ಬಾಲಿವುಡ್ (Bollywood) ನಟ ಶಾರುಖ್ ಖಾನ್ (Sharukh Khan) ಅವರು ಮೆಕ್ಕಾಗೆ (Mecca) ಭೇಟಿ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ (Vaishnodevi) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ತಮ್ಮ ಭದ್ರತಾ ಸಿಬ್ಬಂದಿಯಿಂದ ಸುತ್ತುವರಿದು ದೇವಸ್ಥಾನದ ಕಡೆಗೆ ಹೋಗುತ್ತಿರುವ ವಿಡಿಯೋ ವೈರಲ್ (Viral) ಆಗಿದೆ. ಕಪ್ಪು ಜಾಕೆಟ್ ಧರಿಸಿರುವುದರಿಂದ ಸೂಪರ್ ಸ್ಟಾರ್ ನ ಮುಖ ಕಾಣಿಸುತ್ತಿಲ್ಲ. ಈ ತಿಂಗಳ ಆರಂಭದಲ್ಲಿ, ಸೌದಿ ಅರೇಬಿಯಾದಲ್ಲಿ ಡಂಕಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಾ ಇದೆ. ವೈಷ್ಣೋದೇವಿಯಲ್ಲಿ ಶಾರುಖ್ ಖಾನ್ ಅವರನ್ನು ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ.
ವೈಷ್ಣೋದೇವಿ ದರ್ಶನ್ ಪಡೆದ ಶಾರುಖ್ ಖಾನ್
ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಶಾರುಕ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರವೊಂದರ ಚಿತ್ರೀಕರಣವನ್ನು ಮುಗಿಸಿದ ಬಳಿಕೆ ಸೌದಿ ಅರೇಬಿಯಾದ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಆದಾದ ನಂತರ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.
ಸಿನಿಮಾ ಶೂಟಿಂಗ್ ಮುಗಿಸಿ ದರ್ಶನ
ವೈಯಕ್ತಿಕವಾಗಿ ಶಾರುಕ್ ಖಾನ್ ಮುಸ್ಲಿಮ್ ಧರ್ಮ ಪರಿಪಾಲಿಸುವ ವ್ಯಕ್ತಿಯಾಗಿದ್ದು ಸೌದಿ ಅರೇಬಿಯಾದಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರವೊಂದರ ಚಿತ್ರೀಕರಣ ಮುಕ್ತಾಯಗೊಳಿಸಿದ ಬಳಿಕೆ ಮೆಕ್ಕಾ ನಗರಕ್ಕೆ ಉಮ್ರಾ ನೆರವೇರಿಸಲು ಭೇಟಿ ನೀಡಿದ್ದರು.
ಇದನ್ನೂ ಓದಿ: Rajinikanth Birthday: ಹ್ಯಾಪಿ ಬರ್ತ್ಡೇ ರಜನಿಕಾಂತ್, ಸೂಪರ್ ಸ್ಟಾರ್ ನಟನೆಯ ಐಕಾನಿಕ್ ಚಿತ್ರಗಳ ಪಟ್ಟಿ ಇಲ್ಲಿದೆ
ಏನಿದು ಉಮ್ರಾ?
ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ. ಮುಸ್ಲಿಮರಲ್ಲೂ ಧಾರ್ಮಿಕವಾಗಿ ಮಹತ್ವ ಪಡೆದಿರುವ ಪವಿತ್ರ ಯಾತ್ರೆ ಎಂದರೆ ಅದು ವಾರ್ಷಿಕವಾಗಿ ನಡೆಯುವ ಹಜ್ ಯಾತ್ರೆ.
Shah visited Vaishno Devi Temple ❤️
May Devi Maa fulfill all his wishes 🙏🏻 #ShahRukhKhan𓀠 pic.twitter.com/1XrL82XaCW
— 👸Sharania Jhanvi𓀠🌹BesharamRang (@SharaniaJ) December 12, 2022
ಈ ಹಜ್ ಯಾತ್ರೆಯ ಸಂಕ್ಷಿಪ್ತ ರೂಪವೇ ಉಮ್ರಾ ಎಂದಾಗಿದೆ. ಹಜ್ ಕಡ್ಡಾಯ ಎಂಬ ರೀತಿಯಲ್ಲಿದ್ದರೆ ಉಮ್ರಾ ಕಡ್ಡಾಯವಾಗಿ ಮಾಡಬೇಕಾದ ಆಚರಣೆಯಾಗಿಲ್ಲ. ಅರೇಬಿಕ್ ಭಾಷೆಯಲ್ಲಿ ಉಮ್ರಾ ಎಂದರೆ ಜನನಿಬೀಡ ಸ್ಥಳಕ್ಕೆ ಭೇಟಿ ನೀಡುವುದು ಎಂದಾಗಿದೆ.
ವಿದೇಶಗಳಲ್ಲಿ ಪ್ರಖ್ಯಾತ
ಬಾಲಿವುಡ್ ಅಂಗಳದ ಪ್ರಖ್ಯಾತ ತಾರೆ ಶಾರುಕ್ ಖಾನ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ನಟ ಶಾರುಕ್ ಖಾನ್ ಎಲ್ಲೆ ಇರಲಿ, ಹೇಗೆ ಇರಲಿ ಜನರು ಅವರನ್ನು ಗುರುತಿಸುವುದು ಪಕ್ಕಾ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ನಟನ ದೇಹ ಗುರುತು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ಗೊತ್ತಿದೆ.
ಇದನ್ನೂ ಓದಿ: Rajinikanth Birthday: 72ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಜನಿಕಾಂತ್, ಕಂಡಕ್ಟರ್ ರಿಂದ ಸೂಪರ್ ಸ್ಟಾರ್ ಆದವರ ಕಥೆ ಇದು!
ಇತ್ತೀಚೆಗೆ ಅವರು ತಮ್ಮ ಧರ್ಮದ ಪ್ರಕಾರ ಉಮ್ರಾ ಎಂಬ ವಿಧಿಯನ್ನು ನೆರವೇರಿಸಲೆಂದು ಸೌದಿ ಅರೇಬಿಯಾದ ಪವಿತ್ರ ಎನ್ನಲಾಗುವ ಮೆಕ್ಕಾ ನಗರಕ್ಕೆ ತೆರಳಿದ್ದರು. ಅವರು ಆ ಸಮಯದಲ್ಲಿ ತಮ್ಮ ಗುರುತು ಗೊತ್ತಾಗದಂತೆ ಸರಳವಾದ ನಿಲುವಂಗಿ ಜೊತೆ ಮುಖಕ್ಕೆ ಮಾಸ್ಕ್ ಅನ್ನು ಧರಿಸಿದ್ದರು. ಆದರೂ ಅವರನ್ನು ಅಭಿಮಾನಿಗಳು ಗುರುತಿಸಿದ್ದಾರೆ. ವೈಷ್ಣೋದೇವಿಯಲ್ಲೂ ಗುರುತು ಸಿಗದಂತೆ ಓಡಾಡಿದ್ದಾರೆ. ಆದ್ರೆ ಅಭಿಮಾನಿಗಳು ಓಡಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ