ಇತ್ತೀಚೆಗೆ ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್ (Bollywood Veteran Actress Jaya Bachchan)ಅವರು ತುಂಬಾನೇ ಸುದ್ದಿಯಲ್ಲಿರುತ್ತಿದ್ದಾರೆ ಅಂತ ಹೇಳಬಹುದು. ಹೌದು.. ಜಯಾ ಅವರು ತಮ್ಮ ಮಗಳು ಶ್ವೇತಾ(Shwetha), ಮೊಮ್ಮಗಳು ನವ್ಯಾ(Navya) ಅವರ ಜೊತೆಯಲ್ಲಿ ಒಂದು ಪಾಡ್ಕಾಸ್ಟ್ ಅನ್ನು ನಡೆಸಿಕೊಡುತ್ತಿದ್ದಾರೆ. ಅಲ್ಲಿ ಈ ಮೂವರು ಸಾಮಾಜಿಕ ನಿಷೇಧಗಳು, ಮಹಿಳಾ ಸಬಲೀಕರಣ, ಫ್ಯಾಷನ್, ಜೀವನಶೈಲಿ ಮತ್ತು ಅನೇಕ ಪ್ರಮುಖ ವಿಷಯಗಳು ಸೇರಿದಂತೆ ಸಾಕಷ್ಟು ವೈಯಕ್ತಿಕ ವಿಷಯಗಳನ್ನು(Personal Matters) ಸಹ ಚರ್ಚಿಸುತ್ತಾರೆ.
ಮೊನ್ನೆ ಹೀಗೆ ನವ್ಯಾ ಅವರ ಪಾಡ್ಕಾಸ್ಟ್ ನಲ್ಲಿ ಮಾತಾಡುವಾಗ ಜಯಾ ಬಚ್ಚನ್ ಮತ್ತು ಅವರ ಮಗಳು ಶ್ವೇತಾ ಅವರ ನಡುವೆ ನಡೆದ ಮಾತುಕತೆಯ ಬಗ್ಗೆ ಓದಿದ್ದೆವು. ಜನರು ತಮ್ಮ ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲಿಯೇ ತಮ್ಮ ಹೆಣ್ಣುಮಕ್ಕಳನ್ನು ಬೆಳೆಸಬೇಕು ಎಂಬ ವಿಚಾರದ ಬಗ್ಗೆ ಜಯಾ "ವಿದ್ಯಾವಂತ ಮಹಿಳೆಯರೂ ಸಹ ದ್ವಂದ್ವ ಮಾನದಂಡಗಳನ್ನು ಹೊಂದಿದ್ದಾರೆ, ಇದು ತುಂಬಾ ದುಃಖಕರವಾಗಿದೆ. ಕೆಲವೊಮ್ಮೆ ಮಹಿಳೆಯರಿಗೆ ಮಹಿಳೆಯರೇ ಶತ್ರುಗಳು" ಎಂದು ಹೇಳಿದ್ದು ನಮಗೆಲ್ಲಾ ಗೊತ್ತೇ ಇದೆ.
ಜಯಾ ಮಗ ಅಭಿಷೇಕ್ ಗಿಂತಲೂ ಮಗಳಿಗೆ ಜಾಸ್ತಿ ಹೊಡೆದಿದ್ದಂತೆ!
ಈಗ ಮತ್ತೊಂದು ವೈಯಕ್ತಿಕ ವಿಚಾರವನ್ನು ಖುದ್ದು ಜಯಾ ಅವರ ಮಗಳು ಶ್ವೇತಾ ಅವರೇ ಹಂಚಿಕೊಂಡಿದ್ದಾರೆ ನೋಡಿ. ಜಯಾ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ತುಂಬಾ ನಿಕಟವಾಗಿರಬಹುದು ಆದರೆ ಶ್ವೇತಾ, ಬಾಲ್ಯದಲ್ಲಿ ಅಭಿಷೇಕ್ ಬಚ್ಚನ್ ಗಿಂತಲೂ ಹೆಚ್ಚು ಏಟುಗಳನ್ನು ಅವರ ತಾಯಿಯಿಂದ ತಿಂದಿದ್ದಾರಂತೆ.
ಇದನ್ನೂ ಓದಿ: Malaika Arora-Arjun Kapoor: ಮದುವೆಯಾಗದೇ 49ನೇ ವಯಸ್ಸಲ್ಲಿ ತಾಯಿಯಾಗ್ತಿದ್ದಾರೆ ಮಲೈಕಾ!
ಕೆಲವು ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಮತ್ತು ಅಭಿಷೇಕ್ ಈ ನಾಲ್ವರು ಸಿಮಿ ಗರೇವಾಲ್ ಅವರ ಜನಪ್ರಿಯ ಟಾಕ್ ಶೋ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಎಪಿಸೋಡ್ ನಲ್ಲಿ ಬಚ್ಚನ್ ಕುಟುಂಬದ ಬಗ್ಗೆ ಮತ್ತು ಬಚ್ಚನ್ ಮನೆಯ ಒಳಗೆ ಏನಾಗುತ್ತದೆ ಎಂಬುದರ ಬಗ್ಗೆ ಅನೇಕ ಆಂತರಿಕ ಕಥೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಯಿತು.
ತಾಯಿ ಜಯಾ ಬಚ್ಚನ್ ಮಗ ಅಭಿಷೇಕ್ನ ಪರವಂತೆ..
ಇವರೆಲ್ಲರೂ ಅನೇಕ ವಿಷಯಗಳ ಬಗ್ಗೆ ಚರ್ಚಿಸುತ್ತಿರುವಾಗ, ಶ್ವೇತಾ ತನ್ನ ತಾಯಿ ಜಯಾ ಅವರು ಸಹೋದರ ಅಭಿಷೇಕ್ ಅವರ ಬಗ್ಗೆ ಪಕ್ಷಪಾತಿ ಎಂದು ತಮಾಷೆಯಾಗಿ ಹೇಳಿದರು ಮತ್ತು ತನ್ನ ಸಹೋದರನಿಗಿಂತ ಹೆಚ್ಚಾಗಿ ಅವಳ ಮೇಲೆ ಕೈ ಎತ್ತುತ್ತಿದ್ದರು ಎಂದು ಸಹ ಹೇಳಿಕೊಂಡರು.
ಇದಕ್ಕೆ, ಜಯಾ ತನ್ನ ಮಗಳನ್ನು ನೋಡಿ ಒಮ್ಮೆ ನಕ್ಕರು ಮತ್ತು ಶ್ವೇತಾ ತನಗೆ ಬಾಲ್ಯದಲ್ಲಿ ತುಂಬಾನೇ ತೊಂದರೆ ಮಾಡುತ್ತಿದ್ದಳು, ಆಕೆಯನ್ನು ಸಂಭಾಳಿಸುವುದು ತುಂಬಾನೇ ಕಷ್ಟಕರವಾಗಿತ್ತು ಎಂದು ಹೇಳಿದರು. ಶ್ವೇತಾ ಯಾವಾಗಲೂ ಈ ವಿಷಯದ ಬಗ್ಗೆ ದೂರು ನೀಡಿದ್ದಾಳೆ ಎಂದು ಹಿರಿಯ ನಟಿ ಹೇಳಿಕೊಂಡಿದ್ದರು.
ವಿಶೇಷವೆಂದರೆ, ಜಯಾ ಮತ್ತು ಅಮಿತಾಭ್ ಅವರ ಹಳೆಯ ಸಂಚಿಕೆಯ ವೀಡಿಯೋ ತುಣುಕನ್ನು ಸಿಮಿ ಪ್ಲೇ ಮಾಡಿದ್ದರು, ಅದರಲ್ಲಿ ಜಯಾ ಅವರು ಶ್ವೇತಾ ಅವರನ್ನು ಹಲವಾರು ಬಾರಿ ಹೊಡೆದಿದ್ದಾರೆ, ಆದರೆ ಅಭಿಷೇಕ್ ಗೆ ಏನು ಮಾಡಿಲ್ಲ ಎಂದು ಹೇಳಿದ್ದರು.
ಶ್ವೇತಾ ಅವರು ಹಿರಿಯರಾಗಿದ್ದರಿಂದ ಮತ್ತು ಅವರು ತಮ್ಮನಿಗೆ ಶಿಸ್ತನ್ನು ಹೇಳಿಕೊಟ್ಟು ಸರಿಯಾದ ರೀತಿಯಲ್ಲಿ ಬೆಳೆಯಲು ಮಾರ್ಗದರ್ಶನ ಮಾಡುವ ಜವಾಬ್ದಾರಿಯಿಂದ ಸ್ವಲ್ಪ ಹೆಚ್ಚು ಬಾರಿ ಏಟು ತಿಂದಿದ್ದಾಳೆ ಎಂದು ಬಹಿರಂಗಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ತನ್ನ ಸಹೋದರಿ ಇತರರಿಗಿಂತ ತನ್ನ ಬಗ್ಗೆ ಹೆಚ್ಚು ರಕ್ಷಣಾತ್ಮಕವಾಗಿದ್ದಾಳೆ ಎಂದು ಹೇಳಿದರು.
ಇದನ್ನೂ ಓದಿ: Aditi Prabhudeva: ಮದುವೆಯಾದ ಎರಡೇ ದಿನಕ್ಕೆ ಅದಿತಿ ಪ್ರಭುದೇವ ಪತಿಗೆ ಬಿಗ್ ಶಾಕ್!
ತಾಯಿ-ಮಗಳ ಈ ಮಾತುಗಳನ್ನು ಕೇಳಿದ ಬಿಗ್ ಬಿ ಹೇಳಿದ್ದೇನು?
ಇದೆಲ್ಲ ನಡೆಯುತ್ತಿದ್ದಾಗ ಅಮಿತಾಭ್ ಬಚ್ಚನ್ ಮೌನ ಮುರಿದು, "ನವ್ಯಾ ಈ ಸಂದರ್ಶನಗಳನ್ನು ನೋಡಿದಾಗ ಆಕೆಗೆ ಎಷ್ಟು ಸಂತೋಷವಾಗಬಹುದು" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ