• Home
  • »
  • News
  • »
  • entertainment
  • »
  • Sonu Sood: ರೈಲ್ವೇ ಸ್ಟೇಷನ್ ನಲ್ಲಿ ನೀರು ಯಾವ ಬಿಸ್ಲೇರಿ ನೀರಿಗೂ ಕಡಿಮೆ ಇಲ್ಲ! ಎಂದ ಸೋನು ಸೂದ್

Sonu Sood: ರೈಲ್ವೇ ಸ್ಟೇಷನ್ ನಲ್ಲಿ ನೀರು ಯಾವ ಬಿಸ್ಲೇರಿ ನೀರಿಗೂ ಕಡಿಮೆ ಇಲ್ಲ! ಎಂದ ಸೋನು ಸೂದ್

ಸೋನು ಸೂದ್

ಸೋನು ಸೂದ್

ಸೋನು ಸೂದ್ ರೈಲು ನಿಲ್ದಾಣದಲ್ಲಿರೋ ನಲ್ಲಿಯ ನೀರನ್ನೂ ಕುಡಿದು ಖುಷಿಪಟ್ಟಿದ್ದಾರೆ. ಜಗತ್ತಿನ ಯಾವುದೇ ಬಿಸ್ಲರಿ ನೀರಿಗೂ ಕಡಿಮೆ ಇಲ್ಲ ಈ ನೀರು ಅಂತಲೇ ನಿಲ್ದಾಣದ "ನಲ್ಲಿ" ನೀರು ಕುಡಿದು ಸಂತೋಷ ಪಟ್ಟಿದ್ದಾರೆ.

  • Share this:

ಬಾಲಿವುಡ್ (Bollywood Villain)​ ಖಳನಾಯಕ ನಟ ಸೋನು ಸೂದ್ (Sonu Sood) ಎಲ್ಲ ಕಲಾವಿದರ ರೀತಿ ಅಲ್ಲವೇ ಅಲ್ಲ. ಸಮಾಜಕ್ಕಾಗಿಯೇ ತುಡಿಯೋ ಹೃದಯವಂತ ಈ ಸೋನು ಸೂದ್. ಸೋನು ಸೂದ್ ತಮ್ಮ ಕೆಲಸಗಳಿಂದಲೇ ಹೀರೋ ಆಗಿದ್ದಾರೆ. ಆದರೆ ಬೆಳ್ಳಿ ತೆರೆ ಮೇಲೆ ವಿಲನ್ ಅನ್ನೋದು ಅಷ್ಟೇ ಸತ್ಯ. ಇಂತಹ ವಿಶೇಷ ನಟ ಹೆಣ್ಣು ಮಕ್ಕಳಿಗೆ ಸೈಕಲ್ ಕೊಡುವ ಕೆಲಸ ಮಾಡುತ್ತಾರೆ. ಕೊರೊನಾ (Corona) ಟೈಮ್​ನಲ್ಲಿ ಅನೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಷ್ಟ ಅಂತ ಬಂದ ಕಲಾವಿದರಿಗೂ ಆರ್ಥಿಕ ಸಹಾಯ ಮಾಡಿರೋದು ಇದೆ. ಇಷ್ಟು ವಿಶೇಷದ ರಿಯಲ್ ಸ್ಟಾರ್​ ಈಗ ರೇಲ್ವೆ ಸ್ಟೇಷನ್ ನಲ್ಲಿ ಮಲಗಿ ಒಂದು ಹೊಸ ಅನುಭವ ಪಡೆದಿದ್ದಾರೆ.


ರೈಲು ಮತ್ತು ರೈಲು ನಿಲ್ದಾಣದ (Railway Journey) ಜೀವನ ಹೇಗಿರುತ್ತದೆ ಅನ್ನೋದನ್ನ ತಾವೇ ಅಲ್ಲಿಗೆ ಹೋಗಿ ಎಂಜಾಯ್ ಮಾಡಿದ್ದಾರೆ. ರೈಲು ನಿಲ್ದಾಣದಲ್ಲಿರೋ ನಲ್ಲಿಗಳಲ್ಲಿಯ ನೀರು ಕುಡಿಯಲು ಯೋಗ್ಯವೇ? ಈ ಪ್ರಶ್ನೆ ಸ್ವತಃ ಸೋನು ಸೂದ್ ಉತ್ತರ ಕೊಟ್ಟಿದ್ದಾರೆ.


ರಿಯಲ್ ಹೀರೋ ಸೋನು ಸೂದ್ ರೈಲು ಪ್ರಯಾಣ
ಸೋನು ಸೂದ್ ರಿಯಲ್ ಹೀರೋ ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿ ಹೋಗಿದೆ. ಈ ನಟ ರಿಯಲ್ ಹೀರೋ ಅಲ್ಲವೇ ಅಲ್ಲ ಅನ್ನೋ ಮಾತು ಎಲ್ಲೂ ಕೇಳಿ ಬಂದಿಲ್ಲ. ಸೋನು ಸೂದ್ ಮಾಡಿರೋ ಕೆಲಸಗಳೇ ಹಾಗಿವೆ. ಅದನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ.


Bollywood Actor Sonu Sood Travel in Mumbai Local Train
ಬಾಲಿವುಡ್ ಖಳನಾಯಕ ನಟ ಸೋನು ಸೂದ್


ಸೋನು ಸೂದ್ ಒಳ್ಳೆ ಕೆಲಸಗಳಿಂದಲೇ ಜನರಿಗೆ ಹತ್ತಿರ ಆಗಿದ್ದಾರೆ. ಕೆಟ್ಟ ಕೆಲಸಗಳೇನಿದ್ರು ಅವು ಕೇವಲ ಬೆಳ್ಳಿ ತೆರೆ ಮೇಲಿನ ಪಾತ್ರಗಳಲ್ಲಿಯೇ ಇರುತ್ತವೆ. ಆ ಅಭಿನಯಕ್ಕೂ ರಿಯಲ್ ಜೀವನಕ್ಕೂ ಎಲ್ಲೂ ಅದು ಕನೆಕ್ಟ್ ಕೂಡ ಆಗೋದಿಲ್ಲ ಬಿಡಿ.


ಇದನ್ನೂ ಓದಿ: Vijay Movie: ರಶ್ಮಿಕಾ 2ನೇ ತಮಿಳು ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ವಿಜಯ್ ಮಾಸ್ ಲುಕ್


ರೈಲು ನಿಲ್ದಾಣದ ಆಸನದ ಮೇಲೂ ಮಲಗಿಕೊಂಡು ಖುಷಿಪಟ್ಟ ಸೋನು
ಹೌದು, ಸೋನು ಇರೋದೇ ಹಾಗೇನೆ ಅನಿಸುತ್ತದೆ. ಜನರ ಬಗ್ಗೆ ಅದೇನೋ ಒಂದು ಕಳಕಳಿ ಈ ನಟನಿಗೆ ಇದೆ. ಈ ಕಾರಣಕ್ಕೋ ಏನೋ. ಸೋನು ಸೂದ್ ಚಿತ್ರೀಕರಣ ಮುಗಿಸಿ ಕೆಲ ಹೊತ್ತು ರೇಲ್ವೆ ನಿಲ್ದಾಣದ ಆಸನದ ಮೇಲೂ ಮಲಗಿಕೊಂಡಿದ್ದಾರೆ. ಹೊಸ ಅನುಭವ ಕೂಡ ಪಡೆದಿದ್ದಾರೆ.


ಆಗಲೇ ಇವರಿಗೆ ಒಂದು ಐಡಿಯಾ ಕೂಡ ಬಂದಿದೆ. ಆ ಕೂಡಲೇ ಸಡನ್ ಆಗಿಯೇ ಆಸನದ ಮೇಲಿಂದ ಎದ್ದವರೇ, ರೇಲ್ವೆ ನಿಲ್ದಾಣದ ಜೀವನವೇ ಒಂದು ಅದ್ಭುತ ಅಂತ ಹೇಳುತ್ತಲೇ ಸೋನು ಸೂದ್, ನಿಧಾನಕ್ಕೆ ಸಾಗುತ್ತಿರೋ ರೈಲು ಹತ್ತಿಯೇ ಬಿಡ್ತಾರೆ.


ರೈಲು ಅನ್ನೋದು ನಿಜಕ್ಕೂ ಒಂದು ಅದ್ಭುತ ಅನುಭವವೇ ಆಗಿದೆ. ಇದನ್ನ ಬಾಲಿವುಡ್​ ನ ನಟ ಸೋನು ಸೂದ್ ಅನುಭವಿಸಿದ್ದಾರೆ. ರೈಲಿನಲ್ಲಿ ವಿವಿಧಡೆ ನಿಂತು ಚಲಿಸೋ ರೈಲಿನೊಳಗೆ ಬರೋ ಗಾಳಿಯ ಆ ಖುಷಿಯನ್ನ ಎಂಜಾಯ್ ಮಾಡಿದ್ದಾರೆ.



ಸೋನು ಸೂದ್ ರೈಲು ನಿಲ್ದಾಣದಲ್ಲಿರೋ ನಲ್ಲಿಯ ನೀರನ್ನೂ ಕುಡಿದು ಖುಷಿಪಟ್ಟಿದ್ದಾರೆ. ಜಗತ್ತಿನ ಯಾವುದೇ ಬಿಸ್ಲರಿ ನೀರಿಗೂ ಕಡಿಮೆ ಇಲ್ಲ ಈ ನೀರು ಅಂತಲೇ ನಿಲ್ದಾಣದ "ನಲ್ಲಿ" ನೀರು ಕುಡಿದು ಸಂತೋಷ ಪಟ್ಟಿದ್ದಾರೆ.


ನಿಲ್ದಾಣದಲ್ಲಿದ್ದ ಬೀದಿ ನಾಯಿಗೂ ಪ್ರೀತಿ ತೋರಿದ ಸೋನು ಸೂದ್
ರೈಲು ನಿಲ್ದಾಣದಲ್ಲಿ ಸಾಕಷ್ಟು ಸಮಯ ಕಳೆದ ಸೋನು ಸೂದ್, ಇಲ್ಲಿಯೇ ಇದ್ದ ಬೀದಿ ನಾಯಿಯ ಆ ಪ್ರೀತಿಯನ್ನೂ ಗಮನಿಸಿದ್ದಾರೆ. ತಮ್ಮ ಜೊತೆಗೇನೆ ಇದ್ದ ಬೀದಿ ನಾಯಿಯ ಅಗಾಧ ಪ್ರೀತಿಯನ್ನೂ ಹಿಂದಿ ಭಾಷೆಯಲ್ಲಿಯೇ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Jogi Prem Film: ಜೋಗಿ ಪ್ರೇಮ್ ಚಿತ್ರದ ಪೋಸ್ಟರ್​​ನಲ್ಲಿ ಚಪ್ಪಲಿ-ಮಚ್ಚು-ಕುರ್ಚಿ ಇರೋದ್ಯಾಕೆ? ಧ್ರುವ ಫ್ಯಾನ್ಸ್ ಸಿಟ್ಟಾಗೋದಿಲ್ವೇ?


ರೈಲು ಓಟ-ರೈಲು ನಿಲ್ದಾಣದ ನೀರು ಸೂಪರೋ ಸೂಪರ್
ಮುಂಬೈನ ಬೊಯಿಸರ್ ರೈಲು ನಿಲ್ದಾಣದಲ್ಲಿ ಅತಿ ಹೆಚ್ಚು ಟೈಮ್ ಕಳೆದ ಸೋನು ಸೂದ್ ಈ ಸೂಪರ್ ಅನುಭವದ ವೀಡಿಯೋಗಳನ್ನ ತಮ್ಮ ಅಧಿಕೃತ ಟ್ವಿಟರ್ ಪೇಜ್​ ಗೂ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ಓಡಾಡೋದೇ ಒಂದು ಖುಷಿ ಅಂತಲೂ ಬರೆದುಕೊಂಡಿದ್ದಾರೆ.

First published: