• Home
  • »
  • News
  • »
  • entertainment
  • »
  • Deepika Padukone: ವಿಶ್ವದ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ದೀಪಿಕಾ ಪಡುಕೋಣೆ

Deepika Padukone: ವಿಶ್ವದ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆಯವರು ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ಬಿಡುಗಡೆ ಮಾಡಲಾಗಿರುವ ಈ ಪಟ್ಟಿಯನ್ನು 'ದಿ ಗೋಲ್ಡನ್ ರೇಶಿಯೋ ಆಫ್ ಬ್ಯೂಟಿ ಫೈ' ಎಂದು ಹೆಸರಿಸಲಾಗಿದೆ. ವರದಿ ಪ್ರಕಾರ ಇಂಗ್ಲೀಷ್‌ ನಟಿ ಜೋಡೈ ಕೊಮರ್‌ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಬಾಲಿವುಡ್‌ ನ ಮೋಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ (Beautiful Actress) ಒಬ್ಬರು ದೀಪಿಕಾ ಪಡುಕೋಣೆ (Deepika Padukone). ಸ್ನಿಗ್ಧ ಸೌಂದರ್ಯ, ಅದ್ಭುತ ನಟನೆ, ಮೋಹಕ ನಗುವಿನಿಂದಲೇ ಜನರ ಅಭಿಮಾನ ಗಳಿಸಿದ ಈಕೆ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಹೌದು, ಇದೀಗ ವಿಶ್ವದ 10 ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎನ್ನುವ ಹೆಗ್ಗಳಿಕೆ ಪಡೆದಿದ್ದಾರೆ ದೀಪಿಕಾ. 2007 ರಲ್ಲಿ ಬಾಲಿವುಡ್‌ ನಲ್ಲಿ ಶಾರುಖ್‌ ಖಾನ್‌ (Shah Rukh Khan) ಜೊತೆ ಓಂ ಶಾಂತಿ ಓಂ ಚಿತ್ರದ ಮೂಲಕ ಎಂಟ್ರಿ ಕೊಟ್ಟಿರುವ ದೀಪಿಕಾ ವೃತ್ತಿ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್‌ ನಲ್ಲಿ (Bollywood) ಯಶಸ್ವೀ ಚಿತ್ರಗಳನ್ನು ನೀಡುತ್ತಲೇ ಹೋದ ಖ್ಯಾತಿ ಅವರದ್ದು.


ಭಾರತೀಯ ಚಲನಚಿತ್ರೋದ್ಯಮವನ್ನು ಆಳುವುದರ ಜೊತೆಗೆ, ಅವರು ಹಾಲಿವುಡ್‌ನಲ್ಲಿಯೂ ತಮ್ಮ ಛಾಪು ಒತ್ತಿದ್ದಾರೆ. ನಟನಾ ಕೌಶಲ್ಯದಿಂದ ತನ್ನ ಅಭಿಮಾನಿಗಳನ್ನು ರಂಜಿಸುವುದರಿಂದ ಹಿಡಿದು ತನ್ನ ಸುಂದರ ನೋಟದಿಂದ ಅವರನ್ನು ಮಂತ್ರಮುಗ್ಧರನ್ನಾಗಿಸುವವರೆಗೆ, ದೀಪಿಕಾ ತನ್ನ ಪ್ರೇಕ್ಷಕರ ಮನಸನ್ನು ಕದ್ದಿದ್ದಾರೆ.


ವಿಶ್ವದ ಅತ್ಯಂತ ಸುಂದರ ಮಹಿಳೆ ದೀಪಿಕಾ
ಇದೀಗ ಮತ್ತಷ್ಟು ಎತ್ತರಕ್ಕೆ ಏರಿರುವ ದೀಪಿಕಾ, ವಿಶ್ವದ 10 ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ಬಿಡುಗಡೆ ಮಾಡಲಾಗಿರುವ ಈ ಪಟ್ಟಿಯನ್ನು 'ದಿ ಗೋಲ್ಡನ್ ರೇಶಿಯೋ ಆಫ್ ಬ್ಯೂಟಿ ಫೈ' ಎಂದು ಹೆಸರಿಸಲಾಗಿದೆ. ವರದಿ ಪ್ರಕಾರ ಇಂಗ್ಲೀಷ್‌ ನಟಿ ಜೋಡೈ ಕೊಮರ್‌ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ.
ಡಾ ಜೂಲಿಯನ್ ಡಿ ಸಿಲ್ವಾ ಅವರ ಪ್ರಕಾರ, ಜೋಡೈ ಅವರು ದೈಹಿಕ ಪರಿಪೂರ್ಣತೆಗೆ ಬೇಕಾಗಿರುವ ಮುಖದ ಎಲ್ಲ ಅಂಶಗಳನ್ನೂ ಹೊಂದಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಅವರ ಗೋಲ್ಡನ್ ಅನುಪಾತವು 91.22% ಎಂದು ಗುರುತಿಸಲ್ಪಟ್ಟಿದೆ. ಇನ್ನು, ಬೆಯಾನ್ಸ್ ಅವರದ್ದು- 92.44%, ಅರಿಯಾನಾ ಗ್ರಾಂಡೆ - 91.81%, ಟೇಲರ್ ಸ್ವಿಫ್ಟ್ - 91.64%, ಮತ್ತು ಕಿಮ್ ಕಾರ್ದಶಿಯಾನ್ - 91.28% ರಷ್ಟಿದೆ.


ಸಾಲು ಸಾಲು ಶೂಟಿಂಗ್‌ ನಲ್ಲಿ ಬ್ಯುಸಿಯಾಗಿರುವ ದೀಪಿಕಾ
ಈ ಮಧ್ಯೆ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಕೈಯ್ಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅವರು ಮುಂದಿನ ಜನವರಿ 25, 2023 ರಂದು ಬಿಡುಗಡೆಯಾಗಲಿರುವ ಪಠಾಣ್‌ ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಶಾರುಖ್ ಖಾನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಾರ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದು, ಇದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಯೇ ಜವಾನಿ ಹೈ ದೀವಾನಿ ನಟಿ ನಾಗ್ ಅಶ್ವಿನ್ ಅವರ ನಿರ್ದೇಶನದ ಪ್ರಾಜೆಕ್ಟ್ ಕೆ ನಲ್ಲಿ ಪ್ರಭಾಸ್ ಮತ್ತು ದಿಶಾ ಪಟಾನಿ ಜೊತೆಗೆ ನಟಿಸಲಿದ್ದಾರೆ. ಈ ಚಿತ್ರ 2024 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಲ್ಲದೇ ದೀಪಿಕಾ ಅವರು ಅಮೆರಿಕನ್ ಹಾಸ್ಯ ಚಿತ್ರ ದಿ ಇಂಟರ್ನ್ ನಲ್ಲೂ ನಟಿಸಿದ್ದು ಬಿಗ್‌ ಬಿ ಅಮಿತಾಬ್ ಬಚ್ಚನ್ ಕೂಡ ಇದರಲ್ಲಿ ನಟಿಸಿದ್ದಾರೆ.
ಇನ್ನು ನಟಿ ದೀಪಿಕಾ ಪಡುಕೋಣೆ 2018 ರಲ್ಲಿ ನಟ ರಣವೀರ್‌ ಸಿಂಗ್‌ ರನ್ನು ಮದುವೆಯಾಗಿದ್ದಾರೆ. ಈ ಸೆಲೆಬ್ರಿಟಿ ಕಪಲ್‌ ವಿಶ್ವದಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದು, ಇಬ್ಬರೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಬೇರೆ ಬೇರೆ ಯಾಗಿದ್ದಾರೆಂಬ ವದಂತಿ ಹರಡಿದ್ದರೂ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಣೋಣೆ ಇಬ್ಬರೂ ಈ ವದಂತಿಗಳನ್ನು ತಳ್ಳಿ ಹಾಕಿದ್ದು ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Published by:Ashwini Prabhu
First published: