ಅಲ್ಲು ಅರ್ಜುನ್​ ಡ್ಯಾನ್ಸ್​ಗೆ ಫಿದಾ ಆದ ಬಾಲಿವುಡ್​​ನ ಮತ್ತೋರ್ವ ಸ್ಟಾರ್​​ ನಟ!

ಇತ್ತೀಚೆಗೆ ಅಲ್ಲು ಅರ್ಜುನ್​​​ ನಟಿಸಿರುವ ‘ಅಲಾ ವೈಕುಂಠಪುರಂಲೋ‘ ಸಿನಿಮಾ ಬಿಡುಗಡೆಗೊಂಡು ದೊಡ್ಡ ಸದ್ದು ಮಾಡಿತ್ತು. ಈ ಸಿನಿಮಾದ ‘ಬುಟ್ಟ ಬೊಮ್ಮಾ‘ ಹಾಡು ಕೂಡ ಸಿನಿ ಪ್ರೀಯರ ಮನಗೆದ್ದಿತ್ತು. ಈ ಹಾಡಿಗೆ ಅಲ್ಲು ಅರ್ಜುನ್​ ಹಾಕಿದ್ದ ಸ್ಟೆಪ್​ ನೋಡಿ ಅನೇಕರು ವ್ಹಾಗ್​ ರೆ ವ್ಹಾಹ್​ ಎಂದು ಹೇಳಿದ್ದರು. ಇಷ್ಟು ಮಾತ್ರವಲ್ಲ ಬಾಲಿವುಡ್​ ನಟಿ ದಿಶಾ ಪಟಾನಿ ಕೂಡ ಡ್ಯಾನ್ಸ್​ ನೋಡಿ ಫಿದಾ ಆಗಿದ್ದರು. ಇದೀಗ ನಟ ಶಾಹಿದ್ ಕಪೂರ್​ ಕೂಡ ಅಲ್ಲು ಡ್ಯಾನ್ಸ್​​​ಗೆ ಮನಸೋತಿದ್ದಾರೆ.

news18-kannada
Updated:May 13, 2020, 7:02 PM IST
ಅಲ್ಲು ಅರ್ಜುನ್​ ಡ್ಯಾನ್ಸ್​ಗೆ ಫಿದಾ ಆದ ಬಾಲಿವುಡ್​​ನ ಮತ್ತೋರ್ವ ಸ್ಟಾರ್​​ ನಟ!
ಅಲ್ಲು ಅರ್ಜುನ್​
  • Share this:
ಟಾಲಿವುಡ್​ ನಟ ಅಲ್ಲು ಅರ್ಜುನ್​ ಡ್ಯಾನ್ಸ್​ ಫೀದಾ ಆಗದವರೇ ಇಲ್ಲ. ಪ್ರತಿ ಸಿನಿಮಾದಲ್ಲಿ ಅಲ್ಲು ಅರ್ಜುನ್​​ ವಿಭಿನ್ನ ಸ್ಟೆಪ್​​ ಹಾಕುತ್ತಾರೆ. ಮಾತ್ರವಲ್ಲ ಇವರ ಡ್ಯಾನ್ಸ್​ ನೋಡಿ ಸಾಕಷ್ಟು ಅಭಿಮಾನಿಗಳು ಮನ ಸೋತಿದ್ದಾರೆ. ಇದೀಗ ಬಾಲಿವುಡ್​ ಸ್ಟಾರ್​ ನಟರೊಬ್ಬರು ಅಲ್ಲು ಡ್ಯಾನ್ಸ್​​ ನೋಡಿ ಫಿದಾ ಆಗಿದ್ದಾರೆ.

ಇತ್ತೀಚೆಗೆ ಅಲ್ಲು ಅರ್ಜುನ್​​​ ನಟಿಸಿರುವ ‘ಅಲಾ ವೈಕುಂಠಪುರಂಲೋ‘ ಸಿನಿಮಾ ಬಿಡುಗಡೆಗೊಂಡು ದೊಡ್ಡ ಸದ್ದು ಮಾಡಿತ್ತು. ಈ ಸಿನಿಮಾದ ‘ಬುಟ್ಟ ಬೊಮ್ಮಾ‘ ಹಾಡು ಕೂಡ ಸಿನಿ ಪ್ರೀಯರ ಮನಗೆದ್ದಿತ್ತು. ಈ ಹಾಡಿಗೆ ಅಲ್ಲು ಅರ್ಜುನ್​ ಹಾಕಿದ್ದ ಸ್ಟೆಪ್​ ನೋಡಿ ಅನೇಕರು ವ್ಹಾಗ್​ ರೆ ವ್ಹಾಹ್​ ಎಂದು ಹೇಳಿದ್ದರು. ಇಷ್ಟು ಮಾತ್ರವಲ್ಲ ಬಾಲಿವುಡ್​ ನಟಿ ದಿಶಾ ಪಟಾನಿ ಕೂಡ ಡ್ಯಾನ್ಸ್​ ನೋಡಿ ಫಿದಾ ಆಗಿದ್ದರು. ಇದೀಗ ನಟ ಶಾಹಿದ್ ಕಪೂರ್​ ಕೂಡ ಅಲ್ಲು ಡ್ಯಾನ್ಸ್​​​ಗೆ ಮನಸೋತಿದ್ದಾರೆ.

ದಕ್ಷಿಣ ಭಾರತದ ಸೂಪರ್ ಸಿನಿಮಾಗಳಾದ ಅರ್ಜುನ್​ ರೆಡ್ಡಿ, ಜರ್ಸಿ ಸಿನಿಮಾವನ್ನು ಬಾಲಿವುಡ್​​ನಲ್ಲಿ ರಿಮೇಕ್​ ಮಾಡಿದ್ದ ಶಾಹಿದ್​​​  ಕಪೂರ್ ಇತ್ತೀಚೆಗೆ ಅಲ್ಲು ಅರ್ಜುನ್​ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಶಾಹಿದ್​ ಕಫೂರ್​ ಟ್ವಿಟ್ಟರ್​ನಲ್ಲಿ ಆಸ್ಕ್​​ ಎನಿಥಿಂಗ್​​ ಸೆಶನ್ ನಡೆಸಿದ್ದರು. ಈ ಸಮಯದಲ್ಲಿ ಅಭಿಮಾನಿಯೊಬ್ಬ ಅಲ್ಲು ಅರ್ಜುನ್​ ಬಗ್ಗೆ ಹೇಳಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಶಾಹಿದ್​​ ಅಲ್ಲು ಅರ್ಜುನ್​​ ಡ್ಯಾನ್ಸ್​ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ಈ ಹಿಂದೆ ನಟಿ ದಿಶಾ ಪಟಾನಿ ಕೂಡ ಅಲ್ಲು ಅರ್ಜುನ್​ ಡ್ಯಾನ್ಸ್​ ಮಾಡಿರುವ ಬುಟ್ಟ ಬೊಮ್ಮಾ ಹಾಡಿನ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದರು. ಹೇಗೆ ಡ್ಯಾನ್ಸ್​ ಮಾಡುತ್ತೀರಿ? ಅಲ್ಲು ಅರ್ಜುನ್​​ಗೆ ಎಂದು ಪ್ರಶ್ನಿಸಿದ್ದರು.ದಿಶಾ ಅವರ ಪ್ರಶ್ನೆಗೆ ಅಲ್ಲು ಅರ್ಜುನ್​ ಕಾಮೆಂಟ್​ ಮಾಡಿದ್ದರು. ನನಗೆ ಸಂಗೀತವೆಂದರೆ ತುಂಬಾ ಇಷ್ಟ ಉತ್ತಮ ಸಂಗೀತ ನೃತ್ಯ ಮಾಡಿಸುತ್ತದೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಯೆ ನೀಡಿದ್ದರು.Instagram: ಸಣ್ಣ ಉದ್ಯಮಗಳಿಗೆ ನೆರವಾಗಲು ಇನ್​​ಸ್ಟಾಗ್ರಾಂ ನೀಡಿದೆ ಹೊಸ ಫೀಚರ್!
First published: May 13, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading