Hrithik Roshan: ಈ ನಟಿಗೆ ಹೃತಿಕ್ ಮೇಲೆ ಸಿಕ್ಕಾಪಟ್ಟೆ ಆಸೆಯಂತೆ.. ಮದ್ವೆಯಾದ್ರೆ ಅವ್ರನ್ನೇ ಅಂತ ಪಟ್ಟು ಹಿಡಿದಿದ್ದಾರೆ!

ಗಾಯತ್ರಿ ಅವರು ಇತ್ತೀಚೆಗೆ ನಡೆದ ಒಂದು ವಿಶೇಷ ಸಂಭಾಷಣೆಯಲ್ಲಿ, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಗಾಯತ್ರಿ ಅವರ ಜೀವನದ ಪ್ರಯಾಣ, ಅವರು ಮಾಡಿದ ಆ ಹೋರಾಟ ಮತ್ತು ಬಾಲಿವುಡ್‌(Bollywood)ನಲ್ಲಿ ಒಬ್ಬ ಒಳ್ಳೆಯ ನಾಯಕಿಯಾಗುವ ಕನಸು ಕಂಡಿರುವುದು ಎಲ್ಲದರ ಬಗ್ಗೆ ಇಲ್ಲಿ ಅವರು ಹೇಳಿಕೊಂಡಿದ್ದಾರೆ ನೋಡಿ.

ಗಾಯತ್ರಿ ಭಾರದ್ವಾಜ್

ಗಾಯತ್ರಿ ಭಾರದ್ವಾಜ್

  • Share this:
ಗಾಯತ್ರಿ ಭಾರದ್ವಾಜ್(Gayatri Bhardwaj)ಅವರು ತಮ್ಮ ಬಾಲ್ಯದಲ್ಲಿಯೇ ಮಿಸ್ ಇಂಡಿಯಾ(Miss India) ಆಗಬೇಕೆಂದು ಕನಸು ಕಂಡವರು ಮತ್ತು ಅವರ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮವು ಫೆಮಿನಾ ಮಿಸ್ ಇಂಡಿಯಾ ಯುನೈಟೆಡ್(Famina Miss India) ಕಾಂಟಿನೆಂಟ್ಸ್ 2018 ರ ಕಿರೀಟವನ್ನು ಗೆಲ್ಲುವಂತೆ ಮಾಡಿದ್ದು ಬಹುತೇಕರಿಗೆ ಗೊತ್ತಿರುವ ವಿಷಯವೇ ಆಗಿದೆ. ಇವರು ಈಗ ಯಾರನ್ನು ಮದುವೆ(Marriage) ಆಗಬೇಕೆಂದು ಬಯಸಿದ್ದಾರೆ ಎಂದು ನೀವು ಕೇಳಿದರೆ ಬೆಚ್ಚಿ ಬೀಳ್ತೀರಾ. ಹೌದು ಗಾಯತ್ರಿ ಅವರು ಇತ್ತೀಚೆಗೆ ನಡೆದ ಒಂದು ವಿಶೇಷ ಸಂಭಾಷಣೆಯಲ್ಲಿ, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಗಾಯತ್ರಿ ಅವರ ಜೀವನದ ಪ್ರಯಾಣ, ಅವರು ಮಾಡಿದ ಆ ಹೋರಾಟ ಮತ್ತು ಬಾಲಿವುಡ್‌(Bollywood)ನಲ್ಲಿ ಒಬ್ಬ ಒಳ್ಳೆಯ ನಾಯಕಿಯಾಗುವ ಕನಸು ಕಂಡಿರುವುದು ಎಲ್ಲದರ ಬಗ್ಗೆ ಇಲ್ಲಿ ಅವರು ಹೇಳಿಕೊಂಡಿದ್ದಾರೆ ನೋಡಿ.

ಹೃತಿಕ್​ ರೋಷನ್​ ಮದುವೆ ಆಗುತ್ತೇನೆಂದ ಗಾಯಿತ್ರಿ!

ಈ ಸಂಭಾಷಣೆಯಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಿ ಮತ್ತು ಡೇಟಿಂಗ್ ಮಾಡಲು ಬಯಸುವ ಒಬ್ಬ ನಟ ಯಾರು ಎಂದು ಕೇಳಿದ ಪ್ರಶ್ನೆಗೆ ಗಾಯತ್ರಿ ಅವರು ಯಾವುದೇ ಮುಚ್ಚು ಮರೆಯಿಲ್ಲದೆಯೇ “ನಾನು ನಟ ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೇನೆ. ಅವನು ಅವಿವಾಹಿತನೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಹಾಗೆ, ನಾನು ನಟ ಹೃತಿಕ್ ರೋಷನ್ ಅವರನ್ನು ಮದುವೆಯಾಗಲು ಬಯಸುತ್ತೇನೆ” ಎಂದು ಹೇಳಿದರು.

ಬಾಲ್ಯದಿಂದಲೂ ಹೃತಿಕ್​ ಕಂಡ್ರೆ ಇಷ್ಟ ಎಂದ ನಟಿ!

“ನಟ ಹೃತಿಕ್ ಅವರು ಮತ್ತೆ ಮದುವೆ ಆಗುತ್ತಾರೆ ಎನ್ನುವುದನ್ನು ನಾನು ಊಹಿಸುತ್ತಿದ್ದೇನೆ, ಅವರನ್ನು ನನ್ನ ಬಾಲ್ಯದ ದಿನಗಳಿಂದ ಇಷ್ಟ ಪಡುತ್ತೇನೆ, ಆದ್ದರಿಂದ ನಾನು ಅವರನ್ನು ನನ್ನ ಜೀವನದಿಂದ ಹೊರಗಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ನೀವು ನಟಿಯಾದರೆ ಯಾರ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಗಾಯತ್ರಿ ಅವರು “ನಾನು ನಟಿ ಪ್ರಿಯಾಂಕಾ ಚೋಪ್ರಾ ಪಾತ್ರವನ್ನು ನಿರ್ವಹಿಸಲು ಇಷ್ಟಪಡುತ್ತೇನೆ. ಅವಳ ಜೀವನದ ಬಗ್ಗೆ ಚಿತ್ರ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಅವಳ ಜೀವನವು ನಿಜಕ್ಕೂ ಎಲ್ಲರಿಗೂ ತುಂಬಾನೇ ಸ್ಫೂರ್ತಿದಾಯಕವಾಗಿರುತ್ತದೆ” ಎಂದು ಹೇಳಿದರು.

ಇದನ್ನೂ ಓದಿ : ರಷ್ಯಾದಲ್ಲಿ ರಶ್ಮಿಕಾ, ಮೊದಲ ದಿನದ ಸೆಲ್ಫೀ ಶೇರ್ ಮಾಡಿದ ಪುಷ್ಪಾ ನಟಿ

‘ಮಿಸ್​​ ಇಂಡಿಯಾ ಆಗಬೇಕೆಂದು ಕನಸು ಕಂಡಿದ್ದೆ’

ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ನೀವು ಯಾವಾಗ ನಿರ್ಧರಿಸಿದ್ದೀರಿ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವಾಗ ನಿಮ್ಮ ಪೋಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ, ಗಾಯತ್ರಿ ಅವರು “ನಾನು ಪ್ರೀ-ಸ್ಕೂಲ್‌ನಲ್ಲಿದ್ದಾಗ ನಾನು ನಿರ್ಧರಿಸಿದೆ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಾಗಿ ನನ್ನ ತಾಯಿ ನಾನು ಏನಾಗಬೇಕೆಂದು ಕೇಳಿದಾಗ ನಾನು ಹೇಳಿದ್ದು 'ಮಿಸ್ ಇಂಡಿಯಾ' ಅಂತ. ಏಕೆಂದರೆ ನಾವು ಸುಶ್ಮಿತಾ ಸೇನ್, ಐಶ್ವರ್ಯ ರೈ ಮತ್ತು ಇತರ ಸೌಂದರ್ಯ ರಾಣಿಯರು ಜಗತ್ತನ್ನು ಆಳುವುದನ್ನು ನೋಡುತ್ತಿದ್ದ ಸಮಯ ಅದಾಗಿತ್ತು. ಮಿಸ್ ಇಂಡಿಯಾ ವೇಷ ಧರಿಸಿದ ಆ ಛಾಯಾಚಿತ್ರ ನನ್ನ ಬಳಿ ಇನ್ನೂ ಇದೆ” ಎಂದು ಹೇಳಿದರು.

ಇದನ್ನೂ ಓದಿ: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

ಇಡೀ ಕುಟುಂಬದಲ್ಲಿ ನಾನು ಒಬ್ಬಳೇ ಹೆಣ್ಣು ಮಗುವಾಗಿರುವುದರಿಂದ ಅವರು ನನ್ನನ್ನು ತುಂಬಾನೇ ಕಾಳಜಿಯಿಂದ ಬೆಳೆಸಿದರು ಮತ್ತು ನಾನು ಯಾವಾಗಲೂ ವೇದಿಕೆಗಳಲ್ಲಿ ನೃತ್ಯ ಮಾಡುವುದು, ಹಾಡು ಹೇಳುವುದು ಇದನ್ನೆಲ್ಲವನ್ನು ಮಾಡುತ್ತಿದ್ದೆ. ಆದ್ದರಿಂದ, ಅದು ಅವರಿಗೆ ಅಷ್ಟೊಂದು ಆಘಾತಕರವಾಗಿರಲಿಲ್ಲ” ಎಂದು ಹೇಳಿದರು.
Published by:Vasudeva M
First published: