News18 India World Cup 2019

ಹಾಲಿವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಅಕ್ಷಯ್​ ಕುಮಾರ್​: ಅತ್ತೆ ಡಿಂಪಲ್ ಕಪಾಡಿಯಾ​ಗೆ ಒಲಿದ ಅದೃಷ್ಟ

'ಡಂಕಿರ್ಕ್'​, 'ಇನ್ಸೆಪ್ಷನ್'​, 'ಬ್ಯಾಟ್​ ಮ್ಯಾನ್​ ಬಿಗಿನ್ಸ್'​ ಸಿನಿಮಾಗಳಂತಹ ಹಿಟ್​ ಸಿನಿಮಾಗಳ ನಿರ್ದೇಶಕ  ಕ್ರಿಸ್ಟೋಫರ್​ ನೋಲನ್​ ಅವರ ಹೊಸ ಸಿನಿಮಾ 'ಟೆನೆಟ್'. ಈ ಚಿತ್ರದ ಮೂಲಕ ನಟಿ ಡಿಂಪಲ್​ ಕಪಾಡಿಯಾ ಸದ್ಯ ಹಾಲಿವುಡ್​ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. 

Anitha E | news18
Updated:May 23, 2019, 6:32 PM IST
ಹಾಲಿವುಡ್​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಅಕ್ಷಯ್​ ಕುಮಾರ್​: ಅತ್ತೆ ಡಿಂಪಲ್ ಕಪಾಡಿಯಾ​ಗೆ ಒಲಿದ ಅದೃಷ್ಟ
ಹಾಲಿವುಡ್​ನ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ರ 'ಟೆನೆಟ್​' ಚಿತ್ರದಲ್ಲಿ ದಿಂಪಲ್​ ಕಪಾಡಿಯಾ
Anitha E | news18
Updated: May 23, 2019, 6:32 PM IST
ಬೇರೆ ಭಾಷೆಗಳಲ್ಲಿ ಅಂದರೆ ಹಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸುವ ಭಾರತೀಯ ಸಿನಿ  ತಾರೆಯರು ಗಡಿಯನ್ನು ಮೀರುವುದರೊಂದಿಗೆ, ದೇಶದ ಹೆಸರನ್ನೂ ಎತ್ತಿ ಹಿಡಿಯುತ್ತಿದ್ದಾರೆ. ಹಾವಲಿಡ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭ ಮಾತಲ್ಲ. ಅದಕ್ಕಾಗಿ ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಇಂತಹ ಸುವರ್ಣಾವಕಾಶ ಈಗ ನಟಿ ಡಿಂಪಲ್​ ಕಪಾಡಿಯಾ ಅವರದ್ದಾಗಿದೆ.

ಹಾಲಿವುಡ್​ನ ಸೂಪರ್​ ಹಿಟ್​ ಸಿನಿಮಾ 'ಡಂಕಿರ್ಕ್​'. ಈ ಚಿತ್ರ ಬಿಡುಗಡೆಯಾದಾಗ ವಿಶ್ವದೆಲ್ಲೆಡೆ ಸಾಕಷ್ಟು ಚರ್ಚೆಯಾಗಿತ್ತು. ಇಂತಹ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ ಅವರು ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದೇ 'ಟೆನೆಟ್​'. ಇದೊಂದು ಸ್ಪೈ ಕತೆಯಾಧಾರಿತ ಆ್ಯಕ್ಷನ್​  ಡ್ರಾಮ.ಈ ಸಿನಿಮಾದಲ್ಲಿ ಡೇವಿಡ್​ ವಾಷಿಂಗ್​ಟನ್,​ ಎಲಿಜಬತ್ ಡೆಬಿಕಿ, ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಈ ಸಿನಿಮಾದಲ್ಲಿ ಬಾಲಿವುಡ್​ ನಟಿ ಡಿಂಪಲ್​ ಕಪಾಡಿಯಾ ಅವರೂ ಸಹ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Pailwaan Movie: ಪೈಲ್ವಾನ್​ನ ಗುರು ಸರ್ಕಾರ್​: ಸುನೀಲ್​ ಶೆಟ್ಟಿಯ ರಗಡ್​ ಲುಕ್​ ಈಗ ಔಟ್

ಡಿಂಪಲ್​ ಕಪಾಡಿಯಾ ಅವರು 'ಬಾಬಿ' ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿಕೊಟ್ಟವರು. ಈ ಸಿನಿಮಾದ ನಂತರ ಒಂದರ ಹಿಂದೆ ಒಂದರಂತೆ ಹಿಟ್​ ಚಿತ್ರಗಳನ್ನು ಕೊಟ್ಟ ನಟಿ. 2015ರಲ್ಲಿ 'ವೆಲ್​ಕಮ್​ ಬ್ಯಾಕ್​' ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದಾರೆ.
Loading...


ದೇಶದ ಮೊದಲ ಪ್ರಧಾನಿಯಿಂದ ಇಂದಿನವರೆಗೂ... ಯಾರ್ಯಾರ ವಿದ್ಯಾರ್ಹತೆ ಎಷ್ಟು ಗೊತ್ತಾ..?

First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...