• Home
  • »
  • News
  • »
  • entertainment
  • »
  • Smoking: ಬೋನಿ ಕಪೂರ್​ ಸಿಗರೇಟ್​ ಚಟವನ್ನು ಶ್ರೀದೇವಿ ಹೀಗ್​ ಬಿಡ್ಸಿದ್ರಂತೆ, ಅಮ್ಮನ ಬಗ್ಗೆ ಜಾನ್ಹವಿ ಹೇಳಿದ್ದು ಹೀಗೆ!

Smoking: ಬೋನಿ ಕಪೂರ್​ ಸಿಗರೇಟ್​ ಚಟವನ್ನು ಶ್ರೀದೇವಿ ಹೀಗ್​ ಬಿಡ್ಸಿದ್ರಂತೆ, ಅಮ್ಮನ ಬಗ್ಗೆ ಜಾನ್ಹವಿ ಹೇಳಿದ್ದು ಹೀಗೆ!

ಜಾನ್ಹವಿ, ಬೋನಿ ಕಪೂರ್​, ಶ್ರೀದೇವಿ

ಜಾನ್ಹವಿ, ಬೋನಿ ಕಪೂರ್​, ಶ್ರೀದೇವಿ

ಮನೆಯಲ್ಲಿ ಹೆಂಡತಿ (Wife) ತನ್ನ ಗಂಡ (Husband) ನಿಂದ ಇನ್ಮುಂದೆ ಕುಡಿಯಲ್ಲ, ಸೇದಲ್ಲ ಅಂತ ಆಣೆ ಪ್ರಮಾಣಗಳನ್ನು ಮಾಡಿಸಿಕೊಂಡರೂ ಸಹ ಮನೆಯಿಂದ ಹೊರಗೆ ಹೋಗಿ ಹೆಂಡತಿಗೆ ಮತ್ತು ಮನೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಮದ್ಯಪಾನ ಮಾಡೋದು ಮತ್ತು ಧೂಮಪಾನ ಮಾಡೋದು ಹಾಗೆಯೇ ಮುಂದುವರೆಸಿರುತ್ತಾರೆ.

ಮುಂದೆ ಓದಿ ...
  • Share this:

‘ಧೂಮಪಾನ (Smoking) ಮತ್ತು ಮದ್ಯಪಾನ (Drinking) ಆರೋಗ್ಯಕ್ಕೆ ಹಾನಿಕಾರಕ’ (Injurious To Health) ಅಂತ ಪದೇ ಪದೇ ಹೇಳಿದರೂ, ಟಿವಿ ಜಾಹೀರಾತು (TV Advertisement) ಗಳಲ್ಲಿ ತೋರಿಸಿ ಜನರಲ್ಲಿ ಜಾಗೃತಿ ಮೂಡಿಸಿದರೂ ಸಹ ಕೆಲವರು ಮಾತ್ರ ಇವೆರಡನ್ನು ಬಿಟ್ಟು ಇರುವುದಿಲ್ಲ ಅನ್ನೋ ಮಟ್ಟಿಗೆ ಇವುಗಳಿಗೆ ದಾಸರಾಗಿರುತ್ತಾರೆ ಅಂತ ಹೇಳಬಹುದು. ಮನೆಯಲ್ಲಿ ಹೆಂಡತಿ (Wife) ತನ್ನ ಗಂಡ (Husband) ನಿಂದ ಇನ್ಮುಂದೆ ಕುಡಿಯಲ್ಲ, ಸೇದಲ್ಲ ಅಂತ ಆಣೆ ಪ್ರಮಾಣಗಳನ್ನು ಮಾಡಿಸಿಕೊಂಡರೂ ಸಹ ಮನೆಯಿಂದ ಹೊರಗೆ ಹೋಗಿ ಹೆಂಡತಿಗೆ ಮತ್ತು ಮನೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಮದ್ಯಪಾನ ಮಾಡೋದು ಮತ್ತು ಧೂಮಪಾನ ಮಾಡೋದು ಹಾಗೆಯೇ ಮುಂದುವರೆಸಿರುತ್ತಾರೆ. ಇದು ಅವರ ಆರೋಗ್ಯಕ್ಕೆ ಹಾನಿ ಮಾಡುತ್ತೆ ಅನ್ನೋ ಒಂದು ಚಿಕ್ಕ ವಿಷಯ ಅರ್ಥವಾಗದೆ ಇರುವವರು ತುಂಬಾನೇ ಜನರಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅದರಲ್ಲೂ ಈ ಸಿಗರೇಟ್ ಮತ್ತು ಮದ್ಯದ ಚಟವನ್ನು ಬಿಡಿಸಲು ಹೆಂಡತಿಯರು ಏನೆಲ್ಲಾ ಕಷ್ಟ ಪಟ್ಟಿರುತ್ತಾರೆ ಅದು ಅವರಿಗೆ ಗೊತ್ತಿರುತ್ತದೆ. ಇಲ್ಲಿಯೂ ಸಹ ಒಬ್ಬ ಹೆಂಡತಿ ತನ್ನ ಗಂಡನ ಸಿಗರೇಟ್ ಚಟವನ್ನು ಬಿಡಿಸಲು ತನ್ನ ಆರೋಗ್ಯವನ್ನೇ ಲೆಕ್ಕಿಸಿಲ್ಲವಂತೆ ನೋಡಿ.


ಸಿಗರೇಟ್ ಚಟ ಬಿಡಿಸಲು ನಟಿ ಶ್ರೀದೇವಿ ಏನ್ ಮಾಡಿದ್ರು ನೋಡಿ!


ಇದು ಬೇರೆ ಯಾರ ಬಗ್ಗೆಯೂ ನಾವು ಇಲ್ಲಿ ಹೇಳುತ್ತಿಲ್ಲ, ಈ ವಿಷಯ ಬಾಲಿವುಡ್ ನ ದಿವಂಗತ ನಟಿ ಶ್ರೀದೇವಿ ಮತ್ತು ಆವರ ಗಂಡ ಬೋನಿ ಕಪೂರ್ ಅವರಿಗೆ ಸಂಬಂಧಪಟ್ಟಿದ್ದು ಅಂತ ಹೇಳಬಹುದು. ಶ್ರೀದೇವಿ ಮತ್ತು ಬೋನಿ ಕಪೂರ್ 1996 ರಲ್ಲಿ ವಿವಾಹವಾಗಿದ್ದರು. ಜಾಹ್ನವಿ ಕಪೂರ್ ಅವರು ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಹಿರಿಯ ಮಗಳು. ಅವರಿಗೆ ಖುಷಿ ಕಪೂರ್ ಎಂಬ ಸಹೋದರಿ ಕೂಡ ಇದ್ದಾರೆ.\


ಬೋನಿ ಕಪೂರ್ ಸಿಗರೇಟ್​ ಬಿಟ್ಟಿದ್ದು ಇದೇ ಕಾರಣಕ್ಕಂತೆ!


ದಿವಂಗತ ನಟಿ ಶ್ರೀದೇವಿ ಅವರು ಗಂಡನ ಸಿಗರೇಟ್ ಚಟವನ್ನು ಸಂಪೂರ್ಣವಾಗಿ ಬಿಡಿಸಲು ಸಸ್ಯಾಹಾರಿಯಾಗಿ ಬದಲಾದರಂತೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಪತಿ ಬೋನಿ ಕಪೂರ್ ಧೂಮಪಾನ ಮಾಡುವುದನ್ನು ತಡೆಯಲು ತನ್ನ ತಾಯಿ ಶ್ರೀದೇವಿ ಹಲವಾರು ವರ್ಷಗಳ ಹಿಂದೆ ಮಾಂಸಾಹಾರವನ್ನು ತಿನ್ನುವುದನ್ನು ಹೇಗೆ ನಿಲ್ಲಿಸಿದರು ಎಂಬುದನ್ನು ಮಗಳು ಜಾಹ್ನವಿ ಕಪೂರ್ ಹೊಸ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: KGF ಖಡಕ್ ಪ್ರಧಾನಿ ರಮೀಕಾ ಬರ್ತ್​ಡೇ! ಹುಟ್ಟುಹಬ್ಬದ ಸಂಭ್ರಮದಲ್ಲಿ ರವೀನಾ


"ಅಮ್ಮ ಸಸ್ಯಾಹಾರಿಯಾದಳು, ನೀವು ಧೂಮಪಾನವನ್ನು ನಿಲ್ಲಿಸುವವರೆಗೂ ನಾನು ನಾನ್-ವೆಜ್ ತಿನ್ನುವುದಿಲ್ಲ ಎಂದು ಅವಳು ಹೇಳಿದಳು ಮತ್ತು ವೈದ್ಯರು ಇಲ್ಲ ನೀವು ತುಂಬಾ ದುರ್ಬಲರಾಗಿದ್ದೀರಿ ಎಂದು ಹೇಳಿದರು. ನೀವು ಹೆಚ್ಚು ನಾನ್ ವೆಜ್ ತಿನ್ನಬೇಕು ಎಂದು ಹೇಳಿದ್ದರು. ಅಪ್ಪ ಆಕೆಗೆ ನಾನ್ ವೆಜ್ ತಿನ್ನುವಂತೆ ಬೇಡಿಕೊಳ್ಳುತ್ತಿದ್ದರು. ತದನಂತರ, ಅಂತಿಮವಾಗಿ, ನಾಲ್ಕೈದು ವರ್ಷಗಳ ಹಿಂದೆ, ಅಪ್ಪ ಬಂದು ಸಿಗರೇಟ್ ನಿಲ್ಲಿಸಲು ನಿಮ್ಮಮ್ಮ ಹೇಳುತ್ತಿದ್ದಳು, ಆಗ ಅದನ್ನು ನಿಲ್ಲಿಸಲು ಆಗಿರಲಿಲ್ಲ, ಈಗ ಅದನ್ನು ನಾನೇ ಬಿಡುತ್ತೇನೆ ಅಂತ ಹೇಳಿದರು" ಎಂದು ಜಾಹ್ನವಿ ಹೇಳಿದರು.


ಅಪ್ಪನ ಸಿಗರೇಟ್ ಚಟದ ಬಗ್ಗೆ ಮಗಳು ಜಾಹ್ನವಿ ಹೇಳಿದ್ದೇನು?


ಬೋನಿ ಹಿಂದೊಮ್ಮೆ ತುಂಬಾನೇ ಸಿಗರೇಟುಗಳನ್ನು ಸೇದುತ್ತಿದ್ದರು ಮತ್ತು ಅವರ ಹೆಣ್ಣುಮಕ್ಕಳು ಸೇರಿದಂತೆ ಯಾರಿಂದಲೂ ಆ ಚಟವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಎಂದು ಜಾಹ್ನವಿ ಹಂಚಿಕೊಂಡಿದ್ದಾರೆ.


"ಬಹಳ ಹಿಂದೆ ನಮ್ಮ ಜುಹು ಮನೆಯಲ್ಲಿ ಉಳಿದುಕೊಂಡಿದ್ದು ನನಗೆ ನೆನಪಿದೆ, ಅಪ್ಪ ತುಂಬಾ ಧೂಮಪಾನ ಮಾಡುತ್ತಿದ್ದರು. ಇದು ‘ನೋ ಎಂಟ್ರಿ’ ಮತ್ತು ‘ವಾಂಟೆಡ್’ ಸಿನೆಮಾಗಳ ಸಮಯದಲ್ಲಿ ಎಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಕಾಂತಾರ ಸಿನಿಮಾ ಸೂಪರ್ ಹಿಟ್, ಮುಂದೇನ್ ಮಾಡ್ತಾರೆ ರಿಷಬ್?


ಪ್ರತಿದಿನ ಬೆಳಿಗ್ಗೆ, ನಾನು ಮತ್ತು ಖುಷಿ ಅವರ ಸಿಗರೇಟುಗಳನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದೆವು ಮತ್ತು ಅದನ್ನು ತೆರೆದು ಅದರ ಮೇಲೆ ಟೂತ್ ಪೇಸ್ಟ್ ಹಾಕುತ್ತಿದ್ದೆವು. ಅಮ್ಮ ಸಹ ಅಪ್ಪನ ಈ ಚಟವನ್ನು ಬಿಡಿಸಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಿದ್ದರು" ಎಂದು ಹೇಳಿದರು.

Published by:ವಾಸುದೇವ್ ಎಂ
First published: