KGF 2: ಬಾಲಿವುಡ್​​ನ​ 'ಆ' ಲೆಜೆಂಡ್ ಜಾಗಕ್ಕೆ ಯಶ್​ ಬಂದ್ರಂತೆ! ರಾಕಿ ಭಾಯ್ ಬಗ್ಗೆ ಕೊಂಡಾಡಿದ ನಟಿ ಕಂಗನಾ

ಈ ಚಿತ್ರದ ಹವಾ ಬಾಲಿವುಡ್(Bollywood) ನಟ ನಟಿಯರನ್ನು ಒಮ್ಮೆ ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್(Rocking Star Yash) ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕಂಗನಾ, ಯಶ್​

ಕಂಗನಾ, ಯಶ್​

  • Share this:
ಕನ್ನಡ(Kannada) ಚಲನಚಿತ್ರದ ಬಹುಬೇಡಿಕೆಯ ನಟ ಯಶ್(Yash) ಅವರ ಅಭಿನಯದ ಕೆಜಿಎಫ್ ಚಾಪ್ಟರ್ 2(KGF Chapter 2) ಈಗಾಗಲೇ ದೇಶಾದ್ಯಂತ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆ(Box Office)ಯಲ್ಲಿ ಭಾರಿ ಹಣವನ್ನು ಗಳಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಕೆಜಿಎಫ್ ಚಾಪ್ಟರ್ 2 ಚಿತ್ರದ ಹವಾ ಎಷ್ಟರ ಮಟ್ಟಿಗೆ ಜನರನ್ನು ಆವರಿಸಿದೆ ಎಂದರೆ ಬಹುತೇಕರು ಈ ಚಿತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಇದು ಬರಿ ಅಭಿಮಾನಿಗಳವರೆಗೆ ಮಾತ್ರ ಸೀಮಿತವಾಗಿಲ್ಲ. ಈ ಚಿತ್ರದ ಹವಾ ಬಾಲಿವುಡ್(Bollywood) ನಟ ನಟಿಯರನ್ನು ಒಮ್ಮೆ ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್(Rocking Star Yash) ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬಾಲಿವುಡ್​ನ್​​ ಆ ಲೆಜೆಂಡ್​ ಜಾಗಕ್ಕೆ ಯಶ್​!

ಆ ಬಾಲಿವುಡ್ ನಟಿ ಯಾರು ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲವಾಗುತ್ತಿರಬೇಕಲ್ಲವೇ? ಅವರು ಕಂಗನಾ ರಣಾವತ್, ಯಾವಾಗಲೂ ದಕ್ಷಿಣದ ತಾರೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಏಕೆಂದರೆ ಬಾಲಿವುಡ್ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅವರು ನಂಬುತ್ತಾರೆ. ಇತ್ತೀಚೆಗೆ, ಕಂಗನಾ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡರು. ಅವರು ತಮ್ಮ ಸಂಸ್ಕೃತಿಯಲ್ಲಿ 'ಆಳವಾಗಿ ಬೇರೂರಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ. ತಮ್ಮ ಮುಂದಿನ ಪೋಸ್ಟ್‌ನಲ್ಲಿ ಅವರು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟಿಸಿದ ಯಶ್ ಅವರನ್ನು ತುಂಬಾನೇ ಹೊಗಳಿದ್ದಾರೆ.

ಯಶ್​ ಹೊಸ ಆ್ಯಂಗ್ರಿ ಯಂಗ್​ ಮ್ಯಾನ್ ಎಂದ ಕಂಗನಾ!

ಅವರನ್ನು 'ಆ್ಯಂಗ್ರಿ ಯಂಗ್ ಮ್ಯಾನ್' ಎಂದು ಹೇಳಿದ್ದಾರೆ ಮತ್ತು ಭಾರತವು ಅನೇಕ ದಶಕಗಳಿಂದ ಇಂತಹ ಒಬ್ಬ ವ್ಯಕ್ತಿಯನ್ನು ಮಿಸ್ ಮಾಡಿಕೊಂಡಿತ್ತು ಎಂದು ಹೇಳಿದರು ಮತ್ತು ಯಶ್ ಅವರನ್ನು ಕಂಗನಾ ಅವರು ಬಾಲಿವುಡ್ ದಿಗ್ಗಜ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ಹೋಲಿಸಿದ್ದಾರೆ. ಹೇಗೆ ಈ ಬಾಲಿವುಡ್ ನ ಹಿರಿಯ ನಟ 70 ಮತ್ತು 80 ರ ದಶಕದಲ್ಲಿ 'ಆ್ಯಂಗ್ರಿ ಯಂಗ್ ಮ್ಯಾನ್' ಎಂಬ ಲೇಬಲ್‌ಗೆ ಸಮಾನಾರ್ಥಕವಾಗಿ ಮಾರ್ಪಟ್ಟಿದ್ದರು ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ: KGF 2 ಅಬ್ಬರಕ್ಕೆ ಬಾಕ್ಸ್​ ಆಫೀಸ್ ಧೂಳಿಪಟ, ನಾಲ್ಕೇ ದಿನಕ್ಕೆ 29 ದಾಖಲೆ ಬರೆದ ರಾಕಿ ಬಾಯ್

ದಕ್ಷಿಣದ ಸ್ಟಾರ್​ಗಳ ಬಗ್ಗೆ ಕೊಂಡಾಡಿದ ನಟಿ ಕಂಗನಾ!

ಬರಿ ರಾಕಿಂಗ್ ಸ್ಟಾರ್ ಯಶ್ ಅಲ್ಲದೆ ತೆಲುಗಿನ ನಟರಾದ ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಫೋಟೋಗಳನ್ನು ಹಂಚಿಕೊಂಡ ಕಂಗನಾ ಅವರು "ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳು ತಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ. ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಹೊರತಾಗಿ, ಅವರ ಸತ್ಯಾಸತ್ಯತೆಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ" ಎಂದು ಹೇಳಿದ್ದಾರೆ. ಮುಂದಿನ ಪೋಸ್ಟ್‌ನಲ್ಲಿ ಅವರು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿನ ಯಶ್ ಅವರ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ ಮತ್ತು "ಅವರು ಅನೇಕ ದಶಕಗಳಿಂದ ಭಾರತ ಮಿಸ್ ಮಾಡಿಕೊಂಡ ಆ್ಯಂಗ್ರಿ ಯಂಗ್ ಮ್ಯಾನ್” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಮಿತಾಭ್​ ಬಚ್ಚನ್​ ಜಾಗ ತುಂಬ್ತಾರಾ ಯಶ್​?

“70ರ ದಶಕದಿಂದ ಅಮಿತಾಭ್ ಬಚ್ಚನ್ ಅವರು ಬಿಟ್ಟು ಹೋದ ಆ ಜಾಗವನ್ನು ಯಶ್ ಅವರು ತುಂಬುತ್ತಾರೆ. 2018 ರ ಬ್ಲಾಕ್ ಬಸ್ಟರ್ ಚಿತ್ರದ ಮುಂದುವರಿದ ಭಾಗವಾದ ಯಶ್ ಅವರ ಕೆಜಿಎಫ್ ಚಾಪ್ಟರ್ 2, ವಿಶ್ವಾದ್ಯಂತ 500 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ ಮತ್ತು ಭಾರಿ ಹಿಟ್ ಆಗಿದೆ.

ಇದನ್ನೂ ಓದಿ: ಹುಡುಗಿಯರ ಮುಂದೆ ನಾಚಿಕೆಯಿಂದ ಡ್ರಗ್ಸ್ ಸೇವಿಸುತ್ತಿದ್ದೆ; ರಹಸ್ಯ ಬಿಚ್ಚಿಟ್ಟ ಸಂಜಯ್ ದತ್

ಜನವರಿಯಲ್ಲಿ ಸಹ ಕಂಗನಾ ವಿವರವಾದ ಪೋಸ್ಟ್ ಅನ್ನು ಬರೆದಿದ್ದರು. ಅದರಲ್ಲಿ ಅವರು "ದಕ್ಷಿಣ ಭಾರತದ ಚಿತ್ರಗಳ ಕಥಾ ವಿಷಯ ಮತ್ತು ಸೂಪರ್ ಸ್ಟಾರ್‌ಗಳು ಏಕೆ ಅಂತಹ ಕೋಪೋದ್ರಿಕ್ತರಾಗಿದ್ದಾರೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ ನೋಡಿ.. ಅವರು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ, ಅವರು ತಮ್ಮ ಕುಟುಂಬಗಳನ್ನು ತುಂಬಾನೇ ಪ್ರೀತಿಸುತ್ತಾರೆ ಮತ್ತು ಸಂಬಂಧಗಳಿಗೆ ಗೌರವ ನೀಡುತ್ತಾರೆ ಮತ್ತು ಅವರ ವೃತ್ತಿಪರತೆ ಹಾಗೂ ಉತ್ಸಾಹಕ್ಕೆ ಯಾರು ಸಾಟಿಯಿಲ್ಲ. ಬಾಲಿವುಡ್ ಅವರನ್ನು ಭ್ರಷ್ಟಗೊಳಿಸಲು ಅವರು ಅವಕಾಶ ನೀಡಬಾರದು" ಎಂದು ಅವರು ಹೇಳಿದ್ದರು.
Published by:Vasudeva M
First published: