• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Disha Patani: ಬಿಕಿನಿಯಲ್ಲಿ ದಿಶಾ ಪಟಾನಿ ಸಖತ್ ಹಾಟ್! ಇವ್ರ ಫಿಟ್ನೆಸ್ ಸೀಕ್ರೇಟ್‌ ಏನು ಅಂತ ನೀವೇ ನೋಡಿ..

Disha Patani: ಬಿಕಿನಿಯಲ್ಲಿ ದಿಶಾ ಪಟಾನಿ ಸಖತ್ ಹಾಟ್! ಇವ್ರ ಫಿಟ್ನೆಸ್ ಸೀಕ್ರೇಟ್‌ ಏನು ಅಂತ ನೀವೇ ನೋಡಿ..

ದಿಶಾ ಪಾಟ್ನಿ

ದಿಶಾ ಪಾಟ್ನಿ

ಇನ್ಸ್ಟಾಗ್ರಾಮ್‌(Instagram)ನಲ್ಲಿ ವಿವಿಧ ಭಂಗಿಯ ಫೋಟೋಗಳನ್ನು ಅಪ್ಲೋಡ್(Upload) ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಾರೆ. ಈಗ ದಿಶಾ ಪಾಟ್ನಿ(Disha Patani)ಅಪ್ಲೋಡ್ ಮಾಡಿಕೊಂಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್(Hot) ಆಗಿದೆ.

  • Share this:

ನಟಿ ದಿಶಾ ಪಾಟ್ನಿ(Disha Patani), ಬಾಲಿವುಡ್‌(Bollywood)ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಆ್ಯಕ್ಟೀವ್(Active) ಆಗಿರುವ ದಿಶಾ, ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫೋಟೋಗಳಿಂದಲೇ ಹೆಸರುವಾಸಿ. ಆಗಾಗ, ಇನ್ಸ್ಟಾಗ್ರಾಮ್‌(Instagram)ನಲ್ಲಿ ವಿವಿಧ ಭಂಗಿಯ ಫೋಟೋಗಳನ್ನು ಅಪ್ಲೋಡ್(Upload) ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಾರೆ. ಈಗ ದಿಶಾ ಪಾಟ್ನಿ(Disha Patani)ಅಪ್ಲೋಡ್ ಮಾಡಿಕೊಂಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್(Hot) ಆಗಿದೆ. ಬಿಕಿನಿ(Bikini) ಧರಿಸಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತವೆ. ಹಲವು ಬಾರಿ ಫೋಟೋಗಳ ಕಾರಣಕ್ಕಾಗಿಯೂ ಸಹ ದಿಶಾ ವಿವಾದಕ್ಕೂ ಒಳಗಾಗುತ್ತಾರೆ.


ದಿಶಾ ಪಾಟ್ನಿ ಫಿಟ್ನೆಸ್​​ ಬಗ್ಗೆ ತುಂಬಾ ಕಾಳಜಿ!


ಫಿಟ್ನೆಸ್ ಬಗ್ಗೆ ದಿಶಾ ಪಾಟ್ನಿ ಗೆ ಎಲ್ಲಿಲ್ಲದ ಕಾಳಜಿ. ಪ್ರತಿ ದಿನ ಜಿಮ್‌ನಲ್ಲಿ ವರ್ಕೌಟ್ ಮಾಡುವ ಅವರು ಜೀರೋ ಸೈಜ್ ಫಿಗರ್ ಮೇಂಟೇನ್ ಮಾಡುತ್ತಿದ್ದಾರೆ. ಸದ್ಯ ಬಾಲಿವುಡ್ ತಾರೆ ದಿಶಾ ಪಟಾನಿ ತಮ್ಮ ಮತ್ತೊಂದು ಬಿಕಿನಿ ಫೋಟೋ ಹಂಚಿಕೊಂಡಿದ್ದು, ಬೀಜ್ ಈಜುಡುಗೆಯಲ್ಲಿ ತಮ್ಮ ಮೈಮಾಟ ತೋರಿಸಿದ್ದಾರೆ. ಬಿಕಿನಿಯಲ್ಲಿ ದಿಶಾ ಪಟಾನಿಯನ್ನು ನೋಡಿದ ನಟಿಯ ಅಭಿಮಾನಿಗಳು ದಿಶಾ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 49 ಮಿಲಿಯನ್ ಫಾಲೋವರ್‌ಗಳನ್ನು ಗಳಿಸಿರುವ 29 ವರ್ಷದ ನಟಿ ಹೇಗೆ ಇಷ್ಟು ಚೆನ್ನಾಗಿ ಬಾಡಿ ಮೇಂಟೇನ್ ಮಾಡುತ್ತಾಳೆ? ನಿಮ್ಮ ದೇಹ ಸೌಂದರ್ಯದ ಗುಟ್ಟೇನು ಎಂದು ಅಭಿಮಾನಿಗಳು ಈ ಹಾಟೆಸ್ಟ್ ನಟಿಮಣಿಯನ್ನು ಕೇಳುತ್ತಿದ್ದಾರೆ.
ಪ್ರತಿನಿತ್ಯ ವರ್ಕೌಟ್ ಮಾಡುವ ದಿಶಾ


ದಿಶಾ ವ್ಯಾಯಾಮಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. "ನಾನು ಪ್ರತಿದಿನ ವರ್ಕೌಟ್ ಮಾಡುತ್ತೇನೆ ಮತ್ತು ನನ್ನ ದಿನಚರಿಯು ಸಾಮಾನ್ಯವಾಗಿ ಬೆಳಿಗ್ಗೆ ಕಾರ್ಡಿಯೋವನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಡ್ಯಾನ್ಸ್‌, ಕಿಕ್ ಬಾಕ್ಸಿಂಗ್ ಅಥವಾ ಜಿಮ್ನಾಸ್ಟಿಕ್ಸ್ ಮತ್ತು ವೇಟ್ ಲಿಫ್ಟಿಂಗ್‌ ತರಬೇತಿ ನಡೆಸುತ್ತೇನೆ ಎನ್ನುತ್ತಾರೆ ದಿಶಾ.


ಇದನ್ನೂ ಓದಿ: ಬರೀ ಸಿನಿಮಾದಿಂದ ಮಾತ್ರ ಹಣ ಸಂಪಾದಿಸ್ತಿಲ್ಲ ಸಾರಾ.. ಬೇರೆ ಕಡೆಯಿಂದಲೂ ಬರುತ್ತೆ ಕೋಟಿ ಕೋಟಿ!


ದಿಶಾ ಪ್ರಕಾರ, ಉತ್ತಮ ದೇಹಕ್ಕೆ ನೀರು ಅತಿ ಮುಖ್ಯ. "ದಿನನಿತ್ಯ 4 - 6 ಕಪ್ ನೀರು ಸಾಮಾನ್ಯವಾಗಿ ಆರೋಗ್ಯವಂತ ಜನರಿಗೆ ಬೇಕು. ನೀವು ಥೈರಾಯ್ಡ್ ಕಾಯಿಲೆ ಅಥವಾ ಮೂತ್ರಪಿಂಡ, ಯಕೃತ್ತು ಅಥವಾ ಹೃದಯದ ಸಮಸ್ಯೆಗಳಂತಹ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದರೆ ಹೆಚ್ಚು ನೀರನ್ನು ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ವೈದ್ಯರು.


ದಿಶಾ ಡಯಟ್ ಹೇಗಿರುತ್ತದೆ..?


ದಿಶಾ ಆಹಾರಕ್ರಮವು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ದಿಶಾ ಪ್ರೋಟೀನ್-ಕಾರ್ಬ್ಸ್ ಆಹಾರದೊಂದಿಗೆ ತನ್ನ ಡಯಟ್ ಮಾಡುತ್ತಾಳೆ. ನಾನು ವರ್ಕೌಟ್ ಮಾಡುವ ಮೊದಲು ಬೆಳಗ್ಗೆ ಏನನ್ನೂ ತಿನ್ನುವುದಿಲ್ಲ. ಏಕೆಂದರೆ ನಾನು ವ್ಯಾಯಾಮ ಮಾಡುವಾಗ ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಎನ್ನುತ್ತಾರೆ ದಿಶಾ. ಆದರೆ, ವ್ಯಾಯಾಮದ ಮೊದಲು ಸ್ವಲ್ಪ ಪನ್ನೀರ್, ಮೊಟ್ಟೆಯಂತಹ ಕೆಲವು ಪ್ರೋಟೀನ್‌ಗಳನ್ನು ಒಳಗೊಂಡಿರುವ ಆಹಾರ ಸೇವನೆ ಒಳ್ಳೆಯದು.


ಇದನ್ನೂ ಓದಿ: `ಗಂಗೂಬಾಯಿ’ ವಿರುದ್ಧ ಮತ್ತೆ ಗರಂ ಆದ ಕಂಗನಾ! ಏನಿದು ಹಾಲು-ನೀರು ಮ್ಯಾಟರ್​? ನೀವೇ ನೋಡಿ..


ಕಿಕ್‌ ಬಾಕ್ಸಿಂಗ್‌ ಮಾಡುವ ದಿಶಾ


ದಿಶಾ ಕಿಕ್ ಬಾಕ್ಸಿಂಗ್ ಕೂಡ ಮಾಡುತ್ತಾರೆ. ಅವರು ಇತ್ತೀಚೆಗೆ ತಮ್ಮ ಕಿಕ್-ಬಟ್ ಕೌಶಲ್ಯಗಳನ್ನು ತೋರಿಸುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಫಿಟ್ನೆಸ್‌ಗೆ ಬಾಕ್ಸಿಂಗ್ ಯಾವುದೇ ರೀತಿಯ ವ್ಯಾಯಾಮಕ್ಕಿಂತ ಉತ್ತಮವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನುತ್ತಾರೆ ದಿಶಾ.


ಚಿತ್ರರಂಗದಲ್ಲಿ ಬ್ಯುಸಿಯೆಸ್ಟ್​ ನಟಿ!


2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ದಿಶಾ ಪಾಟ್ನಿ ತೆಲುಗು ಚಿತ್ರ ಲೋಫರ್ ಮೂಲಕ ವರುಣ್ ತೇಜ್ ರವರ ಜೊತೆ ನಟಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ನಟಿಸಿರುವುದು ಕೆಲವೇ ಸಿನಿಮಾಗಳಲ್ಲಿ ಮಾತ್ರ. ಹಾಗಿದ್ದರೂ ಇವರು ಬೇಡಿಕೆಯ ನಟಿ. ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’, ‘ಬಾಘಿ’ ಮುಂತಾದ ಸಿನಿಮಾಗಳಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಹೀಗೆ ಸಾಲು ಸಾಲು ಚಿತ್ರಗಳನ್ನು ಕೈನಲ್ಲಿ ಇಟ್ಟುಕೊಂಡಿರುವ ದಿಶಾ ಚಿತ್ರರಂಗದ ಬ್ಯುಸಿಯೆಸ್ಟ್ ನಟಿ.

First published: