ಬಾಲಿವುಡ್ ಕಿಂಗ್ ಖಾನ್ ಶಾರುಖ್ (Shah Rukh Khan Updates) ಇದೀಗ ಖುಷಿಯಲ್ಲಿದ್ದಾರೆ. ಪಠಾಣ್ ಸಿನಿಮಾ ಗೆಲುವು ಕಂಡಿದ್ದೇ ತಡ, ಕಿಂಗ್ ಖಾನ್ ಮತ್ತೆ ಜೋಶ್ ಅಲ್ಲಿಯೇ ಇದ್ದಾರೆ. ತಮ್ಮ ಗೆಲುವಿಗೆ ಕಾರಣವಾದ (Jawan Movie Secrets Reveal) ಪಠಾಣ್ ಸಿನಿಮಾದ ಸಂತೋಷದಲ್ಲಿ ತಮ್ಮ ಮುಂದಿನ ಜವಾನ್ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ (Bollywood Actor Movie) ಅಭಿಮಾನಿಗಳ ಪ್ರಶ್ನೆಗೂ ಕಿಂಗ್ ಖಾನ್ ಉತ್ತರಿಸಿದ್ದಾರೆ. ಹಾಗೆ ಉತ್ತರಿಸೋ ಭರದಲ್ಲಿಯೇ ಒಂದಷ್ಟು ಸೀಕ್ರೆಟ್ ಬಿಚ್ಚಿಟ್ರೇ? ಈ ಒಂದು ಪ್ರಶ್ನೆ ಕೂಡ ಇದೀಗ ಎದ್ದಿದೆ. ಆದರೆ ಶಾರುಖ್ (Jawan Movie Updates) ಅಸಲಿಗೆ ರಿವೀಲ್ ಮಾಡಿದ ವಿಷಯವೇನು? ಅಭಿಮಾನಿಗಳು ಕೇಳಿದ ಪ್ರಶ್ನೆಗಳೇನು ? ಎಲ್ಲ ಮಾಹಿತಿ ವಿವರ ಇಲ್ಲಿದೆ ಓದಿ.
ಜವಾನ್ ಸೀಕ್ರೆಟ್ ರಿವೀಲ್ ಮಾಡಿದ ಕಿಂಗ್ ಖಾನ್ ಶಾರುಖ್
ಕಿಂಗ್ ಖಾನ್ ಶಾರುಖ್ ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದರು. ಅದು ಪಠಾಣ್ ಮೂಲಕ ಬಹಳ ವರ್ಷಗಳ ಬಳಿಕ ಈಗ ಸಿಕ್ಕಿದೆ. ಆದರೆ, ಸೋಲಿನಿಂದ ರೋಸಿ ಹೋಗಿದ್ದ ಶಾರುಖ್ ಖಾನ್, ಜವಾನ್ ಚಿತ್ರದ ಮೂಲಕ ದಕ್ಷಿಣದ ಕಡೆಗೂ ಬಂದಿದ್ದರು. ಅಷ್ಟರಲ್ಲಿಯೇ ಪಠಾಣ್ ಯಶಸ್ಸಿನ ರುಚಿ ನೀಡಿತ್ತು.
ಈ ಒಂದು ಗದ್ದಲದಲ್ಲಿ ಜವಾನ್ ಸಿನಿಮಾ ಏನಾಯ್ತು ಅನ್ನೋದು ತಿಳಿದಿರಲಿಲ್ಲ. ಆದರೆ ಮೊನ್ನೆ ಸ್ವತಃ ಶಾರುಖ್ ಖಾನ್ ತಮ್ಮ ನಿರ್ಮಾಣದ ಜವಾನ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು. ಸೆಪ್ಟೆಂಬರ್-೭ ರಂದು ತಮ್ಮ ಚಿತ್ರ ರಿಲೀಸ್ ಆಗುತ್ತದೆ ಅಂತ ವಿಡಿಯೋ ಮೂಲಕ ಹೇಳಿಕೊಂಡಿದ್ದರು.
ಫ್ಯಾನ್ಸ್ ಪ್ರಶ್ನೆ-ಶಾರುಖ್ ಉತ್ತರ-ಮುಂದೆ ಆಗಿದ್ದೇನು?
ಆದರೆ ಇದೀಗ ಶಾರುಖ್ ಖಾನ ತಮ್ಮ ಚಿತ್ರದ ಬಗ್ಗೆ ಅಭಿಮಾನಿಗಳ ಜೊತೆಗೆ ಮುಕ್ತವಾಗಿಯೇ ಮಾತನಾಡಿದ್ದಾರೆ. ಆಸ್ಕ್ ಎಸ್‌ಆರ್‌ಕೆ ಮೂಲಕ ಫ್ಯಾನ್ಸ್ ಕೇಳಿರೋ ಪ್ರಶ್ನೆಗೆ ಉತ್ತರಿಸಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಜವಾನ್ ಚಿತ್ರದ ಒಂದಷ್ಟು ವಿಶೇಷ ವಿಷಯಗಳನ್ನ ಕೂಡ ಶಾರುಖ್ ರಿವೀಲ್ ಮಾಡಿದ್ದಾರೆ.
ಹೌದು, ಜವಾನ್ ಚಿತ್ರ ಶಾರುಖ್ ಖಾನ್‌ಗೆ ಹೊಸ ರೀತಿಯ ಸಿನಿಮಾ ಆಗಿದೆ. ತಮ್ಮ ಚಿತ್ರ ಜೀವನದಲ್ಲಿ ಮಾಡಿರೋ ಸಿನಿಮಾಗಳಲ್ಲಿ ಇಲ್ಲಿವರೆಗೂ ಈ ರೀತಿಯ ಸಿನಿಮಾ ಮಾಡಿರಲಿಲ್ಲ. ಆದರೆ ಜವಾನ್ ಒಂದು ಸ್ಪೆಷಲ್ ಸಿನಿಮಾ ಆಗಿದೆ.
ಜವಾನ್ ಒಂದು ಕ್ಲಾಸ್-ಮಾಸ್ ಸಿನಿಮಾ ಎಂದ ಖಾನ್
ಕ್ಲಾಸ್ ಮತ್ತು ಮಾಸ್ ಎರಡನ್ನೂ ಮಿಕ್ಸ್ ಮಾಡಿಯೇ ಜವಾನ್ ಚಿತ್ರವನ್ನ ಮಾಡಲಾಗಿದೆ. ಇದು ನನಗೆ ಬಹು ಇಷ್ಟವಾಗಿದೆ ಅಂತ ಶಾರುಖ್ ಖಾನ್ ಉತ್ತರಿಸಿದ್ದಾರೆ. ಸಿನಿಮಾದ ಪೋಸ್ಟರ್ ನಲ್ಲಿ ಶಾರುಖ್ ಮುಖವೇ ಕಾಣಿಸೋದಿಲ್ಲ. ಈ ಕುರಿತು ಕೇಳಿದ ಪ್ರಶ್ನೆಗೂ ಶಾರುಖ್ ಸಖತ್ ಉತ್ತರ ಕೊಟ್ಟಿದ್ದಾರೆ.
ನನ್ನ ಮುಖಕ್ಕಿಂತಲೂ ನನ್ನ ಹೆಸರೇ ಓಡುತ್ತದೆ. ಈ ಒಂದು ನಂಬಿಕೆ ನಿರ್ದೇಶಕರಿಗೆ ಇದೆ. ಈ ಹಿನ್ನೆಲೆಯಲ್ಲಿ ಪೋಸ್ಟರ್‌ನಲ್ಲಿ ನಾನು ಕಾಣೋದಿಲ್ಲ ಅಂತಲೇ ಶಾರುಖ್ ಉತ್ತರಿಸಿದ್ದಾರೆ.
ಜವಾನ್ ಸಿನಿಮಾ ರಿಲೀಸ್ ತಡವಾಗಿದ್ದೇಕೆ?
ಜವಾನ್ ಸಿನಿಮಾ ತಡವಾಗಿದೆ. ಒಂದ್ ಒಳ್ಳೆ ಸಿನಿಮಾ ಆಗೋಕೆ ಟೈಮ್ ಬೇಕು. ಆ ಸಮಯವನ್ನ ಜವಾನ್ ತೆಗೆದುಕೊಂಡಿದೆ. ಒಂದೇ ಒಂದು ಬ್ರೇಕ್ ಇಲ್ಲದೇ ಇಡೀ ಟೀಮ್ ಕೆಲಸ ಮಾಡಿದೆ. ಅವರ ಪರಿಶ್ರಮದ ಫಲ ಜವಾನ್ ಸಿನಿಮಾ ಚೆನ್ನಾಗಿ ಬಂದಿದೆ ಅಂತಲೇ ಶಾರುಖ್ ಹೇಳುತ್ತಾರೆ.
ಇದನ್ನೂ ಓದಿ: Raghavendra rajkumar: ರಾಘಣ್ಣನ ಅಪರೂಪದ ಸಂಗ್ರಹ-ಪ್ರತಿ ದಿನ ಒಂದೊಂದು ನೆನಪಿನ ಚಿತ್ರಣ
ಸಿನಿಮಾದಲ್ಲಿ ನಟಿಸಿರೋ ವಿಜಯ್ ಸೇತುಪತಿ ಒಬ್ಬ ಒಳ್ಳೆ ನಟರಾಗಿದ್ದಾರೆ. ಅದಕ್ಕೂ ಹೆಚ್ಚಾಗಿ ಒಬ್ಬ ಒಳ್ಳೆ ವ್ಯಕ್ತಿ ಆಗಿದ್ದಾರೆ. ನಟ ನಯನತಾರಾ ಕೂಡ ಚೆನ್ನಾಗಿಯೇ ನಟಿಸಿದ್ದಾರೆ. ಡೈರೆಕ್ಟರ್ ಆಟ್ಲಿ ಮತ್ತು ಸಂಗೀತ ನಿರ್ದೇಶಕ ನನ್ನಿಂದ ಒಂದು ತಮಿಳು ಸಾಂಗ್‌ಗೆ ಲಿಪ್ ಸಿಂಕ್ ಮಾಡಿಸಿದ್ದಾರೆ ಅಂತ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಶಾರುಖ್ ಉತ್ತರಿಸಿದ್ದಾರೆ. ಈ ಮೂಲಕ ಶಾರುಖ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ