಿನಿಮಾ ರಿಜೆಕ್ಟ್​ ಮಾಡಿದ್ರಂತೆ ಕರೀನಾ ಕಪೂರ್​​!

ಈ ವಿಚಾರ ನಟಿ ಕರೀನಾ ಅವರನ್ನು ತುಂಬಾನೇ ಅಸಮಾಧಾನಗೊಳಿಸುವ ವಿಷಯಗಳಲ್ಲಿ ಒಂದು ಎಂದು ಅವರೇ ಖುದ್ದಾಗಿ ‘ಟ್ವೀಕ್ ಇಂಡಿಯಾದ ದಿ ಐಕಾನ್’ ಟಾಕ್ ಶೋನಲ್ಲಿ ನಟಿ ಟ್ವಿಂಕಲ್ ಖನ್ನಾ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದಾರೆ. "ನನ್ನ ವೈಯಕ್ತಿಕ ಜೀವನ ಮತ್ತು ನನ್ನ ವೃತ್ತಿ ಜೀವನವು ಅತಿ ಹೆಚ್ಚು ಮಾತನಾಡಲ್ಪಟ್ಟಿದ್ದ ವಿಷಯವೆಂದರೆ ತಪ್ಪಾಗುವುದಿಲ್ಲ, ಅದು ನನ್ನ ಬ್ರೇಕಪ್ ಆಗಿರಲಿ, ನಟ ಸೈಫ್ ಅವರೊಂದಿಗಿನ ನನ್ನ ಮದುವೆಯಾಗಿರಲಿ ಅಥವಾ ಅದಕ್ಕೂ ಮೊದಲು ನನ್ನ ವೃತ್ತಿ ಜೀವನವು ಉತ್ತಮವಾಗಿರಲಿಲ್ಲ. ನಟಿ ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅವರು ನಟಿಸುತ್ತಿದ್ದ ಯಶ್ ರಾಜ್ ಅಥವಾ ಧರ್ಮಾ ಪ್ರೊಡಕ್ಷನ್ ಅವರೊಂದಿಗೆ ಏಕೆ ಕೆಲಸ ಮಾಡುತ್ತಿರಲಿಲ್ಲ ಎಂದು ಕೇಳುತ್ತಿದ್ದರು'' ಎಂದು ಕರೀನಾ ಅವರು ಹೇಳಿದರು.

ಮಗನ ಬಗ್ಗೆ ಸುದ್ದಿ ಮಾಡಿದ್ರೆ ಕರೀನಾಗೆ ಕೋಪವಂತೆ!

ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರವನ್ನು ನಾನು ತಿರಸ್ಕರಿಸಿದ ಸಂಗತಿಯೂ ಒಂದು ವರ್ಷಕ್ಕೂ ಹೆಚ್ಚು ಕಾಲ ಚರ್ಚೆಯಾಯಿತು ಎಂದು ಅವರು ಹೇಳಿದರು."ಒಂದು ಹಂತದಲ್ಲಿ, ನನ್ನ ಜೀವನವು ಜನರ ಮಧ್ಯೆ ಚರ್ಚೆಯ ವಿಷಯವಾಗಿ ಬಂದಂತೆ ನನಗೆ ಅನ್ನಿಸಿತು ಮತ್ತು ಇದೇಕೆ ಆಯಿತು..? ನನಗೆ ಗೊತ್ತಿಲ್ಲ. ಅದು ನನ್ನನ್ನು ತುಂಬಾನೇ ಕೋಪ ಮಾಡಿಕೊಳ್ಳುವಂತೆ ಮಾಡಿತು" ಎಂದು ಹೇಳಿದರು. “ತೈಮೂರ್ ನಟನಾಗುತ್ತಾನೆಯೇ, ಅವನು ಯಾವ ರೀತಿಯ ಶಾಲೆಗೆ ಹೋಗುತ್ತಾನೆ ಮತ್ತು ಅವನು ಎಷ್ಟು ಸವಲತ್ತು ಹೊಂದಿದ್ದಾನೆ ಎಂದು ಜನರು ಚರ್ಚಿಸಿದಾಗ ನಾನು ಇನ್ನೂ ಅಸಮಾಧಾನಗೊಳ್ಳುತ್ತೇನೆ” ಎಂದು ಕರೀನಾ ಹೇಳಿದರು. ಆದರೆ ಇದೆಲ್ಲವನ್ನೂ ನಾನು ನನ್ನದೇ ಆದ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ರೂಲ್ಸ್​ನಿಂದ ತೂಕ ಕಳೆದುಕೊಂಡ ನಟಿ.. ಹೇಗಿದ್ದವ್ರು, ಹೇಗಾಗಿದ್ದಾರೆ ನೋಡಿ!

"ಕರೀನಾ ತನ್ನ ಯಶಸ್ಸು ಅಥವಾ ವೈಫಲ್ಯಗಳ ಬಗ್ಗೆ ಹೆಚ್ಚಾಗಿ ತಲೆ ಕೆಡೆಸಿಕೊಂಡಿಲ್ಲ ಎಂದು ಹೇಳಿದ್ದಾರೆ. "ಅವು ಕ್ಷಣಿಕವಾಗಿದ್ದು, ನಾನು ಅವುಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ" ಎಂದು ನಟಿ ಹೇಳಿದರು. “ನನಗೆ ಯಾವಾಗಲೂ ನನ್ನ ಕುಟುಂಬವೇ ನನ್ನ ಮೊದಲ ಆದ್ಯತೆಯಾಗಿತ್ತು ಮತ್ತು ಅದನ್ನು ರಕ್ಷಿಸಿಕೊಳ್ಳುವುದು ನನ್ನ ಕರ್ತವ್ಯ" ಎಂದು ನಟಿ ಹೇಳಿದರು.
Published by:Vasudeva M
First published: