HOME » NEWS » Entertainment » BOLLYWOOD ACTOR VARUN DHWAN HAS CHANGED HIS TWITTER ACCOUNT NAME FOR THE PROMOTION OF HIS NEW MOVIE KALANK

ಟ್ವಿಟರ್​ ಖಾತೆಯ ಹೆಸರು ಬದಲಿಸಿಕೊಂಡ ಬಾಲಿವುಡ್​ ನಟ ವರುಣ್​ ಧವನ್​..!

ಬಾಲಿವುಡ್​ನ ಬಹು ನಿರೀಕ್ಷಿತ ಮಲ್ಟಿ ಸ್ಟಾರರ್​ ಸಿನಿಮಾ ಕಳಂಕ್​ನ ಟೀಸರ್ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಈ ಮಲ್ಟಿಸ್ಟಾರರ್​ ಸಿನಿಮಾದಲ್ಲಿ ಸಂಜಯ್​ ದತ್​, ಮಾಧುರಿ ದೀಕ್ಷಿತ್​ 21 ವರ್ಷಗಳ ನಂತರ ತೆರೆ ಹಂಚಿಕೊಂಡಿದ್ದು, ಅಲಿಯಾ ಭಟ್​, ವರುಣ್​ ಧವನ್​, ಆದಿತ್ಯ ರಾಯ್​ ಕಪೂರ್​, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ವರುಣ್​ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅದಕ್ಕಾಗಿ ಅವರು ಏನೇನು ಮಾಡುತ್ತಿದ್ದಾರೆ ಗೊತ್ತಾ?

Anitha E | news18
Updated:March 13, 2019, 6:01 PM IST
ಟ್ವಿಟರ್​ ಖಾತೆಯ ಹೆಸರು ಬದಲಿಸಿಕೊಂಡ ಬಾಲಿವುಡ್​ ನಟ ವರುಣ್​ ಧವನ್​..!
ಸಿನಿಮಾದ ಪ್ರಚಾರಕ್ಕೆ ವಿನೂತ ಪ್ರಯತ್ನದಲ್ಲಿ ನಟ ವರುಣ್ ಧವನ್​
  • News18
  • Last Updated: March 13, 2019, 6:01 PM IST
  • Share this:
- ಅನಿತಾ ಈ, 

ವರುಣ್​ ಧವನ್​ ಆಗಾಗ ಏನಾದರೂ ಒಂದು ಕೆಲಸ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅವರು ಮಾಡುವ ವಿಭಿನ್ನ ಕೆಲಸಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ.

ಇದನ್ನೂ ಓದಿ: Video: ಸಿನಿಮಾ ಪ್ರಚಾರಕ್ಕಾಗಿ ಸಲೂನ್​ನಲ್ಲಿ ನಟ ವರುಣ್​ ಧವನ್​ ಮಾಡಿದ್ದೇನು ಗೊತ್ತಾ?

ಈ ಹಿಂದೆ ತಮ್ಮ ಸಿನಿಮಾ 'ಸೂಯಿ ಧಾಗ'ದ ಪ್ರಚಾರಕ್ಕಾಗಿ ವರುಣ್​ ಧವನ್​ ಮುಂಬೈನ ರಸ್ತೆಗಳಲ್ಲಿ ಸೈಕಲ್​ ತುಳಿಯುತ್ತಾ ಬಂದು ಸಲೂನ್​ನಲ್ಲಿ ಶೇವ್​ ಮಾಡಿಸಿಕೊಂಡಿದ್ದರು. ಈ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಪ್ರಕಟಿಸಿದ್ದರು.



 




View this post on Instagram




 

‪Mauji ki mooch 👨🏻 bhi hai made in INDIA #SuiDhaagaMadeInIndia @yrf @suidhaagafilm


A post shared by Varun Dhawan (@varundvn) on






ಸದ್ಯ ಬಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ 'ಕಳಂಕ್​'ನಲ್ಲಿ ವರುಣ್​ ಧವನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಟೀಸರ್​ ನಿನ್ನೆಯಷ್ಟೆ ಬಿಡುಗಡೆಯಾಗಿದ್ದು, ಸಿನಿಮಾ ಏಪ್ರಿಲ್​ 17ಕ್ಕೆ ತೆರೆ ಕಾಣಲಿದೆ.

ಆದರೆ ವರುಣ್​ ಈಗಲೇ ತಮ್ಮ ಸಿನಿಮಾದ ಪ್ರಮೋಷನ್​ ಕೆಲಸ ಆರಂಭಿಸಿದ್ದಾರೆ.  ಅದಕ್ಕಾಗಿ ಮೊದಲು ಅವರು ಮಾಡಿರುವ ಕೆಲಸ ತಮ್ಮ ಟ್ವಿಟರ್​ನ ಹೆಸರನ್ನು ವರುಣ್​ ಧವನ್​ ಬದಲಾಗಿ ವರುಣ್​ ಜಫರ್​ ಧವನ್​ ಎಂದು ಬದಲಾಯಿಸಿಕೊಂಡಿದ್ದಾರೆ.

ಟ್ವಿಟರ್​ ಖಾತೆಯ ಹೆಸರು ಬದಲಾಯಿಸಿಕೊಂಡ ನಟ ವರುಣ್​ ಧವನ್​


ಈ ಸಿನಿಮಾದಲ್ಲಿ ವರುಣ್,​ ಜಫರ್​ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ಅದನ್ನೇ ತಮ್ಮ ಟ್ವಿಟರ್​ ಖಾತೆಯ ಹೆಸರಿಗೂ ಸೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಿ ಹೋದರೂ ಅವರು ಕಣ್ಣಿಗೆ ಸೂರ್ಮ ಹಚ್ಚಿಕೊಂಡೇ ಹೋಗುತ್ತಿದ್ದಾರಂತೆ.

ಒಟ್ಟಾರೆ ಸಿನಿಮಾದಲ್ಲಿ ಅಭಿನಯಿಸಿದಷ್ಟಕ್ಕೆ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನೆ ಕೂರುವ ಕಲಾವಿದರ ಗುಂಪಿಗೆ ವರುಣ್​ ಸೇರುವುದಿಲ್ಲ. ತಾವು ಅಭಿನಯಿಸಿದ ಸಿನಿಮಾವನ್ನ ತನ್ನದೇ ಚಿತ್ರ ಎಂದು ಭಾವಿಸಿ, ಅವರೂ ಅದರ ಪ್ರಚಾರಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ.
First published: March 13, 2019, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories