ಬಾಲಿವುಡ್ ನಾಯಕಿ ನಟಿ ದಿಶಾ ಪಠಾನಿ (Bollywood Actress Disha Patani) ಸಖತ್ ಬಿಡಿ. ಈ ನಟಿಯ ಆ್ಯಕ್ಷನ್ ನೋಡಿದ್ರೆ ನೀವು ಥ್ರಿಲ್ ಆಗೋದು ಗ್ಯಾರಂಟಿ. ಈ ಒಂದು ಆ್ಯಕ್ಷನ್ ಪ್ರತಿಭೆ ಎಲ್ಲಿಂದ ಬಂತು ಅಂತ ಪ್ರಶ್ನೆ (Disha Patani Special Video) ಮಾಡಿದ್ರೆ, ಅಲ್ಲಿ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಹೆಸರು ಕೇಳಿ ಬರುತ್ತದೆ. ಹಾಗಂತ ಇದನ್ನ ಸ್ವತಃ ದಿಶಾ ಪಠಾನಿ ಎಲ್ಲೂ ಹೇಳಿಕೊಂಡಿಲ್ಲ. ಈಕೆಯ ಸಮರ ಕಲೆಯ ವಿಡಿಯೋ (Special Action Video Viral) ನೋಡಿದ ಕಮೆಂಟರ್ಸ್ ಇದನ್ನೆ ಹೇಳುತ್ತಾರೆ. ಇದರ ಹೊರತಾಗಿಯೂ ದಿಶಾ ಪಟಾನಿ ಬೇಜಾನ್ ಥ್ರಿಲ್ಲಿಂಗ್ ಆ್ಯಕ್ಷನ್ ಇರೋ ಒಂದು ವಿಡಿಯೋ ವಿಪರೀತ ಗಮನ ಸೆಳೆಯುತ್ತಿವೆ.
ದಿಶಾ ಮಾಡಿರೋ (Disha Patani Special Action) ಕಿಕ್ ಮತ್ತು ಪಂಚ್‌ಗಳು ಥೇಟ್ ಟೈಗರ್ ಶ್ರಾಫ್ ಅವರನ್ನ ನೆನಪಿಸುತ್ತಿವೆ.
ಬಾಲಿವುಡ್ ನಟಿ ದಿಶಾ ಪಠಾನಿ ಫ್ಯಾಮಿಲಿ ಹೆಂಗಿದೆ ಗೊತ್ತೇ?
ದಿಶಾ ಪಠಾನಿ ಫ್ಯಾಮಿಲಿಯಲ್ಲಿ ಅಪ್ಪ ಪೊಲೀಸ್ ಆಫೀಸರ್ ಆಗಿದ್ದಾರೆ. ಅಮ್ಮ ಹೆಲ್ತ್ ಇನ್ಸೆಫಕ್ಟರ್ ನೋಡಿ. ಅಕ್ಕ ಖುಷ್ಬೂ ಏನೂ ಕಡಿಮೆ ಇಲ್ಲ. ಈಕೆ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ. ದಿಶಾ ಪಠಾನಿಗೆ ಒಬ್ಬ ಸಹೋದರ ಕೂಡ ಇದ್ದಾರೆ.
ಇಷ್ಟೆಲ್ಲ ಸಖತ್ ಆಗಿರೋ ಫ್ಯಾಮಿಲಿಯ ದಿಶಾ ಪಠಾನಿ ಎಲ್ಲರ ಫೇವರಿಟ್ ನಟಿ ಆಗುತ್ತಿದ್ದಾರೆ. ಮಾರ್ಷಲ್ ಆರ್ಟ್ ಇರೋ ಚೈನೀಸ್ ಆ್ಯಕ್ಷನ್ ಕಾಮಿಡಿ ಇರೋ Kung Fu Yoga ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ದಿಶಾ ಪಠಾನಿ ಕಾಣಿಸಿಕೊಂಡಿದ್ದಾರೆ.
ದಿಶಾ ಪಠಾನಿ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದ್ದಾರಾ?
ಆದರೆ ಬಾಲಿವುಡ್‌ನಲ್ಲಿ ಅಂತಹ ಹೇಳಿಕೊಳ್ಳುವ ಸಿನಿಮಾ ಏನೂ ಕೊಟ್ಟಿಲ್ಲ. ಅಷ್ಟೊಂದು ಕ್ಲಿಕ್ ಆಗಿದ್ದಾರೆ ಅಂತಲೂ ಅನಿಸೋದಿಲ್ಲ. ಆದರೆ ದಿಶಾ ಪಠಾನಿ ಅತಿ ಹೆಚ್ಚು ಗಮನ ಸೆಳೆದಿರೋದು ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಅನ್ನೋ ವಿಚಾರಕ್ಕೇನೆ ಅನ್ನೋದು ಅಷ್ಟೇ ಸತ್ಯ.
View this post on Instagram
ಧೋನಿ ಸಿನಿಮಾದಲ್ಲಿ ದಿಶಾ ಸೂಪರ್ ಅಭಿನಯ
ದಿಶಾ ಪಟಾನಿ ಈ ಹಿಂದೇ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲೂ ಅಭಿನಯಿಸಿದ್ದರು. ಆದರೆ ಈ ಚಿತ್ರದಲ್ಲಿ ಕತ್ರಿನಾ ಇದ್ದ ಕಾರಣ ದಿಶಾಗೆ ಹೆಚ್ಚಿಗೆ ಏನೂ ಈ ಚಿತ್ರದಲ್ಲಿ ಹೊಳೆಯಲೇ ಇಲ್ಲ. ಆದರೆ ಕ್ರಿಕೆಟರ್ ಧೋನಿ ಲೈಫ್ ಸ್ಟೋರಿಯ M.S. Dhoni: The Untold Story ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ದಿಶಾ ಪಟಾನಿ ಒಂದು ಹಂತಕ್ಕೆ ಎಲ್ಲರ ಗಮನಕ್ಕೂ ಬಂದರು.
ಇದೀಗ ದಿಶಾ ಪಠಾನಿ ಸಖತ್ ಮಾರ್ಷ್ ಆರ್ಟ್ ಪ್ರದರ್ಶಿಸಿರೋ ಒಂದು ವಿಡಿಯೋ ವೈರಲ್ ಆಗುತ್ತಿದೆ. ಒಂದೇ ಒಂದು ಕ್ಷಣವೂ ಚಾನ್ಸ್ ಕೊಡದೇ ಕಿಕ್ ಕೊಡೋ ದಿಶಾ ಪಠಾನಿ ಆ್ಯಕ್ಷನ್ ನೋಡುಗರಿಗೂ ಥ್ರಿಲ್ ಮೂಡಿಸುತ್ತಿವೆ.
ಚೈನೀಸ್ ಸಿನಿಮಾದಲ್ಲಿ ದಿಶಾ ಸಖತ್ ಆ್ಯಕ್ಷನ್
ದಿಶಾ ಪಠಾನಿ ಈ ಮೊದಲೇ ಚೈನೀಸ್ ಆ್ಯಕ್ಷನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಅನುಭವ ಮತ್ತು ಟೈಗರ್ ಶ್ರಾಫ್ ಪ್ರತಿಭೆಯ ಸಪೋರ್ಟ್ ಮೂಲಕವೇ ದಿಶಾ ಪಟಾನಿ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಹಾಗಾಗಿಯೇ ದಿಶಾ ಪಠಾನಿ ಈಗ ಥ್ರಿಲ್ಲಿಂಗ್ ಆ್ಯಕ್ಷನ್ ಪ್ರದರ್ಶನ ಮಾಡಿದ್ದಾರೆ ನೋಡಿ.
ಇದನ್ನೂ ಓದಿ: Adipurush: ಕೃತಿ ಸನೋನ್ ಸ್ನಿಗ್ಧ ಸೌಂದರ್ಯ! ಸೀತಾ ನವಮಿಗೆ ಹೊಸ ಟೀಸರ್ ಮೂಲಕ ಶುಭಾಶಯ ತಿಳಿಸಿದ ಪ್ರಭಾಸ್!
ದಿಶಾ ಪಠಾನಿ ಮಲಂಗ್, ಏಕ್ ವಿಲನ್ ರಿಟರ್ನ್ಸ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ತಮಿಳಿನ ಕಂಗುವಾ ಸಿನಿಮಾ, ತೆಲುಗು ಭಾಷೆಯ ಪ್ರೋಜೆಕ್ಟ್ ಕೆ ಒಪ್ಪಿಕೊಂಡಿದ್ದಾರೆ. ಯುದ್ಧ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು ಈಗ ಮಾರ್ಷಲ್ ಆರ್ಟ್ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ