Men's Day: ಮೊನ್ನೆ ತಾನೇ ವಿಶ್ವ ಪುರುಷರ ದಿನವನ್ನು ಎಲ್ಲರೂ ವಿಭಿನ್ನವಾದ ರೀತಿಯಲ್ಲಿ ಆಚರಿಸಿರುತ್ತಾರೆ. ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಮಾದರಿಯಾದ ಆ ಪುರುಷನ (Role Model) ಬಗ್ಗೆ ನೆನೆಪಿಸಿಕೊಂಡಿರುತ್ತಾರೆ. ಇದಕ್ಕೆ ಬಾಲಿವುಡ್ ನಟ (Bollywood Stars) ನಟಿಯರು ಸಹ ಏನು ಹೊರತಾಗಿಲ್ಲ ಎಂದು ಹೇಳಬಹುದು. ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಇತ್ತೀಚೆಗೆ ಮನೀಷ್ ಪಾಲ್ (Manish Paul) ಆಯೋಜಿಸಿರುವ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 2’ (India's Best Dancer 2) ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟಿ ಕರಿಷ್ಮಾ ಕಪೂರ್ರೊಂದಿಗೆ (Karisma Kapoor) ಆಗಮಿಸಿದ್ದರು. ಈ ಕಾರ್ಯಕ್ರಮದ ತೀರ್ಪುಗಾರರು ನೃತ್ಯ ಸಂಯೋಜಕ ಟೆರೆನ್ಸ್ ಲೂಯಿಸ್, ಗೀತಾ ಕಪೂರ್ ಮತ್ತು ನಟಿ ಹಾಗೂ ರೂಪದರ್ಶಿ ಮಲೈಕಾ ಅರೋರಾ ಆಗಿದ್ದರು.
ತಮ್ಮ ತಂದೆ ವೀರಪ್ಪ ಶೆಟ್ಟಿ ತಮ್ಮ ಜೀವನದಲ್ಲಿ ಮಾಡಿದ ಹೋರಾಟದ ಬಗ್ಗೆ ತೆರೆದಿಡುತ್ತಾ “ತನ್ನ ತಂದೆಯ ಜೀವನವು ಎಂದಿಗೂ ಸುಲಭವಾಗಿರಲಿಲ್ಲ ಮತ್ತು ವಾಸ್ತವವಾಗಿ ಅವರು ಒಬ್ಬ ಕ್ಲೀನರ್ ಆಗಿ ಸಹ ಕೆಲಸ ಮಾಡಿದ್ದಾರೆ” ಎಂದು ಸುನೀಲ್ ಹೇಳಿದರು.
ನನ್ನ ತಂದೆ ನನ್ನ ಹೀರೋ
ಈ ಬಗ್ಗೆ ಹೆಚ್ಚು ಹಂಚಿಕೊಂಡ ಸುನೀಲ್, "ಯಾರಾದರೂ ನನ್ನನ್ನು ಕೇಳಿದಾಗಲೆಲ್ಲಾ, ನನ್ನ ಜೀವನದಲ್ಲಿ ನಿಮಗೆ ಯಾರು ಹೀರೋ ಎಂದು ಕೇಳಿದರೆ, ನಾನು ನನ್ನ ತಂದೆಯೇ ನನಗೆ ಹೀರೋ” ಎಂದು ನಾನು ಯಾವಾಗಲೂ ಹೇಳುತ್ತೇನೆ. ನನ್ನ ತಂದೆಯ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆ ಪಡುತ್ತೇನೆ, ಅವರು ಯಾವ ರೀತಿಯ ವ್ಯಕ್ತಿಯಾಗಿದ್ದರು ಮತ್ತು ಅವರು ನಡೆಸಿದ ಕಷ್ಟದ ಜೀವನದ ಬಗ್ಗೆ ಮಾತನಾಡುತ್ತಾ “ಅವರು ಕೇವಲ 9 ವರ್ಷದವನಾಗಿದ್ದಾಗ ಮುಂಬೈಗೆ ಬಂದು ಕ್ಲೀನರ್ ಆಗಿ ಕೆಲಸ ಮಾಡಿದ್ದರು" ಎಂದು ಹೇಳಿದರು.
ಇದನ್ನೂ ಓದಿ: ಮತ್ತೆ ಸ್ಯಾಂಡಲ್ವುಡ್ಗೆ ಮರಳಲಿದ್ದಾರೆ ಬಾಲಿವುಡ್ನ ಈ ಸ್ಟಾರ್ ನಟ..!
ಅವರು ಮಾಡುತ್ತಿರುವ ಕೆಲಸದ ಬಗ್ಗೆ ತಮ್ಮ ತಂದೆ ಎಂದಿಗೂ ನಾಚಿಕೆ ಪಟ್ಟಿಲ್ಲ ಮತ್ತು ನನಗೂ ಸಹ ಅವರು ಅದೇ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ನಟ ಹೇಳಿದರು.
ಕ್ಲೀನರ್ ಆಗಿದ್ದವರು ಓನರ್ ಆದರು
"ಹೇಗಾದರೂ, ಜೀವನೋಪಾಯಕ್ಕಾಗಿ ಅವರು ಏನು ಮಾಡಿದರೂ ಎಂದಿಗೂ ನಾಚಿಕೆ ಪಡಲಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಅವರು ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಕಟ್ಟಡಗಳಿಗೆ ಮುಂದೊಂದು ದಿನ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಅಂತಿಮವಾಗಿ ಆ ಕಟ್ಟಡಗಳನ್ನು ಖರೀದಿಸಿದರು ಮತ್ತು ಅದರ ಮಾಲೀಕರಾದರು. ಅವರು ಅಂತಹ ಮನುಷ್ಯ. ಅವರು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇತ್ತು ಮತ್ತು ಮನಸ್ಸಿನಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದರು ಹಾಗೂ ನನಗೂ ಸಹ ಅದನ್ನೇ ಹೇಳಿಕೊಟ್ಟಿದ್ದಾರೆ” ಎಂದು ನಟ
ಸುನಿಲ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಅತಿಯಾ ಶೆಟ್ಟಿ ಬಳಿ ಕ್ಷಮೆ ಕೇಳಿದ ಸಲ್ಮಾನ್ ಖಾನ್: ಬ್ಯಾಡ್ ಬಾಯ್ ಮಾಡಿದ ತಪ್ಪಾದರೂ ಏನು?
ನಟಿ ಕರಿಷ್ಮಾ ಕೂಡ ಇದೇ ಸಂದರ್ಭದಲ್ಲಿ ಮಾತಾನಾಡುತ್ತಾ ಸುನೀಲ್ ಶೆಟ್ಟಿ ತಂದೆಯನ್ನು ಭೇಟಿಯಾದ ಅನುಭವವನ್ನು ಮತ್ತು ಅವರ ವ್ಯಕ್ತಿತ್ವವದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡರು.
"ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಸುನೀಲ್ನ ತಂದೆಯನ್ನು ಭೇಟಿಯಾಗುವ ಗೌರವ ನನಗೆ ಸಿಕ್ಕಿತ್ತು. ಅವರು ನಮ್ಮ ಚಿತ್ರಗಳ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಬಂದು ಮಗನ ಕೆಲಸವನ್ನು ಹೆಮ್ಮೆಯಿಂದ ನೋಡುತ್ತಿದ್ದರು. ಅವರು ನಿಜಕ್ಕೂ ಅತ್ಯಂತ ಪ್ರೀತಿ ಪಾತ್ರ ಮನುಷ್ಯರಾಗಿದ್ದರು" ಎಂದು ಕರಿಷ್ಮಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ