SRK Plus: ಸ್ವಂತ ಒಟಿಟಿ ಘೋಷಿಸಿದ ಬಾಲಿವುಡ್​ ಬಾದ್​ಶಾ! ಶೀಘ್ರದಲ್ಲೇ ಅದ್ಭುತ ನಡೆಯುತ್ತೆ ಎಂದ ಶಾರುಖ್ ಖಾನ್​

ಶಾರುಖ್​ ಖಾನ್​ ಯಾವುದೇ ಗೋಜಿಗೂ ಹೋಗುವುದಿಲ್ಲ. ತಾವು ಆಯ್ತು, ತಮ್ಮ ಕೆಲಸ ಆಯ್ತು ಅಂತ ಸುಮ್ಮನಿರುತ್ತಾರೆ. ಶಾರುಖ್​ ಖಾನ್​ ಕಾಲಿಡದ ಜಾಗವೇ ಇಲ್ಲ. ಈಗ ಒಟಿಟಿ(OTT)ಗಳದ್ದೇ ದರ್ಬಾರ್​. ಹೀಗಾಗಿ ಬಾಲಿವುಡ್(Bollywood)​ ಬಾದ್​ ಶಾ(Badshah) ಶಾರುಖ್​ ಖಾನ್​ ಒಟಿಟಿ ಜಗತ್ತಿಗೂ ಕಾಲಿಟ್ಟಿದ್ದಾರೆ. 

ನಟ ಶಾರುಖ್​ ಖಾನ್​

ನಟ ಶಾರುಖ್​ ಖಾನ್​

  • Share this:
ಬಾಲಿವುಡ್​(Bollywood)ನಲ್ಲಿ ಖಾನ್(Khan)​ಗಳದ್ದೇ ಅಬ್ಬರ. ಅದು ಆಗಿನಿಂದಲೂ. ಶಾರುಖ್​ ಖಾನ್(Shah Rukh  Khan)​, ಸಲ್ಮಾನ್​ ಖಾನ್(Salman Khan)​, ಆಮಿರ್​ ಖಾನ್(Aamir Khan)​ ಈ ಮೂರು ಖಾನ್​ಗಳೇ ಬಾಲಿವುಡ್(Bollywood)​ನ ಪಿಲ್ಲರ್(Pillar)​.  ಇವರಲ್ಲಿ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​​.ಮದುವೆ ಸಹವಾಸವೇ ಬೇಡ ಅಂತ ಸುಮ್ಮನಿದ್ದಾರೆ. ಶಾರುಖ್​ ಖಾನ್​ ಮದುವೆಯಾಗಿ ಅನೋನ್ಯವಾಗಿದ್ದಾರೆ.  ಇನ್ನೂ ಇತ್ರೀಚೆಗೆ ಆಮಿರ್​​ ಖಾನ್​ ತಮ್ಮ 2ನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಸಲ್ಮಾನ್​ ಖಾನ್​ ಹಾಗೂ ಆಮಿರ್​ ಖಾನ್​ಗಿಂತ ಹೆಚ್ಚು ಅಭಿಮಾನಿಗಳFans)ನ್ನು ಶಾರುಖ್​ ಖಾನ್​ ಹೊಂದಿದ್ದಾರೆ. ಇವರಿಬ್ಬರಿಗಿಂತ ಶಾರುಖ್​ ಖಾನ್​ ಯಾವುದೇ ಗೋಜಿಗೂ ಹೋಗುವುದಿಲ್ಲ. ತಾವು ಆಯ್ತು, ತಮ್ಮ ಕೆಲಸ ಆಯ್ತು ಅಂತ ಸುಮ್ಮನಿರುತ್ತಾರೆ. ಶಾರುಖ್​ ಖಾನ್​ ಕಾಲಿಡದ ಜಾಗವೇ ಇಲ್ಲ. ಈಗ ಒಟಿಟಿ(OTT)ಗಳದ್ದೇ ದರ್ಬಾರ್​. ಹೀಗಾಗಿ ಬಾಲಿವುಡ್(Bollywood)​ ಬಾದ್​ ಶಾ(Badshah) ಶಾರುಖ್​ ಖಾನ್​ ಒಟಿಟಿ ಜಗತ್ತಿಗೂ ಕಾಲಿಟ್ಟಿದ್ದಾರೆ. 

ಹೊಸ ಒಟಿಟಿ ಘೋಷಿಸಿದ ಬಾದ್​ಶಾ ಶಾರುಖ್​ ಖಾನ್!

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಿರುವ ಶಾರುಖ್ ಖಾನ್ 'ಎಸ್‌ಆರ್‌ಕೆ ಪ್ಲಸ್' ಶೀಘ್ರದಲ್ಲಿ ಬರಲಿದೆ ಎಂದಿದ್ದಾರೆ. ‘ಒಟಿಟಿ ಜಗತ್ತಿನಲ್ಲಿ ಒಂದು ಅದ್ಭುತ ಶೀಘ್ರದಲ್ಲಿಯೇ ನಡೆಯಲಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ ಶಾರುಖ್ ಖಾನ್.ಶಾರುಖ್ ಖಾನ್‌, ರೆಡ್ ಚಿಲ್ಲೀಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ ಅದರ ಮೂಲಕ ಹಲವು ಸಿನಿಮಾ, ವೆಬ್ ಸರಣಿ, ಟಿವಿ ಶೋಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಇದೇ ಸಂಸ್ಥೆಯ ಅಡಿಯಲ್ಲಿ ಈಗ ಒಟಿಟಿ ಸಹ ಸ್ಥಾಪಿಸಲು ಹೊರಟಿದ್ದಾರೆ ಶಾರುಖ್.

ಡಿಸ್ನಿ ಹಾಟ್​ಸ್ಟಾರ್​ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಶಾರುಖ್​!

ಈ ಹಿಂದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್​ನ ಜಾಹಿರಾತುಗಳಲ್ಲಿ ಶಾರುಖ್ ಖಾನ್​ ಕಾಣಿಸಿಕೊಂಡಿದ್ದರು. ಆಗ ಶಾರುಖ್ ಒಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರ ಬಳಿಕ ಕೆಲವು ಕಾರಣಗಳಿಂದ ಆ ಯೋಜನೆ ಕೈಬಿಡಲಾಯಿತು. ಈಗ ಸ್ವಂತವಾಗಿ ಒಟಿಟಿ ತೆರೆಯಲು ಹೊರಟಿದ್ದಾರೆ ಶಾರುಖ್. ತಮ್ಮ ಒಟಿಟಿಗೆ 'ಎಸ್‌ಆರ್‌ಕೆ ಪ್ಲಸ್' ಎಂದು ಹೆಸರಿಟ್ಟಿರುವ ಕಾರಣ ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಪ್ರತಿಸ್ಪರ್ಧೆಯಾಗಿ ಮಾಡುತ್ತಿರುವ ಪ್ರಯತ್ನವಾ ಎಂಬ ಅನುಮಾನ ಕೂಡ ಮೂಡಿಸಿದೆ.


ಇದನ್ನೂ ಓದಿ: `ನೀನೇ ರಾಜಕುಮಾರ’ ಎಂದ ಕಿಚ್ಚ ಸುದೀಪ್​! ಮೊದಲ ಅಪ್ಪು ಬಯೋಗ್ರಫಿ ಪುಸ್ತಕ ರಿಲೀಸ್​

ಶಾರುಖ್​ಗೆ ಶುಭಕೋರಿದ ಸಲ್ಮಾನ್​ ಖಾನ್!

ಮೊದಮೊದಲು ಬಾಲಿವುಡ್​ನಲ್ಲಿ ಸ್ಟಾರ್​ ವಾರ್​ ಜೋರಿತ್ತು. ಅದರಲ್ಲೂ ಖಾನ್​ಗಳ ನಡುವೆ ಇದ್ದ ಸ್ಟಾರ್​ ವಾರ್​ ಅಂತೂ ಕೇಳಲೇ ಬೇಡಿ. ಶಾರುಖ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ಅಭಿಮಾನಿಗಳು ಯಾವಾಗಲು ಕಿರಿಕ್​ ಮಾಡುತ್ತಿದ್ದರು. ಇದಾದ ಬಳಿಕ ಎಲ್ಲವನ್ನೂ ಮರೆತು ಶಾರುಖ್​ ಹಾಗೂ ಸಲ್ಮಾನ್​ ಕುಚಿಕು ಗೆಳೆಯರಾಗಿದ್ದಾರೆ. ಇದೀಗ ಶಾರುಖ್​ ಖಾನ್​ ಅವರ ಹೊಸ ಒಟಿಟಿ ಫ್ಲಾಟ್​ಫಾರ್ಮ್ ಘೋಷಣೆಗೆ ಸಲ್ಮಾನ್​ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ. ಆತ್ಮೀಯ ಗೆಳೆಯ  ಸಲ್ಮಾನ್ ಖಾನ ಟ್ವಿಟ್ಟರ್ ಮೂಲಕ ಶಾರುಖ್ ಖಾನ್‌ಗೆ ಶುಭ ಕೋರಿದ್ದಾರೆ. ‘ಇಂದಿನ ಪಾರ್ಟಿ ನಿನ್ನ ಕಡೆಯಿಂದ, ಹೊಸ ಒಟಿಟಿ ಅಪ್ಲಿಕೇಶನ್ ಪ್ರಾರಂಭ ಮಾಡುತ್ತಿರುವ ನಿನಗೆ ಶುಭಾಶಯ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಮಗಳ ಭಾಷಣದ ವಿಡಿಯೋ ಸಿಕ್ಕಾಪಟ್ಟೆ ವೈರಲ್​! ಅಪ್ಪ ಅಭಿಷೇಕ್ ಬಚ್ಚನ್​ ಹೇಳಿದ್ದೇನು? ನೀವೇ ನೋಡಿ

ವರ್ಕೌಟ್​ ಆಗುತ್ತಾ ಶಾರುಖ್​ ಪ್ಲಸ್​ ಒಟಿಟಿ!

ಇಂಡಿಯಾದಲ್ಲಿ ಈಗಾಗಲೇ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂ, ಸೋನಿ ಲಿವ್, ಜೀ5, ಆಹಾ, ಅಲ್ಟ್​ ಬಾಲಾಜಿ ಸೇರಿ ಹಲವಾರು ಒಟಿಟಿ ಫ್ಲಾಟ್​ಫಾರ್ಮ್​ಗಳಿವೆ. ಇದರ ನಡುವೆ ಇದೀಗ ಶಾರುಖ್​ ಖಾನ್​ ತಮ್ಮದೇ ಸ್ವಂತ ಒಟಿಟಿ ಘೋಷಿಸಿದ್ದಾರೆ. ಇದು ವರ್ಕೌಟ್​ ಆಗುತ್ತಾ ಕಾದು ನೋಡಬೇಕಿದೆ.
Published by:Vasudeva M
First published: