ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲೂ ದಿ ಕೇರಳ ಸ್ಟೋರಿ ಸಿನಿಮಾ (Bollywood Actress Adah Sharma) ಸದ್ದು ಮಾಡುತ್ತಿದೆ. ಈ ಚಿತ್ರದ ಕಂಟೆಂಟ್ ತುಂಬಾನೇ ಗಂಭೀರವಾಗಿದೆ. ಕೇರಳದ 32 ಸಾವಿರ ಮಹಿಳೆಯ ಕಥೆ (The Kerala Story Latest Updates) ಇದಾಗಿದೆ. ಈ ಮೂಲಕ ಕೇರಳದ ಕರಾಳ ಸತ್ಯವನ್ನ ಇದರಲ್ಲಿ ಬಿಚ್ಚಿಡಲಾಗಿದೆ. ರಿಲೀಸ್ ಆಗಿರೋ ಒಂದೇ ಟೀಸರ್ ಇಡೀ ಚಿತ್ರದ ಅಸಲಿ ಸತ್ಯ ಬಿಚ್ಚಿಟ್ಟಿದೆ. ಈ ಒಂದು (The Kerala Story Movie) ಟೀಸರ್ ನೋಡಿದ ಅನೇಕರು ಬೆಚ್ಚಿಬಿದಿದ್ದಾರೆ. ಆದರೆ ಕೇರಳ ಮುಖ್ಯಮಂತ್ರಿ ಶಾಕ್ ಆಗಿದ್ದಾರೆ. ಇದೆಲ್ಲ ಸುಳ್ಳೆ ಸುಳ್ಳು ಅಂತಲೂ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆ ಮತ್ತು ವಿರೋಧದ (Adah Sharma) ಮಧ್ಯೆ ದಿ ಕೇರಳ ಸ್ಟೋರಿ ಮೇ-5 ರಂದು ರಿಲೀಸ್ ಆಗುತ್ತಿದೆ.
ಆದರೆ ಈ ಚಿತ್ರದ ನಾಯಕಿ ಅದಾ ಶರ್ಮಾ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ಇದು ಇಡೀ ಚಿತ್ರದ ಒಳ ಸುಳಿಯನ್ನೆ ಬಿಚ್ಚಿಡುತ್ತಿದೆ.
ಅಸಲಿಗೆ ಎಷ್ಟು ಮಹಿಳೆಯರು ಐಸಿಸ್ ಸೇರಿದ್ದಾರೆ?
ದಿ ಕೇರಳ ಸ್ಟೋರಿ ಚಿತ್ರದಲ್ಲಿ ಕೇರಳದ ಕರಾಳ ಸತ್ಯವನ್ನ ಬಿಚ್ಚಿಡಲಾಗಿದೆ. ಕೇರಳದ 32 ಸಾವಿರ ಮಹಿಳೆಯರು ವಿದೇಶಕ್ಕೆ ಹೋಗಿದ್ದಾರೆ. ಅಲ್ಲಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದಾರೆ. ಮುಂದೆ ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ. ಇದು ಸತ್ಯ ಸತ್ಯ ಅಂತಲೇ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್ ಹೇಳಿಕೊಂಡಿದ್ದಾರೆ.
ದಿ ಕೇರಳ ಸ್ಟೋರಿ ಅಸಲಿ ಸತ್ಯ ಏನು ಗೊತ್ತೇ?
ಆದರೆ ಈ ಒಂದು ಸತ್ಯವನ್ನ ಎಲ್ಲರೂ ಒಪ್ಪಬೇಕು ಅಂತ ಏನೂ ಇಲ್ಲ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದೆಲ್ಲ ಸುಳ್ಳು ಅಂತ ಹೇಳಿಕೊಂಡಿದ್ದಾರೆ. ಇದರಲ್ಲಿ ಇರೋದೆಲ್ಲ ಸುಳ್ಳು ಅನ್ನುವುದನ್ನ ಹೇಳಿಕೊಂಡಿದ್ದರು. ಕೇರಳದ ಇತರ ನಾಯಕರೂ ಇದನ್ನೇ ಹೇಳಿಕೊಂಡಿದ್ದರು.
ಅದಾ ಶರ್ಮಾ ದಿ ಕೇರಳ ಸ್ಟೋರಿ ಬಗ್ಗೆ ಹೀಗೆ ಹೇಳಿದ್ದ್ಯಾಕೆ?
ಈ ಎಲ್ಲ ಬೆಳವಣಿಗೆ ಮಧ್ಯೆ ಚಿತ್ರದ ನಾಯಕಿ ಅದಾ ಶರ್ಮಾ ಈಗೊಂದು ಮಾತು ಹೇಳಿದ್ದಾರೆ. ತಮ್ಮ ಚಿತ್ರದ ಅಸಲಿ ಉದ್ದೇಶ ಏನೂ ಅನ್ನೋದನ್ನ ಕೂಡ ಇಲ್ಲಿ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇದನ್ನ ಕೇಳಿದ್ರೆ ಇಲ್ಲಿ ಎಲ್ಲವೂ ವಿಭಿನ್ನ ಅನಿಸೋಕೆ ಶುರು ಆಗುತ್ತದೆ.
ದಿ ಕೇರಳ ಸ್ಟೋರಿ ಎಲೆಕ್ಷನ್ ಅಜೆಂಡಾ ಸಿನಿಮಾನಾ?
ನಮ್ಮ ದಿ ಕೇರಳ ಸ್ಟೋರಿ ಎಲೆಕ್ಷನ್ ಅಜೆಂಡಾ ಸಿನಿಮಾ ಅಲ್ವೇ ಅಲ್ಲ. ಧರ್ಮ ವರ್ಸಸ್ ಧರ್ಮ ಕೂಡ ಅಲ್ಲ. ಇದು ಅದನ್ನ ಮೀರಿದ್ದಾಗಿದೆ. ಜೀವನ ಮತ್ತು ಮರಣದ ಕಥೆ ಆಗಿದೆ. ಭಯೋತ್ಪಾದನೆ ಮತ್ತು ಮಾನವೀಯತೆ ಅಸಲಿ ಸತ್ಯ ಇದಾಗಿದೆ ಅಂತ ಅದಾ ಶರ್ಮಾ ಹೇಳಿಕೊಂಡಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದಲ್ಲಿರೋದೆಲ್ಲ ಸುಳ್ಳು ಎಂದ ಕೇರಳ ಸಿಎಂ
ಅದಾ ಶರ್ಮಾ ತಮ್ಮ ಈ ಒಂದು ಹೇಳಿಕೆ ಕೊಡಲು ಕಾರಣವೂ ಇದೆ. ಚಿತ್ರದ ಟೀಸರ್ ಹೊರ ಬೀಳ್ತಾ ಇದ್ದಂತೇನೆ, ಇಲ್ಲಿ ಏನೇನೋ ಆಗಿದೆ. ಸಿನಿಮಾದಲ್ಲಿ ಸುಳ್ಳು ಹೇಳಲಾಗಿ ಅನ್ನೋ ವಾದ ಕೇರಳದ ಸಿ.ಎಂ ಸೇರಿದಂತೆ ಇತರ ನಾಯಕರೂ ಅದನ್ನೇ ಸಾರಿ ಸಾರಿ ಹೇಳುತ್ತಿದ್ದಾರೆ.
ಡೈರೆಕ್ಟರ್ ಸುದಿಪ್ತೋ ಸೇನ್ ಭಯ ಪಡ್ತಿರೋದು ಯಾಕೆ?
ದುರಂತ ಅಂದ್ರೆ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್ ಭಯಪಡ್ತಿರೋ ಹಾಗೆ ಇದೆ. ಇಲ್ಲಿವರೆಗೂ 32 ಸಾವಿರ ಮಹಿಳೆಯರು ಐಸಿಸ್ ಸೇರಿದ್ದಾರೆ. ಆ ಕಥೇನೆ ಇಲ್ಲಿದೆ ಅಂತಲೇ ಹೇಳಿದ್ದರು. ಆದರೆ ಈಗ ಮೂರು ಸಾವಿರ ಮಹಿಳೆಯರು ಐಸಿಸ್ ಸೇರಿದ್ದಾರೆ ಅನ್ನುವ ಮಾಹಿತಿ ಕೊಡ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಮೇ-5 ರಂದು ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್
ಕಟು ಸತ್ಯವನ್ನ ಯಾರೂ ಒಪ್ಪಿಕೊಳ್ಳೋದಿಲ್ಲ. ದಿ ಕೇರಳ ಸ್ಟೋರಿ ಚಿತ್ರದಲ್ಲೂ ಅದೇ ಆದಂತಿದೆ. ದಿನ ಕಳೆದಂತೆ ಚಿತ್ರದ ತಂಡ ಭಯ ಪಡ್ತಿರೋ ಹಾಗೇನೂ ಕಾಣಿಸುತ್ತಿದೆ. ಸೆನ್ಸಾರ್ ಅಂತೂ ಹಲವು ದೃಶ್ಯಕ್ಕೆ ಕತ್ತರಿ ಹಾಕಿದೆ.
ಇದನ್ನೂ ಓದಿ:Reeshma Nanaiah: KD ಲೇಡಿ ಮಚ್ ಲಕ್ಷ್ಮಿ ಮಸ್ತ್ ಮಸ್ತ್ ಡ್ಯಾನ್ಸ್! ಹಳೆ ಹಾಡು ಹೊಸ ಕುಣಿತ, ವಿಡಿಯೋ ಸಖತ್ ವೈರಲ್
ಎಲ್ಲವನ್ನೂ ಮುಗಿಸಿಕೊಂಡು ಮೇ-5 ರಂದು ತೆರೆಗೆ ಬರ್ತಿರೋ ದಿ ಕೇರಳ ಸ್ಟೋರಿ ರಿಲೀಸ್ ಆದ್ಮೇಲೆ ಇನ್ನು ಏನೆಲ್ಲ ಮಾಡ್ತೋ ಏನೋ ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ