Randeep Hooda: ಸ್ವತಂತ್ರ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಎಷ್ಟು ಕೆಜಿ ತೂಕ ಇಳಿಸಿಕೊಂಡಿದ್ದಾರೆ?

ಬಾಲಿವುಡ್ ನಟ ರಣದೀಪ್ ಹೂಡಾ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ನೋಡಿ. ನಟ ರಣದೀಪ್ ಅವರು ಯಾವಾಗಲೂ ತಮ್ಮ ಚಲನಚಿತ್ರಗಳ ಪಾತ್ರಗಳಿಗೆ ತಮ್ಮ ದೇಹ ಪರಿವರ್ತನೆಯ ವಿಷಯ ಅಂತ ಬಂದರೆ ಬೇರೆ ಎಲ್ಲಾ ನಟರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ.

ರಣದೀಪ್ ಹೂಡಾ

ರಣದೀಪ್ ಹೂಡಾ

  • Share this:
ಸಾಮಾನ್ಯವಾಗಿ ಯಾವುದೇ ಚಿತ್ರೋದ್ಯಮದಲ್ಲಿ ಒಂದು ಸಿನೆಮಾ (Cinema) ಮಾಡಬೇಕಾದರೆ, ಕಥೆಯಲ್ಲಿ ಬರುವ ಪಾತ್ರಕ್ಕೆ ಸರಿ ಹೊಂದುವಂತಹ ನಾಯಕ ನಟರನ್ನು (Actor) ಆ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಆ ಪಾತ್ರಕ್ಕೆ (Character) ಸರಿ ಹೊಂದುವಂತೆ ಮತ್ತು ಅದಕ್ಕೆ ಜೀವ ತುಂಬಿ ನಟಿಸಲು ನಟ ಮತ್ತು ನಟಿಯರು ತಮ್ಮ ದೇಹದ ತೂಕವನ್ನು ಕಡಿಮೆ (Weight Loss) ಮಾಡಿಕೊಳ್ಳುವುದನ್ನು ಮತ್ತು ಕೆಲವು ಬಾರಿ ಪಾತ್ರವು ತುಂಬಾನೇ ದಪ್ಪ ವ್ಯಕ್ತಿಯನ್ನು ಒಳಗೊಂಡಿತ್ತು ಎಂದರೆ ಅದೇ ರೀತಿಯಾಗಿ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳುವುದನ್ನು (Weight Gain) ನಾವು ಕೆಲವು ಚಿತ್ರಗಳಲ್ಲಿ ನೋಡುತ್ತಲೇ ಬಂದಿದ್ದೇವೆ. 

ಸಿನಿಮಾಕ್ಕಾಗಿ 18 ಕಿಲೋ ತೂಕ ಇಳಿಸಿಕೊಂಡ ರಣದೀಪ್ ಹೂಡಾ 

ಈ ಹಿಂದೆಯೂ ನಟ ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸಹ ಅವರ ಚಿತ್ರಗಳಲ್ಲಿ ಅನೇಕ ಬಾರಿ ಹೀಗೆ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಮತ್ತು ಕೆಲವು ಚಿತ್ರಗಳಲ್ಲಿ ತಮ್ಮ ದೇಹದ ತೂಕವನ್ನು ಹೆಚ್ಚು ಸಹ ಮಾಡಿಕೊಂಡು ಪಾತ್ರಕ್ಕೆ ಜೀವ ತುಂಬಿ ನಟಿಸಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಈಗ ಇನ್ನೊಬ್ಬ ಬಾಲಿವುಡ್ ನಟ ರಣದೀಪ್ ಹೂಡಾ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ನೋಡಿ. ನಟ ರಣದೀಪ್ ಅವರು ಯಾವಾಗಲೂ ತಮ್ಮ ಚಲನಚಿತ್ರಗಳ ಪಾತ್ರಗಳಿಗೆ ತಮ್ಮ ದೇಹ ಪರಿವರ್ತನೆಯ ವಿಷಯ ಅಂತ ಬಂದರೆ ಬೇರೆ ಎಲ್ಲಾ ನಟರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ.

ಇದನ್ನೂ ಓದಿ: Pushpa 2: ಪುಷ್ಪಾ 2 ಸಿನಿಮಾದಲ್ಲಿ 2 ನಿಮಿಷದ ರೋಲ್​ಗಾಗಿ ಸಾಯಿ ಪಲ್ಲವಿ ಸಂಭಾವನೆ ಎಷ್ಟು ಗೊತ್ತೇ?

ನಟ ರಣದೀಪ್ ಅವರ 'ಸರಬ್ಜಿತ್' ಚಿತ್ರಕ್ಕಾಗಿ ಅವರ ತೀವ್ರ ರೂಪಾಂತರವನ್ನು ಯಾರು ಮರೆಯಲು ಸಾಧ್ಯ ಹೇಳಿ? ನಟ ಈಗ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಚಿತ್ರಕ್ಕಾಗಿ, ಇವರು ಒಂದಲ್ಲ, ಎರಡಲ್ಲ ಬರೋಬ್ಬರಿ 18 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ತಮ್ಮ ಇತ್ತೀಚಿನ ಒಂದು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರ ದೈಹಿಕ ಬದಲಾವಣೆಯು ಈ ಫೋಟೋದಲ್ಲಿ ನಾವು ನೋಡಬಹುದು.

ತೂಕ ಇಳಿಸಿಕೊಂಡ ನಟನ ಫೋಟೋ ವೈರಲ್ 
ನಟ ರಣದೀಪ್ ಅವರು ಲಿಫ್ಟ್ ನಲ್ಲಿ ನಿಂತುಕೊಂಡು ತೆಗೆದುಕೊಂಡ ಮಿರರ್ ಸೆಲ್ಫಿಯನ್ನು ಅವರು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಮಗೆಲ್ಲರಿಗೂ ಕೆಲವೊಮ್ಮೆ ಲಿಫ್ಟ್ ಬೇಕು" ಎಂದು ಅವರು ಬರೆದಿದ್ದಾರೆ. ಅವರು ತಮ್ಮ ಶೀರ್ಷಿಕೆಗೆ 'ಪ್ರಿಪ್' ಎಂಬ ಹ್ಯಾಶ್ಟ್ಯಾಗ್ ಅನ್ನು ಸೇರಿಸಿದ್ದಾರೆ.ಈ ಬಗ್ಗೆ ನಟ ಏನು ಹೇಳಿದ್ದಾರೆ 
ಸುದ್ದಿ ಮಾಧ್ಯಮಕ್ಕೆ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ, ನಟ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿರುವುದರ ಬಗ್ಗೆ ಹೇಳಿಕೊಂಡರು ಮತ್ತು ಅವರು ಈಗಾಗಲೇ 18 ಕಿಲೋ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಮತ್ತು ಇನ್ನೂ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಯೋಜಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ನಿಮ್ಮ ದೇಹವು ನಿಮ್ಮ ಬಳಿ ಇರುವ ಏಕೈಕ ಸಾಧನವಾಗಿದೆ ಎಂದು ಅವರು ನಂಬುತ್ತಾರೆ ಎಂದು ನಟ ಹೇಳಿದರು.

ಇದನ್ನೂ ಓದಿ: KGF 2: ಬಾಲಿವುಡ್​ನಲ್ಲಿ ಕೆಜಿಎಫ್​ 2 ಯಾರಿಗೂ ಇಷ್ಟವಾಗಲಿಲ್ವಂತೆ! ಖ್ಯಾತ ನಿದೇರ್ಶಕನಿಂದ ಶಾಕಿಂಗ್​​ ಹೇಳಿಕೆ

"ಹೌದು, ನಾನು ಈ ರೀತಿಯ ಮಾರ್ಪಾಡುಗಳನ್ನು ನನ್ನ ದೇಹದೊಂದಿಗೆ ಮಾಡಿಕೊಳ್ಳಲು ಸಮರ್ಥನಾಗಿದ್ದೇನೆ ಏಕೆಂದರೆ ನಾನು ಅಂತರ್ಗತವಾಗಿ ಕ್ರೀಡಾಪಟುವಾಗಿದ್ದೇನೆ. ನಿಮ್ಮ ದೇಹವು ಸಕ್ರಿಯವಾಗಿರಬೇಕು ಎಂದು ನಾನು ಭಾವಿಸುತ್ತೇನೆ, ಹಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿರುತ್ತೇವೆ. ನಿಮ್ಮ ದೇಹವು ನಿಮ್ಮ ಬಳಿ ಇರುವ ಏಕೈಕ ಸಾಧನವಾಗಿದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ವಿನಾಯಕ ದಾಮೋದರ್ ಸಾವರ್ಕರ್ ಅವರ ಪಾತ್ರದ್ಲಲಿ ರಣದೀಪ್

ಈ ಚಿತ್ರದಲ್ಲಿ ರಣದೀಪ್ ಅವರು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರವನ್ನು ನಿರ್ಮಾಪಕ ಮಹೇಶ್ ವಿ ಮಾಂಜ್ರೇಕರ್ ಅವರು ನಿರ್ದೇಶಿಸಲಿದ್ದು, ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ಅವರು ಜಂಟಿಯಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಹೇಳಬಹುದು. ಚಿತ್ರದ ಬಗ್ಗೆ ಮಾತನಾಡುವಾಗ ರಣದೀಪ್ ಅವರು ಸಾವರ್ಕರ್ ಅವರ ಪಾತ್ರ ಅವರಿಗೆ ಒಂದು "ಸವಾಲಿನ ಪಾತ್ರ" ಎಂದು ಹೇಳಿದ್ದರು.
Published by:Ashwini Prabhu
First published: