• Home
  • »
  • News
  • »
  • entertainment
  • »
  • Shah Rukh Khan: ನಟ ಶಾರುಖ್ ಖಾನ್ ಮನೆ ಗೇಟ್ ವಜ್ರದ್ದಂತೆ! 'ಕಿಂಗ್' ಮನೆ ನಾಮಫಲಕ ನೋಡಲು ಫ್ಯಾನ್ಸ್ ನೂಕುನುಗ್ಗಲು!

Shah Rukh Khan: ನಟ ಶಾರುಖ್ ಖಾನ್ ಮನೆ ಗೇಟ್ ವಜ್ರದ್ದಂತೆ! 'ಕಿಂಗ್' ಮನೆ ನಾಮಫಲಕ ನೋಡಲು ಫ್ಯಾನ್ಸ್ ನೂಕುನುಗ್ಗಲು!

ಶಾರುಖ್ ಖಾನ್ ಮನೆ ಮನತ್ ಗೆ ವಜ್ರದ ಶೃಂಗಾರ

ಶಾರುಖ್ ಖಾನ್ ಮನೆ ಮನತ್ ಗೆ ವಜ್ರದ ಶೃಂಗಾರ

ಶಾರುಖ್ ಖಾನ್ ಅವರು ತಮ್ಮ ಗೇಟಿನ ನಾಮಫಲಕಕ್ಕೆ ವಜ್ರ ಹಾಕಿಸಿಕೊಂಡಿದ್ದಾರೆ ಎಂದು ಗೊತ್ತಾಗಿದ್ದೇ ತಡ. ಅದನ್ನು ನೋಡಲು ಅಭಿಮಾನಿಗಳೇ ದಂಡೇ ಶಾರುಖ್ ಮನೆ ಬಳಿ ಬರುತ್ತಿದೆ!

  • News18 Kannada
  • Last Updated :
  • Mumbai, India
  • Share this:

    ಸದ್ಯ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರ ಮನೆಯದ್ದೇ ಮಾತು. ಎಲ್ಲರೂ ತಮ್ಮ ಮನೆಯ ಗೇಟುಗಳನ್ನು ಭಿನ್ನವಾಗಿ ಅಲಂಕಾರ ಮಾಡುವುದನ್ನು ನೋಡಿದ್ದೇವೆ. ಆದ್ರೆ ಶಾರುಖ್ ಖಾನ್ ತಮ್ಮ ಮನೆಯೇ ಗೇಟಿನ ನಾಮಫಲವನ್ನು ವಜ್ರದಿಂದ (Diamond) ಅಲಂಕರಿಸಿದ್ದಾರೆ. ಶಾರುಖ್ ಖಾನ್ ಅವರ ಮನೆ ಮನ್ನತ್ (Mannat) ಎಲ್ಲರ ಗಮನ ಸೆಳೆದಿದೆ. ಆಗಾಗ್ಗೆ ತಮ್ಮ ಮನೆಗೆ ಪಾರ್ಟಿ ಮಾಡಲು ಬಾಲಿವುಡ್ ಮಂದಿಯನ್ನು ಆಹ್ವಾನ ಮಾಡೋ ಶಾರುಖ್ ಖಾನ್, ವಜ್ರಖಚಿತ ನಾಮಫಲಕವನ್ನು ಆಯ್ಕೆ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ, ಶಾರುಖ್ ಅಭಿಮಾನಿಗಳು ಮನೆಯ ಹೊರಗೆ ಜಮಾಯಿಸಿ ಅದರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಶಾರುಖ್ ಅಭಿಮಾನಿಗಳ ಸಂಘ ಈ ಹೊಸ ನಾಮಫಲಕದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.


    ಮನ್ನತ್‌ಗೆ ವಜ್ರದ ಶೃಂಗಾರ
    ಶಾರುಖ್ ಖಾನ್ ಅವರ ವಜ್ರದ ನಾಮಫಲಕ ಹೊಳೆಯುತ್ತಿದ್ದು, ಎಡಭಾಗದಲ್ಲಿ ಮನ್ನತ್ ಮತ್ತು ಬಲಭಾಗದಲ್ಲಿ ಲ್ಯಾಂಡ್ಸೆಂಡ್ ಎಂದು ಬರೆಯಲಾಗಿದೆ. ಹಿಂದೆ, ಇದು ಮನ್ನತ್ ಲ್ಯಾಂಡ್‍ಸೆಂಡ್ ಎಂಬ ಕಪ್ಪು ಹಲಗೆಯಾಗಿತ್ತು. ಈಗ ವಜ್ರದಿಂದ ಕಂಗೊಳಿಸುತ್ತಿದೆ. 'ಚಕ್ ದೇ ಇಂಡಿಯಾ' ನಟನ ಬಂಗಲೆಯು ಮುಂಬೈನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ.


    ಎಲ್ಲೆಡೆ ನಾಮಫಲಕದ ಚಿತ್ರ ವೈರಲ್
    ಶಾರುಖ್ ಖಾನ್ ಅವರು ತಮ್ಮ ಗೇಟಿನ ನಾಮಫಲಕಕ್ಕೆ ವಜ್ರ ಹಾಕಿಸಿಕೊಂಡಿದ್ದಾರೆ ಎಂದು ಗೊತ್ತಾಗಿದ್ದೇ ತಡ. ಅದನ್ನು ನೋಡಲು ಅಭಿಮಾನಿಗಳೇ ದಂಡೇ ಶಾರುಖ್ ಮನೆ ಬಳಿ ಬರುತ್ತಿದೆ. ಆ ಗೇಟಿನ ನಾಮಫಲಕದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅವಗಳನ್ನು ಸಾಮಜಿಕ ಜಾಲತಾಣದಲ್ಲಿ ಹಂಚಿಕೊಳ್ತಾ ಇದ್ದಾರೆ.


    ಶಾರುಖ್ ಖಾನ್ ಮನೆ ಮನತ್ ಗೆ ವಜ್ರದ ಶೃಂಗಾರ


    ಇದನ್ನೂ ಓದಿ: Janhvi Kapoor: ಕುಳಿತುಕೊಂಡೇ ಸಖತ್ ಪೋಸ್ ಕೊಟ್ಟ ಶ್ರೀದೇವಿ ಪುತ್ರಿ 


    ಪಠಾಣ್ ಗಾಗಿ ಕಾಯುತ್ತಿರುವ ಅಭಿಮಾನಿಗಳು
    ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ಶಾರುಖ್ ತುಂಬಾ ಶ್ರಮ ಪಟ್ಟಿದ್ದಾರೆ. ಸಿಕ್ಸ್ ಪ್ಯಾಕ್ಸ್ ಗೆಟಪ್‍ನಲ್ಲಿ ಫೈಟ್ ಮಾಡಿದ್ದಾರೆ. ಈ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ.


    ಶಾರುಖ್ ಹುಟ್ಟುಹಬ್ಬದಂದ ಟೀಸರ್
    ಇತ್ತೀಚೆಗೆ, ಶಾರುಖ್ ಖಾನ್ ಅವರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ ಆ ಸಂದರ್ಭದಲ್ಲಿ ಪಠಾನ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಟೀಸರ್​​ನಲ್ಲಿ ಅವರ ಭರ್ಜರಿ ಆ್ಯಕ್ಷನ್​ ಅವತಾರ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರ ನೋಡಲು ಕಾಯುತ್ತಿದ್ದಾರೆ.


    ಇದಲ್ಲದೆ, ಅವರು ತಾಪ್ಸಿ ಪನ್ನು ಜೊತೆಗೆ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಅವರ ಮುಂದಿನ 'ಡುಂಕಿ' ಮತ್ತು ದಕ್ಷಿಣ ನಿರ್ದೇಶಕ ಅಟ್ಲೀ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ 'ಜವಾನ್' ಅನ್ನು ಮಾಡಲಿದ್ದಾರೆ. ಇದು ಜೂನ್ 2, 2023 ರಂದು ಥಿಯೇಟರ್‍ಗಳಿಗೆ ಬರಲು ಸಿದ್ಧವಾಗಿದೆ.


    ಇದನ್ನೂ ಓದಿ: Megastar Chiranjeevi: 'ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ' ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ 


    ಶಾರುಖ್ ಖಾನ್ 'ಪಠಾಣ್' ಬಿಡುಗಡೆಯಾದ ತಕ್ಷಣ 'ಟೈಗರ್ 3' ಚಿತ್ರೀಕರಣ ಮಾಡಲಿದ್ದಾರೆ.   ‘ಜವಾನ್​’, ‘ಡಂಕಿ’, ‘ಪಠಾಣ್​’ ಮುಂತಾದ ಸಿನಿಮಾಗಳಲ್ಲಿ ಶಾರುಖ್​ ಖಾನ್​ ನಟಿಸುತ್ತಿದ್ದಾರೆ.  ಸದ್ಯ ಡೈಮಂಡ್ ಗೇಟ್ ನೋಡಲು ಅಭಿಮಾನಗಳು ಬರುತ್ತಿದ್ದಾರೆ.

    Published by:Savitha Savitha
    First published: