Ranveer Singh: ಬೆತ್ತಲೆ ಫೋಟೋಗಳೇ ರಣವೀರ್‌ ಸಿಂಗ್‌ ಸಿನಿ ಕರಿಯರ್‌ಗೆ ಕುತ್ತಾಗುತ್ತಾ? ವಿಚಾರಣೆ ವೇಳೆ ನಟ ಹೇಳಿದ್ದೇನು?

ನಟ ರಣವೀರ್‌ ಸಿಂಗ್‌ ಅವರ ಫೋಟೋಶೂಟ್‌ ನಿಂದ ಮಹಿಳೆಯರ ಭಾವನೆಗಳಿಗೆ ದಕ್ಕೆಯಾಗಿದೆ ಎಂಬ ಕಾರಣಕ್ಕಾಗಿ ರಣವೀರ್‌ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರಿಂದ ವಿಚಾರಣೆಗೆ ಒಳಪಟ್ಟ ನಟ ರಣವೀರ್‌ ಸಿಂಗ್‌ ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರಂತೆ!

ನಟ ರಣವೀರ್ ಸಿಂಗ್

ನಟ ರಣವೀರ್ ಸಿಂಗ್

  • Share this:
ಬಾಲಿವುಡ್‌ ನ ಬಹುಬೇಡಿಕೆಯ ನಟ ರಣವೀರ್‌ ಸಿಂಗ್‌ (Ranveer Singh) ನ್ಯೂಯಾರ್ಕ್‌ ಮೂಲದ ಪೇಪರ್‌ ಮ್ಯಾಗಜೀನ್‌ ಗೆ ನಡೆಸಿಕೊಟ್ಟ ಬೆತ್ತಲೆ ಫೋಟೋಶೂಟ್‌ ವಿವಾದದ (Nude photoshoot controversy) ಅಲೆಯನ್ನೇ ಎಬ್ಬಿಸಿತ್ತು. ಈ ಫೋಟೋಶೂಟ್‌ ನಿಂದ ಮಹಿಳೆಯರ ಭಾವನೆಗಳಿಗೆ ದಕ್ಕೆಯಾಗಿದೆ ಎಂಬ ಕಾರಣಕ್ಕಾಗಿ ರಣವೀರ್‌ ಮೇಲೆ ಎಫ್‌ ಐ ಆರ್‌ (FIR) ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರಿಂದ ವಿಚಾರಣೆಗೆ ಒಳಪಟ್ಟ ನಟ ರಣವೀರ್‌ ಸಿಂಗ್‌ ಶಾಕಿಂಗ್‌ ಹೇಳಿಕೆ (Shocking statement) ಕೊಟ್ಟಿದ್ದಾರೆ. ತನ್ನ ಒಂದು ಫೋಟೋವನ್ನು ಮಾರ್ಫ್‌ (Morph) ಮಾಡಲಾಗಿದೆ ಎಂದು ಹೇಳಿದ್ದಾರೆ.

ಪೇಪರ್‌ ಮ್ಯಾಗಜಿನ್‌ ಗಾಗಿ ಬೆತ್ತಲೆ ಫೋಟೋಶೂಟ್‌
ನಟ ರಣವೀರ್‌ ಸಿಂಗ್‌, 70 ರ ದಶಕದ ಹಾಲಿವುಡ್‌ ನಟ ಬರ್ಟ್‌ ರೆನಾರ್ಲ್ಡ್‌ ಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಪೇಪರ್‌ ಮ್ಯಾಗಜಿನ್‌ ಗಾಗಿ ಬೆತ್ತಲೆ ಫೋಟೋಶೂಟ್‌ ಮಾಡಿಸಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಅದನ್ನು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Akshara Singh: ಪ್ರಖ್ಯಾತ ನಟಿಯ MMS ವಿಡಿಯೋ ಸೋರಿಕೆ! ಇದೆಲ್ಲಾ ನಿಜಾನಾ ಎಂಬ ಫ್ಯಾನ್ಸ್

ಆದರೆ ಅದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಲ್ಲದೇ ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಕಾರಣಕ್ಕೆ ಎನ್‌ ಜಿ ಒ ಒಂದರ ಸದಸ್ಯರು ರಣವೀರ್‌ ಸಿಂಗ್‌ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಣವೀರ್‌ ವಿರುದ್ಧ ಎಫ್‌ ಐ ಆರ್‌ ಕೂಡ ದಾಖಲಾಗಿದೆ. ಈ ಕುರಿತು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ನೋಟೀಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ರಣವೀರ್‌ ತನ್ನದು ಒಂದು ಫೋಟೋವನ್ನು ಮಾರ್ಫ್‌ ಮಾಡಲಾಗಿದೆ ಎಂದಿದ್ದಾರೆ.

ರಣವೀರ್ ಸಿಂಗ್ ಅವರ ಫೋಟೋವನ್ನು ಮಾರ್ಫ್‌ ಮಾಡಿದ್ದಾರಂತೆ 
ಆ ಒಂದು ಫೋಟೋವನ್ನು ನಾನು ಶೂಟ್‌ ಮಾಡಿಸಿಲ್ಲ. ಗುಪ್ತಾಂಗ ಕಾಣುವಂತೆ ಇರುವ ಆ ಒಂದು ಫೋಟೋ ಮಾತ್ರ ನನ್ನದಲ್ಲ. ಯಾರೋ ನನ್ನ ಪೋಟೋವನ್ನು ಆ ರೀತಿ ಮಾರ್ಫ್‌ ಮಾಡಿದ್ದಾರೆ ಎಂದು ಪೊಲೀಸರಿಗೆ ರಣವೀರ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್‌ ಗೊಳಗಾಗಿತ್ತು ನಟನ ಬೆತ್ತಲೆ ಫೋಟೋ
ಬಾಲಿವುಡ್‌ ನ ಟಾಪ್‌ ನಟರಲ್ಲಿ ಒಬ್ಬರು ರಣವೀರ್‌ ಸಿಂಗ್‌. ನಟನೆಯಲ್ಲಂತೂ ಅತ್ಯದ್ಭುತ ಕಲಾವಿದ. ಆದರೆ ಇದೊಂದು ಫೋಟೋಶೂಟ್‌ ಅವರನ್ನು ವಿವಾದದ ಸುಳಿಯಲ್ಲಿ ಸಿಲುಕಿಸಿದ್ದು ಸುಳ್ಳಲ್ಲ. ರಣವೀರ್‌ ಪೋಟೋಶೂಟ್‌ ವೈರಲ್‌ ಆಗುತ್ತಿದ್ದಂತೆಯೇ ಸಾಕಷ್ಟು ಜನರು ನೆಗೆಟಿವ್‌ ಕಾಮೆಂಟ್‌ ನೀಡಿದ್ದರು. ಇಂಥದ್ದು ಈ ನಟನಿಗೆ ಬೇಕಿತ್ತಾ ಅನ್ನೋವಷ್ಟು ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದರು. ಟ್ರೋಲ್‌ ಪೇಜ್‌ ಗಳಿಗಂತೂ ಈ ಪೋಟೋಗಳಿಂದ ಹಬ್ಬವಾದಂತಾಗಿತ್ತು. ಸಿಕ್ಕಾಪಟ್ಟೆ ಟ್ರೋಲ್‌ ಗೊಳಗಾಗಿತ್ತು ರಣವೀರ್‌ ಬೆತ್ತಲೆ ಫೋಟೋಗಳು.

ಮಹಿಳೆಯರ ಭಾವನೆಗಳಿಗೆ ಧಕ್ಕೆ ಎಂಬ ವಿಚಾರದಲ್ಲಿ ಬಹಳಷ್ಟು ಜನರು ರಣವೀರ್‌ ಗೆ ಬೆಂಬಲ ನೀಡಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನರು ರಣವೀರ್‌ ಗೆ ಸಪೋರ್ಟ್‌ ಮಾಡಿದ್ದರು. ನಟಿಯರು ಮಾಡಿದರೆ ಇದು ತಪ್ಪಲ್ಲ ಆದರೆ ನಟರು ಮಾತ್ರ ಹೀಗೆ ಮಾಡಿದರೆ ಮಾತ್ರ ತಪ್ಪಾ ಎಂದು ಪ್ರಶ್ನಿಸಿದ್ದರು. ಆದರೆ ಪರ ವಿರೋಧದ ನಡುವೆ ನಟ ರಣವೀರ್‌ ಮಾತ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದು ಸುಳ್ಳಲ್ಲ.

ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲೂ ಭಾಗಿ 
ಇನ್ನು ರಣವೀರ್‌ ಸಿಂಗ್‌ ಬಾಲಿವುಡ್‌ ಬಹುಬೇಡಿಕೆಯ ನಟ. ಕೈಯ್ಯಲ್ಲಿ ಸಾಕಷ್ಟು ಸಿನಿಮಾ ಹೊಂದಿದ್ದಾರೆ. ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಸೌತ್‌ ಇಂಡಿಯನ್‌ ಇಂಟರ್‌ ನ್ಯಾಷನಲ್‌ ಮೂವಿ ಅವಾರ್ಡ್‌ 2022 ಕಾರ್ಯಕ್ರಮಕ್ಕೆ ಬಂದಿದ್ದ ರಣವೀರ್‌ ನಟ ಯಶ್‌, ಅಲ್ಲು ಅರ್ಜುನ್‌ ಮುಂತಾದವರ ಜೊತೆಗಿನ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Sreeleela Mother: ಬಂಧನಕ್ಕೆ ಹೆದರಿ ಅಡಗಿಕೊಂಡಿದ್ದಾರಾ ನಟಿ ಶ್ರೀಲೀಲಾ ತಾಯಿ? ಜಾಮೀನಿಗೆ ಅರ್ಜಿ

ರಣವೀರ್‌ ಸಿಂಗ್‌ ಅವರ ರಾಕಿ ಔರ್‌ ರಾನಿ ಕಿ ಪ್ರೇಮ್‌ ಕಹಾನಿ ಚಿತ್ರ ಸದ್ಯದಲ್ಲೇ ರಿಲೀಸ್‌ ಆಗಲಿದೆ. ಗಲ್ಲಿಬಾಯ್‌ ಯಲ್ಲಿ ರಣವೀರ್‌ ಗೆ ಜೊತೆಯಾಗಿದ್ದ ಆಲಿಯಾ ಭಟ್‌ ಈ ಚಿತ್ರದಲ್ಲಿ ಅವರ ಜೊತೆ ನಟಿಸಿದ್ದಾರೆ.
Published by:Ashwini Prabhu
First published: