Salman Khan: ಬಾಲಿವುಡ್​ ಭಾಯ್​ಜಾನ್​ ಸೀಕ್ರೆಟ್​ ಬಿಚ್ಚಿಟ್ಟ ಯೂಲಿಯಾ, ಸಲ್ಲು ಬಗ್ಗೆ ಹಿಂಗ್ಯಾಕ್​ ಅಂದ್ರೂ ಗಾಯಕಿ!

ರೊಮಾನಿಯಾ(Romania) ಮೂಲದ ಹಿನ್ನೆಲೆ ಗಾಯಕಿ ಯೂಲಿಯಾ ವಂಟೂರ್‌ ಸಹ ಒಬ್ಬರು. ಇವರೇ ಸಲ್ಮಾನ್‌ ಖಾನ್‌ನ ವದಂತಿಯ ಗೆಳತಿ ಎಂದು ಕೆಲ ವರ್ಷಗಳಿಂದ ಹೇಳಲಾಗುತ್ತಲೇ ಇದೆ. ಈಗ್ಯಾಕಪ್ಪಾ ಮತ್ತೆ ಅವರ ವಿಚಾರ ಅಂತೀರಾ.. ಯೂಲಿಯಾ ವಂಟೂರ್‌(Iulia Vantur)ನಟ ಸಲ್ಮಾನ್‌ ಖಾನ್‌ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್​ ಖಾನ್​, ಯೂಲಿಯಾ ವಂಟೂರ್‌

ಸಲ್ಮಾನ್​ ಖಾನ್​, ಯೂಲಿಯಾ ವಂಟೂರ್‌

  • Share this:
ಸಲ್ಮಾನ್‌ ಖಾನ್‌(Salman Khan)ಗೆ ವಯಸ್ಸು 56 ಆದ್ರೂ ಈಗಲೂ ಸಹ ಅವರನ್ನು ಬಾಲಿವುಡ್‌ನ ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌(Most Wanted Bachelor) ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಅಲ್ಲದೆ, ಸಾಕಷ್ಟು ನಟಿಯರೊಂದಿಗೆ ಹಾಗೂ ಇತರ ಸೆಲೆಬ್ರಿಟಿಗಳೊಂದಿಗೆ ಬಾಲಿವುಡ್‌ ಬ್ಯಾಡ್‌ ಬಾಯ್‌(Bollywood Bad Boy) ಸಲ್ಮಾನ್‌ ಖಾನ್‌ ಅನ್ನು ತಳುಕು ಹಾಕಲಾಗುತ್ತದೆ. ಅದು ನಮ್ಮ ದೇಸಿ ನಟಿಯರೇ ಇರಬಹುದು ಅಥವಾ ವಿದೇಶಿ ಮೂಲದ ಸೆಲೆಬ್ರಿಟಿಗಳೇ ಇರಬಹುದು. ಈ ಪೈಕಿ ರೊಮಾನಿಯಾ(Romania) ಮೂಲದ ಹಿನ್ನೆಲೆ ಗಾಯಕಿ ಯೂಲಿಯಾ ವಂಟೂರ್‌ ಸಹ ಒಬ್ಬರು. ಇವರೇ ಸಲ್ಮಾನ್‌ ಖಾನ್‌ನ ವದಂತಿಯ ಗೆಳತಿ ಎಂದು ಕೆಲ ವರ್ಷಗಳಿಂದ ಹೇಳಲಾಗುತ್ತಲೇ ಇದೆ. ಈಗ್ಯಾಕಪ್ಪಾ ಮತ್ತೆ ಅವರ ವಿಚಾರ ಅಂತೀರಾ.. ಯೂಲಿಯಾ ವಂಟೂರ್‌(Iulia Vantur)ನಟ ಸಲ್ಮಾನ್‌ ಖಾನ್‌ ಬಗ್ಗೆ ಮಾತನಾಡಿದ್ದಾರೆ. ಮೈನ್‌ ಚಲಾ ಹಾಡಿನಲ್ಲಿ ತನ್ನ ಸುಮಧುರ ಧ್ವನಿಗಾಗಿ ಮೆಚ್ಚುಗೆಯನ್ನು ಪಡೆಯುತ್ತಿರುವ ಯೂಲಿಯಾ ವಂಟೂರ್, ವದಂತಿಯ ಗೆಳೆಯ ಸಲ್ಮಾನ್ ಖಾನ್‌ನೊಂದಿಗಿನ ತನ್ನ ಕೆಲಸದ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹಾಗೂ, ಸಲ್ಲು ನೆರಳಿನಿಂದ ಹೊರಬಂದು ತನ್ನದೇ ಆದ ಗುರುತನ್ನು ಸೃಷ್ಟಿಸುವ ಬಗ್ಗೆಯೂ ಮಾತನಾಡಿದ್ದಾರೆ.

ಸಲ್ಮಾನ್​ ಖಾನ್​ ಜೊತೆ ಕೆಲ್ಸ ಮಾಡೋದು ಖುಷಿ ಎಂದ ಗಾಯಕಿ!

ಯೂಲಿಯಾ ವಂಟೂರ್‌ ಮತ್ತು ಗುರು ರಾಂಧವಾ ಹಾಡಿರುವ ಹಾಡನ್ನು ಸಲ್ಮಾನ್ ಖಾನ್‌ ಮತ್ತು ಪ್ರಜ್ಞಾ ಜೈಸ್ವಾಲ್ ಮೇಲೆ ಚಿತ್ರಿಸಲಾಗಿದೆ. ಈ ಹಿನ್ನೆಲೆ ಬಾಲಿವುಟ್‌ ನಟ ಸಲ್ಮಾನ್‌ ಖಾನ್‌ ಬಗ್ಗೆ ಟೈಮ್ಸ್ ಆಫ್‌ ಇಂಡಿಯಾದ ಇ - ಟೈಮ್ಸ್‌ನೊಂದಿಗೆ ಮಾತನಾಡಿದ ಸೀಟಿ ಮಾರ್ ಗಾಯಕಿ, ನಟನೊಂದಿಗೆ ಕೆಲಸ ಮಾಡುವುದು ನನಗೆ ಗೌರವ ನೀಡುತ್ತದೆ ಮತ್ತು ಆಶೀರ್ವಾದ ದೊರೆತಂತೆ ಎಂದು ಯೂಲಿಯಾ ಹೇಳಿದರು.“ಅವರು ಮೊದಲು ಅಂತಹ ಶ್ರೇಷ್ಠ ವ್ಯಕ್ತಿ, ಶ್ರೇಷ್ಠ ನಟ ಹಾಗೂ ಕ್ಷೇತ್ರದಲ್ಲಿ ಅನುಭವಿ. ನೀವು ಅವರ ಸುತ್ತಲೂ ಇರುವಾಗ, ನೀವು ತುಂಬಾ ಕಲಿಯುತ್ತೀರಿ’’ ಎಂದೂ ಯೂಲಿಯಾ ವಂಟೂರ್‌ ಸಲ್ಮಾನ್‌ ಖಾನ್‌ರನ್ನು ಹೊಗಳಿ ಮಾತನಾಡಿದ್ದಾರೆ.

ಇದನ್ನು ಓದಿ: ಆ ಸ್ಟಾರ್ ​​ನಟನಂತೆ ಗಂಡ ಬೇಕಂತೆ ಅನನ್ಯಾ ಪಾಂಡೆಗೆ, ಹೆಸರು ಕೇಳಿದ್ರೆ ನಾಚಿ ನೀರಾದ ಡಿಂಪಲ್​ ಚೆಲುವೆ!

ಸಲ್ಲು ಭಾಯ್​ ಸೀಕ್ರೆಟ್​ ಬಿಚ್ಚಿಟ್ಟ ವಂಟೂರ್​!

ಆದರೂ, ನಾನು ಈ ಸಮಯದಲ್ಲಿ, ನನ್ನ ಸ್ವಂತ ಗುರುತಿನ ಮೇಲೆ ಕೆಲಸ ಮಾಡಲು ಬಯಸುತ್ತೇನೆ ಎಂದು ನಾನು ನನ್ನ ಬಗ್ಗೆ ಭಾವಿಸುತ್ತೇನೆ. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾಕೆಂದರೆ, ಭಾರತೀಯ ಜನರು ನನ್ನ ಬಗ್ಗೆ ಚೆನ್ನಾಗಿ ತಿಳಿದಿಲ್ಲ ಮತ್ತು ಈ ಹಿನ್ನೆಲೆ ಅವರು ನನ್ನ ಬಗ್ಗೆ ಚೆನ್ನಾಗಿ ತಿಳಿಯುವಂತೆ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ” ಎಂದು ಯೂಲಿಯಾ ವಂಟೂರ್ ಇ - ಟೈಮ್ಸ್‌ಗೆ ತಿಳಿಸಿದ್ದಾರೆ.ಸೂಪರ್‌ಸ್ಟಾರ್‌ನ ನೆರಳಿನಿಂದ ಹೊರಬರುವುದು ಎಷ್ಟು ಸುಲಭ ಅಥವಾ ಎಷ್ಟು ಕಷ್ಟ ಎಂದು ಮಾಧ್ಯಮದವರು ಕೇಳಿದ್ದಕ್ಕೆ, “ನೀವು ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸಹಜವಾಗಿ, ಇದು ಅನುಕೂಲಗಳು ಮತ್ತು ಅನಾನುಕೂಲಗಳೊಂದಿಗೆ ಬರುತ್ತದೆ. ಗೋಚರತೆ ಇದೆ, ಮತ್ತು ಇದು ಬಹಳಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ:  ಡಿಪ್ಪಿ ಧರಿಸಿರೋದು ರಣವೀರ್​ ಡ್ರೆಸ್​ ಅಲ್ಲ ಅಲ್ವಾ? ಸಖತ್​ ಟ್ರೋಲ್​ ಆಗ್ತಿದೆ ನಟಿಯ ಹೊಸ ಫೋಟೋ!

ಮಾಡುವ ಕೆಲಸಕ್ಕೆ ಗೌರವ ಸಿಗಬೇಕು ಎಂದು ಯೂಲಿಯಾ!

‘ಯಾರೋ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವವರು ಎಂದು ಗುರುತಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಪ್ರತಿಯೊಬ್ಬರು ಮಾಡುವ ಕೆಲಸಕ್ಕೆ ಅವರಿಗೆ ಗೌರವ ಸಿಗಬೇಕು ಎಂದು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಮದೂ ರೊಮಾನಿಯಾ ಗಾಯಕಿ ಯೂಲಿಯಾ ವಂಟೂರ್‌ ಹೇಳಿದರು. ಈ ಮಧ್ಯೆ, ಮೈನ್ ಚಾಲಾ ಚಿತ್ರದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಅವರು, ಜನರು ಹಾಡನ್ನು ತಮ್ಮ ಹೃದಯಕ್ಕೆ ನೇರವಾಗಿ ಸ್ವೀಕರಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
.
Published by:Vasudeva M
First published: