Gangubai Kathiawadi ಟ್ರೈಲರ್​ ರಿಲೀಸ್​, ಕಾಮಾಟಿಪುರದಲ್ಲಿ ಅಬ್ಬರಿಸಿದ ಆಲಿಯಾ ಭಟ್​!

ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ.

ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​

  • Share this:
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ಮುಂದೂಡಲ್ಪಟ್ಟಿದೆ. ಆದರೆ, ಕೋವಿಡ್​ (Covid)​ ಮೂರನೇ ಅಲೆ ಅಷ್ಟಾಗಿ ಪ್ರಭಾವ ಬೀರುತ್ತಿಲ್ಲ. ಹೀಗಾಗಿ ಸ್ಟಾರ್​ ನಟ(Star Actor)ರ ಸಿನಿಮಾಗಳು ಮತ್ತೆ ತಮ್ಮ ಬಿಡುಗಡೆ ದಿನಾಂಕವನ್ನು ಬದಲಿಸಿಕೊಳ್ಳುತ್ತಿವೆ. ಆಲಿಯಾ ಭಟ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ'(Gangubai Kathiawadi ). ಕಳೆದ ವರ್ಷ ಮಾರ್ಚ್‌ನಿಂದ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ(Sanjay Leela Bhansali) ಹರಸಾಹಸ ಪಡುತ್ತಲೇ ಇದ್ದರು. ಹಲವು ಬಾರಿ ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡಿದ ಬಳಿಕ ಸಂಜಯ್ ಲೀಲಾ ಬನ್ಸಾಲಿ ಫೆಬ್ರವರಿ 25ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು.ಇದೀಗ ಈ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಆಲಿಯಾ ಭಟ್(Alia Bhatt​ ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಕಾಮಾಟಿಪುರದಲ್ಲಿ ಆಲಿಯಾ ಭಟ್ ಅಬ್ಬರಿಸಿ ಬೊಬ್ಬಿರಿದಿದ್ದಾ ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್​ ಇಂಪ್ರೆಸ್​ ಮಾಡಿದ್ದಾರೆ.ಕೇವಲ ಟ್ರೈಲರ್​ನಲ್ಲೇ ಇವರ ಅಭಿನಯಕ್ಕೆ ನೂರಕ್ಕೆ ನೂರು ಅಂಕ ಸಿಕ್ಕಿದೆ.
 


ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.

ಇದನ್ನೂ ಓದಿ: Priyanka Chopra ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗೋಕೆ 149 ಕೋಟಿ ಖರ್ಚು ಮಾಡಿದ್ರಂತೆ!

ಟ್ರೈಲರ್​ನಲ್ಲೇ ಕಿಕ್​ ಹೆಚ್ಚಿಸಿದ ಆಲಿಯಾ ಭಟ್​!

ಇಡೀ ಟ್ರೇಲರ್​ನಲ್ಲಿ ಆಲಿಯಾ ಭಟ್​ ಅವರ ನಟನೆ, ಬನ್ಸಾಲಿ ಸಿನಿಮಾ ಮೇಕಿಂಗ್​ ಗಮನ ಸೆಳೆಯುತ್ತಿದೆ. ಅಜಯ್​ ದೇವಗನ್​ ಪಾತ್ರ ಕೂಡ ಟ್ರೇಲರ್​ನಲ್ಲಿನಲ್ಲಿ ಇದೆ. ಅವರ ಪಾತ್ರ ಏನು ಎಂಬ ರಹಸ್ಯವನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಇಡೀ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಇನ್ನೂ ಆಲಿಯಾ ಭಟ್​ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್​​ಗೆ ನಾವು ಕಾಯುತ್ತಿದ್ದೇವೆ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಈ ಹಿಂದೆ ಕಾಣಿಸಿರದ ಪಾತ್ರದಲ್ಲಿ ಆಲಿಯಾ ಭಟ್​ ಕಾಣಿಸಿಕೊಂಡಿದ್ದು, ಮತ್ತಷ್ಟು ಥ್ರಿಲ್​ ಹೆಚ್ಚಿಸಿದೆ.

ಇದನ್ನೂ ಓದಿ: 23 ಕೋಟಿ ರೂ.ಗೆ ಸೇಲ್​ ಆಯ್ತು ಬಿಗ್​ ಬಿ ದೆಹಲಿ ಮನೆ

ಫೆಬ್ರವರಿ 25ಕ್ಕೆ ಸಿನಿಮಾ ರಿಲೀಸ್​!

ಚಿತ್ರದ ಚಿತ್ರೀಕರಣ 2021ರ ಜೂನ್​ನಲ್ಲೇ ಮುಕ್ತಾಯವಾಗಿತ್ತು. ನಂತರ ಹಲವು ಬಾರಿ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿತ್ತು. ಕೆಲ ದಿನಗಳ ಮೊದಲು ಫೆಬ್ರವರಿ 18ರಂದು ತೆರೆಗೆ ಬರಲು ಚಿತ್ರತಂಡ ನಿರ್ಧರಿಸಿ, ಘೋಷಣೆಯನ್ನೂ ಮಾಡಿತ್ತು. ಇದೀಗ ಒಂದು ವಾರದ ನಂತರ ಅಂದರೆ ಫೆಬ್ರವರಿ 25ರಂದು ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಈಗಾಗಲೇ ಟ್ರೈಲರ್​ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಆಲಿಯಾ ಸಿನಿಮಾ ಬಿಡುಗಡೆಯಾದ ಬಳಿಕ ದಾಖಲೆ ಬರೆಯಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ. ಅಷ್ಟೆ ಅಲ್ಲದೇ ಆಲಿಯಾ ಭಟ್​ ಅವರ ಸಿನಿಕೆರಿಯರ್​​ಗೆ ದೊಡ್ಡ ಟರ್ನ್​ ಕೊಡಲಿದೆ ಈ ಸಿನಿಮಾ ಅಂತ ಹೇಳಲಾಗುತ್ತಿದೆ.
Published by:Vasudeva M
First published: