Gangubai Kathiawadi: ವೇಶ್ಯೆ ಪಾತ್ರದಲ್ಲಿ ನಟಿಸೋಕೆ ಈ ಪಾಟಿ ದುಡ್ಡು ತಗೊಂಡ್ರತೆ ಆಲಿಯಾ! ಬಾಯಿ ಮೇಲೆ ಬೆರಳಿಟ್ಟುಕೊಂಡ ನೆಟ್ಟಿಗರು

ಭಾರತದಲ್ಲಷ್ಟೇ ಅಲ್ಲದೇ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ವಿದೇಶದಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ. ಮೂಲಗಳ ಪ್ರಕಾರ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್​ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. 

ಅಜಯ್​ ದೇವಗನ್​, ಆಲಿಯಾ ಭಟ್​

ಅಜಯ್​ ದೇವಗನ್​, ಆಲಿಯಾ ಭಟ್​

  • Share this:
ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಅಭಿನಯದ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಗಂಗೂಬಾಯಿ ಕಾಥಿಯಾವಾಡಿ (Gangubai Kathiawadi) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ  ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಆಲಿಯಾ ನಟ(Alia Performance)ನೆ ಬಗ್ಗೆ ಮಾತನಾಡುತ್ತಿದ್ದಾರೆ. ‘ಗಂಗೂಬಾಯಿ’ ಪಾತ್ರದಲ್ಲಿ ಆಲಿಯಾ ಭಟ್​ ಜೀವಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ(Sanjay Leela Bansali)ಯ ಹೊಸ ಸಿನಿಮಾ 'ಗಂಗೂಬಾಯಿ ಕಾಥಿಯಾವಾಡಿ' ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿ ಸಂಜಯ್‌ರ ಅದ್ಧೂರಿ ಮೇಕಿಂಗ್​ನಲ್ಲಿ ಮಾಡಿರುವ ಸಿನಿಮಾ. 'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ.

100 ಕೋಟಿ ಬಜೆಟ್​ನಲ್ಲಿ ರೆಡಿಯಾದ ಆಲಿಯಾ ಸಿನಿಮಾ!

ಗಂಗೂಬಾಯಿ ಕಥಿವಾಡಿಯನ್ನು 100 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ರಚಿಸಲಾಗಿದೆ. ಇದರಲ್ಲಿ ಅದ್ಭುತವಾದ ಸೆಟ್ ವಿನ್ಯಾಸ ಮತ್ತು ಅದ್ಭುತ ತಾರಾ ಬಳಗವಿದೆ. ಹಾಗಾಗಿ ಸಹಜವಾಗಿಯೇ ಚಿತ್ರದ ನಟರಿಗೂ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ. ಆಲಿಯಾ ಭಟ್​ ಸಿನಿಮಾದ ಆರಂಭದಲ್ಲಿ ಅಮಾಯಕ ಯುವತಿಯಾಗಿ, ನಂತರ ಗತ್ತು ಗಮ್ಮತ್ತಿನ, ಅಹಂ, ಆತ್ಮಾಭಿಮಾನದ ಗಂಗೂಬಾಯಿಯಾಗಿ ಅವರ ನಟನೆ ಅದ್ಭುತವಾಗಿದೆ. ಈ ಪಾತ್ರದಲ್ಲಿ ನಟಿಸೋಕೆ ಅವರು ಪಡೆದ ಸಂಭಾವನೆ ಬಗ್ಗ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. ಹಾಗಿದ್ದರೆ ಆಲಿಯಾ ಭಟ್​ ವೇಶ್ಯೆ ಪಾತ್ರದಲ್ಲಿ ನಟಿಸೋಕೆ ಪಡೆಯಕೊಂಡ ಸಂಭಾವನೆ ಎಷ್ಟು ಗೊತ್ತಾ? ಮುಂದೆ ನೋಡಿ..

20 ಕೋಟಿ ಸಂಭಾವನೆ ಪಡೆದಿದ್ದಾರಂತೆ ಆಲಿಯಾ!

ಆಲಿಯಾ ಯಾವುದೇ ಪಾತ್ರವನ್ನು ಕೊಟ್ಟರು ನುಂಗಿ ನೀರು ಕುಡಿಯುತ್ತಾರೆ. ಕೇವಲ ಭಾರತದಲ್ಲಷ್ಟೇ ಅಲ್ಲದೇ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ವಿದೇಶದಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ. ಮೂಲಗಳ ಪ್ರಕಾರ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್​ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಇದು ಆಲಿಯಾ ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ಚಿತ್ರವಾಗಿದೆ. ಒಂಬತ್ತನೇ ವಯಸ್ಸಿನಿಂದ ಸಂಜಯ್​ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತು ಎಂದು ಆಲಿಯಾ ಹೇಳಿಕೊಂಡಿದ್ದರು.

ಇದನ್ನೂ ಓದಿ: ಜರ್ಮನ್​ನಲ್ಲೂ `ಗಂಗೂಬಾಯಿ’ ಅಬ್ಬರ.. ಆಲಿಯಾ ನಟನೆ ಕಂಡು ಎದ್ದು ನಿಂತು ಚಪ್ಪಾಳೆ ಹೊಡೆದ ವಿದೇಶಿಗರು!

ಅತಿಥಿ ಪಾತ್ರದಲ್ಲಿ ನಟಿಸೋಕೆ ಇಷ್ಟು ಸಂಭಾವನೆನಾ!

ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ ಪಾತ್ರದಲ್ಲಿ ಅಜಯ್​​ ದೇವಗನ್​ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಜಯ್​ ದೇವಗನ್​ ಅವರು ದುಬಾರಿ ಸಂಭಾವನೆ ಪಡೆದಿದ್ದಾರಂತೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು 12 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಅತಿಥಿ ಪಾತ್ರ ಮಾಡುವುದಕ್ಕೂ ಇಷ್ಟು ಹಣನಾ? ಅಂತ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾಗೆ ಕ್ಯೂಟಿ ಅಂದ್ರು ಫ್ಯಾನ್ಸ್​.. ಕೆನ್ನೆ ಕೆಂಪಾಗಿ ಹಿರಿ ಹಿರಿ ಹಿಗ್ಗಿದ `ಕಿರಿಕ್​ ಬ್ಯೂಟಿ’!

ಎದ್ದು ನಿಂತು ಚಪ್ಪಾಳೆ ಹೊಡೆದ ವಿದೇಶಿಗರು!

ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತು ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜರ್ಮನ್​ ದೇಶದ ಬೆರ್ಲಿನ್​ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್​ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್​ಗೆ ವ್ಯಕ್ತವಾಗಿದೆ.
Published by:Vasudeva M
First published: