• Home
  • »
  • News
  • »
  • entertainment
  • »
  • Ileana Dcruz: ಟ್ವೀಟ್​ ಮೂಲಕ ತನಗಿರುವ ಗಂಭೀರ ಕಾಯಿಲೆ ಬಗ್ಗೆ ಬಹಿರಂಗಪಡಿಸಿದ ಇಲಿಯಾನಾ..!

Ileana Dcruz: ಟ್ವೀಟ್​ ಮೂಲಕ ತನಗಿರುವ ಗಂಭೀರ ಕಾಯಿಲೆ ಬಗ್ಗೆ ಬಹಿರಂಗಪಡಿಸಿದ ಇಲಿಯಾನಾ..!

ಬಹುಭಾಷಾ ನಟಿ ಇಲಿಯಾನಾ

ಬಹುಭಾಷಾ ನಟಿ ಇಲಿಯಾನಾ

Ileana Dcruz: ಇಲಿಯಾನಾ ತಮ್ಮ ಟ್ವಿಟರ್​ನಲ್ಲಿ ಒಂದು ಟ್ವೀಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ. ಸಪೂರ ನಡುವಿನ ಸುಂದರಿ ಇಲಿಯಾನಾ, ಅವರಿಗಿರುವ ಗಂಭೀರ ಕಾಯಿಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • Share this:

ಕೇವಲ ತಮ್ಮ ಹಾಟ್​ ಫೋಟೋ ಹಾಗೂ ಸಿನಿಮಾಗಳಿಂದಾಗಿ ಸುದ್ದಿಯಲ್ಲಿರುತ್ತಿದ್ದ ನಟಿ ಇಲಿಯಾನಾ. ನಿನ್ನೆವರೆಗೆ ತಮ್ಮ ಬಾಯ್​ಫ್ರೆಂಡ್​ ಜತೆಗಿನ ಬ್ರೇಕ್​ಅಪ್​ನಿಂದಾಗಿ ಸದ್ದು ಮಾಡುತ್ತಿದ್ದರು. ಈ ಜೋಡಿಯ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದ್ದು, ಈಗ ಇವರಿಬ್ಬರೂ ದೂರವಾಗಿದ್ದಾರೆ ಎನ್ನುವ ಸುದ್ದಿ ಇದೆ.

ಹೀಗಿರುವಾಗಲೇ ಇಲಿಯಾನಾ ತಮ್ಮ ಟ್ವಿಟರ್​ನಲ್ಲಿ ಒಂದು ಟ್ವೀಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ. ಸಪೂರ ನಡುವಿನ ಸುಂದರಿ ಇಲಿಯಾನಾ, ಅವರಿಗಿರುವ ಗಂಭೀರ ಕಾಯಿಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

I’m almost entirely convinced that I sleep walk.....ಹೌದು, ಇಲಿಯಾನಾ ತಮಗಿರುವ ಕಾಯಿಲೆ ಬಗ್ಗೆ ಭಾನುವಾರ ಟ್ವೀಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ. ಇಲಿಯಾನಾ ಅವರಿಗೆ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆಯಂತೆ.

'ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂದು ಒಂದು ಒಪ್ಪಿಕೊಂಡಿದ್ದೇನೆ. ಇದರಿಂದಾಗಿ ಬೆಳಿಗ್ಗೆ ಎದ್ದಾಗ ನನ್ನ ಕಾಲಿನಲ್ಲಿ ಊತ ಕಾಣಿಸಿಕೊಳ್ಳುವುದರೊಂದಿಗೆ ಕಾಲಿಗೆ ಗಾಯಗಳಾಗಿರುತ್ತವೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Anushka Shetty: ಮಾತುಬಾರದ ಸ್ಥಿತಿಯಲ್ಲಿ ಅನುಷ್ಕಾ ಶೆಟ್ಟಿ: ದೇಹದ ತೂಕ ಇಳಿಸಿಕೊಳ್ಳಲು ಹೋಗಿ ಮಾತು ಕಳೆದುಕೊಂಡ ಕರಾವಳಿ ಚೆಲುವೆ..!

ತಮಗಿರುವ ಸಮಸ್ಯೆ ಬಗ್ಗೆ ಇಲಿಯಾನಾ ಬಹಿರಂಗವಾಗಿ ಬರೆದುಕೊಂಡಿರುವುದಕ್ಕೆ ಕೆಲ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಮತ್ತೆ ಕೆಲವರು ಅವರಿಗೆ ವೈದ್ಯರ ಬಳಿ ಹೋಗುಂತೆ ಹಾಗೂ ಅವರ ಕೋಣೆಯೊಳಗೆ ಕ್ಯಾಮೆರಾ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮತ್ತೊಬ್ಬ ಟ್ವೀಟಿಗರು, ಈ ಕಾಯಿಲೆಗೆ ಚಿಕಿತ್ಸೆ ಇಲ್ಲ. ಮನೆಯಲ್ಲಿ ಕ್ಯಾಮೆರಾ ಜತೆಗೆ ಡೋರ್​ ಹಾಗೂ ಮ್ಯಾಟ್​ ಅಲಾರ್ಮ್​ ಹಾಕಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲೂ ಸೈರಾ ನರಸಿಂಹರೆಡ್ಡಿ ಹವಾ: ಟಿಕೆಟ್ ಬೆಲೆ ಎಷ್ಟು ಗೊತ್ತಾ..?

ನಾವು ಸಿನಿಮಾಗಳಲ್ಲಿ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇರುವ ವ್ಯಕ್ತಿಗಳು ಪರೆದಾಡುವುದನ್ನು ಹಾಸ್ಯದ ಭಾಗವಾಗಿ ನೋಡುತ್ತೇವೆ. ಆದರೆ ಈ ಕಾಯಿಲೆ ಇದ್ದವರು ನಿಜವಾಗಿಯೂ ಎಷ್ಟು ಒದ್ದಾಡುತ್ತಾರೆ ಅಂತ ಅನುಭವಿಸಿದವರಿಗೆ ಮಾತ್ರ ಗೊತ್ತು. ಪಡ್ಡೆಗಳ ನಿದ್ದೆ ಕದ್ದಿರುವ ಈ ಖ್ಯಾತ ನಟಿ ಇಂತಹದ್ದೇ ಸಮಸ್ಯೆಯಿಂದ ಬಳಲುತ್ತಿರುವುದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

 

ಆ್ಯಕ್ಷನ್​ ಸಿನಿಮಾದಲ್ಲಿ ಬಿಕಿನಿಯಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ


First published: