• Home
  • »
  • News
  • »
  • entertainment
  • »
  • Alia Bhatt-Ranbir Kapoor: ಒಳ್ಳೇ ಗಂಡ ಎನಿಸಿಕೊಳ್ಳಲು ರಣಬೀರ್‌ ಹೀಗೆ ಮಾಡ್ತಿದ್ದಾರೆ; ಬಾಲಿವುಡ್​ ಜೋಡಿ ಮತ್ತೆ ಟ್ರೋಲ್‌

Alia Bhatt-Ranbir Kapoor: ಒಳ್ಳೇ ಗಂಡ ಎನಿಸಿಕೊಳ್ಳಲು ರಣಬೀರ್‌ ಹೀಗೆ ಮಾಡ್ತಿದ್ದಾರೆ; ಬಾಲಿವುಡ್​ ಜೋಡಿ ಮತ್ತೆ ಟ್ರೋಲ್‌

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್

ಇಬ್ಬರು ಫೋಟೋಗಳಿಗೆ ಪೋಸ್‌ ನೀಡಿ ಹೊರಡುವ ವೇಳೆ ಪತಿ ರಣಬೀರ್‌ ಪತ್ನಿಯನ್ನು ಜನರ ಮಧ್ಯದಿಂದ ಜೋಪಾನವಾಗಿ ರಕ್ಷಿಸಿ ಕರೆದುಕೊಂಡು ಹೋಗುತ್ತಾನೆ. ಇದೇ ವೀಡಿಯೋಗೆ ನೆಟ್ಟಿಗರು ಇಲ್ಲಸಲ್ಲದ ಕಾಮೆಂಟ್‌ ಮಾಡಿ ಟ್ರೋಲ್‌ ಮಾಡುತ್ತಿದ್ದಾರೆ.

  • Share this:

    ಬಾಲಿವುಡ್‌ನ (Bollywood) ಕ್ಯೂಟೆಸ್ಟ್‌ ಮತ್ತು ಸ್ಟಾರ್‌ ಜೋಡಿಗಳಲ್ಲಿ ಒಂದು ಗುಳಿ ಕೆನ್ನೆಯ ಚೆಲುವೆ ಆಲಿಯಾ ಭಟ್‌ (Alia Bhatt) ಮತ್ತು ನಟ ರಣಬೀರ್‌ ಕಪೂರ್ (Ranbir Kapoor) ಅವರದ್ದು.‌ ಪ್ರಣಯ ಪಕ್ಷಿಗಳು ಅನೇಕ ವರ್ಷಗಳ ಕಾಲ ಡೇಟಿಂಗ್ (Dating) ಮಾಡಿದ ನಂತರ 2022 ರ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಾಲಿವುಡ್‌ನಲ್ಲಿ ಇಬ್ಬರ ಪ್ರೀತಿ ಕುರಿತು ಗುಸುಗುಸು ಆರಂಭವಾದಾಗಿನಿಂದ ಹಿಡಿದು ಆಲಿಯಾ ತಾಯಿಯಾಗುತ್ತಿರುವ ವಿಚಾರದವರೆಗೂ ಇಬ್ಬರೂ ಸಖತ್‌ ಸುದ್ದಿಯಲ್ಲಿದ್ದಾರೆ.


    ಡಬಲ್‌ ಧಮಾಕದ ಖುಷಿಯಲ್ಲಿ ಸ್ಟಾರ್‌ ಕಪಲ್ಸ್


    ಸದ್ಯ ಸ್ಟಾರ್‌ ಜೋಡಿ ಆಲಿಯಾ ಭಟ್‌ ರಣಬೀರ್ ಕಪೂರ್ ಡಬಲ್‌ ಧಮಾಕದ ಖುಷಿಯಲ್ಲಿದ್ದಾರೆ. ಒಂದು ಬ್ರಹ್ಮಾಸ್ತ್ರ ಸಿನಿಮಾದ ಅದ್ಭುತ ಯಶಸ್ಸು, ಇನ್ನೊಂದು ಎಲ್ಲರಿಗೂ ಗೊತ್ತಿರುವಂತೆ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು.


    ಆಲಿಯಾ ಮತ್ತು ರಣಬೀರ್ ಇಬ್ಬರೂ ಇತ್ತೀಚೆಗೆ ಅಯಾನ್ ಮುಖರ್ಜಿ ನಿರ್ದೇಶಿಸಿದ ಬ್ರಹ್ಮಾಸ್ತ್ರದಲ್ಲಿ ಒಟ್ಟಿಗೆ ಸ್ಕ್ರೀನ್‌ ಹಂಚಿಕೊಂಡಿದ್ದಾರೆ. ಮತ್ತು ಈ ವರ್ಷದ ಹಿಟ್‌ ಸಿನಿಮಾ ಪಟ್ಟಿಗೆ ಈ ಚಿತ್ರ ಸೇರುವ ನಿರೀಕ್ಷೆ ಕೂಡ ಹುಟ್ಟಿಕೊಂಡಿದೆ.


    ಬ್ರಹ್ಮಾಸ್ತ್ರ ಸಿನಿಮಾ ಫುಲ್​ ಹಿಟ್‌


    ಈ ಚಿತ್ರದಲ್ಲಿ ನಾಗಾರ್ಜುನ, ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್ ಕೂಡ ನಟಿಸಿದ್ದರೆ, ಶಾರುಖ್ ಖಾನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದಾರೆ. ಬಾಲಿವುಡ್‌ ಚಿತ್ರ ಮುಗ್ಗರಿಸಿ ಬಿದ್ದಿದೆ ಎನ್ನುವ ಮಾತಿನ ನಡುವೆ ಚಿತ್ರರಂಗದ ಅದೃಷ್ಟವನ್ನು ಬದಲಿಸುವ ಹಾಗೆ ಬ್ರಹ್ಮಾಸ್ತ್ರ ಸಿನಿಮಾವು ಹಿಟ್‌ ನೀಡಿದೆ. ಚಿತ್ರಕ್ಕಾಗಿ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇಡೀ ತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿತ್ತು. ಆಲಿಯಾ ಭಟ್ ಕೂಡ ಗರ್ಭಿಣಿ ಆದರೂ ಸಿನಿಮಾ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು.




    ಇದನ್ನೂ ಓದಿ: Kendasampige: ವೋಟ್​​ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!


    ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಅಲಿಯಾ ದಂಪತಿಯ ವಿಡಿಯೋ ಒಂದು ವೈರಲ್ ಆಗಿತ್ತು. ಆ ವಿಡಿಯೋ ನೋಡಿದ ರಣಬೀರ್ ಕಪೂರ್ ತನ್ನ ಗರ್ಭಿಣಿ ಪತ್ನಿಯನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು, ಈಗ ಅದೇ ನೆಟ್ಟಿಗರು ಮತ್ತೊಂದು ವಿಚಾರವಾಗಿ ದಂಪತಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ.


    ಮುದ್ದಾಗಿವೆ ದಂಪತಿಗಳ ಕೇರಿಂಗ್‌ ವೀಡಿಯೋ


    ಸಿನಿಮಾದ ಹಿಟ್‌ ಒಂದೆಡೆಯಾದರೆ, ದಂಪತಿ ಅಪ್ಪ-ಅಮ್ಮನಾಗುವ ಖುಷಿಯಲ್ಲೂ ಸಹ ತೇಲುತ್ತಿದ್ದಾರೆ. ಆಲಿಯಾ ಭಟ್‌ ತಾಯಿಯಾಗುತ್ತಿರುವ ವಿಚಾರ ತಿಳಿದಾಗಿನಿಂದ ಪತಿ ರಣಬೀರ್ ಕಪೂರ್‌ ಹೆಂಡತಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.


    ಇಬ್ಬರೂ ಎಲ್ಲಾ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುವುದು, ಹೆಂಡತಿಯನ್ನು ಜನರ ಮಧ್ಯೆ ಜೋಪಾನ ಮಾಡುವುದು ಹೀಗೆ ಪ್ರತಿ ಹಂತದಲ್ಲೂ ಹೆಂಡತಿ ಆಲಿಯಾ ಜೊತೆ ನಿಂತು ರಣಬೀರ್‌ ರಕ್ಷಣೆ ಮಾಡುತ್ತಿದ್ದಾರೆ ಎನ್ನಬಹುದು.


    ಗಂಡನ ಕಾಳಜಿಯನ್ನು ಗೇಲಿ ಮಾಡುತ್ತಿರುವ ನೆಟ್ಟಿಗರು


    ಸೋಶಿಯಲ್‌ ಮೀಡಿಯಾವನ್ನು ಒಂದು ಸರಿ ಓಪನ್‌ ಮಾಡಿ ನೋಡಿದರೆ ಆಲಿಯಾ ಮತ್ತು ರಣಬೀರ್‌ ಕಪೂರ್‌ ಜೋಡಿಯ ಮುದ್ದಾದ ಕೇರಿಂಗ್ ವೀಡೀಯೋಗಳನ್ನು ನೀವು ನೋಡಬಹುದು.


    ಆದರೆ ಈಗ ಇವರಿಬ್ಬರ ಈ ವಿಡಿಯೋಗಳು ಟ್ರೋಲ್‌ ಬಾಯಿಗೆ ತುತ್ತಾಗಿ ಬಿಟ್ಟಿವೆ, ಹೆಂಡತಿ ಬಗ್ಗೆ ಕೇರ್‌ ಮಾಡುವ ರಣಬೀರ್‌ ಕಪೂರ್‌ ಅವರನ್ನು ಟ್ರೋಲಿಗರು ಗೇಲಿ ಮಾಡುತ್ತಿದ್ದು, ರಣಬೀರ್ ತನ್ನ ಪತಿಯಾಗುತ್ತಾನೆ ಎಂದು ಆಲಿಯಾಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ, ಒಳ್ಳೆಯ ಗಂಡನಂತೆ ಕಾಣಲು ರಣಬೀರ್‌ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.


    ಇದನ್ನೂ ಓದಿ: Bollywood Gym Fashion: ಬಾಲಿವುಡ್ ತಾರೆಯರ ಜಿಮ್ ಫ್ಯಾಷನ್, ಬಿ-ಟೌನ್ ಟಾಪ್ ನಟಿ ಮಣಿಯರ ವರ್ಕೌಟ್ ಲುಕ್


    ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಲಿಯಾ ಹಳದಿ ಬಣ್ಣದ ವಿ ನೆಕ್ ಡ್ರೆಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರೆ, ರಣಬೀರ್ ಎಂದಿನಂತೆ ಕ್ಯಾಶುವಲ್ ನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.


    ಇಬ್ಬರು ಫೋಟೋಗಳಿಗೆ ಪೋಸ್‌ ನೀಡಿ ಹೊರಡುವ ವೇಳೆ ಪತಿ ರಣಬೀರ್‌ ಪತ್ನಿಯನ್ನು ಜನರ ಮಧ್ಯದಿಂದ ಜೋಪಾನವಾಗಿ ರಕ್ಷಿಸಿ ಕರೆದುಕೊಂಡು ಹೋಗುತ್ತಾನೆ. ಇದೇ ವೀಡಿಯೋಗೆ ನೆಟ್ಟಿಗರು ಇಲ್ಲಸಲ್ಲದ ಕಾಮೆಂಟ್‌ ಮಾಡಿ ಟ್ರೋಲ್‌ ಮಾಡುತ್ತಿದ್ದಾರೆ.


    “ರಣಬೀರ್ ತನ್ನ ಪತಿಯಾಗುತ್ತಾನೆ ಎಂದು ಆಲಿಯಾಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ"


    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ತಕ್ಷಣ, ನೆಟಿಜನ್‌ಗಳು ಅದಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು.


    ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರೊಬ್ಬರು ಈ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ, “ರಣಬೀರ್ ತನ್ನ ಪತಿಯಾಗುತ್ತಾನೆ ಎಂದು ಆಲಿಯಾಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.


    ರಣಬೀರ್ ಕಪೂರ್ ತನ್ನ ಗರ್ಭಿಣಿ ಪತ್ನಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನಂತರ ಪ್ರತಿ ವೀಡಿಯೊದಲ್ಲಿ ಒಳ್ಳೆಯ ಗಂಡನಂತೆ ಕಾಣಲು ಎಲ್ಲವನ್ನೂ ಮಾಡುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

    Published by:ಪಾವನ ಎಚ್ ಎಸ್
    First published: