Kajol: ಗಂಡನ ಹೆಸರಲ್ಲಿ 2 ಹೊಸ ಫ್ಲ್ಯಾಟ್​ ತಗೊಂಡ ಕಾಜೋಲ್​! ಏನ್​ ಸರ್​ಪ್ರೈಸ್​ ಇರಬಹುದು?

ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾಗಳಲ್ಲಿ ಅಪಾರ್ಟ್‌ಮೆಂಟ್(Apartment) ಖರೀದಿ ಮಾಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ನಟಿ ಕಾಜೋಲ್‌ ದೇವಗನ್‌(Kajol Devagn) ಸೇರ್ಪಡೆಯಾಗಿದ್ದಾರೆ.

ಕಾಜೋಲ್​, ಅಜಯ್​ ದೇವಗನ್​

ಕಾಜೋಲ್​, ಅಜಯ್​ ದೇವಗನ್​

  • Share this:
ಸಿನಿಮಾ ತಾರೆಯರು ಐಷಾರಾಮಿ ಮನೆ(Luxury House)ಗಳನ್ನ ಖರೀದಿ(Purchase)ಸುವುದು ಹೊಸತೇನಲ್ಲ. ಇನ್ನು ಇತ್ತೀಚಿಗೆ ಬಾಲಿವುಡ್‌(Bollywood) ನಟ-ನಟಿಯರು ರಿಯಲ್‌ ಎಸ್ಟೇಟ್‌(Real Estate) ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾಗಳಲ್ಲಿ ಅಪಾರ್ಟ್‌ಮೆಂಟ್(Apartment) ಖರೀದಿ ಮಾಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ನಟಿ ಕಾಜೋಲ್‌ ದೇವಗನ್‌(Kajol Devagn) ಸೇರ್ಪಡೆಯಾಗಿದ್ದಾರೆ.ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಾಲಿವುಡ್‌ ಬೆಡಗಿ ಕಾಜೋಲ್‌, ವಾಣಿಜ್ಯ ನಗರಿ ಮುಂಬೈ(Mumbai)ನ ಸಮುದ್ರ ತೀರದಲ್ಲಿರುವ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಜುಹು(Juhu)ವಿನಲ್ಲಿರುವ ಅನನ್ಯಾ(Anananya) ಬಿಲ್ಡಿಂಗ್‌ನಲ್ಲಿ ಎರಡು ಫ್ಲ್ಯಾಟ್‌(Flat)ಗಳನ್ನು ಖರೀದಿಸಿದ್ದು, ಇದರ ಮೌಲ್ಯ 11.95 ಕೋಟಿ ರೂ. ಎಂದು ಹೇಳಲಾಗಿದೆ.

2 ಹೊಸ ಫ್ಲ್ಯಾಟ್​ ಖರೀದಿಸಿದ ನಟಿ ಕಾಜೋಲ್​!

ನಟಿ ಕಾಜೋಲ್‌ ಇದೇ ವರ್ಷದ ಜನವರಿಯಲ್ಲಿ ಮನೆ ಖರೀದಿಸಿದ್ದು, ಈ ಎರಡು ಮನೆಗಳು ಅನನ್ಯಾ ಅಪಾರ್ಟ್‌ಮೆಂಟ್‌ ಕಟ್ಟಡದ 10ನೇ ಮಹಡಿಯಲ್ಲಿವೆ ಎನ್ನಲಾಗಿದೆ. ಕಾಜೋಲ್‌ ಹೊಸ ಮನೆ ಖರೀದಿಸಿರುವ ಅನನ್ಯಾ ಕಟ್ಟಡ, ಪ್ರಸ್ತುತ ಅವರು ವಾಸವಾಗಿರುವ ಶಿವಶಕ್ತಿ ಮನೆಯ ಸಮೀಪದಲ್ಲಿದೆ. ನಟಿ ಕಾಜೋಲ್‌ ಅವರೊಂದಿಗೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ಅಕ್ಷಯ್‌ ಕುಮಾರ್‌, ಹೃತಿಕ್‌ ರೋಷನ್‌ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮುಂಬೈನ ಜುಹುವಿನಲ್ಲಿ ವಾಸವಾಗಿದ್ದಾರೆ. ಸ್ಕ್ವೇರ್‌ ಫೀಟ್‌ ಇಂಡಿಯಾ ಪ್ರಕಾರ, ನಟಿ ಕಾಜೋಲ್‌ ಅವರು ಖರೀದಿಸಿರುವ ಎರಡು ಅಪಾರ್ಟ್‌ಮೆಂಟ್‌ ಕಟ್ಟಡ 2,000 ಸ್ಕ್ವೇರ್‌ ಫೀಟ್‌ ಇದೆ.


ಇದನ್ನೂ ಓದಿ: ಪ್ರಾಣಿಪ್ರಿಯನಿಗೆ ಪಾಗಲ್​ ಅಂದವನಿಗೆ ನಟಿ ಕ್ಲಾಸ್​​.. `ಹುಚ್ಚ’ ಅವರಲ್ಲ ನೀನು ಅಂದಿದ್ಯಾಕೆ ಅನುಷ್ಕಾ?

ಗಂಡನ ಹೆಸರಲ್ಲಿ ಮನೆ ಖರೀದಿಸಿದ ಕಾಜೋಲ್​!

ಮನೆಯ ದಾಖಲೆಗಳಲ್ಲಿ ಕಾಜೋಲ್‌ ವಿಶಾಲ್‌ ದೇವಗನ್‌ ಎಂಬ ಹೆಸರಿನಿಂದ ಸಹಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಹೌಸಿಂಗ್‌.ಕಾಮ್‌ ಪ್ರಕಾರ, ನಟ ಅಜಯ್‌ ದೇವಗನ್‌ ಅವರು ಶಿವಶಕ್ತಿ ಮನೆಯನ್ನು 60 ಕೋಟಿ ರೂ.ಗಳಿಗೆ ಖರೀದಿಸಿದ್ದರು. 590 ಚದರ ಗಜಗಳ ವಿಸ್ತೀರ್ಣ ಹೊಂದಿರುವ ಈ ಮನೆಯು ಜುಹುವಿನಲ್ಲಿರುವ ಕಪೋಲ್‌ ಕೋ-ಆಪರೇಟಿವ್‌ ಹೌಸಿಂಗ್‌ ಸೊಸೈಟಿಯಲ್ಲಿದೆ. ನಟ ಅಜಯ್‌ ದೇವಗನ್‌ ಹಾಗೂ ಮನೆಯ ಹಿಂದಿನ ಮಾಲೀಕ ದಿವಂಗತ ಪುಷ್ಪಾ ವಲಿಯಾ, ನವೆಂಬರ್‌ 2020ರಲ್ಲಿ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರಾದರೂ, 2021ರ ಮೇ 7ರಲ್ಲಿ ಇದರ ವರ್ಗಾವಣೆ ಮಾಡಲಾಯಿತು.


ತಮ್ಮ ಸ್ವಂತ ಮನೆಯನ್ನು ಬಾಡಿಗೆಗೆ  ನೀಡಿದ್ದ ನಟಿ!

ನಟಿ ಕಾಜೋಲ್‌ ಅವರು ಕಳೆದ ವರ್ಷ ಪೊವೈನಲ್ಲಿರುವ ತಮ್ಮ ಮನೆಯನ್ನು  90 ಸಾವಿರ ರೂ.ಗಳಿಗೆ ಬಾಡಿಗೆ ನೀಡಿದ್ದರು. ಮನಿ ಕಂಟ್ರೋಲ್‌ ವರದಿ ಪ್ರಕಾರ, ಕಾಜೋಲ್‌ ಅವರ ಪೊವೈ ಆಸ್ತಿಯು 771 ಸ್ಕ್ವೇರ್‌ಫೀಟ್‌ ವಿಸ್ತೀರ್ಣ ಹೊಂದಿದೆ. ಈ ಕಟ್ಟಡವು ಹಿರಾನಂದಿನಿ ಗಾರ್ಡನ್ಸ್‌ನಲ್ಲಿರುವ ಅಟ್ಲಾಂಟಿಸ್‌ ಯೋಜನೆಯ 21ನೇ ಮಹಡಿಯಲ್ಲಿದ್ದು, 2021ರ ಡಿಸೆಂಬರ್‌ 3ರಂದು ಇದರ ಒಪ್ಪಂದ ಮಾಡಿಕೊಳ್ಳಲಾಗಿದೆ. 3 ಲಕ್ಷ ರೂ.ಗಳ ಭದ್ರತಾ ಠೇವಣಿ ಪಡೆಯಲಾಗಿದ್ದು, ಒಂದು ವರ್ಷದ ನಂತರ ತಿಂಗಳಿಗೆ 96,750 ರೂ.ಗಳ ಪರಿಷ್ಕೃತ ಬಾಡಿಗೆ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: ಇದೇನ್ರಿ ಹಿಂಗಿದೆ.. ಬಾತ್​ರೂಂನಲ್ಲೂ ಫೋಟೋಶೂಟಾ? ಆಲಿಯಾ ನೀ ಮಾಡಿದ್ದು ಸರಿಯಾ!

ಇನ್ನು, ಸದ್ಯ ಸಿನಿಮಾ ರಂಗದಲ್ಲಿ ನಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ನಟಿ ಕಾಜೋಲ್, ಸಿನಿಮಾ ನಿರ್ಮಾಣದ ಬಗ್ಗೆ ಹೆಚ್ಚು ಕಾಳಜಿವಹಿಸಿದ್ದಾರೆ. ಪತಿ ಅಜಯ್‌ ದೇವಗನ್‌ ಅವರ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕಾಜೋಲ್‌, ಸಾಕಷ್ಟು ಹಣ ಗಳಿಸಿದ್ದಾರೆ. ಇನ್ನು ನಟಿ ಕಾಜೋಲ್‌ ಅವರು ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ತ್ರಿಭಂಗಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅವರು, ಕಳೆದ ವಾರ ತಮ್ಮ ಮುಂದಿನ ಚಿತ್ರವಾಗಿರುವ ʼಸಲಾಮ್‌ ವೆಂಕಿʼಯ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
Published by:Vasudeva M
First published: