ಬಾಲಿವುಡ್ ಆ್ಯಕ್ಟರ್ ಸಂಜಯ್ ದತ್ (Sanjay Dutt) ಅಭಿನಯದ ಮುನ್ನಾ ಭಾಯ್ ಸರಣಿ ಸಿನಿಮಾ 2003 ರಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರ ಬಂದ್ಮೇಲೆ ಖಳನಾಯಕನಾಗಿ ಸಂಜಯ್ ದತ್ ಇಮೇಜ್ ಚೇಂಜ್ ಆಯಿತು. ಇದೇ ಚಿತ್ರದಲ್ಲಿ ಸಂಜಯ್ ದತ್ಗೆ ಸಾತ್ ಕೊಟ್ಟಿದ್ದ ನಟ ಅರ್ಷದ್ ವಾರ್ಸಿ (Arshad Warsi) ಕೂಡ ಸರ್ಕಿಟ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು. ಇದೇ ಜೋಡಿ ಮುನ್ನಾ ಭಾಯ್ ಎಂಬಿಬಿಎಸ್ ಚಿತ್ರದಲ್ಲೂ ಮುಂದುವರೆಯಿತು. ಸೂಪರ್ ಡೂಪರ್ (Munnabhai Movie) ಕೂಡ ಆಗಿತ್ತು. ಆದರೆ ಅದ್ಯಾಕೋ ಏನೋ, ಮುನ್ನಾ ಭಾಯ್ ಮೂರನೇ ಸರಣಿ ಚಿತ್ರ ಟ್ರ್ಯಾಕ್ಗೆ ಬರಲೇ ಇಲ್ಲ. ಡೈರೆಕ್ಟರ್ ರಾಜ್ಕುಮಾರ್ ಹಿರಾನಿ (Rajkumar Hirani) ಈ ಸೂಪರ್ ಜೋಡಿಯನ್ನ ಒಟ್ಟಿಗೆ ತರಲು ಪ್ರಯತ್ನ ಮಾಡಿ ಸುಮ್ಮನಾದರು.
ಆದರೆ ಈಗ ಈ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.
ಮುನ್ನಾ ಭಾಯ್ ಜೋಡಿಯ ಹೊಸ ಮೋಡಿ
ಮುನ್ನಾ ಭಾಯ್ ಎಂಬಿಬಿಎಸ್, ಲಗೆ ರಹೋ ಮುನ್ನಾ ಭಾಯ್ ಚಿತ್ರಗಳು ಸೂಪರ್ ಹಿಟ್ ಆದವು. ಈ ಚಿತ್ರದ ಮೂಲಕ ಸಂಜಯ್ ದತ್ ಮತ್ತು ನಟ ಅರ್ಷದ್ ವಾರ್ಸಿ ಸಾಕಷ್ಟು ಮನರಂಜನೆ ಕೊಟ್ಟಿದ್ದರು. ಸಿನಿಪ್ರೇಮಿಗಳ ಹೃದಯದಲ್ಲಿ ಮಹಾತ್ಮಾ ಗಾಂಧೀಜಿ ಅವರ ಸಂದೇಶಗಳನ್ನೂ ಸಾರಿದ್ದರು.
ಡೈರೆಕ್ಟರ್ ರಾಜ್ಕುಮಾರ್ ಹಿರಾನಿ ಈ ಜೋಡಿ ಮೂಲಕ ತಮ್ಮ ಹೊಸ ರೀತಿಯ ಕಲ್ಪನೆಯನ್ನ ಬೆಳ್ಳಿ ತೆರೆ ಮೇಲೆ ಬಿತ್ತಿದ್ದರು. ಗಾಂಧಿಜೀ ಅವರ ಸಂದೇಶವನ್ನ ಹೀಗೂ ಹೇಳಬಹುದು ಅನ್ನೋದನ್ನ ಮುನ್ನಾ ಭಾಯ್ ಸರಣಿಯಲ್ಲಿ ತಿಳಿಸಿದ್ದರು.
ಸಂಜಯ್ ದತ್-ಅರ್ಷದ್ ವಾರ್ಸಿ ಹೊಸ ಚಿತ್ರ
ಬಾಲಿವುಡ್ ನಟ ಸಂಜಯ್ ದತ್ ಬೇಡಿಕೆ ಈಗ ಕನ್ನಡದಲ್ಲೂ ಹೆಚ್ಚಾಗಿದೆ. ದಕ್ಷಿಣದ ಇತರ ಭಾಷೆಯಲ್ಲೂ ಸಂಜಯ್ ದತ್ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ಮೇಲೆ ಸಂಜಯ್ ದತ್ ಎಲ್ಲ ಭಾಷೆಯಲ್ಲೂ ನೇಮ್ ಆ್ಯಂಡ್ ಫೇಮ್ ಗಳಿಸಿದ್ದರು.
ಅದೇ ಸಂಜಯ್ ದತ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ KD ಚಿತ್ರವನ್ನ ಕೂಡ ಸಂಜಯ್ ದತ್ ಒಪ್ಪಿದ್ದಾರೆ. ಹೀಗಿರೋವಾಗ್ಲೆ ಬಾಲಿವುಡ್ನಿಂದ ಈಗೊಂದು ಸುದ್ದಿ ಹೊರಬಿದ್ದಿದೆ. ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಮತ್ತೊಮ್ಮೆ ಜೋಡಿಯಾಗಿ ಮೋಡಿ ಮಾಡಲು ಬರ್ತಿದ್ದಾರೆ ಅನ್ನೋದೇ ಆ ಸುದ್ದಿ ಆಗಿದೆ.
ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಜೋಡಿ ನಿಜಕ್ಕೂ ಸೂಪರ್ ಆಗಿಯೇ ಇತ್ತು. ಮುನ್ನಾ ಭಾಯ್ ಸರಣಿಯಲ್ಲಿ ಇವರು ಮಾಡಿರೋ ಮೋಡಿ ಇನ್ನೂ ಇದೆ. ಇಂತಹ ಈ ಕಲಾವಿದರು ಬಹಳ ದಿನಗಳ ಬಳಿಕ ಒಟ್ಟಿಗೆ ಬರ್ತಿದ್ದಾರೆ. ಹಾಗೆ ಬರ್ತಿರೋ ಆ ಚಿತ್ರದ ಮಾಹಿತಿ ಇಲ್ಲಿದೆ ಓದಿ.
ಸಂಜಯ್ ದತ್ ನಿರ್ಮಾಣದ ಚಿತ್ರದಲ್ಲಿ ಜೋಡಿ ಮೋಡಿ
ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಒಟ್ಟಿಗೆ ಅಭಿನಯಿಸೋದು ಖಚಿತವಾಗಿದೆ. ಈಗಾಗಲೇ ಚಿತ್ರದ ಪೋಸ್ಟ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಒಟ್ಟಿಗೆ ಜೈಲಿನಲ್ಲಿರೋ ದೃಶ್ಯ ಕೂಡ ಇದೆ.
ಕೈದಿಗಳ ಉಡುಪು ಧರಿಸಿಕೊಂಡಿರೋ ಈ ಜೋಡಿ, ಈ ಮೂಲಕ ನಾವು ಮತ್ತೆ ಬರ್ತಿದ್ದೇವೆ ಅನ್ನೋದನ್ನೂ ಹೇಳಿದಂತಿದೆ. ಇನ್ನು ಚಿತ್ರವನ್ನ ಬೇರೆ ಯಾರೋ ನಿರ್ಮಿಸುತ್ತಿಲ್ಲ. ಸ್ವತಃ ಸಂಜಯ್ ದತ್ ಈ ಚಿತ್ರವನ್ನ ನಿರ್ಮಿಸೋಕೆ ಮುಂದಾಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕವೇ ಸಂಜಯ್ ದತ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನರ್ಜಿಗೆ ಸಾಟಿನೇ ಇಲ್ಲ; ಶಿವಣ್ಣ ಕೈಯಲ್ಲಿರುವ ಸಿನಿಮಾಗಳ ಲಿಸ್ಟ್?
ಸಂಜು-ಅರ್ಷದ್ ಚಿತ್ರಕ್ಕೆ ಸಿದ್ಧಾಂತ್ ಸಚ್ಚಿದೇವ್ ಡೈರೆಕ್ಷನ್
ಸಿದ್ಧಾಂತ್ ಸಚ್ಚಿದೇವ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಇದರ ಹೊರತಾಗಿ ಈ ಚಿತ್ರವನ್ನ ಇದೇ ವರ್ಷ ತೆರೆಗೆ ತರುವ ಸಾಧ್ಯತೆ ಇದೆ. ಅದನ್ನ ಈಗಾಗಲೇ ಸಂಜಯ್ ದತ್ ಪ್ರೋಡಕ್ಷನ್ ಹೌಸ್ ಪೋಸ್ಟರ್ನಲ್ಲಿ ಹೇಳಿಕೊಂಡಿದೆ. ಇನ್ನುಳಿದಂತೆ ಸದ್ಯಕ್ಕೆ ಈ ಸಿನಿಮಾ ಬಗ್ಗೆ ಇಷ್ಟೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ