Ananya Pandey: ಆ ಸ್ಟಾರ್ ​​ನಟನಂತೆ ಗಂಡ ಬೇಕಂತೆ ಅನನ್ಯಾ ಪಾಂಡೆಗೆ, ಹೆಸರು ಕೇಳಿದ್ರೆ ನಾಚಿ ನೀರಾದ ಡಿಂಪಲ್​ ಚೆಲುವೆ!

ನಟಿ ಅನನ್ಯಾ ಪಾಂಡೆ ಕಳೆದ ಡಿಸೆಂಬರ್ ತಿಂಗಳಲ್ಲಿ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಶೂಟ್‌ನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ತುಂಬಾನೇ ಚರ್ಚೆಯಲ್ಲಿರುವ ನಟಿ ಎಂದರೆ ಅದು ಬಾಲಿವುಡ್​(Bollywood)ನ 23 ವರ್ಷ ವಯಸ್ಸಿನ ಯುವ ನಟಿ ಅನನ್ಯಾ ಪಾಂಡೆ (Ananya Pandey)ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈ ನಟಿ ತಾವು  ತೊಡುವ ಸೆಕ್ಸಿ ಮಿನಿ ಡ್ರೆಸ್​(Sexy Mini Dress) ನಿಂದ ಹಿಡಿದು, ಅಭಿನಯಿಸಿದ ಚಿತ್ರಕ್ಕಾಗಿ ಮತ್ತು ಡ್ರಗ್ಸ್ ಕೇಸ್‌ನಲ್ಲಿ ವಿಚಾರಣೆಯಲ್ಲಿ ಹೀಗೆ ಒಂದೇ ಎರಡೇ ಅನೇಕ ಬಾರಿ ಸುದ್ದಿಯಲ್ಲಿದ್ದರು ಎಂದು ಹೇಳಬಹುದು. ನಟಿ ಅನನ್ಯಾ ಪಾಂಡೆ ಕಳೆದ ಡಿಸೆಂಬರ್ ತಿಂಗಳಲ್ಲಿ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಶೂಟ್‌ನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. 2019ರಲ್ಲಿ ಹಿಂದಿ ಚಲನಚಿತ್ರವಾದ ‘ಸ್ಟೂಡೆಂಟ್ ಆಫ್ ದಿ ಇಯರ್ 2’(Student of the Year 2) ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನನ್ಯಾ ಅವರು ತಮ್ಮ ಮುಂಬರುವ ಚಿತ್ರವಾದ ‘ಗೆಹರಾಯಿಯಾಂ’ ನ ಫಸ್ಟ್ ಲುಕ್ ಬಿಡುಗಡೆಯಾದಾಗಿನಿಂದ ತುಂಬಾನೇ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಬಹುದು.

ಬಾಯ್​ಫ್ರೆಂಡ್​ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ!

ಚಿತ್ರದ ಟ್ರೈಲರ್ ಬಿಡುಗಡೆಯ ನಂತರ, ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾದು ಕುಳಿತ್ತಿದ್ದಾರೆ. ಅನನ್ಯಾ ಅವರನ್ನು ಬೆಳ್ಳಿಪರದೆಯ ಮೇಲೆ ಹೊಸ ಅವತಾರದಲ್ಲಿ ನೋಡಲು ಅಭಿಮಾನಿಗಳು ಈಗಾಗಲೇ ತುಂಬಾನೇ ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಸಿದ್ಧಾಂತ್ ಚತುರ್ವೇದಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ನಟ ನಟಿಯರು ಪ್ರಸ್ತುತ ಚಿತ್ರದ ಪ್ರಚಾರದ ಉತ್ಸಾಹದಲ್ಲಿದ್ದಾರೆ ಮತ್ತು ಅನನ್ಯಾ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಇವರು ಎಂತಹ ಗುಣಗಳಿರುವ ಹುಡುಗನನ್ನು ಅವರ ಪ್ರೇಮಿಯಾಗಿ ಹೊಂದಲು ಬಯಸುತ್ತಾರೆ ಎನ್ನುವುದರ ಬಗ್ಗೆ ಮಾತಾಡಿದ್ದಾರೆ ನೋಡಿ.

ಇದನ್ನು ಓದಿ: Ranveer-Deepika ಇಬ್ಬರು ಶಿಸ್ತಿನ ದಂಪತಿ ಎಂದ್ರು ಸಿದ್ಧಾಂತ್ ಚತುರ್ವೇದಿ, ಸಿದ್ಧಾಂತ್ ಹೀಗೆ ಹೇಳಿದ್ದು ಯಾಕೆ? ಈ ಸ್ಟೋರಿ ಓದಿ

ಶಾರುಖ್​ ಖಾನ್​ ತರ ಗಂಡ ಬೇಕಂತೆ ಅನನ್ಯಾ ಪಾಂಡೆಗೆ!

ಪರಿಪೂರ್ಣ ಸಂಬಂಧದ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ "ನಾನು ಬೆಳೆಯುತ್ತಿರುವಾಗ, ನಾನು ಶಾರುಖ್ ಖಾನ್ ಅವರ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದೆ. ನಾನು ಸಹ ನನ್ನನ್ನು ಹೆಚ್ಚು ಪ್ರೀತಿಸುವ, ನನ್ನನ್ನು ಪ್ರೀತಿಯಿಂದ ನೋಡುವ ಆದರ್ಶ ವ್ಯಕ್ತಿಯನ್ನು ನಾನು ಪ್ರೇಮಿಯಾಗಿ ಸ್ವೀಕರಿಸಲು ಬಯಸುತ್ತೇನೆ. ಸ್ವಲ್ಪ ಸಮಯದ ನಂತರ, ಪ್ರೀತಿ ಮತ್ತು ಸ್ನೇಹದ ಬಗ್ಗೆ ನಾನು ಬಹಳಷ್ಟು ಅರಿತುಕೊಂಡೆ" ಎಂದು ಹೇಳಿದರು.‘ಗೆಹರಾಯಿಯಾಂ’ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಜನರು ಮತ್ತು ಅವರ ನಿರ್ಧಾರಗಳನ್ನು ಯಾವುದೇ ರೀತಿಯ ಯೋಚನೆಯನ್ನು ಮಾಡದೇ ತಕ್ಷಣವೇ ಅವರ ಬಗ್ಗೆ ಒಂದು ನಿರ್ಣಯಕ್ಕೆ ಬರುವುದರ ಬಗ್ಗೆ ನಾನು ತುಂಬಾನೇ ಕಲಿತುಕೊಂಡಿದ್ದೇನೆ ಎಂದು ನಟಿ ಹೇಳಿದರು.

ಇದನ್ನು ಓದಿ: Gangubai Kathiawadi ರಿಲೀಸ್ ಡೇಟ್ ರಿವೀಲ್, ಯಾರೂ ಮಾಡದ ಧೈರ್ಯ ಮಾಡ್ತಿದ್ದಾರೆ ಆಲಿಯಾ ಭಟ್​!

‘ಗೆಹರಾಯಿಯಾಂ’ ಸಿನಿಮಾದಿಂದ ತುಂಬಾ ಕಲಿತುಕೊಂಡೆ’

‘ಗೆಹರಾಯಿಯಾಂ’ ಚಿತ್ರವು ಅವರಿಗೆ ಒಂದು ದೊಡ್ಡ ಕಲಿಕೆಯ ಅನುಭವ ನೀಡಿದೆ ಎಂದು ಅನನ್ಯಾ ಪಾಂಡೆ ಹೇಳಿದರು ಮತ್ತು ಈ ಚಿತ್ರವು ತನಗೆ ಹೊಸ ವೃತ್ತಿ ಜೀವನದ ಪಥವನ್ನು ಸೂಚಿಸುತ್ತದೆ ಎಂದು ಅವರು ಆಶಿಸಿದ್ದಾರೆ. ಚಿತ್ರದ ಟ್ರೈಲರ್‌ನಿಂದ, ‘ಗೆಹರಾಯಿಯಾಂ’ ಚಿತ್ರವು ಮಾನವ ಸಂಬಂಧಗಳು, ಪ್ರೀತಿ, ಸ್ನೇಹ ಮತ್ತು ದ್ರೋಹದಲ್ಲಿನ ಸಂಕೀರ್ಣತೆಗಳ ಸುತ್ತಲೂ ಹೆಣೆದಿರುವ ಕಥೆ ಎಂದು ತೋರುತ್ತದೆ.ಈ ಚಿತ್ರದ ಕಥೆಯು ಅಲಿಶಾ, ಟಿಯಾ, ಝೈನ್ ಮತ್ತು ಕರಣ್ ಎಂಬ ನಾಲ್ಕು ಜನರ ಜೀವನದ ಸುತ್ತ ಸುತ್ತುತ್ತದೆ. ಶಕುನ್ ಬತ್ರಾ ಅವರ ನಿರ್ದೇಶನವಿರುವ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್, ವಯಾಕಾಮ್18 ಸ್ಟುಡಿಯೋಸ್ ಮತ್ತು ಜೌಸ್ಕಾ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿವೆ ಎಂದು ಹೇಳಲಾಗುತ್ತಿದೆ
Published by:Vasudeva M
First published: