HOME » NEWS » Entertainment » BOLLYWOOD ACTOR SHAH RUKH KHAN ADVISE TO FAN ASKING HOW TO WIN OVER GIRLS PROVES WHY HES KING OF ROMANCE STG HG

ಹುಡುಗಿಯನ್ನು ಗೆಲ್ಲುವುದು ಹೇಗೆ? ಅಭಿಮಾನಿಯ ಪ್ರಶ್ನೆಗೆ ಶಾರುಖ್‌ ಖಾನ್‌ ಉತ್ತರಿಸಿದ್ದು ಹೀಗೆ..

ಶಾರುಖ್‌​ ಖಾನ್​ ಅವರ ಈ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಬಹಳ ಪ್ರೌಢವಾಗಿ ಇಂತಹ ಪ್ರಶ್ನೆಗೆ ಉತ್ತರಿಸಿ, ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾದರು.

news18-kannada
Updated:April 2, 2021, 3:34 PM IST
ಹುಡುಗಿಯನ್ನು ಗೆಲ್ಲುವುದು ಹೇಗೆ? ಅಭಿಮಾನಿಯ ಪ್ರಶ್ನೆಗೆ ಶಾರುಖ್‌ ಖಾನ್‌ ಉತ್ತರಿಸಿದ್ದು ಹೀಗೆ..
Shah Rukh Khan
  • Share this:
ಬಾಲಿವುಡ್​ ಸೂಪರ್​ ಸ್ಟಾರ್ ಶಾರುಖ್‌ ಖಾನ್‌ ಬುಧವಾರ ಆಸ್ಕ್​ ಮಿ ಎನಿಥಿಂಗ್ ಎನ್ನುವ ಸೋಶಿಯಲ್​ ಮೀಡಿಯಾ ಸಂಭಾಷಣೆ ನಡೆಸಿದ್ದರು. #AskSRK ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಶಾರುಖ್‌ ಖಾನ್ ಟ್ವಿಟ್ಟರ್​ನಲ್ಲಿ ತಮ್ಮ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದರು. ನೆಟ್ಟಿಗರು ಕೂಡ ನಟನಿಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದರು. ಬುಧವಾರ ಮಧ್ಯಾಹ್ನ ಅಕ್ಷರಶಃ ಅವರ ಅಭಿಮಾನಿಗಳಿಗೆ ಟ್ವಿಟ್ಟರ್​ ಹಬ್ಬದ ಮನೆಯಂತೆ ಇತ್ತು. ಶಾರುಖ್‌ ಅವರ ಮುಂದಿನ ಸಿನಿಮಾ, ಕೋಲ್ಕತ್ತ ನೈಟ್​ ರೈಡರ್ಸ್​​ ಕ್ರಿಕೆಟ್‌ ಟೀಂ ಸೇರಿದಂತೆ ಎಷ್ಟೋ ವಿಷಯಗಳ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು.

ಈ ಸಮಯದಲ್ಲಿ ALBELLA_SRKMSD ಎಂಬ ಟ್ವಿಟ್ಟರ್‌ ಬಳಕೆದಾರ 'ಲಡ್ಕಿ ಪಟಾನೆ ಕೆ ಲಿಯೇ ಏಕ್‌ ಟಿಪ್ಸ್​ ದೋ' ಅಂದರೆ 'ಸೂಪರ್​ ಸ್ಟಾರ್​ ಒಂದು ಹುಡುಗಿಯನ್ನು ಗೆಲ್ಲುವುದು ಹೇಗೆ ತಿಳಿಸಿ' ಎಂದು ಶಾರುಖ್‌ ಖಾನ್‌ ರನ್ನು ಕೇಳಿದರು. ಆದರೆ ಶಾರುಖ್‌​ ನಿಜಕ್ಕೂ ಜೆಂಟಲ್​ಮ್ಯಾನ್ ಅನ್ನೋದನ್ನ ಸಾಬೀತುಪಡಿಸಿದರು. 'ಹುಡುಗಿಯನ್ನು ಪಟಾಯಿಸುವುದು ಎನ್ನುವ ಪದವನ್ನು ಬಳಸುವುದನ್ನು ಮೊದಲು ಬಿಡಿ, ಬಹಳ ಗೌರವ ಮತ್ತು ಒಳ್ಳೆಯತನದಿಂದ ಹುಡುಗಿಯ ಮುಂದೆ ಪ್ರೀತಿಯನ್ನು ನಿವೇದಿಸಿ' ಎಂದು ತಿಳಿಸಿದ್ದಾರೆ.

ಶಾರುಖ್‌​ ಖಾನ್​ ಅವರ ಈ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಬಹಳ ಪ್ರೌಢವಾಗಿ ಇಂತಹ ಪ್ರಶ್ನೆಗೆ ಉತ್ತರಿಸಿ, ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾದರು.



ಕಳೆದ 3 ದಶಕಗಳಿಂದ ಇಂಡಸ್ಟ್ರಿಯಲ್ಲಿರುವ ಶಾರುಖ್‌ ಆಫ್​ಸ್ಟ್ರೀನ್​ನಲ್ಲಿ ತಮ್ಮ ವ್ಯಕ್ತಿತ್ವ ಮತ್ತು ನಡೆಯನ್ನು ಬಹಳ ಅಚ್ಚಕಟ್ಟಾಗಿಟ್ಟುಕೊಂಡಿದ್ದಾರೆ. ಸಂದರ್ಶನವಿರಲಿ, ಅವಾರ್ಡ್​ ಫಂಕ್ಷನ್ ನಿರೂಪಣೆ ಇರಲಿ, ತಮ್ಮ ಬುದ್ಧಿವಂತಿಕೆಯ ನೆರಳಲ್ಲೇ ತುಂಟತನದಿಂದಲೇ ಮಾತನಾಡುತ್ತಾ, ಎಲ್ಲೂ ಎಲ್ಲೆ ಮೀರದೇ ತಮ್ಮ ಗಂಭೀರತೆ ಕಾಪಾಡಿಕೊಂಡಿದ್ದಾರೆ. ಆ ಮೂಲಕ ಇಂಡಸ್ಟ್ರಿಯ ಎಲ್ಲರಿಗಿಂತಲೂ ವಿಭಿನ್ನವಾಗಿ ಉಳಿದಿದ್ದಾರೆ ಶಾರುಖ್‌​ ಖಾನ್​.

ಶಾರುಖ್‌​ ಹಾಸ್ಯ ಪ್ರಜ್ಞೆ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡುವುದಲ್ಲದೆ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುತ್ತದೆ. ಕೆಲವು ವರ್ಷಗಳ ಹಿಂದೆ ಸಾರ್ತಕ್​ ಖೇರ್ ಎನ್ನುವವರು​ ಟ್ವೀಟ್​ ಮಾಡಿ ತಮ್ಮ ಹೈ ಸ್ಕೂಲ್​ ಫ್ರೆಂಡ್​ ಬಳಿ ಹೊರಗೆ ಹೋಗಲು ಮನವಿಯನ್ನು ನಿವೇದಿಸುವುದು ಹೇಗೆ? ಎಂದು ಕೇಳಿದ್ದರು.





ಅದಕ್ಕೆ ಎಸ್​ಆರ್​ಕೆ ಟ್ವೀಟ್​ ಮಾಡಿ. 'ಸಾರ್ಥಕ್ ಖೇರ್​ ನಾನು ಕೇಳಿದರೆ ಆಕೆ ನಿಮ್ಮೊಂದಿಗೆ ಹೋಗುವುದಿಲ್ಲ...ಹ್ಹ..ಹ್ಹಾ... ' ಎಂದು ಟ್ವೀಟ್​ ಮಾಡಿದ್ದರು. ನಂತರ ಆ ಹುಡುಗ ಆ ಹುಡುಗಿಯ ಬಳಿ ನಿವೇದಿಸಿಕೊಂಡಿದ್ದಾನೆ, ಆಕೆಯೂ ಒಪ್ಪಿದ್ದಾಳೆ. ಈ ವಿಷಯವನ್ನು ಶಾರುಖ್‌ ಖಾನ್ ಅವರಿಗೆ ಸಾರ್ಥಕ್ ತಿಳಿಸಿದ್ದಾನೆ. ಅದಕ್ಕೆ ಶಾರುಖ್‌ ಖಾನ್ ಒಂದು ಸಣ್ಣ ಸಲಹೆಯನ್ನು ನೀಡಿದ್ದರು. 'ಆಕೆಯನ್ನು ಪ್ರೀತಿ ಮತ್ತು ಘನತೆಯಿಂದ ನೋಡಿಕೊಳ್ಳಿ, ಜೊತೆಗೆ ನಗುವಿನ ಸಿಂಚನವಿರಲಿ' ಎಂದು ಹೇಳಿದ್ದರು. ಸೂಪರ್​ ಸ್ಟಾರ್​ ಶಾರೂಕ್​ ಪಟಾನ್ ಸಿನಿಮಾ ಮೂಲಕ ಹಲವಾರು ದಿನಗಳ ನಂತರ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ವೈ ಆರ್​ ಎಫ್​ ಚಿತ್ರದಲ್ಲಿ ಸೀಕ್ರೆಟ್ ಏಜೆಂಟ್ ಪಾತ್ರ ನಿರ್ವಹಿಸುತ್ತಿದ್ದಾರೆ.
First published: April 2, 2021, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories