HOME » NEWS » Entertainment » BOLLYWOOD ACTOR SONU SOOD HELPS YADAGIRI FAMILY AFTER LADY BIRTH FOR 3 CHILDREN RMD

 ಯಾದಗಿರಿಯ ತ್ರಿವಳಿ ಮಕ್ಕಳಿಗೆ ಬೇಬಿ ಕಿಟ್ ಪೂರೈಸಿದ ಬಾಲಿವುಡ್ ನಟ ಸೋನು ಸೂದ್...!

ಕೊರೋನಾ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಕಷ್ಟದಲ್ಲಿರುವವರ​ ಸಹಾಯ ಮಾಡಲು ಮುಂದಾಗಿದ್ದರು. ಅಂತೇಯೆ ಲಾಕ್​ಡೌನ್​ ವೇಳೆ ಮಹಾರಾಷ್ಟ್ರದಲ್ಲಿ ಸಿಲುಕಿದ ಸಾಕಷ್ಟು ಜನರನ್ನು ಮನೆಗೆ ತಲುಪಿಸುವ ಕೆಲಸವನ್ನು ಮಾಡಿದ್ದರು.

news18-kannada
Updated:September 2, 2020, 3:07 PM IST
 ಯಾದಗಿರಿಯ ತ್ರಿವಳಿ ಮಕ್ಕಳಿಗೆ ಬೇಬಿ ಕಿಟ್ ಪೂರೈಸಿದ ಬಾಲಿವುಡ್ ನಟ ಸೋನು ಸೂದ್...!
ಕೊರೋನಾ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಕಷ್ಟದಲ್ಲಿರುವವರ​ ಸಹಾಯ ಮಾಡಲು ಮುಂದಾಗಿದ್ದರು. ಅಂತೇಯೆ ಲಾಕ್​ಡೌನ್​ ವೇಳೆ ಮಹಾರಾಷ್ಟ್ರದಲ್ಲಿ ಸಿಲುಕಿದ ಸಾಕಷ್ಟು ಜನರನ್ನು ಮನೆಗೆ ತಲುಪಿಸುವ ಕೆಲಸವನ್ನು ಮಾಡಿದ್ದರು.
  • Share this:
ಯಾದಗಿರಿ: ತ್ರೀವಳಿ ಮಕ್ಕಳಿಗೆ ಜನ್ಮ‌ ನೀಡಿದ ಪದ್ಮಾ ಕುಟುಂಬಕ್ಕೆ ಮತ್ತೆ ಎರಡನೇ ಬಾರಿ ಬಾಲಿವುಡ್ ನಟ ಆಶ್ರಯವಾಗಿದ್ದಾರೆ. ತ್ರೀವಳಿ ಮಕ್ಕಳ ಕಾಳಜಿಗಾಗಿ ಬೇಬಿ ಕಿಟ್ ಗಳನ್ನು ಬಾಲಿವುಡ್ ನಟ ಸೋನು ಸೂದ್ ಕಳುಹಿಸಿದ್ದಾರೆ.

ಕಳೆದ ತಿಂಗಳು 22 ರಂದು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ ಅವರ ಪತ್ನಿ ಪದ್ಮಾ ತ್ರಿವಳಿ ಗಂಡು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಳು. ಕೈಯಲ್ಲಿ ಹಣವಿಲ್ಲದೆ ತ್ರೀವಳಿ ‌ಮಕ್ಕಳ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿತ್ತು. ಈ ವಿಚಾರ ಬಾಲಿವುಡ್ ನಟ ಸೋನು ಸೂದ್  ಗಮನಕ್ಕೆ ಬಂದಾಗ ನಾಗರಾಜ ಕುಟುಂಬಕ್ಕೆ ಕಳೆದ ತಿಂಗಳ 27 ರಂದು  ನಟ ಸೋನು ಸೂದ್ ಅಮೆಜಾನ್ ಮೂಲಕ ಎರಡು ತಿಂಗಳಿಗೆ ಅವಶ್ಯವಾದ ದಿನಸಿ ಆಹಾರ ಸಾಮಾಗ್ರಿಗಳನ್ನು ಕಳುಹಿಸಿ ಬಡಕುಟುಂಬಕ್ಕೆ ಆಶ್ರಯವಾಗಿದ್ದರು. ಇದರಿಂದ ಬಡಕುಟುಂಬಕ್ಕೆ ಬಹಳ ಅನುಕೂಲವಾಗಿತ್ತು.

ದಿನಸಿ ಆಹಾರ ಸಾಮಾಗ್ರಿಗಳನ್ನು ಕಳುಹಿಸಿದ ನಂತರ ನಟ ಸೋನು ಸೂದ್ ಕೂಡ ನಾಗರಾಜ ಕುಟುಂಬಕ್ಕೆ ಹಾಗೂ ತ್ರಿವಳಿ ಮಕ್ಕಳಿಗೆ  ಸಹಾಯ ಮಾಡುತ್ತೆನೆಂದು ಹೇಳಿದ್ದರು. ನಂತರ ಇಂದು ನಟ ಸೋನು ಸೂದ್ ಮುಂಬೈನಿಂದ ಅಮೆಜಾನ್ ‌ಮೂಲಕ ಬೇಬಿ ಕಿಟ್ ಗಳನ್ನು ನಾಗರಾಜ ವಿಳಾಸಕ್ಕೆ ಕಳುಹಿಸಿದ್ದಾರೆ. ನಾಗರಾಜ ಇಂದು ಬೇಬಿ ಕಿಟ್ ಗಳನ್ನು ಪಡೆದು ಖುಷಿಗೊಂಡಿದ್ದಾರೆ.

ಬೇಬಿ ಕಿಟ್ ಗಳಲ್ಲಿ ಮಕ್ಕಳ ಸೋಪ್,ಎಣ್ಣೆ,ಶಾಂಪು,ಪೌಡರ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಕಳುಹಿಸಿ ನಟ ಸೋನು ಸೂದ್ ಮಾನವೀಯತೆ ತೊರಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ನಾಗರಾಜ ಮಾತನಾಡಿ, ಬಾಲಿವುಡ್ ನಟ ಸೋನು ಸೂದ್ ಅವರು ನಮ್ಮ ಕಷ್ಟ ಅರಿತು ಈ ಮೊದಲು ಆಹಾರ ಸಾಮಾಗ್ರಿಗಳು ಕಳುಹಿಸಿದರು.ಈಗ ಮಕ್ಕಳಿಗೆ ಬೇಕಾಗುವ ವಸ್ತುಗಳನ್ನು ಕಳುಹಿಸಿದ್ದು ಬಹಳ ಸಂತೋಷವಾಗಿದೆ ಎಂದರು. ತೊಂದರೆಯಲ್ಲಿರುವವರಿಗೆ ನಟ ಸೋನು ಸೂದ್ ಮಾನವೀಯತೆ ತೊರಿ ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.

ಕೊರೋನಾ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಕಷ್ಟದಲ್ಲಿರುವವರ​ ಸಹಾಯ ಮಾಡಲು ಮುಂದಾಗಿದ್ದರು. ಅಂತೇಯೆ ಲಾಕ್​ಡೌನ್​ ವೇಳೆ ಮಹಾರಾಷ್ಟ್ರದಲ್ಲಿ ಸಿಲುಕಿದ ಸಾಕಷ್ಟು ಜನರನ್ನು ಮನೆಗೆ ತಲುಪಿಸುವ ಕೆಲಸವನ್ನು ಮಾಡಿದ್ದರು. ಅಲ್ಲದೆ, ಪೊಲೀಸರಿಗೆ ಫೇಸ್​ ಶೀಲ್ಡ್​ ಹಾಗೂ ವೈದ್ಯರಿಗೆ ಪಿಇಪಿ ಕಿಟ್ ನೀಡಿದ್ದರು.
Published by: Rajesh Duggumane
First published: September 2, 2020, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories