Salman Khan: 10 ನಟಿಯರ ಜೊತೆ ಹೆಜ್ಜೆ ಹಾಕಲಿದ್ದಾರೆ ಸಲ್ಮಾನ್ ಖಾನ್, ಏನಿದು ಸಲ್ಲು ಹೊಸ ಅವತಾರ

ಸಲ್ಮಾನ್ ಖಾನ್ ಅಭಿನಯದ ಮುಂದಿನ ಸಿನಿಮಾ ನೋ ಎಂಟ್ರಿ ಮೇ ಎಂಟ್ರಿ ಚಿತ್ರದ ವಿಶೇಷತೆ ಏನೆಂದರೆ, ಬರರೋಬ್ಬರಿ 10 ಜನ ನಟಿಸಲಿದ್ದಾರಂತೆ ಎಂಬ ಮಾತುಗಳು ಬಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಬಾಲಿವುಡ್‌ನ ಬಾಕ್ಸ್ ಆಫಿಸ್ ಸುಲ್ತಾನ್​ ಖಾನ್ (Salman Khan) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಸಹ ಬಂದಿದೆ. ಇದರ ನಡುವೆ ಅವರ ಮುಂದಿನ ಸಿನಿಮಾದ ಕುರಿತು ಸ್ಪೇಷಲ್ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಸಲ್ಮಾನ್ ಖಾನ್, ಅನಿಲ್ ಕಪೂರ್ (Anil Kapoor) ಮತ್ತು ಫರ್ದೀನ್ ಖಾನ್ ಅಭಿನಯದ 'ನೋ ಎಂಟ್ರಿ' (No Entry) ಚಿತ್ರ ಪ್ರೇಕ್ಷಕರನ್ನು ರಂಜಿಸಿತ್ತು. ಈಗ ಅದೇ ಚಿತ್ರದ ಸೀಕ್ವೆಲ್ 'ನೋ ಎಂಟ್ರಿ ಮೇ ಎಂಟ್ರಿ' (No Entry Mein Entry) ಚಿತ್ರ ಬರುತ್ತಿದೆ. ದಿ ನೋ ಎಂಟ್ರಿ ಸಿನಿಮಾದಲ್ಲಿ ನಾಲ್ವರು ನಟಿಯರಲ್ಲಿ ನಟಿಸಿದ್ದರು. ಬಿಪಾಶಾ ಬಸು, ಲಾರಾ ದತ್ತಾ, ಇಶಾ ಡಿಯೋಲ್ ಮತ್ತು ಸೆಲೀನಾ ಜೇಟ್ಲಿ. ಈಗ ಈ ಸೀಕ್ವೆಲ್ ನ ವಿಶೇಷತೆ ಏನೆಂದರೆ, ಬರರೋಬ್ಬರಿ 10 ಜನ ನಟಿಸಲಿದ್ದಾರಂತೆ ಎಂಬ ಮಾತುಗಳು ಬಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

ಒಂದೇ ಚಿತ್ರದಲ್ಲಿ 10 ನಟಿಯರು:

ಬಾಲಿವುಡ್‌ನ ಸಲ್ಮಾನ್ ಅವರ ಕೆಲವು ಚಿತ್ರಗಳು ಸದ್ಯದಲ್ಲಿಯೇ ಬಿಡುಗಡೆಯಾಗಲಿವೆ. ಆದರೆ ಏಕಕಾಲಕ್ಕೆ 10 ಜನ ನಟಿಯರು ನಟಿಸಿರುವ ‘ನೋ ಎಂಟ್ರಿ ಮೇ ಎಂಟ್ರಿ’ ಸಿನಿಮಾ ವಿಶೇಷವಾಗಲಿದೆ. ಸಲ್ಮಾನ್ ಖಾನ್ ಸದ್ಯ ವಿವಿಧ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ, ಸಲ್ಮಾನ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ 'ಕಭಿ ಈದ್ ಕಭಿ ದೀಪಾವಳಿ' ಚಿತ್ರೀಕರಣದಲ್ಲಿದ್ದಾರೆ ಎಂದು ಘೋಷಿಸಿದ್ದರು. ಈ ಸಿನಿಮಾದ ಬೆನ್ನಲ್ಲೇ ‘ನೋ ಎಂಟ್ರಿ ಮೇ ಎಂಟ್ರಿ’ ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಯಾವ 10 ಮಂದಿ ನಟಿಯರು ಇರುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ ಪ್ರೇಕ್ಷಕರಲ್ಲಿ ಈ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ತ್ರಿಪಾತ್ರದಲ್ಲಿ ಸಲ್ಮಾನ್, ಅನಿಲ್ ಮತ್ತು ಫರ್ದೀನ್:

ಬಾಲುವುಡ್​ ಮೂಲಗಳ ಪ್ರಕಾರ, 'ನೋ ಎಂಟ್ರಿ ಮೇ ಎಂಟ್ರಿ' ಚಿತ್ರದಲ್ಲಿ ಸಲ್ಮಾನ್ ಖಾನ್, ಫರ್ದೀನ್ ಖಾನ್ ಮತ್ತು ಅನಿಲ್ ಕಪೂರ್ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರತಿಯೊಂದು ಪಾತ್ರಕ್ಕೂ ಒಬ್ಬ ನಟಿ ಇರುತ್ತಾರೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಫರ್ದೀನ್ ಖಾನ್ ಚಿತ್ರಕ್ಕಾಗಿ ಸಾಕಷ್ಟು ತೂಕ ಇಳಿಸಿಕೊಂಡಿದ್ದು, ಸದ್ಯದಲ್ಲಿಯೇ ಶೂಟಿಂಗ್​ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Prabhas: ದೀಪಿಕಾ ಮೇಲೆ ಅಸಮಾಧಾನಗೊಂಡ ಪ್ರಭಾಸ್, ರೂಮರ್ಸ್​ಗಳ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿದತ್

ಬೆಳ್ಳಿ ತೆರೆಮೇಲೆ ಲೆಜೆಂಡ್ಸ್ ಆ್ಯಕ್ಟರ್ಸ್​:

ಸಿನಿಮಾದ ಬಗ್ಗೆ ಸಲ್ಮಾನ್ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಎಂದು ಸಿನಿಮಾ ನಿರ್ದೇಶಕ ಅನೀಸ್ ಬಾಜ್ಮಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಲ್ಮಾನ್ ಕೂಡ ಆದಷ್ಟು ಬೇಗ ಚಿತ್ರದ ಶೂಟಿಂಗ್ ಆರಂಭಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನೋ ಎಂಟ್ರಿ ಮುಂದುವರೆದ ಭಾಗವಾಗಿರುವುದರಿಂದ ಇದರಲ್ಲಿ ಹಳೆಯ ನಟರನ್ನು ಒಳಗೊಂಡಿರಬಹುದು. ಚಿತ್ರದಲ್ಲಿ ಬಿಪಾಶಾ ಬಸು, ಇಶಾ ಡಿಯೋಲ್, ಲಾರಾ ದತ್ತಾ ಮತ್ತು ಸೆಲೀನಾ ಜೇಟ್ಲಿ ಜೊತೆಗೆ ಸಲ್ಮಾನ್, ಅನಿಲ್ ಮತ್ತು ಫರ್ದೀನ್ ನಟಿಸಲಿದ್ದಾರೆ. ಆದರೆ, ಇದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

ಇದನ್ನೂ ಓದಿ: Puneeth Rajkumar: ಕೇದಾರನಾಥನ ಸನ್ನಿಧಿಯಲ್ಲಿ ಅಪ್ಪು ಕಂಪು, ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ

ಸಲ್ಮಾನ್ ಅವರ ಮುಂಬರುವ ಸಿನಿಮಾಗಳು:

ಸದ್ಯ ಸಲ್ಮಾನ್ ಖಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ಅವರ ‘ಕಭಿ ಈದ್ ಕಭಿ ದೀಪಾವಳಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅವರು ಯಶರಾಜ್ ಬ್ಯಾನರ್‌ನ 'ಟೈಗರ್ 3' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು 2023 ರಲ್ಲಿ ಈದ್ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆ 'ನೋ ಎಂಟ್ರಿ ಮೇ ಎಂಟ್ರಿ' ಸೀಕ್ವೆಲ್ ನಲ್ಲಿ 10 ಮಂದಿ ನಟಿಯರಿರುವುದರಿಂದ ಪ್ರೇಕ್ಷಕರಿಗೆ ದುಪ್ಪಟ್ಟು ಮನರಂಜನೆ ಸಿಗುವ ನಿರೀಕ್ಷೆ ಇದ್ದು, ಅದಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
Published by:shrikrishna bhat
First published: