• Home
  • »
  • News
  • »
  • entertainment
  • »
  • Brahmastra Trailer: ಬ್ರಹ್ಮಾಸ್ತ್ರ ಟ್ರೈಲರ್​ಗೆ ಬಾಲಿವುಡ್​ ಶೇಕ್​! ರಣಬೀರ್​ನ ಶಿವನ ಅವತಾರಕ್ಕೆ ಫ್ಯಾನ್ಸ್​ ಫಿದಾ

Brahmastra Trailer: ಬ್ರಹ್ಮಾಸ್ತ್ರ ಟ್ರೈಲರ್​ಗೆ ಬಾಲಿವುಡ್​ ಶೇಕ್​! ರಣಬೀರ್​ನ ಶಿವನ ಅವತಾರಕ್ಕೆ ಫ್ಯಾನ್ಸ್​ ಫಿದಾ

ಬ್ರಹ್ಮಾಸ್ತ್ರ

ಬ್ರಹ್ಮಾಸ್ತ್ರ

ರಣಬೀರ್ ಕಪೂರ್ (Ranbir Kapoor)  ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ' (Brahmastra) ಟ್ರೈಲರ್ (Trailer) ಬಿಡುಗಡೆಯಾಗಿದೆ. 

  • Share this:ರಣಬೀರ್ ಕಪೂರ್ (Ranbir Kapoor)  ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ' (Brahmastra) ಟ್ರೈಲರ್ (Trailer) ಬಿಡುಗಡೆಯಾಗಿದೆ. ರಣಬೀರ್ ಕಪೂರ್, ಅಮಿತಾಭ್ ಬಚ್ಚನ್ (Amitabh Bachchan), ಆಲಿಯಾ ಭಟ್, ನಾಗಾರ್ಜುನ ಮತ್ತು ಮೌನಿ ರಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಮೊದಲ ಅಧಿಕೃತ ಟ್ರೇಲರ್ ಇಂದು ಸ್ಟಾರ್​ ಸ್ಡುಡಿಯೋದಲ್ಲಿ ಬಿಡುಗಡೆ ಆಗಿದೆ.  ಚಿತ್ರದ ಟ್ರೈಲರ್ ಯಾವುದುದೇ ಹಾಲಿವುಡ್​ ಸಿನಿಮಾಗೂ ಕಮ್ಮಿ ಇಲ್ಲದಂತೆ ಮಾಡಲಾಗಿದ್ದು, ಟ್ರೈಲರ್ ಬಿಡುಗಡೆಯಿಂದ ಚಿತ್ರದ ಮೇಳಿನ ನಿರೀಕ್ಷೆ ದುಪ್ಪಟ್ಟು ಆಗಿದೆ. ಚಿತ್ರದ ಕಥೆಯು ಶಿವನನ್ನು ಆಧರಿಸಿದೆ, ಅವರ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಿದ್ದಾರೆ. ಶಿವನು ಇಶಾಳನ್ನು ಪ್ರೀತಿಸುತ್ತಿದ್ದಾನೆ. ಇಶಾ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ.


'ಬ್ರಹ್ಮಾಸ್ತ್ರ' ಟ್ರೈಲರ್ ರಿಲೀಸ್:


ಇಂದು ಬಿಡುಗಡೆಯಾಗಿರುವ 'ಬ್ರಹ್ಮಾಸ್ತ್ರ' ಟ್ರೈಲರ್ ಸಖತ್ ಸ್ಟ್ರಾಂಗ್​ ಇದ್ದು, ಶಿವನ ಕಥೆಯನ್ನು ಇದರಲ್ಲಿ ಹೇಳಲಾಗಿದೆ. ಅದ್ಭುತ ಮೇಕಿಂಗ್ ಟ್ರೈಲರ್​ ನಲ್ಲಿ ಎದ್ದು ಕಾಣುತ್ತಿದ್ದು, ಚಿತ್ರಮಂದಿರದಲ್ಲಿ ಚಿತ್ರದ ಸಂಪೂರ್ಣ ಝಲಕ್ ವೀಕ್ಷಿಸಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಟ್ರೈಲರ್ ಬಿಡುಗಡೆ ಕುರಿತು ಸ್ಟಾರ್​ ಸ್ಟುಡಿಯೋ ಅಧಿಕೃತವಾಗಿ ಟ್ವೀಟ್​ ಮಾಡಿದ್ದು, ‘ಹಿಂದೆದೂ ನೋಡಿರದ ಜಗತ್ತನ್ನು ಪ್ರವೇಶಿಸಲು ಸಿದ್ದರಾಗಿ‘ ಎಂದು ಬರೆದುಕೊಂಡಿದೆ. ಚಿತ್ರವು 2022 ಸಪ್ಟೆಂಬರ್ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.ಅದ್ಧೂರಿಯಾಗಿದೆ ರಣಬೀರ್ ಬ್ರಹ್ಮಾಸ್ತ್ರ:


ಹೌದು, ಬಾಲಿವುಡ್ ಸಿನಿರಂಗದಲ್ಲಿ ವಿನೂತನ ಪ್ರಯತ್ನ ಮಾಡಿರುವ ನಿರ್ದೇಶಕ ಆಯನ್ ಮುಖರ್ಜಿ ಬ್ರಹ್ಮಾಸ್ತ್ರ ಸಿನಿಮಾವನ್ನು ಅದ್ಧೂರಿಯಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಮತ್ತೆ ಬಾಲಿವುಡ್​ಗೆ ಈ ಚಿತ್ರದ ಮೂಲಕ ಕಳೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಡಂಡಿದ್ದಾರೆ.
ಶಿವನಿಗೆ ಶಕ್ತಿಯು ರಣಬೀರ್​ಗೆ ದೊರಕುತ್ತದೆ. ಇದನ್ನು ನದಿಯ ದಡದಲ್ಲಿ ಅವನು ಅರಿತುಕೊಳ್ಳುತ್ತಾನೆ. ನಂತರ ಅವನಿಗೆ ಬ್ರಹ್ಮಾಸ್ತ್ರಕ್ಕೂ ನಿಗೂಢವಾದ ಸಂಬಂಧವಿದೆ ಮತ್ತು ಅವನೊಳಗೆ ಇನ್ನೂ ಅರ್ಥವಾಗದ ದೊಡ್ಡ ಶಕ್ತಿಯಿದೆ ಎಂದು ತಿಳಿಯುತ್ತದೆ. ಹೀಗೇ ಕಥೆಯು ಮುಂದುವರೆಯುತ್ತದೆ. ಟ್ರೈಲರ್​ ನಲ್ಲಿ ಅಮಿತಾಬ್​ ಅವರ ಕಂಚಿನ ಕಂಠ ಕೇಳುಗರನ್ನು ಮೋಡಿ ಮಾಡುತ್ತದೆ.


ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಬ್ರಹ್ಮಾಸ್ತ್ರ:


ಇನ್ನು,  ಬ್ರಹ್ಮಾಸ್ತ್ರ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಇದು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಅವರ ವೃತ್ತಿ ಜೀವನದಲ್ಲಿ ಈ ಚಿತ್ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಮೂಲಕ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್​ ಒನ್​: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ​’ ಎಂದು ಆಲಿಯಾ ಭಟ್​ ಕನ್ನಡಲ್ಲೇ ಟ್ವೀಟ್​ ಮಾಡಿದ್ದರು.


ಇದನ್ನೂ ಓದಿ: Brahmastra ಸಿನಿಮಾ ರಿಲೀಸ್​​ಗೆ 100 ದಿನ ಬಾಕಿ! ಚಿತ್ರತಂಡದಿಂದ ಫ್ಯಾನ್ಸ್​ಗೆ ಸಿಕ್ತು ಗುಡ್​​ನ್ಯೂಸ್​


ಭಾರೀ ಸಂಭಾವನೆ ಪಡೆದುಕೊಂಡ ರಣಬೀರ್​ & ಆಲಿಯಾ!


ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ್ ಸಿನಿಮಾ ದೊಡ್ಡ ಬಜೆಟ್ ನಲ್ಲಿ ಸಿದ್ಧವಾದ ಸಿನಿಮಾ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆಗೆ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿತ್ತು. 2018ರಲ್ಲಿ ಸೆಟ್ಟೇರಿದ ಬ್ರಾಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿಸಿದ್ದಾರೆ. ರಣಬೀರ್ ಕಪೂರ್ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಯಕಿಯಾಗಿ ಮಿಂಚಿರುವ ರಣಬೀರ್ ಪತ್ನಿ, ಸ್ಟಾರ್ ನಟಿ ಅಲಿಯಾ ಭಟ್ 12 ಕೋಟಿ ರೂಪಾಯಿ ಪಡೆದಿದ್ದಾರಂತೆ.


Published by:shrikrishna bhat
First published: