ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹ್ಮಾನ್ ಶಾಲ್ ಕಾಲು ಎಳೆದ ಸುಷ್ಮಿತಾ ಸೇನ್: ಮಾಜಿ ವಿಶ್ವ ಸುಂದರಿಗೆ ನೆಟ್ಟಿಗರ ಸಾಥ್

SUSHMITHA SEN: ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣದ ಕೊಡುಗೆಗಾಗಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರಿಗೆ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವತಃ ಸುಷ್ಮಿತಾ ಅವರೇ ಈ ವಿಷಯವನ್ನು ಇನ್​​ಸ್ಟಾಗ್ರಾಂ ಲೈವ್​ನಲ್ಲಿ ಶನಿವಾರ ಹಂಚಿಕೊಂಡಿದ್ದಾರೆ.

ಸುಷ್ಮಿತಾ ಸೇನ್

ಸುಷ್ಮಿತಾ ಸೇನ್

  • Share this:
ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ತಮ್ಮದೇ ವಿಭಿನ್ನ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಮೂಲಕ ತಮ್ಮ ನಡೆ ಸದಾ ಆರೋಗ್ಯಪೂರ್ಣವಾಗಿರುತ್ತದೆ, ಅಲ್ಲದೇ ಅದು ವಿಭಿನ್ನತೆಯನ್ನು ಕಾಪಾಡಿಕೊಂಡಿರುತ್ತದೆ ಎನ್ನುವುದನ್ನು ತಮ್ಮ ಪೋಸ್ಟ್ ಮೂಲಕ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಸುಷ್ಮಿತಾ ಅವರ ದತ್ತು ಮಕ್ಕಳಿರಬಹುದು ಅಥವಾ ಸುಷ್ಮಿತಾ ಅವರ ಗೆಳೆಯ ರೋಹ್ಮಾಲ್ ಶಾಲ್ ಇರಬಹುದು.. ಸುಷ್ಮಿತಾ ಅವರೊಟ್ಟಿಗೆ ಕಳೆಯುವ ಮಧುರ ಕ್ಷಣಗಳಿಗೆ ಬಹುತೇಕ ಬಾರಿ ಸಾಕ್ಷಿಯಾಗಿರುತ್ತಾರೆ. ಇದೇ ನಿಟ್ಟಿನಲ್ಲಿ ಈ ಬಾರಿಯೂ ಸುಷ್ಮಿತಾ ಗೆಳೆಯ ರೋಹ್ಮನ್ ಶಾಲ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ರೋಹ್ಮಲ್ ಮುಜುಗರದ ಮುದ್ದೆಯಾಗಿ ನೆಟ್ಟಿಗರಿಂದ ಕ್ಯೂಟ್ ಎನಿಸಿಕೊಂಡಿದ್ದಾರೆ.

ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣದ ಕೊಡುಗೆಗಾಗಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರಿಗೆ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವತಃ ಸುಷ್ಮಿತಾ ಅವರೇ ಈ ವಿಷಯವನ್ನು ಇನ್​​ಸ್ಟಾಗ್ರಾಂ ಲೈವ್​ನಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಮಕ್ಕಳಾದ ರೇನೇ ಮತ್ತು ಅಲಿಸಾ ಜೊತೆಗೆ ತಮ್ಮ ಗೆಳೆಯ ರೋಹ್ಮನ್ ಶಾಲ್, ಪ್ರೀತಮ್ಮಾ ರೊಂದಿಗೆ ಈ ಸಂಭ್ರಮವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಶಸ್ತಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡಿದ್ದಾರೆ. 'ನಾನು ಈ ಪ್ರಶಸ್ತಿಯನ್ನು ಭಾರತದ ಬೆನ್ನೆಲುಬಾದ ಮಹಿಳೆಯರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ' ಎಂದು ಹೇಳಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ..?

‘ಆರ್ಯ ಸೀಸನ್ 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರಣ ಲೈವ್ ಬರುವುದಕ್ಕೆ ಸಾಧ್ಯವಾಗಿಲ್ಲ ಎಂದು ಕನ್ಫೆಸ್ ಮಾಡುತ್ತಲೇ ಮಾತು ಆರಂಭಿಸಿದ ಸುಷ್ಮಿತಾ ನಾವೀಗ ಲಾಕ್‌ಡೌನ್‌ನಲ್ಲಿದ್ದೇವೆ. ಸುರಕ್ಷಿತವಾಗಿರಿ ಮನೆಯಲ್ಲಿರಿ ಎಂದು ಮಾತು ಮುಂದುವರೆಸಿದ್ದಾರೆ. ನಿಜವಾಗಿಯೂ ನಿಮ್ಮ ಬಳಿ ಈ ವಿಷಯ ಹಂಚಿಕೊಳ್ಳಲು ಖುಷಿಯಾಗುತ್ತದೆ. ಇದು ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಕ್ಷಣ. 'ಚಾಂಪಿಯನ್ಸ್ ಆಫ್ ಚೇಂಜ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವುದು ನನಗೆ ಖುಷಿ ನೀಡಿದೆ. ಮುಖ್ಯವಾಗಿ ನನ್ನ ತಂದೆಗೆ ಬಹಳ ಸಂತಸ ನೀಡುತ್ತದೆ. ನನ್ನ ತಂದೆ ಭಾರತೀಯ ವಾಯುಪಡೆಯ ಅಧಿಕಾರಿಯಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ' ಎಂದು ತಿಳಿಸಿದರು. ಜೊತೆಗೆ ತಮ್ಮ ಪ್ರಶಸ್ತಿ ಫಲಕವನ್ನೂ ಸಹ ಹಂಚಿಕೊಂಡರು.


'ಹೆಣ್ಣಾಗಿ ಹುಟ್ಟುವುದು ದೇವರ ಉಡುಗೊರೆಯ ಫಲ. ಅದರಲ್ಲೂ ಮಹಿಳಾ ಸಬಲೀಕರಣ ಎಲ್ಲರ ನೈತಿಕ ಹೊಣೆ. ಈ ಕೆಲಸವನ್ನು ಗುರುತಿಸಿ ಅದಕ್ಕೆ ಪ್ರಶಸ್ತಿಯ ಗೌರವ ನೀಡುವುದು ನಮ್ಮನ್ನು ಇನ್ನಷ್ಟು ವಿನಯವಂತರನ್ನಾಗಿ ಮಾಡುತ್ತದೆ. ಇನ್ನು ಈ ಪ್ರಶಸ್ತಿಯ ಬಗ್ಗೆ ನನ್ನ ಮಕ್ಕಳು ಬಹಳ ಸಂತೋಷವಾಗಿದ್ದಾರೆ. ಈ ವಿಷಯವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳದಿದ್ದರೆ ನಿಜಕ್ಕೂ ಇದು ಅಪೂರ್ಣವೆನಿಸುತ್ತದೆ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ

ಇದು ಸುಷ್ಮಿತಾ ಅವರ ಸಾಧನೆಯ ವಿಷಯವಾದರೆ, ಸುಷ್ಮಿತಾ ಅವರ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನೂ ಸಹ ಇದೇ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಸುಷ್ಮಿತಾ ಅವರ ಗೆಳೆಯ ರೋಹ್ಮಾಲ್ ತಮ್ಮ ಗಡ್ಡವನ್ನು ಶೇಪ್ ಮಾಡಲು ಹೋದಾಗ ಎಡವಟ್ಟಾಗಿ ಅವರ ಕೆನ್ನೆಯ ಭಾಗ ಹೇಗೆ ಕಾಣುತ್ತಿದೆ ಎನ್ನುವುದನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಕೈಗಳ ಮೂಲಕ ರೋಹ್ಮಾನ್ ಕೆನ್ನೆಯನ್ನು ಮುಚ್ಚಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಈ ಲವ್ಲೀ ಮೂಮೆಂಟ್ಸ್ ನೆಟ್ಟಿಗರಿಗೆ ಭಾರೀ ಖುಷಿ ನೀಡಿದೆ.
ಇನ್ನು ಪ್ರಶಸ್ತಿ ಸ್ವೀಕರಿಸಿದ್ದಕ್ಕಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಿಂದ ಸುಶ್ಮಿತಾ ಅವರನ್ನು ಟ್ವಿಟ್ಟರ್ ಮೂಲಕ ಅಭಿನಂದಿಸಲಾಗಿದೆ. ಮಿಸ್ ಯೂನಿವರ್ಸ್ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿ ಮಿಸ್ ಯೂನಿವರ್ಸ್ ಪೋಸ್ಟ್‌ಗೆ ಸುಶ್ಮಿತಾ ಉತ್ತರಿಸಿದ್ದು, 'ಜೀವನ ಚಕ್ರದಂತೆ ಸುತ್ತುತ್ತಲೇ ಪೂರ್ಣತೆಯನ್ನು ಪಡೆಯುತ್ತದೆ' ಎಂದಿದ್ದಾರೆ. ಅಲ್ಲದೇ ಸುಷ್ಮಿತಾ ತಮಗೆ 18 ವರ್ಷಗಳಾಗಿದ್ದಾಗ ತಮ್ಮ ನೆನಪನ್ನು ಸ್ಮರಿಸುತ್ತಾ ಪುಳಕಗೊಂಡರು. ಸುಷ್ಮಿತಾ ಸೇನ್ 1994 ರಲ್ಲಿ ಮಿಸ್ ಇಂಡಿಯಾ ಆಗಿದ್ದು, ಆ ನಂತರ ಅದೇ ವರ್ಷ ಮಿಸ್ ಯೂನಿವರ್ಸ್ ಪೀಜೆಂಟ್ ಗೆದ್ದಿದ್ದು ಈಗ ಇತಿಹಾಸ.

ಇನ್ನು ರೋಹ್ಮಾನ್ ಅವರೊಟ್ಟಿಗೆ 2018 ರಿಂದ ಡೇಟಿಂಗ್‌ನಲ್ಲಿರುವ ಸುಷ್ಮಿತಾ ಅವರು ಸದ್ಯ ‘ಆರ್ಯ 2 ವೆಬ್’ ಸೀರಿಸ್​​ನಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಷ ಆರ್ಯ ಸೀಸನ್ 1 ಬಿಡುಗಡೆಯಾಗಿತ್ತು.
First published: