• Home
  • »
  • News
  • »
  • entertainment
  • »
  • Business: ನಟನೆ ಮಾತ್ರ ಅಲ್ಲ ಬ್ಯುಸಿನೆಸ್ ಮೂಲಕವೂ ಲಾಭ ಗಳಿಸುತ್ತಿರುವ ಬಾಲವುಡ್​ನ ಸ್ಟಾರ್​ಗಳು!

Business: ನಟನೆ ಮಾತ್ರ ಅಲ್ಲ ಬ್ಯುಸಿನೆಸ್ ಮೂಲಕವೂ ಲಾಭ ಗಳಿಸುತ್ತಿರುವ ಬಾಲವುಡ್​ನ ಸ್ಟಾರ್​ಗಳು!

ಬಾಲಿವುಡ್ ನಟ ನಟಿಯರು

ಬಾಲಿವುಡ್ ನಟ ನಟಿಯರು

ಅದೃಷ್ಟವು ರಾತ್ರೋರಾತ್ರಿ ಕೈ ಹಿಡಿದರೆ ಅದೇ ಅದೃಷ್ಟ ದಿನಬೆಳಗಾಗುವುದರಲ್ಲಿ ಕೈಕೊಟ್ಟು ಹೋಗಬಹುದು. ಆದ್ದರಿಂದ ನಟರಾದ ಶಾರುಖ್ ಖಾನ್, ಅಕ್ಷಯ್‌ ಕುಮಾರ್‌, ಅಜಯ್ ದೇವಗನ್, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ ಮುಂತಾದವರು ಅತ್ಯಂತ ಯಶಸ್ವಿ ಸೈಡ್‌ ಬ್ಯುಸಿನೆಸ್‌ ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗಿದ್ರೆ ಯಾವ್ಯಾವ ನಟ ನಟಿಯರು ಯಾವ ಯಾವ ಸೈಡ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ ಅನ್ನೋದನ್ನು ನೋಡೋಣ.

ಮುಂದೆ ಓದಿ ...
  • Share this:

ಎಲ್ಲರಿಗೂ ಗೊತ್ತಿರೋ ಹಾಗೆ ಬಣ್ಣದ ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ಒಬ್ಬರ ಸಿನಿಮಾ (Cinema) ಇವತ್ತು ಗೆದ್ದರೆ ನಾಳೆ ಮತ್ತೊಂದು ಸಿನಿಮಾ ಸೋಲಬಹುದು. ಇಂದು ಟಾಪ್‌ ನಟ-ನಟಿಯರಾಗಿದ್ದವರು ನಾಳೆ ಕೇಳುವವರಿಲ್ಲದೇ ಸೈಡಿಗೆ ಹೋಗಬೇಕಾಗಬಹುದು. ಹಾಗಾಗಿ ಎಲ್ಲವೂ ಚೆನ್ನಾಗಿದ್ದಾಗ ಹೈಫೈ ಲೈಫ್‌ ಸ್ಟೈಲಿಗೆ ಅಡಿಕ್ಟ್‌ ಆದವರು ಅದರಿಂದ ಆಚೆ ಬರೋದು ಕಷ್ಟ. ಹಾಗಾಗಿ ಅನೇಕ ಸೆಲೆಬ್ರಿಟಿಗಳು (Celebrities) ಸಿನಿಮಾ ರಂಗದ ಜೊತೆ ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಹೌದು, ಬ್ಯಾಕಪ್‌ ಯೋಜನೆಗಳನ್ನು ಹೊಂದಿರುವುದು ಯಾವಾಗಲೂ ಒಳ್ಳೆಯದು. ಅದರಲ್ಲೂ ಬಾಲಿವುಡ್‌ ನ (Bollywood) ಸಾಕಷ್ಟು ನಟ ನಟಿಯರು ಯಶಸ್ವಿ (Success) ಉದ್ಯಮವನ್ನೂ ನಡೆಸ್ತಿದ್ದಾರೆ. ಇದರಿಂದ ಉದ್ಯಮಿಗಳಾಗಿಯೂ ಅವರು ಲಾಭ ಗಳಿಸುತ್ತಿದ್ದಾರೆ.


ನಿಮ್ಮ ಕೆಲಸದಲ್ಲಿ ನೀವು ಯಶಸ್ಸಿನ ಉತ್ತುಂಗದಲ್ಲಿದ್ದರೂ ಭವಿಷ್ಯವು ಎಷ್ಟು ಅನಿರೀಕ್ಷಿತವಾಗಿರಬಹುದು ಎಂಬುದನ್ನು ಪರಿಗಣಿಸಿ, ಹೆಚ್ಚುವರಿ ಆದಾಯದ ಮೂಲವನ್ನು ಹೊಂದುವುದು ಯಾವಾಗಲೂ ಒಳ್ಳೆಯದು. ಅದರಲ್ಲೂ ಚಿತ್ರೋದ್ಯಮದಲ್ಲಿ ಇಂಥ ಯೋಚನೆ ಹೆಚ್ಚು ಅನಿವಾರ್ಯ ಕೂಡ.


ಅಲ್ಲಿ ಅದೃಷ್ಟವು ರಾತ್ರೋರಾತ್ರಿ ಕೈ ಹಿಡಿದರೆ ಅದೇ ಅದೃಷ್ಟ ದಿನಬೆಳಗಾಗುವುದರಲ್ಲಿ ಕೈಕೊಟ್ಟು ಹೋಗಬಹುದು. ಆದ್ದರಿಂದ ನಟರಾದ ಶಾರುಖ್ ಖಾನ್, ಅಕ್ಷಯ್‌ ಕುಮಾರ್‌, ಅಜಯ್ ದೇವಗನ್, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ ಮುಂತಾದವರು ಅತ್ಯಂತ ಯಶಸ್ವಿ ಸೈಡ್‌ ಬ್ಯುಸಿನೆಸ್‌ ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗಿದ್ರೆ ಯಾವ್ಯಾವ ನಟ ನಟಿಯರು ಯಾವ ಯಾವ ಸೈಡ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ ಅನ್ನೋದನ್ನು ನೋಡೋಣ.


ಶಾರುಖ್ ಖಾನ್


ಬಾಲಿವುಡ್‌ ಬಾದ್‌ ಷಾ ಅಂತಲೇ ಕರೆಯಿಸಿಕೊಳ್ಳುವ ಶಾರುಖ್ ಖಾನ್ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಹೊಂದಿದ್ದಾರೆ. ಅಲ್ಲದೇ ಅವರು CPL ತಂಡವನ್ನು, ಫುಟ್ಬಾಲ್ ತಂಡವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ, ವಿದೇಶದಲ್ಲಿ ರಿಯಲ್ ಎಸ್ಟೇಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಅವರು ಬರೀ ನಟರಷ್ಟೇ ಅಲ್ಲ, ಬದಲಿಗೆ ಲಾಭದಾಯಕ ಉದ್ಯಮಿಯೂ ಹೌದು.




ಇದನ್ನೂ ಓದಿ: Health Insurance: ಕಾಸ್ಮೆಟಿಕ್ಸ್​​ ಚಿಕಿತ್ಸೆಗೂ ಇನ್ಶೂರೆನ್ಸ್​ ಕ್ಲೈಮ್ ಆಗುತ್ತಾ? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ


ಸುನೀಲ್ ಶೆಟ್ಟಿ
ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಕೂಡ ನಟನೆಯ ಜೊತೆಗೆ ಉದ್ಯಮ ನಡೆಸ್ತಿದ್ದಾರೆ. ಸುನೀಲ್‌ ಶೆಟ್ಟಿ ಹಲವಾರು ನೈಟ್‌ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಾಗಿದ್ದಾರೆ. ಅಲ್ಲದೇ, ಅವರು ಕೆಲವು ಹೈ ಎಂಡ್‌ ಗಾರ್ಮೆಂಟ್‌ ಬೊಟಿಕ್‌ ಸಹ ನಡೆಸುತ್ತಾರೆ.




ಮಾಧುರಿ ದೀಕ್ಷಿತ್
ಬಾಲಿವುಡ್‌ ನ ಎವರ್‌ ಗ್ರೀನ್‌ ನಟಿ ಮಾಧುರಿ ದೀಕ್ಷಿತ್ ನೆನೆ ಹಿರಿತೆರೆ ಹಾಗೂ ಕಿರುತೆರೆಯ ಶೋಗಳಲ್ಲಿ ಬ್ಯುಸಿಯಾಗಿರ್ತಾರೆ. ಜೊತೆಗೆ ತಮ್ಮದೇ ಆದ ನೃತ್ಯ ಅಕಾಡೆಮಿಯನ್ನು ಮುನ್ನಡೆಸುತ್ತಾರೆ. “ಡಾನ್ಸ್‌ ವಿಥ್‌ ಮಾಧುರಿ” ಸಖತ್‌ ಜನಪ್ರಿಯವಾಗಿದೆ.


ಅಜಯ್ ದೇವಗನ್
ಇನ್ನು ಬಾಲಿವುಡ್‌ ನಟ ಅಜಯ್ ದೇವಗನ್ ಇವತ್ತಿಗೂ ಬೇಡಿಕೆಯ ನಟ. ಇವರು ಗುಜರಾತ್‌ನಲ್ಲಿ ಚರಣಕ ಸೋಲಾರ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ಅವರು, ಒಂದೆರಡು ಲಾಭದಾಯಕ ಆಸ್ತಿ ಹೂಡಿಕೆಯನ್ನೂ ಮಾಡಿದ್ದರು.


ಶಿಲ್ಪಾ ಶೆಟ್ಟಿ
ಮಂಗಳೂರಿನ ಬೆಡಗಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಈ ಹಿಂದೆ ಪತಿ ರಾಜ್ ಕುಂದ್ರಾ ಅವರೊಂದಿಗೆ ರಾಜಸ್ಥಾನ್ ರಾಯಲ್ಸ್ ಐಪಿಎಲ್ ತಂಡವನ್ನು ನಡೆಸಿದ್ದರು. ಇನ್ನು ಶಿಲ್ಪಾ ಶೆಟ್ಟಿ ಯೋಗ ತುಂಬಾ ಫೇಮಸ್.‌ ಇವರ ಯೋಗ ಪುಸ್ತಕಗಳು ಮತ್ತು ವೀಡಿಯೊಗಳಿಗೆ ಅಪಾರ ಬೇಡಿಕೆಯಿದ್ದು ಅವರು ಅದನ್ನು ಮಾರಾಟ ಮಾಡಿ ಲಾಭ ಗಳಿಸುತ್ತಾರೆ.




ಇದನ್ನೂ ಓದಿ:  Retirement: ಮೈಕ್ರೋಸಾಫ್ಟ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ: 3 ಮಿಲಿಯನ್‌ ಸಂಪಾದಿಸಿ ನಿವೃತ್ತಿ ಪಡೆದ ಯುವಕ!


ಅಕ್ಷಯ್ ಕುಮಾರ್


ಬಾಲಿವುಡ್‌ ನ ಖಿಲಾಡಿ ಅಂತಲೇ ಕರೆಯಿಸಿಕೊಳ್ಳುವ ನಟ ಅಕ್ಷಯ್ ಕುಮಾರ್ ಹಲವಾರು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್‌ನಿಂದ ಹಣಕಾಸುವರೆಗೆ, ಅವರು ತಮ್ಮ ಹಣವನ್ನು ಎಲ್ಲಿ ಮುಖ್ಯವೋ ಅಲ್ಲಿ ಹೂಡಿಕೆ ಮಾಡುತ್ತಾರೆ. ಹೀಗಾಗಿ ನಟನೆಯಿಂದ ಮಾತ್ರವಲ್ಲ ಬೇರೆ ಬೇರೆ ವ್ಯವಹಾರಗಳಿಂದಲೂ ಅವರಿಗೆ ಲಾಭ ಬರುತ್ತದೆ.

Published by:Ashwini Prabhu
First published: