ಬಾಲಿವುಡ್ ನಟಿ (Bollywood Actre) ಸನ್ನಿ ಲಿಯೋನ್ (Sunny Leone) ಸದ್ಯ ಅಭಿಮಾನಿಗಳ (Fans) ಹಾಟ್ ಫೇವರೆಟ್ (Favorite). ಬಾಲಿವುಡ್ ಹಾಟ್ ಬ್ಯೂಟಿ ಸನ್ನಿಲಿಯೋನ್ ಕಳೆದ ರಾತ್ರಿ ಬೆಂಗಳೂರಿಗೆ ಆಗಮಿದ್ದರು. ಕನ್ನಡದ ’ಚಾಂಪಿಯನ್’ (Champion) ಸಿನಿಮಾದ ಆಡಿಯೋ ಲಾಂಚ್ ಗಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದಿದ್ದರು. ಸ್ಪೋರ್ಟ್ಸ್ ಕಥೆ ಆಧಾರಿತ ಚಾಂಪಿಯನ್ ಸಿನಿಮಾದಲ್ಲಿ ಸಚಿನ್ ಧನಪಾಲ್ ನಟಿಸಿದ್ದಾರೆ. ಈ ಚಿತ್ರದಲ್ಲಿನ ವಿಶೇಷ ಹಾಡಿಗೆ ಸನ್ನಿಲಿಯೋನ್ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ವಾಪಸಾಗಿದ್ದಾರೆ. ಡಿಂಗರ್ ಬಿಲ್ಲಿ ಅನ್ನೋ ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದು, ಇದೀಗ ಈ ಸಾಂಗ್ ನ ಲಿರೀಕಲ್ ವಿಡಿಯೋ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ.
ಡಿಂಗರ ಬಿಲ್ಲಿ ಅವತಾರ ತಾಳಿದ ಸನ್ನಿ:
ಸನ್ನಿ ಲಿಯೋನ್ ಎಂದಾಕ್ಷಣ ಅವರ ಬ್ಯೂಸಟಿ ನೆನಪಿಗೆ ಬರುತ್ತದೆ. ಅಂತಹ ಬಳಕುವ ಚೆಲುವೆ ಸನ್ನಿ ಇದೀಗ ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ಡಿಂಗರ್ ಬಿಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಇದರ ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ವಡಿಯೋದಲ್ಲಿ ಸಖತ್ ಹಾಟ್ ಆಗಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ. ಇನ್ನು, ಸನ್ನಿ ಲಿಯೋನಿ ಐಟಂ ಸಾಂಗ್ ಡಿಂಗರ ಬಿಲ್ಲಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಶಾಂಕ್ ಮತ್ತು ಇಂದು ನಾಗರಾಜ್ ಹಾಡಿಗೆ ಕಂಠದಾನ ಮಾಡಿದ್ದು, ಇಮ್ರಾನ್ ಸರ್ದಾರಿಯಾ ಸನ್ನಿ ಬಳಿ ಸಖತ್ ಹೆಜ್ಜೆ ಹಾಕಿಸಿದ್ದಾರೆ.
ಸಚಿನ್ ಧನಪಾಲ್ ಗೆ ನಾಯಕಿಯಾಗಿ ಅದಿತಿ:
ಇನ್ನು, ಚಾಂಪಿಯನ್ ಸಿನಿಮಾಕ್ಕೆ ಶಾಹುರಾಜ್ ಶಿಂಧೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸಚಿನ್ ಧನ್‌ಪಾಲ್ ನಾಯಕ ನಟನಾಗಿ ಕಾಣಿಸಿಕೊಂಡರೆ, ಧನ್ಪಾಲ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಹೆಜ್ಜೆಹಾಕಲಿದ್ದಾರೆ. ಇನ್ನು, ಚಿತ್ರಕ್ಕೆ ಶಿವಾನಂದ್ ಎಸ್ ಬಂಡವಾಳ ಹೂಡಿದ್ದಾರೆ. ಅದಲ್ಲದೇ ಚಿತ್ರದ ವಿಶೇಷ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿರುವುದು ಚಿತ್ರಕ್ಕೆ ಮತ್ತಷ್ಟು ಉತ್ತಮ ಪ್ರಚಾರ ಸಿಕ್ಕಂತಾಗಿದೆ.
ಇದನ್ನೂ ಓದಿ: Sunny Leone: ಈ ಕೇಕ್ ತಿನ್ನೋದ್ರಿಂದಲೇ ಸನ್ನಿ ಹಾಗಿರೋದಂತೆ, ಬ್ಯೂಟಿ ಸೀಕ್ರೆಟ್ ಹೇಳಿದಾರೆ ನೋಡಿ!
ಡಿಂಗ್ರಿ ಬಿಲ್ಲಿ ಸಾಂಗ್ ನನ್ನ ಫೇವರೀಟ್ ಸಾಂಗ್:
ಚಾಂಪಿಯನ್ ಚಿತ್ರದ ಡಿಂಗ್ರಿ ಬಿಲ್ಲಿ ಸಾಂಗ್ ನನ್ನ ಫೇವರೀಟ್ ಆಗಿದೆ. ಮನೆಯಲ್ಲಿ ನನ್ನ ಮಕ್ಕಳು ಕೂಡ ಡಿಂಗ್ರಿ ಬಿಲ್ಲಿ ಹಾಡು ಹಾಡ್ತಾರೆ ಐ ಲವ್ ದ ಸಾಂಗ್ ಎಂದು ಹೇಳಿದ್ದಾರೆ. ಸನ್ನಿ ಈ ಹಿಂದೆ ಡಿಕೆ ಚಿತ್ರದಲ್ಲಿ ಸೇಸಮ್ಮ,ಹಾಗೂ ಲವ್ ಯು ಆಲಿಯಾ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಾಂಪಿಯನ್ ಜೊತೆ ಡಿಂಗ್ರಿ ಬಿಲ್ಲಿಯಾಗಿ ಹೆಜ್ಜೆ ಹಾಕಿದ್ದಾರೆ.
ಮಂಡ್ಯಕ್ಕೆ ಇನ್ನೊಮ್ಮೆ ಭೇಟಿ ನೀಡ್ತಿನಿ:
ಸನ್ನಿ ಲಿಯೋನ್ ಹುಟ್ಟುಹಬ್ಬದಂದು ಮಂಡ್ಯದ ಜನತೆ ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭಾಶಯ ಹೇಳಿದ್ದರು. ಇದಕ್ಕೆ ಸೇಸಮ್ಮ ಇಂದು ಮತ್ತೊಮ್ಮೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Sunny Leone: ಮಂಡ್ಯ ಹೈಕ್ಳಿಗೆ "ಶಾನೆ ಥ್ಯಾಂಕ್ಸ್" ಎಂದ 'ಸೇಸಮ್ಮ'! ಅಷ್ಟಕ್ಕೂ ಸನ್ನಿ ಲಿಯೋನ್ ಹಾಗೆಂದಿದ್ದೇಕೆ?
ಮಂಡ್ಯ ಜನತೆ ನನಗೆ ಪ್ರೀತಿಕೊಟ್ಟಿದ್ದಾರೆ ತುಂಬಾ ಖುಷಿ ಆಯಿತು. ನನ್ನ ಅಭಿಮಾನಿಗಳ ಪ್ರೀತಿಗೆ ನಾನು ಋಣಿ. ನಾನು ಮಂಡ್ಯದ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆದರೆ ಇಂದು ಅದು ಆಗುವುದಿಲ್ಲ. ಆದರೆ ಇನ್ನೊಮ್ಮೆ ಖಂಡಿತ ಭೇಟಿ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ