• Home
  • »
  • News
  • »
  • entertainment
  • »
  • Anushka Sharma: ಬ್ರ್ಯಾಂಡ್​ ಪ್ರಚಾರಕ್ಕಾಗಿ ರಸ್ತೆಗಿಳಿದ ಅನುಷ್ಕಾ ಶರ್ಮಾ, ಟ್ರಾಫಿಕ್​ ಜಾಮ್​ ಮಾಡಿದ ನಟಿಗೆ ಫುಲ್ ಕ್ಲಾಸ್​!

Anushka Sharma: ಬ್ರ್ಯಾಂಡ್​ ಪ್ರಚಾರಕ್ಕಾಗಿ ರಸ್ತೆಗಿಳಿದ ಅನುಷ್ಕಾ ಶರ್ಮಾ, ಟ್ರಾಫಿಕ್​ ಜಾಮ್​ ಮಾಡಿದ ನಟಿಗೆ ಫುಲ್ ಕ್ಲಾಸ್​!

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

ಅಥ್ಲೆಟಿಕ್​ ಬ್ರ್ಯಾಂಡ್​ ಪೂಮಾ ಇಂಡಿಯಾ ಪ್ರಚಾರಕ್ಕಿಳಿದ ಅನುಷ್ಕಾ ಶರ್ಮಾ, ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕ್ಲಾಸಿಕ್ ಕಾರಿನಲ್ಲಿ ಬ್ರ್ಯಾಂಡ್ ಪ್ರಚಾರ ಮಾಡಿದ ವೇಳೆ ಫುಲ್ ಟ್ರಾಫಿಕ್​ ಜಾಮ್​ ಉಂಟಾಗಿದೆ.

  • News18 Kannada
  • Last Updated :
  • Karnataka, India
  • Share this:

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ (Anushka Sharma) ಮುಂದಿನ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್ (Chakra Express) ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಇದರ ನಡುವೆ ಅನುಷ್ಕಾ ಶರ್ಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪೋರ್ಟ್ಸ್​ ಬ್ರ್ಯಾಂಡ್​ (Sports Brand) ಒಂದರ ಪ್ರಚಾರಕ್ಕೆಂದು ಹೋದವರು ಮುಂಬೈನಲ್ಲಿ ಟ್ರಾಫಿಕ್​ ಜಾಮ್​ ಉಂಟು ಮಾಡಿದ್ದಾರೆ. ಬ್ರ್ಯಾಂಡ್​ ಪ್ರಚಾರಕ್ಕೆ
(Promotion) ಏನೆಲ್ಲಾ ಗಿಮಿಕ್​ ಮಾಡಿದ್ದಾರೆ. ಅಂದ್ರೆ ನಿನ್ನೆ ನಾನು ನಿಮ್ಮ ಬ್ರ್ಯಾಂಡ್​ ಅಂಬಾಸಿಡರ್ ಅಲ್ಲ ಎಂದು ಪೂಮಾ ಇಂಡಿಯಾ ಬ್ರ್ಯಾಂಡ್ (Puma India Brand)​ ವಿರುದ್ಧ ಪೋಸ್ಟ್​ ಮೂಲಕವೇ ಕಿಡಿಕಾರಿ ನನ್ನ ಫೋಟೋವನ್ನು ತೆಗೆಯಿರಿ ಎಂದು ವಾರ್ನಿಂಗ್​ (Warning) ಕೊಟ್ಟಿದ್ದು ಪ್ರಚಾರ ಗಿಮಿಕ್ ಆಗಿದೆ. ಇಂದು ಅನುಷ್ಕಾ ಶರ್ಮಾ ಅದೇ ಕಂಪನಿಯ ಬ್ಯ್ರಾಂಡ್​ ಉಡುಗೆ ತೊಟ್ಟು ಪ್ರಚಾರಕ್ಕೆಂದು ಬೀದಿಗಿಳಿದಿದ್ದಾರೆ. ​ 
ಅಥ್ಲೆಟಿಕ್ ಬ್ರ್ಯಾಂಡ್​ ಪ್ರಚಾರಕ್ಕಿಳಿದ ಅನುಷ್ಕಾ!


ಅಥ್ಲೆಟಿಕ್​ ಬ್ರ್ಯಾಂಡ್​ ಪೂಮಾ ಇಂಡಿಯಾ ಪ್ರಚಾರಕ್ಕಿಳಿದ ಅನುಷ್ಕಾ ಶರ್ಮಾ, ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕ್ಲಾಸಿಕ್ ಕಾರಿನಲ್ಲಿ ಕುಳಿತು ಈ ಬ್ರ್ಯಾಂಡ್ ಕುರಿತು ಪ್ರಚಾರ ಮಾಡಿದರು. ಈ ವೇಳೆ ನಟಿ ಅನುಷ್ಕಾ ನೋಡಲು ಅಭಿಮಾನಿಗಳ ದಂಡೇ  ಹರಿದು ಬಂದಿತ್ತು. ಮಾಧ್ಯಮದವರರು ಸಹ ಆಗಮಿಸಿದ್ರು.
ರಸ್ತೆಯಲ್ಲಿ ಫುಲ್​ ಟ್ರಾಫಿಕ್​ ಜಾಮ್​


ಬಾಂದ್ರಾದ ಲಿಂಕಿಂಗ್ ರಸ್ತೆಯ ಕಾರಿನಲ್ಲಿ ಕುಳಿತು ಅನುಷ್ಕಾ ಪ್ರಚಾರ ಮಾಡ್ತಿದ್ರು. ಅವರಿದ್ದ ಕಾರು ನಿಧನವಾಗಿ ಚಲಿಸುತ್ತಿತ್ತು ಸುತ್ತ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಇದ್ರಿಂದ ಲಿಂಕಿಂಗ್ ರಸ್ತೆಯಲ್ಲಿ ಫುಲ್​ ಟ್ರಾಫಿಕ್ ಜಾಮ್ ಉಂಟಾಗಿದೆ.


ಲಿಂಕಿಂಗ್ ರಸ್ತೆಯಲ್ಲಿ ಫುಲ್​ ಟ್ರಾಫಿಕ್ ಜಾಮ್​


ಮುಂಬೈನ ಲಿಂಕಿಂಗ್ ರಸ್ತೆ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ನಟಿ ಅನುಷ್ಕಾ ಶೆಟ್ಟಿ ನಡೆಸಿದ ದಿಢೀರ್​ ಪ್ರಚಾರದಿಂದ ರಸ್ತೆಯಲ್ಲಿ ಫುಲ್​ ಟ್ರಾಫಿಕ್​ ಜಾಮ್​ ಉಂಟಾಯಿತು
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​


ಪಾಪರಾಜಿ ವೈರಲ್ ಭಯಾನಿ ಅವರು ಸಂಪೂರ್ಣ ಪ್ರಚಾರದ ವೀಡಿಯೊವನ್ನು ಸಹ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಕಾರಿನ ಹಿಂದೆ ಅನೇಕ ವಾಹನಗಳು ಹಾರ್ನ್ ಮಾಡುತ್ತಿರೋದನ್ನಯ ವಿಡಿಯೋದಲ್ಲಿಯು ನೋಡಬಹುದಾಗಿದೆ.


ಅನುಷ್ಕಾ ಶರ್ಮಾ ವಿರುದ್ಧ ಕಿಡಿ 


ಟ್ರಾಫಿಕ್ ಜಾಮ್‌ನ ಉಂಟು ಮಾಡಿದ ಅನುಷ್ಕಾ ಶರ್ಮಾ ವಿರುದ್ಧ ವಾಹನ ಸವಾರರು ಕಿಡಿಕಾರಿದ್ದಾರೆ. ವಾಹನ ಸವಾರರು ಸಹ ಅನುಷ್ಕಾ ರನ್ನು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಹ ನಟಿ ಅನುಷ್ಕಾ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ನಿನ್ನೆ ಕಂಪನಿ ವಿರುದ್ಧ ಕಿಡಿ, ಇದು ಪ್ರಚಾರದ ಗಿಮಿಕ್​


ಅನುಷ್ಕಾ ಫೇಮಸ್ ಬ್ರ್ಯಾಂಡ್ ಕಂಪನಿ ಬಗ್ಗೆ ಕಿಡಿಕಾರಿದ್ದರು. ಪೂಮಾ ಬ್ರ್ಯಾಂಡ್ ತನ್ನ ಅನುಮತಿಯಿಲ್ಲದೆ ಫೋಟೋವನ್ನು ಬಳಸಿದೆ ಎಂದು ಅನುಷ್ಕಾ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದರು.


ಇದನ್ನೂ ಓದಿ: Celebrities: ಸೋಶಿಯಲ್​ ಮೀಡಿಯಾದಲ್ಲಿ ಈ ಜೋಡಿಗಳದ್ದೇ ಹವಾ, ನೆಟ್ಟಿಗರ ಹೃದಯ ಗೆಲ್ಲುತ್ತಿರುವ ಮುದ್ದಾದ ಕಪಲ್ಸ್​


ಹೇ ಪೂಮಾ ಇಂಡಿಯಾ? ನೀವು ನನ್ನ ಫೋಟೋವನ್ನು ನಿಮ್ಮ ಪ್ರಚಾರಕ್ಕಾಗಿ ಬಳಸಿದ್ದೀರಾ. ಆದರೆ ಫೋಟೋವನ್ನು ಬಳಸುವ ಮೊದಲು ನೀವು ನನ್ನ ಅನುಮತಿಯನ್ನು ಪಡೆಯಬೇಕು ಎಂದಿದ್ದಾರೆ. ಯಾಕೆಂದ್ರೆ ನಾನು ನಿಮ್ಮ ಬ್ರಾಂಡ್ ಅಂಬಾಸಿಡರ್ ಅಲ್ಲ. ದಯವಿಟ್ಟು ಈ ಪೋಸ್ಟ್ ತೆಗೆಯಿರಿ ಎಂದು ಅನಿಷ್ಕಾ ಪೋಸ್ಟ್ ಮೂಲಕ ಹೇಳಿದ್ದು ಪ್ರಚಾರದ ಗಿಮಿಕ್ ಅನ್ನೋದು ಇದೀಗ ಬಯಲಾಗಿದೆ.


ಅನುಷ್ಕಾ ಅವರ ಚಿತ್ರ ಚಕ್ಡಾ ಎಕ್ಸ್ ಪ್ರೆಸ್ 2023 ರಲ್ಲಿ ಬಿಡುಗಡೆಯಾಗಲಿದ್ದು, ಅನುಷ್ಕಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಈ ಸಿನಿಮಾ ಭಾರತೀಯ ಕ್ರಿಕೆಟ್​ನ ಅತ್ಯಂತ ವೇಗದ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯಾದರಿತ ಕಥೆಯಾಗಿದೆ.

Published by:ಪಾವನ ಎಚ್ ಎಸ್
First published: