HOME » NEWS » Entertainment » BOLLYWOOD ACTRESS DIA MIRZA AND HER HUSBAND SAHIL SANGHA GET SEPARATED RD

Dia Mirza: ವಿಚ್ಛೇದನದಲ್ಲಿ ಅಂತ್ಯವಾಯ್ತು ನಟಿ ದಿಯಾ ಮಿರ್ಜಾ ದಾಂಪತ್ಯ ಜೀವನ

11 ವರ್ಷಗಳ ಹಿಂದೆ ದಿಯಾ ಹಾಗೂ ಸಾಹಿಲ್​ ಪರಿಚಯಗೊಂಡಿದ್ದರು. ಇಬ್ಬರ ನಡುವೆ ಪ್ರೀತಿಯೂ ಮೊಳೆತಿತ್ತು. 2014 ಅಕ್ಟೋಬರ್​ 18ರಂದು ಇಬ್ಬರೂ ವಿವಾಹವಾಗುವ ಮೂಲಕ ಪ್ರೀತಿಗೆ ಹೊಸ ಅರ್ಥ ನೀಡಿದ್ದರು.

Rajesh Duggumane | news18
Updated:August 1, 2019, 1:08 PM IST
Dia Mirza: ವಿಚ್ಛೇದನದಲ್ಲಿ ಅಂತ್ಯವಾಯ್ತು ನಟಿ ದಿಯಾ ಮಿರ್ಜಾ ದಾಂಪತ್ಯ ಜೀವನ
ದಿಯಾ ಮಿರ್ಜಾ
  • News18
  • Last Updated: August 1, 2019, 1:08 PM IST
  • Share this:
ಮುಂಬೈ (ಅ.1): ಬಾಲಿವುಡ್​ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಹಾಗೂ ಸಾಹಿಲ್​ ಸಂಃಘಾ ಅವರ ದಾಂಪತ್ಯ ಜೀವನ ಕೊನೆ ಆಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

11 ವರ್ಷಗಳ ಹಿಂದೆ ದಿಯಾ ಹಾಗೂ ಸಾಹಿಲ್​ ಪರಿಚಯಗೊಂಡಿದ್ದರು. ಇಬ್ಬರ ನಡುವೆ ಪ್ರೀತಿಯೂ ಮೊಳೆತಿತ್ತು. 2014 ಅಕ್ಟೋಬರ್​ 18ರಂದು ಇಬ್ಬರೂ ವಿವಾಹವಾಗುವ ಮೂಲಕ ಪ್ರೀತಿಗೆ ಹೊಸ ಅರ್ಥ ನೀಡಿದ್ದರು. ಈಗ ಕಾರಣಾಂತರಗಳಿಂದ ಇಬ್ಬರೂ ದೂರವಾಗುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಗೆಳೆಯರಾಗಿರುತ್ತೇವೆ ಎಂದು ಹೇಳಿರುವ ದಿಯಾ, “ನಾವು ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ನಾವು ಅನಿವಾರ್ಯವಾಗಿ ಬೇರೆ ಮಾರ್ಗ ತುಳಿಯಬೇಕಿದೆ. ನಿರಂತರವಾಗಿ ಪ್ರೀತಿ ಹಾಗೂ ಬೆಂಬಲ ತೋರಿಸುತ್ತಿರುವ ಕುಟುಂಬ, ಗೆಳೆಯರು ಹಾಗೂ ಮಾಧ್ಯಮದವರಿಗೆ ಧನ್ಯವಾದ,” ಎಂದು ಬರೆದುಕೊಂಡಿದ್ದಾರೆ. View this post on Instagram

 

A post shared by Dia Mirza (@diamirzaofficial) on


ಕಳೆದ ವರ್ಷ ತೆರೆಕಂಡ ‘ಸಂಜು’ ಸಿನಿಮಾದಲ್ಲಿ ದಿಯಾ ನಟಿಸಿದ್ದರು. ಇದು ಅವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ. ಅವರು ವೆಬ್​ ಸಿರೀಸ್​ಗಳಲ್ಲೂ ನಟಿಸುತ್ತಿದ್ದಾರೆ.

First published: August 1, 2019, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading