Alia Bhatt: ಸೋಶಿಯಲ್ ಮೀಡಿಯಾ ಪೋಸ್ಟ್​ಗೆ ಆಲಿಯಾ ಪಡೆಯುವ ಸಂಭಾವನೆ ಕೇಳಿ ಶಾಕ್ ಆದ ಬಾಲಿವುಡ್​

ಆಲಿಯಾ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್​ಗೆ ಎಷ್ಟು ಗಳಿಕೆ ಮಾಡುತ್ತಾರೆ ಎಂಬ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತ ವರದಿಯೊಂದು ಬಿಡುಗಡೆ ಆಗಿದ್ದು, ಇದನ್ನು ಕೇಳಿದ ಬಾಲಿವುಡ್​ ಮಂದಿ ಶಾಕ್​ ಆಗಿದ್ದಾರೆ.

ಆಲಿಯಾ ಭಟ್

ಆಲಿಯಾ ಭಟ್

  • Share this:
ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್​ (Alia Bhatt) ಪೋಷಕರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ ನಂತರ ಇಂಟರ್​ನೆಟ್​ (Internet) ನಲ್ಲಿ ಅದೇ ಸುದ್ದಿಯಾಗಿದೆ. ಅಭಿಮಾನಿಗಳು ಹಾಗೂ ಬಾಲಿವುಡ್​ (Bollywood) ಮಂದಿ ಈ ಜೋಡಿಗೆ ವಿಶ್​ಗಳ ಮಹಾಪೂರವನ್ನೇ  ಹರಿಸುತ್ತಿದ್ದಾರೆ. ಇದರ ನಡುವೆ ಆಲಿಯಾ ಹಾಳಿವುಡ್​ ಸಿನಿಮಾದ ಶೂಟಿಂಗ್​ ಸಹ ಮುಗಿಸಿದ್ದು, ಇದೀಗ ಅವರ ಡಾರ್ಲಿಂಗ್ಸ್ ಸಿನಿಮಾ ಒಟಿಟಿ ನೆಟ್​ಪ್ಲಿಕ್ಸ್ ನಲ್ಲಿ ತೆರೆಕಂಡಿದೆ. ಒಟ್ಟಾರೆಯಾಗಿ ಸದ್ಯ ಬಾಲಿವುಡ್​ನ ಟಾಪ್​ ನಟಿಯಾಗಿರುವ ಆಲಿಯಾ ಕಳೆದ ಕೆಲದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಅದೇ ರೀತಿ ಮತ್ತೊಂದು ಹೊಸ ವಿಷಯಕ್ಕೆ ಸದ್ದು ಮಾಡುತ್ತಿದ್ದು, ಈ ಬಾರಿ ಅವರ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್​ಗೆ ಎಷ್ಟು ಗಳಿಕೆ ಮಾಡುತ್ತಾರೆ ಎಂಬ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತ ವರದಿಯೊಂದು ಬಿಡುಗಡೆ ಆಗಿದ್ದು, ಇದನ್ನು ಕೇಳಿದ ಬಾಲಿವುಡ್​ ಮಂದಿ ಶಾಕ್​ ಆಗಿದ್ದಾರೆ.

ಆಲಿಯಾ ಒಂದು ಪೋಸ್ಟ್​ಗೆ ಪಡೆಯುವ ಹಣವೆಷ್ಟು?:

ಹೌದು, ಆಲಿಯಾ ಸದ್ಯ ಬಾಲಿವುಡ್​ ಚಿತ್ರರಂಗದ ಬಹುಬೇಡಿಕೆಯ ನಟಿ. ಅವರ ಸಾಲುಸ ಆಳು ಸಿನಿಮಾಗಳು ಸೂಪರ್ ಹಿಟ್​ ಆಗುತ್ತಿದೆ. ಕೊರೋನಾ ನಂತರ ಬಿಡುಗಡೆ ಆದ ಅವರ ಗಂಗುಬಾಯಿ ಕಾಥಿಯಾವಾಡಿ ಸಿನಿಮಾ ಬಾಕ್ಸ್ ಆಫಿಸ್​ನಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿ ಗೆದ್ದಿದೆ. ಇದೀಗ ಬಿಡುಗಡೆ ಆಗಿರುವ ಡಾರ್ಲಿಂಗ್ಸ್ ಸಿನಿಮಾ ಸಹ ಒಟಿಟಿ ಗೆ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಹೀಗಾಗಿ ಆಲಿಯಾ ಸೋಶಿಯಲ್ ಮೀಡಿಯಾದಲ್ಲಿ ಮಾಡುವ ಒಂದು ಫೋಸ್ಟ್​ಗೆ ಲಕ್ಷಗಟ್ಟಲೇ ಹಣ ಪಡೆಯುತ್ತಾರೆ.






ಬಾಲಿವುಡ್​ ಮಾಧ್ಯಮಗಳ ವರದಿಯ ಪ್ರಕಾರ, ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಲು ಬರೋಬ್ಬರಿ  85 ಲಕ್ಷದಿಂದ 1 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಾರಂತೆ. ಕೇವಲ ಒಂದು ಪೋಸ್ಟ್ಗೆ ಇಷ್ಟೊಂದು ಹಣ ಪಡೆಯುವುದು ನೋಡಿ ಬಾಲಿವುಡ್​ ಮಂದಿ ಸದ್ಯ ಅಚ್ಚರಿಪಟ್ಟಿದ್ದು, ಅವರ ಯಶಸ್ಸಿನ ಫಲ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ಸಾಂಗ್ ರಿಲೀಸ್​, ಮೋಡಿ ಮಾಡಿದ ಆಲಿಯಾ - ರಣಬೀರ್​ ಜೋಡಿ

ಬಾಲಿವುಡ್​ ಬ್ಯೂಟಿಯ ಆಸ್ತಿ ಕೇಳಿ ಶಾಕ್​ ಆಗ್ಬೇಡಿ:

ಇನ್ನು, ಕೇವಲ ಒಂದು ಪೋಸ್ಟ್​ಗೆ ಇಷ್ಟೊಂದು ಚಾರ್ಜ್​ ಮಾಡುವ ಆಲಿಯಾ ಭಟ್ ಆಸ್ತಿ  ಎಷ್ಟಿರಬಹುದೆಂದು ನೀವು ಆಲೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಹಿಂದೂಸ್ಥಾನ್ ಟೈಮ್ಸ್ ವರದುಯ ಪ್ರಕಾರ,  2021ರಲ್ಲಿ ವರೆಗೆ ಇವರ ಆಸ್ತಿ ಮೌಲ್ಯ 517 ಕೋಟಿ ರೂ. ಎಂದು ತಿಳಿಸಿದೆ. ಅಲ್ಲದೇ ಇವರು ಒಂದು ಸಿನಿಮಾಗೆ ಬರೋಬ್ಬರಿ 15ರಿಂದ 18 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಇದಲ್ಲದೇ ಆಲಿಯಾ ಅನೇಕ ಜಾಹೀರಾತು, ಬ್ರ್ಯಾಂಡ್ಗಳ ಬ್ರಾಂಡ್ ಅಂಬಾಸಿಟರ್ ಸಹ ಆಗಿದ್ದಾರೆ. ಜೊತೆಗೆ ಹಲವೆಡೆ ಹೂಟಕೆಯನ್ನೂ ಮಾಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ನೂರಾರು ಕೋಟಿಯ ಒಡತಿಯಾಗಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್​ ಸಿನಿಮಾಗೆ ಸಂಕಷ್ಟ, ಟ್ರೆಂಡ್​ ಆಯ್ತು Boycott Alia Bhatt

ಬ್ರಹ್ಮಾಸ್ತ್ರ ಸಿನಿಮಾದ ರಿಲೀಸ್​ಗಾಗಿ ಕಾಯುತ್ತಿರು ಜೋಡಿ:

ಹೌದು, ರಣಬೀರ್ ಕಪೂರ್​ ಹಾಗೂ ಆಲಿಯಾ ಮದುವೆ ನಂತರ ಬಿಡುಗಡೆ ಆಗುತ್ತಿರುವ ಅವರಿಬ್ಬರೂ ಜೊತೆಯಾಗಿ ನಟಿಸಿರುವ ಸಿನಿಮಾ ಬ್ರಹ್ಮಾಸ್ತ್ರ. ಈ ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಮತ್ತೆ ಬಾಲಿವುಡ್​ಗೆ ಈ ಚಿತ್ರದ ಮೂಲಕ ಕಳೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.  ಬ್ರಹ್ಮಾಸ್ತ್ರ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.
Published by:shrikrishna bhat
First published: