ಶಾರುಕ್ ಖಾನ್ (Shahrukh Khan) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ‘ಬಾಲಿವುಡ್ (Bollywood) ಬಾದ್ ಶಾ’ ಅಂತಾನೇ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಕರೆಯುತ್ತಾರೆ. ತಮ್ಮ ಬ್ಲಾಕ್ ಬಸ್ಟರ್ ಸಿನಿಮಾಗಳು (black buster film), ಅದರಲ್ಲಿನ ಅಭಿನಯ, ತಮ್ಮ ನಿರ್ಮಾಣದ ಸಿನಿಮಾಗಳಿಂದ ಬಾಲಿವುಡ್ ಸಿನಿ ರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟವರು ಶಾರುಖ್ ಖಾನ್. ತಮ್ಮ ಅದ್ಭುತ ಅಭಿನಯ ಹಾಗೂ ವಿಶಿಷ್ಟ ದ್ವನಿಯಿಂದ ಅಭಿಮಾನಿಗಳನ್ನು ಸೆಳೆದಿರೋ ಈ ನಟ, ಇಂದಿಗೂ ಯಂಗ್ ಆಂಡ್ ಎನರ್ಜೆಟಿಕ್. ಇತ್ತೀಚಿಗೆ ಅವರ ಮಗನ ವಿವಾದದಿಂದಾಗಿ ಶಾರುಖ್ ಸುದ್ದಿಯಲ್ಲಿದ್ರು. ಅದಾದ ಬಳಿಕ ಮೊನ್ನೆ ಮೊನ್ನೆಯಷ್ಟೇ ಇಸ್ಸ್ಟಾಗ್ರಾಮ್ (Instagram) ಗೆ ಹಿಂತಿರುಗಿ ಬಂದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ರು. ಇದೀಗ ಶಾರುಖ್ ಖಾನ್ ಬರೀ ಇಂಡಿಯಾದಲ್ಲಷ್ಟೇ ಅಲ್ಲ, ಈಜಿಪ್ಟ್’ನಲ್ಲೂ ಸುದ್ದಿಯಾಗಿದ್ದಾರೆ. ಅಲ್ಲಿನ ಅಭಿಮಾನಿಯೊಬ್ಬನಿಗೆ ಕಿಂಗ್ ಖಾನ್ (King Khan) ಭಾರೀ ಗಿಫ್ಟ್ ಕೊಟ್ಟಿದ್ದಾರೆ.
ಈಜಿಪ್ಟ್ ಅಭಿಮಾನಿಗೆ SRK ಗಿಫ್ಟ್
ಶಾರುಖ್ ಖಾನ್ ಅಂದ್ರೆ ಬರೀ ಭಾರತೀಯ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಫೇಮಸ್. ಕಿಂಗ್ ಖಾನ್’ಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಹೀಗೆ ಈಜಿಪ್ಟ್ ನಲ್ಲೂ ಶಾರುಖ್ ಅಭಿಮಾನಿಯೊಬ್ಬನಿದ್ದ. ಆತನಿಗೆ ಖುದ್ದು ಶಾರುಖ್ ಖಾನ್ ಅವರೇ ಬಹು ಅಮೂಲ್ಯ ಗಿಫ್ಟ್ ಒಂದನ್ನು ಕಳಿಸಿಕೊಟ್ಟಿದ್ದಾರೆ. ತಮ್ಮ ಭಾವಚಿತ್ರದ ಮೇಲೆ ತಮ್ಮದೇ ಸಹಿ ಮಾಡಿ, ಒಂದು ಪ್ರಶಂಸಾ ಪತ್ರವನ್ನೂ ಕಳಿಸಿ ಕೊಟ್ಟಿದ್ದಾರೆ. ಅದನ್ನು ನೋಡಿದ ಈಜಿಪ್ಟ್ ಅಭಿಮಾನಿ ಶಾಕ್ ಆಗಿದ್ದಾನೆ. ಇಂಡಿಯಾದಿಂದ ಬಂದ ಗಿಫ್ಟ್ ನೋಡಿ ಒಮ್ಮೆ ನಂಬಲಾಗದೇ, ಗೊಂದಲಕ್ಕೆ ಒಳಗಾಗಿದ್ದಾನೆ. ಅದು ಶಾರುಖ್ ಖಾನ್ ಅವರದ್ದೇ ಫೋಟೋ ಹಾಗೂ ಸಹಿ ಅಂತ ಗೊತ್ತಾದ ಮೇಲೆ ಆತನ ಸಂತೋಷಕ್ಕೆ ಪಾರವೇ ಇರಲಿಲ್ವಂತೆ.
ಈಜಿಪ್ಟ್ ಅಭಿಮಾನಿ ಮಾಡಿದ್ದ ಕೆಲಸ ಎಂಥದ್ದು ಗೊತ್ತಾ?
ಈಜಿಪ್ಟ್ ನ ಶಾರುಖ್ ಖಾನ್ ಅಭಿಮಾನಿಯ ಕಥೆ ಬೆಳಕಿಗೆ ಬರಲು ಕಾರಣರಾದವರು ಅಶ್ವಿನಿ ದೇಶಪಾಂಡೆ. ಭಾರತೀಯ ಮೂಲದ ಪ್ರಾಧ್ಯಾಪಕಿಯಾಗಿರುವ ಅಶ್ವಿನಿ, ಈಜಿಪ್ಟ್ ನ ವಿಶ್ವವಿದ್ಯಾಲಯವೊಂದರಲ್ಲಿ ಪಾಠ ಬೋಧಿಸುತ್ತಾರೆ. ಅವರು ಇತ್ತೀಚಿಗಷ್ಟೇ ಟ್ರಾವೆಲಿಂಗ್ ವೇಳೆ ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲಿನ ಟ್ರಾವೆಲ್ ಏಜೆನ್ಸಿಗೆ ಹಣ ಸಂದಾಯ ಮಾಡಲಾಗದೇ ಕಂಗಾಲಾಗಿದ್ದರು.
ಆಗ ಅಲ್ಲಿದ್ದ ಈಜಿಪ್ಟ್ ಮೂಲದ ಏಜೆಂಟ್ ಒಬ್ಬ ಅವರಿಗೆ ಸಹಾಯ ಮಾಡಿದ್ದ. ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ನೀವು ನನ್ನ ನೆಚ್ಟಿನ ನಟನ ದೇಶದವರು. ಹೀಗಾಗಿ ನಾನು ಸಹಾಯ ಮಾಡುತ್ತೇನೆ ಅಂತ ಹೇಳಿದ್ದ ಆ ವ್ಯಕ್ತಿ, ಅಶ್ವಿನಿ ಹಾಗೂ ಕುಟುಂಬಸ್ಥರ ಸುಗಮ ಪ್ರಯಾಣಕ್ಕೆ ನೆರವು ನೀಡಿದ್ದ.
ಇದನ್ನೂ ಓದಿ: Shah Rukh Khan: ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬಾದ್ಷಾ
ಇದನ್ನು ಅಶ್ವಿನಿ ದೇಶಪಾಂಡೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದರು. ಶಾರುಖ್ ಖಾನ್ ಅವರ ಈಜಿಪ್ಟ್ ಅಭಿಮಾನಿಯಿಂದ ನಾವು ಸಹಾಯ ಪಡೆದೆವು. ಶಾರುಖ್ ಮೇಲಿನ ಅಭಿಮಾನದಿಂದಾಗಿಯೇ ಆತ ನಮಗೆ ಸಹಾಯ ಮಾಡಿದ ಅಂತ ಸ್ಮರಿಸಿ ಕೊಂಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು.
ವಿಷಯ ತಿಳಿದು ಖುಷಿ ಪಟ್ಟ ಶಾರುಖ್
ಈ ಟ್ವೀಟ್ ಗಮನಿಸಿದ ಶಾರುಖ್ ಖಾನ್, ಈಜಿಪ್ಟ್ ಅಭಿಮಾನಿಯ ಅಭಿಮಾನಕ್ಕೆ ಬೆರಗಾಗಿದ್ದಾರೆ. ಭಾರತೀಯ ಪ್ರಾಧ್ಯಾಪಕರಿಗೆ ಸಹಾಯ ಮಾಡಿದ ಈಜಿಪ್ಟ್ ಅಭಿಮಾನಿಗೆ ಶಾರುಖ್ ಖಾನ್ ಸಹಿ ಮಾಡಿದ ಚಿತ್ರ ಮತ್ತು ಪತ್ರವನ್ನು ಕಳುಹಿಸಿದ್ದಾರೆ. ಮೂರು ಭಾವಚಿತ್ರಗಳಿಗೆ ಸಹಿ ಮಾಡಿರೋ ಶಾರುಖ್ ಮಾಲೀಕತ್ವದ ರೆಡ್ ಚಿಲ್ಲೀಸ್ ಸಂಸ್ಥೆ. ಅದನ್ನು ಈಜಿಪ್ಟ್ ಗೆ ತಲುಪಿಸಿದೆ. ಟ್ರಾವೆಲ್ ಏಜೆಂಟ್ ಹಾಗೂ ಅವರ ಪುತ್ರಿಗೆ ಒಂದೊಂದು ಗಿಫ್ಟ್ ಹಾಗೂ ಪ್ರಾಧ್ಯಾಪಕಿ ಅಶ್ವಿನಿಯವರ ಪುತ್ರಿಗೆ ಮತ್ತೊಂದು ಗಿಫ್ಟ್ ತಲುಪಿದೆ.
ಇದನ್ನೂ ಓದಿ: Shah Rukh Khan: ಶಾರುಖ್ ಅಭಿಮಾನಿಗಳೆಂದ್ರೆ ಸಾಮಾನ್ಯದ ಮಾತೇ! ಎಸ್ಆರ್ಕೆ ಅಂದ್ರೆ ಸಾಕು..ಇನ್ನೇನು ಬೇಕು!
ಇದನ್ನೂ ಕೂಡ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಅಶ್ವಿನಿ ದೇಶಪಾಂಡೆ, ಈಜಿಪ್ಟ್ ಅಭಿಮಾನಿಯ ಸಹಾಯ ಹಾಗೂ ಶಾರುಖ್ ಖಾನ್ ಅವರ ಸ್ನೇಹಪರ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. ಈ ಘಟನೆ ಬಗ್ಗೆ ತಿಳಿದ ಅಭಿಮಾನಿಗಳು ಕಿಂಗ್ ಖಾನ್ ಬಗ್ಗೆ ಮತ್ತಷ್ಟು ಹೆಮ್ಮೆಯ ಮಾತನ್ನಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ